ಬೆಳಗಾವಿಯಲ್ಲಿ ಹೆತ್ತ ತಾಯಿಯನ್ನೇ ಬೀದಿಯಲ್ಲಿ ಬಿಟ್ಟು ಹೋಗುತ್ತಿದ್ದ ಮಗ.. ಆದರೆ ಕೊನೆಗೆ ನಡೆದದ್ದೇ ಬೇರೆ.. ಆ ಮಗನಿಗೆ ಏನಾಯ್ತು ಗೊತ್ತಾ.. ಮನಕಲಕುತ್ತದೆ..

0 views

ಇರೋದು ಮೂರು ದಿನದ ಜೀವನ.. ಇಂದು ಇದ್ದೋರು ನಾಳೆ ಇರೋದೇ ಸಂದೇಹ.‌. ಇಲ್ಲಿ ಯಾವುದೂ ಸಹ ಶಾಶ್ವತವಲ್ಲ.. ಅಂತಹ ಇರೋ ಮೂರು ದಿನದ ಜೀವನದಲ್ಲಿ ಇದ್ದಷ್ಟು ದಿನ ನಮ್ಮವರು ತಮ್ಮವರು ಅಂತ ಬದುಕೋದೇ ನಿಜವಾದ ಸಾರ್ಥಕ ಜೀವನ.. ಆದರೆ ಇಲ್ಲೊಬ್ಬ ಮಗ ಅನಿಸಿಕೊಂಡ ಮಹಾಶಯ ಹೆತ್ತ ತಾಯಿಯನ್ನೇ ಬೆಳಗಾವಿಯ ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾಗುತ್ತಿದ್ದ ಘಟನೆ ನಡೆದಿದ್ದು ಆ ತಾಯಿಯ ಸ್ಥಿತಿ ನೋಡಿದರೆ ನಿಜಕ್ಕೂ‌ ಮನಕಲಕುವಂತಿದೆ.. ಆದರೆ ಸಾರ್ವಜನಿಕರು ಆ ಪುತ್ರ ಮಹಾಶಯನಿಗೆ ಸರಿಯಾದ ಬುದ್ದಿ ಕಲಿಸಿದ್ದಾರೆ..

ಹೌದು ಈತನ ಹೆಸರು ಶ್ರೀಧರ ಆರ್ ಸೋಳಸಿ.. ಬೆಳಗಾವಿಯ ಅಥಣಿಯ ನಿವಾಸಿ.. ಈತನಿಗೆ ತಂದೆ ಇಲ್ಲ ತನ್ನ ತಾಯಿಯೇ ಈತನನ್ನು ಸಾಕುತ್ತಿದ್ದಳು.. ಈತ ಮಹರಾಷ್ಟ್ರದ ಪುಣೆಯಲ್ಲಿ ಕಾನೂನು ಪದವಿ ವಿಧ್ಯಾಭ್ಯಾಸ ಮಾಡುತ್ತಿದ್ದ.‌ ತಾಯಿ ಹಾಗೂ ಮಗ ಪುಣೆಯಲ್ಲಿಯೇ ವಾಸ ಮಾಡುತ್ತಿದ್ದರು.. ಇತ್ತೀಚೆಗೆ ಇವರು ಅಥಣಿಗೆ ಬಂದು ನೆಲೆಸಿದ್ದರು.. ಶ್ರೀಧರನ ತಾಯಿಗೆ ಇತ್ತೀಚೆಗೆ ಮಾನಸಿಕ ಆರೋಗ್ಯ ಹದಗೆಟ್ಟಿತ್ತು.. ಇದೇ ಕಾರಣಕ್ಕೆ ಈ ಮಗ ಎನಿಸಿಕೊಂಡ ಶ್ರೀಧರ ಹೆತ್ತ ತಾಯಿಯನ್ನೇ ಅಥಣಿಯ ಸಾರ್ವಜನಿಕ ಆಸ್ಪತ್ರೆಯ ಮುಂದೆ ಬಿಟ್ಟು ಹೋಗಲು ನಿರ್ಧಾರ ಮಾಡಿ ಅದೇ ರೀತಿ ಒಂದು ಹಾಸಿಗೆ ಹಾಗೂ ಕೆಲ ಸಾಮಾನುಗಳನ್ನು ಕಟ್ಟಿ ತನ್ನ ತಾಯಿಯನ್ನು ಕರೆತಂದು ಆಸ್ಪತ್ರೆ ಮುಂದೆ ಆ ಸಾಮಾಗ್ರಿಗಳು ಹಾಗೂ ತಾಯಿಯನ್ನು ನಡುರಸ್ತೆಯಲ್ಲಿಯೇ ಬಿಟ್ಟು ಹೋಗಲು ನೋಡಿದ್ದಾನೆ..

ಆದರೆ ಅಲ್ಲಿ ಮುಂದೆ ನಡೆದದ್ದೇ ಬೇರೆ.. ಹೌದು ಅಕ್ಕಪಕ್ಕದ ಜನರಿಗೆ ಈತನ ವರ್ತನೆ ಅನುಮಾನ ತಂದಿದೆ.. ತಕ್ಷಣ ವಿಚಾರಿಸಿದಾಗ ಆತ ನಡುಬೀದಿಯಲ್ಲಿ ತಾಯಿಯನ್ನು ಬಿಟ್ಟು ಹೋಗುವ ವಿಚಾರ ತಿಳಿದಿದೆ.. ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಸ್ಥಳೀಯರು ವಿಷಯ ತಿಳಿಸಿದ್ದಾರೆ.. ತಕ್ಷಣ ತಡಮಾಡದೇ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಮಗನ ಗ್ರಹಚಾರ ಬಿಡಿಸಿದ್ದಾರೆ.. ಕೊನೆಗೆ ಸಾರ್ವಜನಿಕರು ಹಾಗೂ ಪೊಲೀಸರು ಬುದ್ಧಿ ವಾದ ಹೇಳಿ ತಾಯಿಯನ್ನು ಸಾಕುತ್ತೇನೆ ಎಂದು ಮುಚ್ಚಳಿಕೆ ಬರೆಸಿಕೊಂಡು ಆಟೋದಲ್ಲಿ ಇಬ್ಬರನ್ನೂ ಕಳುಹಿಸಿಕೊಟ್ಟಿದ್ದಾರೆ.. ಆದರೆ ಅಲ್ಲಿಯೇ ಇದ್ದ ಕೆಲವರು ನಿನ್ನ ತಾಯಿ ದಾಂಡಿಗನಂತೆ ಸಾಕಿದ್ದಾಳೆ ಅವಳಿಗೆ ಎರಡು ತುತ್ತು ಅನ್ನ ಹಾಕೋಕೆ ಆಗಲ್ವಾ ಎಂದು ಸರಿಯಾಗಿ ನಾಲ್ಕು ಕೊಟ್ಟಿದ್ದಾರೆ..

ನಂತರ ಅಲ್ಲಿಯೇ ಇದ್ದ ಮತ್ತಷ್ಟು ಜನ ತಡೆದು ಇಬ್ಬರನ್ನು ಕಳುಹಿಸಿದ್ದಾರೆ.. ಆ ಹಾಸಿಗೆ ದಿಂಬು ನೀರಿನ ಬಾಟಲ್ ಹೀಗೆ ಎಲ್ಲದರ ಜೊತೆ ಆ ತಾಯಿ ಬೀದಿಯಲ್ಲಿ ಕೂತಿದ್ದನ್ನು ಕಂಡರೆ ನಿಜಕ್ಕೂ ಮನಕಲಕುವಂತಿತ್ತು.. ಬಹುಶಃ ಈತನಿಗೆ ಚಿಕ್ಕ ವಯಸ್ಸಿನಲ್ಲಿ ಚಂದಮಾಮನನ್ನು ತೋರಿ ತುತ್ತು ತಿನ್ನಿಸುವಾಗ ಮುಂದೊಂದು ದಿನ ಮಗ ಎರಡು ತುತ್ತು ಊಟ ಹಾಕೋದಿಲ್ಲ ಎಂದು ಕನಸಿನಲ್ಲಿಯೂ ಆ ತಾಯಿ ಊಹಿಸಿರುವುದಿಲ್ಲವೇನೋ.. ಆ ಮಗ ನಡೆಯುವ ಕಲಿಯುವಾಗ ರಸ್ತೆಯಲ್ಲಿ ಎಡವಿ ಬೀಳದಂತೆ ಆ ತಾಯಿ ಕಾಪಾಡುವಾಗ ಮುಂದೊಂದು ದಿನ ನಡುರಸ್ತೆಯಲ್ಲಿ ನನ್ನ ಮಗ ನನ್ನನ್ನೇ ಬಿಸಾಡಿ ಹೋಗುವನು ಎಂದು ಊಹಿಸಿರಿಯೂ ಇರುವುದಿಲ್ಲ..

ತಾನು ಈ ಭೂಮಿಗೆ ಬಂದದ್ದೇ ಆ ತಾಯಿಯಿಂದ ಎಂಬ ಸತ್ಯವನ್ನೇ ಬಹುಶಃ ಆ ಮಗ ಮರೆತು ಬಿಟ್ಟನೇನೋ.. ಆತ ಕಾನೂನು ಪದವಿ ಪಡೆದರೇನು ಬಂತು ಹೆತ್ತಮ್ಮನನ್ನು ಬೀದಿಯಲ್ಲಿ ಬಿಟ್ಟು ಹೋಗುವ ಆಲೋಚನೆ ಮಾಡಿದಾಗಲೇ ಆತನ ವಿಧ್ಯೆ ಮಾತ್ರವಲ್ಲ ಆತನ ಜೀವನವೇ ಅರ್ಥಹೀನವಾಗಿ ಹೋದದ್ದಂತೂ ಸತ್ಯ.. ಇಂತವರಿಗೆ ಆ ಭಗವಂತನೇ ಬುದ್ಧಿ ಕೊಡಬೇಕಷ್ಟೇ.. ಇಂತಹ ಮಕ್ಕಳು ಹುಟ್ಟಿದರೆಷ್ಟು ಬಿಟ್ಟರೆಷ್ಟು.. ಇವರ ಜನ್ಮಕ್ಕಿಷ್ಟು..