ಕೆಜಿಎಫ್ ನ ಶ್ರೀನಿಧಿ ಶೆಟ್ಟಿ ಸಂಭಾವನೆ ಕೇಳಿ ಬೆಚ್ಚಿಬಿದ್ದ ಸಿನಿಮಾ ಇಂಡಸ್ಟ್ರಿ.. ಆದರೆ ಕೇಳೋದ್ರಲ್ಲಿ ತಪ್ಪೇನಿದೆ ಗುರು.. ಆಕೆ ಅಸಲಿಗೆ ಕೇಳಿದ್ದೆಷ್ಟು ಗೊತ್ತಾ?

0 views

ದಕ್ಷಿಣ ಭಾರತದ ಸಿನಿಮಾರಂಗದ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಪ್ರಸಿದ್ದಿ ಪಡೆದಿರುವ ಸಿನಿಮಾ ಕೆಜಿಎಫ್. ಕೆಜಿಎಫ್ ಚಾಪ್ಟರ್ 1 ಬಿಡಿಗಡೆಯಾಗಿ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಪ್ರಪಂಚದ ಎಲ್ಲೆಡೆ ಹಾರಿಸಿತ್ತು. ಇದೀಗ ಕೆಜಿಎಫ್ 2 ಸಿನಿಮಾ ಇದನ್ನು ದುಪ್ಪಟ್ಟು ಮಾಡಿದೆ. ಕೆಜಿಎಫ್ ಸಿನಿಮಾದಲ್ಲಿ ನಾಯಕ ನಟನಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಾಯಕಿಯಾಗಿ ನಟಿ ಶ್ರೀ ನಿಧಿ ಶೆಟ್ಟಿ ಅಭಿನಯಿಸಿದ್ದರು. ಶ್ರೀ ನಿಧಿ ಶೆಟ್ಟಿ ಅವರ ಮೊದಲ ಸಿನಿಮಾ ಬ್ಲಾಕ್ ಬಾಸ್ಟರ್ ಹಿಟ್ ಆಗಿದ್ದು, ಈ ಸಿನಿಮಾದ ನಂತರ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ. ಇದೀಗ ಶ್ರೀನಿಧಿ ಅವರ ಸಂಭಾವನೆ ಬಗ್ಗೆ ಸಿನಿಮಾರಂಗದಲ್ಲಿ ಚರ್ಚೆಗಳು ಶುರುವಾಗಿದೆ. ಶ್ರೀನಿಧಿ ಅವರು ಕೇಳಿದ ಸಂಭಾವನೆ ಕೇಳಿ ಸಿನಿಮಾರಂಗ ಶಾಕ್ ಆಗಿದೆಯಂತೆ. ಅಷ್ಟಕ್ಕೂ ಶ್ರೀನಿಧಿ ಅವರ ಸಂಭಾವನೆ ಎಷ್ಟು.. ಆಕೆ ನಿಜಕ್ಕೂ ಕೇಳಿದ್ದೆಷ್ಟು..

ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾ ಇಡೀ ದೇಶಾದ್ಯಂತ ಬಾರಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಕೆಜಿಎಫ್ ಸಿನಿಮಾದ ಎಲ್ಲಾ ರೆಕಾರ್ಡ್ ಅನ್ನು ಕೆಜಿಎಫ್ 2 ಸಿನಿಮಾ ಬ್ರೇಕ್ ಮಾಡಿ, ಸಿನಿಮಾ ರಂಗದಲ್ಲಿ ಹೊಸ ಧಾಖಲೆ ಬರೆದಿದೆ. ಕೆಜಿಎಫ್ 2 ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಬಾರಿ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಅದರಂತೆ ಕೆಜಿಎಫ್ 2 ಸಿನಿಮಾ ದಿನದಿಂದ ದಿನಕ್ಕೆ ಹೊಸ ಧಾಖಲೆ ಬರೆಯುವಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿದೆ. ಕೆಜಿಎಫ್ 2 ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಬಾಷೆಗಳಲ್ಲಿ ಬಿಡುಗಡೆಯಾಗಿದೆ. ಅಲ್ಲಿಯೂ ಸಹ ಬಾರಿ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ ಕೆಜಿಎಫ್ ಸಿನಿಮಾ.

ಕೆಜಿಎಫ್ 2 ಸಿನಿಮಾ 1200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಒಡೆದಿದೆ. ಸಿನಿಮಾ ರಿಲೀಸ್ ಆಗಿ 40 ದಿನಗಳಾದರೂ ಸಹ ಸಿನಿಮಾ ಕಲೆಕ್ಷನ್ ನಲ್ಲಿ ಯಾವುದೇ ಕಡಿತವಾಗುತ್ತಿಲ್ಲ, ದಿನದಿಂದ ದಿನಕ್ಕೆ ಬಾರಿ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಲೇ ಇದೆ. ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದರು. ನಟಿ ಶ್ರೀನಿಧಿ ಅವರ ರೀನಾ ಪಾತ್ರಕ್ಕೆ ಅಭಿಮಾನಿಗಳಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲ ಸಿನಿಮಾವೇ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಅಲ್ಲದೆ ತಮ್ಮ ಮೊದಲ ಸಿನಿಮಾದ ಇಷ್ಟು ದೊಡ್ಡ ಮಟ್ಟದಲ್ಲಿ ಹಿತ್ ಆಗಿರುವುದು ನಿಜಕ್ಕೂ ಅವರ ಅದೃಷ್ಟ ಎನ್ನಬಹುದು. ಶ್ರೀನಿಧಿ ಅವರನ್ನು ಇದೀಗ ಚಿತ್ರರಂಗದ ಗೋಲ್ಡನ್ ಲೆಗ್ ಎನ್ನಲಾಗಿತ್ತಿದೆ.

ನಟಿ ಶ್ರೀನಿಧಿ ಶೆಟ್ಟಿ 2016 ರಲ್ಲಿ ಮಿಸ್ ಸೂಪರ್ ನ್ಯಾಷನಲ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ, ಈ ಪ್ರಶಸ್ತಿ ಪಡೆದ ಭಾರತದ ಎರಡನೇ ಪ್ರತಿನಿಧಿಯಾಗಿದ್ದಾರೆ ಶ್ರೀನಿಧಿ ಶೆಟ್ಟಿ. ನಂತರ ಶ್ರೀನಿಧಿ ಅವರಿಗೆ ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾಗಳ ಬಳಿಕ ಶ್ರೀನಿಧಿ ಅವರಿಗೆ ಸಾಲು ಸಾಲು ಸಿನಿಮಾಗಳ ಆಫ್ಹರ್ ಹುಡುಕಿಕೊಂಡು ಬರುತ್ತಿದೆ. ನಟಿ ಶ್ರೀನಿಧಿ ಶೆಟ್ಟಿ ಅವರು ತಮ್ಮ 5-6 ವರ್ಷಗಳನ್ನು ಕೇವಲ ಕೆಜಿಎಫ್ ಸಿನಿಮಾಗಾಗಿ ಮುಡುಪಾಗಿಟ್ಟಿದ್ದರಂತೆ. ಕೆಜಿಎಫ್ ನಂತರ ಇದೀಗ ನಟಿ ಶ್ರೀನಿಧಿ ಅವರು ತಮಿಳಿನ ಕೋಬ್ರಾ ಸಿನಿಮಾದಲ್ಲಿ ನಟ ವಿಕ್ರಮ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕೆಜಿಎಫ್ ಸಿನಿಮಾದ ಮೂಲಕ ನಟಿ ಶ್ರೀನಿಧಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕೋಬ್ರಾ ಸಿನಿಮಾದಲ್ಲಿ ನಟಿಸುವ ಮೂಲಕ ನಟಿ ತಮಿಳು ಸಿನಿಮಾರಂಗಕ್ಕೂ ಎಂಟ್ರಿ ನೀಡಿದ್ದಾರೆ. ಇದೀಗ ನಟಿ ಶ್ರೀನಿಧಿ ಅವರಿಗೆ ತೆಲುಗು ಸಿನಿಮಾ ಒಂದರಲ್ಲಿ ಆಫ್ಹರ್ ನೀಡಲಾಗಿತ್ತಂತೆ, ಈ ಸಿನಿಮಾಗೆ ನಟಿ ಕೇಳಿದ ಸಂಭಾವನೆ ಕೇಳಿ ಚಿತ್ರತಂಡ ಶಾಕ್ ಆಗಿದೆಯಂತೆ. ಹೌದು ನಟಿ ಶ್ರೀನಿಧಿ ಅವರು ಈ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 2 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಕೇಳಿದ್ದಾರಂತೆ. ಚಿತ್ರತಂಡ ಅಷ್ಟು ದೊಡ್ಡ ಮೊತ್ತವನ್ನು ನೀಡಲು ಸಿದ್ಧವಿಲ್ಲ ಎನ್ನಲಾಗುತ್ತಿದೆ. ಇನ್ನು ಇದೀಗ ಈ ವಿಷಯದ ಬಗ್ಗೆ ಸೋಸಿಯಲ್ ಮೀಡಿಯದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ.

ಇನ್ನು ಕೆಜಿಎಫ್ 3 ಸಿನಿಮಾ ಕೂಡ ಶೀಘ್ರದಲ್ಲೇ ಬರಲಿದ್ದು, ಆ ಸಿನಿಮಾದ ಕೆಲವು ದೃಶ್ಯಗಳಲ್ಲಿ ಶ್ರೀನಿಧಿ ಶೆಟ್ಟಿ ಇರಲಿದ್ದಾರೆ ಎನ್ನಲಾಗುತ್ತಿದೆ.. ಆದರೆ ಎರಡು ಕೋಟಿ ಕೇಳೋದ್ರಲ್ಲಿ ಏನು ತಪ್ಪಿದೆ.. ಒಬ್ಬ ಹೀರೋಗೆ ಹತ್ತರಿಂದ ಹದಿನೈದು ಕೋಟಿ ಹಣ ಕೊಡುವಾಗ ನಟಿಗೆ ಎರಡು ಕೋಟಿ ಕೊಟ್ಟರೇನು ತಪ್ಪು.. ಅದರಲ್ಲೂ ತಮ್ಮ ಜೀವನದ ಐದು ವರ್ಷ ಮುಡಿಪಿಟ್ಟು ದೊಡ್ಡ ಯಶಸ್ಸು ಪಡೆದ ಸಿನಿಮಾದ ಭಾಗವಾಗಿದ್ದ ನಟಿ ಎರಡು ಕೋಟಿ ಕೇಳೋದ್ರಲ್ಲಿ ತಪ್ಪೇನಿದೆ.. ಇತ್ತೀಚಿನ ನಟಿಯರು ಐದರಿಂದ ಆರು ಸಿನಿಮಾ ಮಾಡೋದು ಹೆಚ್ಚು ಒಂದು ಸಿನಿಮಾಗೆ ಈ ರೀತಿ ಸಮಯ ನೀಡುತ್ತಾ ಬಂದರೆ ಅವರ ವೃತ್ತಿ ಜೀವನದಲ್ಲಿ ಐದಾರು ಸಿನಿಮಾ ಮಾಡಲಷಟೇ ಸಾಧ್ಯ.. ಅಷ್ಟು ಸಿನಿಮಾಗೆ ಇಷ್ಟಾದರು ಸಂಭಾವನೆ ಕೇಳೋದ್ರಲ್ಲಿ ತಪ್ಪೇನು ಇಲ್ಲ ಎಂಬುದೇ ಬಹುಪಾಲು ಜನರ ಅಭಿಪ್ರಾಯವಾಗಿದೆ..