ಅನುಪಮಾಗೆ ಸೃಜನ್ ದುಬಾರಿ ಬೆಲೆಯ ಆ ಉಡುಗೊರೆ ಕೊಡಲು ಕಾರಣವೇನು‌‌.. ಅನುಪಮಾ ಕಣ್ಣೀರಿಟ್ಟಿದ್ದೇಕೆ ಗೊತ್ತಾ..

0 views

ನನ್ನಮ್ಮ ಸೂಪರ್ ಸ್ಟಾರ್ ಶೋನ ಸಂಚಿಕೆಗಳು ಪ್ರತಿ ವಾರವೂ ಒಂದೊಂದು ವಿಭಿನ್ನ ಕಾನ್ಸೆಪ್ಟ್ ಗಳನ್ನು ತರುವ ಮೂಲಕ ಜನರ ಮನಸ್ಸಿಗೆ ಹತ್ತಿರವಾಗುತ್ತಿದೆ.. ಮನರಂಜನೆಯ ಜೊತೆಗೆ ತಾಯಿ ಹಾಗೂ ಮಗುವಿನ ಪ್ರೀತಿಯನ್ನು ಬೆಸೆಯುವ ಶೋ ಯಶಸ್ವಿಯಾಗಿದ್ದು ಒಳ್ಳೆಯ ರೇಟಿಂಗ್ ಜೊತೆಗೆ ಸಾಗುತ್ತಿದೆ.. ಇನ್ನೂ ಈ ಶೋನ ಮಕ್ಕಳೇ ಆಗಲಿ ಅಥವಾ ಜಡ್ಜಸ್ ಗಳಾದ ತಾರಮ್ಮ ಸೃಜನ್ ಲೋಕೇಶ್ ಹಾಗೂ ಅನುಪ್ರಭಾಕರ್ ಎಲ್ಲರೂ ಸಹ ಒಂದೇ ಕುಟುಂಬದಂತೆ ಇದ್ದು ಅವರ ಮಾತುಗಳು ಪ್ರೇಕ್ಷಕರಿಗೆ ಒಂದು ರೀತಿ ಮುದ ನೀಡುವುದು ಹೌದು..

ಇನ್ನು ಕಳೆದ ವಾರದ ಸಂಚಿಕೆ ಅಮ್ಮಂದಿರಿಗೆ ಬಹಳ ವಿಶೇಷವಾದ ಸಂಚಿಕೆಯಾಗಿತ್ತು.. ಮಕ್ಕಳೆಲ್ಲಾ ತಮ್ಮ ತಮ್ಮ ಅಮ್ಮಂದಿರಿಗಾಗಿ ಶಾಪಿಂಗ್ ಮಾಡಿ ಅವರಿಗಿಷ್ಟ ಆಗುವ ರೀತಿ ಉಡುಗೊರೆಗಳನ್ನು ತಂದಿದ್ದರು.. ಕೆಲವು ಮಕ್ಕಳು ಸೀರೆ ತಂದರೆ.. ಮತ್ತೆ ಕೆಲ ಮಕ್ಕಳು ಕುರ್ತಾಗಳನ್ನು ತಂದರು.. ಇದಕ್ಕೂ ಮೀರಿ ಬಂಗಾರದ ಓಲೆಯನ್ನು ಉಡುಗೊರೆಯಾಗಿ ತಂದ ಮಕ್ಕಳೂ ಇದ್ದರು.. ಇನ್ನು ಅದ್ವಿಕ್ ಬಹಳ ಬುದ್ಧಿವಂತ ತನ್ನ ತಾಯಿಗೆ ದುಬಾರಿ ಬೆಲೆಯ ಏರ್ ಪಾಡ್ ಗಳನ್ನು ತಂದು ಉಡುಗೊರೆಯಾಗಿ ನೀಡಿದ.. ಇದಕ್ಕೆಲ್ಲಾ ವಾಹಿನಿ ಅವರೇ ಹಣ ನೀಡಿದ್ದು ವಿಶೇಷ ಹಾಗೂ ಮೆಚ್ಚುವಂತದ್ದಾಗಿತ್ತು‌.

ಇನ್ನು ಮಕ್ಕಳಿಂದ ಉಡುಗೊರೆ ಪಡೆದ ಅಮ್ಮಂದಿರ ಮುಖದಲ್ಲಿನ ಸಂತೋಷ ನಿಜಕ್ಕೂ ಪ್ರೇಕ್ಷಕರನ್ನು ಭಾವುಕರನ್ನಾಗಿಸಿತ್ತು.. ಆ ಸಂಚಿಕೆ ಮನರಂಜನೆ ಮಾತ್ರವಲ್ಲದೇ ಬಹಳ ಭಾವನಾತ್ಮಕವಾಗಿ ಮೂಡಿ ಬಂದಿದ್ದು ಎಲ್ಲರೂ ಮೆಚ್ಚಿಕೊಂಡಿದ್ದರು..ಇನ್ನೂ ಈ ವಾರದ ಸಂಚಿಕೆಯಲ್ಲಿ ಸೃಜನ್ ಲೋಕೇಶ್ ಅವರು ಸಹ ಕೆಲವರಿಗೆ ಉಡುಗೊರೆ ನೀಡಿದ್ದಾರೆ.. ಹೌದು ತಾರಮ್ಮ ಅನು ಪ್ರಭಾಕರ್ ಅವರು ಹಾಗೂ ನಿರೂಪಕಿ ಅನುಪಮಾ ಅವರಿಗಾಗಿ ಉಡುಗೊರೆಗಳನ್ನು ತಂದಿದ್ದಾರೆ.. ಕಳೆದ ವಾರ ಮಕ್ಕಳು ತಮ್ಮ ತಾಯಂದಿರಿಗೆ ಉಡುಗೊರೆ ಕೊಟ್ಟಾಗ ಬಹಳ ಖುಷಿ ಆಯಿತು.. ಅವರ ಸ್ಪೂರ್ತಿಯಿಂದಲೇ ನಾನು ಇವತ್ತು ಇವರಿಗೆ ಉಡುಗೊರೆ ತಂದಿರುವೆಂದು ಮೂವರಿಗೂ ಪ್ರತ್ಯೇಕ ಉಡುಗೊರೆ ಕೊಟ್ಟರು..

ಇತ್ತ ತಾರಮ್ಮನಿಗೆ ಅವರಿಗೆ ಇಷ್ಟವಾಗುವಂತಹ ಎರಡು ರೇಶಿಮೆ ಸೀರೆಗಳನ್ನು ಉಡುಗೊರೆಯಾಗಿ ಕೊಟ್ಟರು.. ತಾರಮ್ಮ ವೇದಿಕೆ ಮೇಲೆಯೇ ಸೀರೆಗಳನ್ನು ಎಲ್ಲರಿಗೂ ತೋರಿಸಿ.. ಹೆಣ್ಣು ಮಕ್ಕಳಿಗೆ ಎಷ್ಟೇ ಸೀರೆ ಇದ್ದರೂ ಸಹ ಹೊಸ ಸೀರೆ ತಂದಾಗ ಆಗುವ ಸಂತೋಷವೇ ಬೇರೆ ಎಂದರು.. ಅಷ್ಟೇ ಅಲ್ಲದೇ ಈ ಮೊದಲಿನಿಂದಲೂ ತಾರಾ ಅವರನ್ನು ಕಂಡರೆ ಸೃಜನ್ ಅವರಿಗೆ ತುಂಬಾ ಪ್ರೀತಿ ಹಾಗೂ ಗೌರವ.. ಮಜಾ ಟಾಕೀಸಿಗೆ ತಾರಾ ಅವರು ಬಂದಾಗಲೂ ಸಹ ಬಹಳ ಸಂತೋಷ ಪಡುತ್ತಿದ್ದ ಸೃಜನ್ ಅವರನ್ನು ತಾರಮ್ಮಾ ಎಂದೇ ಕರೆಯೋದುಂಟು.. ಇದೀಗ ಅಮ್ಮನಿಗಾಗಿ ಸೀರೆಗಳನ್ನು ಉಡುಗೊರೆಯಾಗಿ ಕೊಟ್ಟ ಸೃಜನ್ ಗೆ ತಾರಾ ಅವರು ಭಾವುಕರಾಗಿ ಧನ್ಯವಾದಗಳನ್ನಿ ತಿಳಿಸಿದರು..

ಇನ್ನು ನನ್ನಮ್ಮ ಸೂಪರ್ ಸ್ಟಾರ್ ನ ಮತ್ತೊಬ್ಬ ಜಡ್ಜ್ ಆದಂತಹ ಅನು ಪ್ರಭಾಕರ್ ಅವರಿಗೂ ಸಹ ಉಡುಗೊರೆ ತಂದ ಸೃಜನ್ ಅವರು ಅವರಿಗಿಷ್ಟವಾಗುವಂತಹ ನೆಕ್ ಚೈನ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.. ಇನ್ನು ನಿರೂಪಕಿ ಅನುಪಮಾ ಅವರಿಗೆ ವಿಶೇಷ ಉಡುಗೊರೆಯೊಂದನ್ನು ತಂದಿದ್ದು ಅನುಪಮಾ ವೇದಿಕೆಯ ಮೇಲೆಯೇ ಕಣ್ಣೀರಿಟ್ಟಿದ್ದಾರೆ.. ಹೌದು ಅನುಪಮಾ ಅವರು ಚಿಕ್ಕ ವಯಸ್ಸಿಗೆ ತಮ್ಮ ಸಂಸಾರದ ಜವಾಬ್ದಾರಿ ಹೊತ್ತವರು.. ಮನೆಯ ನಿರ್ವಹಣೆಯ ಜೊತೆಗೆ ತಾಯಿ ಹಾಗೂ ತಂಗಿಯನ್ನು ನೋಡಿಕೊಂಡು ಹಣಕಾಸಿನ ಸಲುವಾಗಿ ಸಾಕಷ್ಟು ಕಷ್ಟ ಪಟ್ಟು ಒಂದು ನೆಲೆಯೂರಿದವರು.. ಹೆಣ್ಣೆಂದು ಜರಿದವರ ಮುಂದೆಯೇ ತಲೆ ಎತ್ತಿ ಬದುಕಿ ತೋರಿಸಿದಾಕೆ ಅನುಪಮಾ..

ಈ ವಿಚಾರಗಳನ್ನು ಹಂಚಿಕೊಂಡ ಸೃಜನ್ ಅವರು.. “ನಾನು ಅನುಪಮಾಳನ್ನು ಬಹಳ ಚಿಕ್ಕ ವಯಸ್ಸಿಂದ ನೋಡ್ತಾ ಬಂದಿದ್ದೀನಿ.. ಅವಳು ಜೀವನದಲ್ಲಿ ಬಹಳ ಕಷ್ಟ ಪಟ್ಟು ಈ ಹಂತಕ್ಕೆ ಬಂದಿದ್ದಾಳೆ.. ಅವಳ ತಾಯಿ ಹಾಗೂ ತಂಗಿಯನ್ನು ನೋಡಿಕೊಂಡು ಇತ್ತ ಕೆಲಸ ಮಾಡಿ ಮನೆ ನಡೆಸಿಕೊಂಡು ಸಾಕಷ್ಟು ಕಷ್ಟಗಳ ಜೊತೆಯೇ ಜೀವನ ಮಾಡಿದ್ದಾಳೆ.. ಅವಳನ್ನು ಈ ರೀತಿ ಸಂತೋಷವಾಗಿ ನೋಡೋದು ಒಂದು ರೀತಿ ಖಿಷಿ ಅನ್ಸತ್ತೆ ಅವಳು ಯಾವಾಗಲೂ ಸಂತೋಷವಾಗಿರಲಿ ಎಂದು ಸೃಜನ್ ಅವರು ಅನುಪಮಾಗಾಗಿ ದುಬಾರಿ ಬೆಲೆಯ ಬಂಗಾರವನ್ನು ನೀಡಿದ್ದಾರೆ..ಹೌದು ಉಡುಗೊರೆ ಪಡೆದ ಅನುಪಮಾ ಭಾವುಕರಾಗಿ ಕಣ್ಣೀರಿಟ್ಟಿದ್ದು ತಮ್ಮ ಹಳೆಯ ದಿನಗಳನ್ನು ನೆನೆದಿದ್ದಾರೆ.. ಸಧ್ಯ ಆ ಎಲ್ಲವೂ ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದ್ದು ಪ್ರೇಕ್ಷಕರನ್ನು ಭಾವುಕರನ್ನಾಗಿಸುವುದು.. ಒಬ್ಬ ಹೆಣ್ಣು ಮಗಳು ತನಗಾಗಿ ಏನನ್ನೂ ಆಸೆ ಪಡದೆ ತನ್ನ ಕುಟುಂಬಕ್ಕಾಗಿ.. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಮಾಡುವ ತ್ಯಾಗ ನಿಜಕ್ಕೂ ಅಂತಹ ಹೆಣ್ಣು ಮಕ್ಕಳಿಗೆ ಹ್ಯಾಟ್ಸ್ ಆಫ್..