ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಮೇಘನಾ ರಾಜ್ ಗೆ ಅವಕಾಶ ಕೊಟ್ಟ ಆ ವ್ಯಕ್ತಿ ಯಾರು ಗೊತ್ತಾ? ಎಲ್ಲಾ ವಿಚಾರ ತಿಳಿಸಿದ ಮೇಘನಾ ರಾಜ್..

0 views

ಮೇಘನಾ ರಾಜ್ ಸಧ್ಯ ಕನ್ನಡ ಕಿರುತೆರೆಯ ಖ್ಯಾತ ಡ್ಯಾನ್ಸ್ ಶೋ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಮಿಂಚುತ್ತಿದ್ದು ಸಾಕಷ್ಟು ನೋವಿನ ದಿನಗಳ ಬಳಿಕ ತೆರೆ ಮೇಲೆ ಕಂಬ್ಯಾಕ್ ಮಾಡಿದ್ದಾರೆ.. ಆದರೆ ಮೇಘನಾ ರಾಜ್ ಅವರು ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ತೀರ್ಪುಗಾರರಾಗಿ ಬರುವುದರ ಹಿಂದೆ ಒಂದು ದೊಡ್ಡ ಕತೆಯೇ ಇದೆ.. ಹೌದು ಮೊನ್ನೆ ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ಮೇಘನಾ ರಾಜ್ ಈ ಬಗ್ಗೆ ಕೆಲ ವಿಚಾರಗಳನ್ನೂ ಸಹ ಹಂಚಿಕೊಂಡಿದ್ದಾರೆ.. ಹೌದು ಕಳೆದ ಮೂರು ವಾರಗಳ ಹಿಂದಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾದ ಡ್ಯಾನ್ಸಿಂಗ್ ಚಾಂಪಿಯನ್ ಶೋ ಭರ್ಜರಿಯಾಗಿಯೇ ಯಶಸ್ಸು ಕಂಡಿದೆ.. ಅತ್ತ ಜೀ ಕನ್ನಡ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುತ್ತಿರುವ ಗೋಲ್ಡನ್ ಗ್ಯಾಂಗ್ ಶೋ ಪ್ರಸಾರವಾದರೆ ಇತ್ತ ಆ ಶೋಗೆ ಪೈಪೋಟಿಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಶೋ ಪ್ರಸಾರವಾಗುತ್ತಿದ್ದು ಒಳ್ಳೆಯ ರೇಟಿಂಗ್ ಪಡೆದುಕೊಳ್ಳುತ್ತಿದೆ..

ಇನ್ನು ಶೋನ ಪ್ರಮುಖ ಆಕರ್ಷಣೆ ಎಂದರೆ ಅದು ನಿರೂಪಕ ಅಕುಲ್ ಬಾಲಾಜಿ ಹಾಗೂ ತೀರ್ಪುಗಾರರು.. ಹೌದು ವರ್ಷಗಳ ನಂತರ ಅಕುಲ್ ಬಾಲಾಜಿ ಮತ್ತೆ ನಿರೂಪಕನಾಗಿ ಕಿರುತೆರೆಗೆ ಎಂಟ್ರಿ ನೀಡಿದ್ದು ಮನರಂಜನೆಗೆ ಯಾವುದೇ ಕೊರತೆ ಇಲ್ಲವೆನ್ನಬಹುದು.. ಇನ್ನು ತೀರ್ಪುಗಾರರ ವಿಚಾರಕ್ಕೆ ಬಂದರೆ ನಾಟ್ಯ ಮಯೂರಿ ಎನ್ನಲಾಗುವ ಮಯೂರಿ ಉಪಧ್ಯಾಯ ಅವರು ಒಬ್ಬ ತೀರ್ಪುಗಾರರಾದರೆ ಮತ್ತೊಬ್ಬರು ನಟ ವಿಜಯ್ ರಾಘವೇಂದ್ರ.. ಹೌದು ಜೀ ಕನ್ನಡ ವಾಹಿನಿತಲ್ಲಿ ಸಾಕಷ್ಟು ವರ್ಷಗಳ ಕಾಲ ರಿಯಾಲಿಟಿ ಶೋನ ಜಡ್ಜ್ ಆಗಿದ್ದ ವಿಜಯ ರಾಘವೇಂದ್ರ ಅವರು ಇದೀಗ ಕಲರ್ಸ್ ಕನ್ನಡಕ್ಕೆ ಬಂದಿದ್ದು ಡ್ಯಾನ್ಸಿಂಗ್ ಚಾಂಪಿಯನ್ ಶೋನ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ..

ಇನ್ನು ಸ್ಪರ್ಧಿಗಳ ವಿಚಾರಕ್ಕೆ ಬಂದರೆ ಸೆಲಿಬ್ರೆಟಿ ಡ್ಯಾನ್ಸ್ ಸ್ಪರ್ಧಿಯ ಜೊತೆಗೆ ನುರಿತ ಡ್ಯಾನ್ಸರ್ ಒಬ್ಬರು ಪಾಲ್ಗೊಳ್ಳುತ್ತಿದ್ದು ಅನೇಕ ಕಿರುತೆರೆ ಕಲಾವಿದರು ಈ ಶೋ ಮೂಲಕ ಕಂಬ್ಯಾಕ್ ಮಾಡಿದ್ದಾರೆ.. ಪುಟ್ಟ ಗೌರಿ ಖ್ಯಾತಿಯ ಸಾನಿಯಾ.. ಕೆಜಿಎಫ್ ನ ಯಶ್ ಪಾತ್ರದ ಬಾಲ ನಟ, ಚಂದನ್, ಇಷಿತಾ ಹೀಗೆ ಸಾಕಷ್ಟು ಕಲಾವಿದರಿಂದ ವೇದಿಕೆ ರಂಗೇರಿದೆ.. ಇನ್ನು ಇತ್ತ ಶೋ ಶುರುವಾದ ಮೊದಲ ವಾರ ಅತಿಥಿ ತೀರ್ಪುಗಾರರಾಗಿ ಬಂದಿದ್ದ ಮೇಘನಾ ರಾಜ್ ಇದೀಗ ಪೂರ್ಣ ಪ್ರಮಾಣದ ಜಡ್ಜ್ ಆಗಿ ಕಂಬ್ಯಾಕ್ ಮಾಡಿದ್ದು ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಹ ಬಂದಿದೆ.. ಆದರೆ ಮೇಘನಾ ರಾಜ್ ಅವರು ಈ ಶೋನ ತೀರ್ಪುಗಾರರಾಗಿ ಬರುವ ಹಿಂದಿನ ಅಸಲಿ ಕತೆ ಬೇರೆಯೇ ಇದೆ..

ಹೌದು 2020 ರಲ್ಲಿ ಅಕಾಲಿಕವಾಗಿ ಚಿರು ಇಲ್ಲವಾದ ಬಳಿಕ ಮೇಘನಾ ರಾಜ್ ಸಾಕಷ್ಟು ನೋವಿನ ಹಾಗೂ ಕಷ್ಟದ ದಿನಗಳನ್ನು ನೋಡುವಂತಾಯಿತು.. ಚಿರು ಅಗಲಿದ ಕೆಲವೇ ತಿಂಗಳುಗಳಲ್ಲಿ ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್.. ಮಗುವಿನ ಆರೈಕೆಯಲ್ಲಿ ದಿನ ಕಳೆದರು.. ನೋಡು ನೋಡುತ್ತಿದ್ದಂತೆ ವರ್ಷ ಕಳೆದೇ ಹೋಯಿತು.. ಇನ್ನು ಅದ್ಧೂರಿಯಾಗಿ ಮಗುವಿನ ಹುಟ್ಟು ಹಬ್ಬವನ್ನೂ ಸಹ ಆಚರಿಸಿದ ಮೇಘನಾ ರಾಜ್ ಈ ಒಂದೂವರೆ ವರ್ಷದಲ್ಲಿ ಸಾಕಷ್ಟು ವಿಚಾರಗಳಲ್ಲಿ ವಿವಾದಗಳಲ್ಲಿಯೂ ಸುದ್ದಿಯಾದರು.. ಇನ್ನು ಎಷ್ಟು ದಿನ ಎಂದು ಮನೆಯಲ್ಲಿಯೇ ಇರಲು ಸಾಧ್ಯವೆಂದು ಮತ್ತೆ ತಮ್ಮ ಕಲಾವೃತ್ತಿಯನ್ನು ಆರಂಭಿಸುವ ನಿರ್ಧಾರ ಮಾಡಿದರು.. ರಾಯನ್ ಹುಟ್ಟಿದ ಕೆಲವೇ ತಿಂಗಳಲ್ಲಿ ಸಾಕಷ್ಟು ಜಾಹಿರಾತುಗಳಲ್ಲಿ‌ ಕಾಣಿಸಿಕೊಂಡ ಮೇಘನಾ ರಾಜ್ ಸಿನಿಮಾದಲ್ಲಿಯೂ ಕಂಬ್ಯಾಕ್‌ ಮಾಡುವ ನಿರ್ಧಾರ ಮಾಡಿದರು.. ಸ್ನೇಹಿತ ಪನ್ನಘ ಭರಣ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು ಸಿನಿಮಾ ಕೆಲಸವೂ ಸಹ ಶುರುವಾಗಿದೆ ಎನ್ನಲಾಗಿದೆ..

ಈ ನಡುವೆ ಮೇಘನಾ ರಾಜ್ ಅವರಿಗೆ ಸಿಕ್ಕ ಅವಕಾಶವೇ ಡ್ಯಾನ್ಸಿಂಗ್ ಚಾಂಪಿಯನ್.. ಹೌದು ಮೇಘನಾ ರಾಜ್ ಅವರು ಇದ್ದ ಸಂದರ್ಭದಿಂದ ಸೀದಾ ತೆರೆ ಮೇಲೆ ಬಂದಾಗ ಜನರಿಂದ ಸಾಕಷ್ಟು ರೀತಿಯಲ್ಲಿ ಕಮೆಂಟ್ ಗಳು ಬರುವುದು ಸಹಜ.. ಜಡ್ಜ್ ಆಗಿ ಬಂದಾಗ ಶೋಗೆ ತಕ್ಕ ರೀತಿಯಲ್ಲಿ ನಡೆದುಕೊಳ್ಳಬೇಕಾಗುತ್ತದೆ.. ಡ್ಯಾನ್ಸ್ ಶೋ ಆದ ಕಾರಣ ಕೆಲವೊಂದು ಸಂದರ್ಭದಲ್ಲಿ ಡ್ಯಾನ್ಸ್ ಕೂಡ ಮಾಡಬೇಕಾಗುತ್ತದೆ.. ಅಂತಹ ಸಮಯದಲ್ಲಿ ಜನರು ನನ್ನನ್ನು ಹೇಗೆ ತೆಗೆದುಕೊಳ್ಳುವರು ಎಂಬ ಹಿಂಜರಿಕೆಯಲ್ಲಿಯೇ ಇದ್ದವರು ಮೇಘನಾ ರಾಜ್.. ಹೌದು ಮೊದ ಮೊದಲು ಅವಕಾಶ ಬಂದಾಗ ಯೋಚಿಸಲು ಸಮಯ ಕೇಳಿದ್ದರು ಮೇಘನಾ ರಾಜ್.. ಆಗ ಮೇಘನಾ ರಾಜ್ ಅವರನ್ನು ಒಪ್ಪಿಸಿ ತೆರೆ ಮೇಲೆ ಕರೆ ತಂದ ಆ ವ್ಯಕ್ತಿ ಮತ್ಯಾರೂ ಅಲ್ಲ ಅದು ಸೃಜನ್ ಲೋಕೇಶ್.. ಹೌದು ಸಧ್ಯ ನನ್ನಮ್ಮ ಸೂಪರ್ ಸ್ಟಾರ್ ಶೋ ನಲ್ಲಿ ಜಡ್ಜ್ ಆಗಿರುವ ಸೃಜನ್ ಲೋಕೇಶ್ ಅವರು ಡ್ಯಾನ್ಸಿಂಗ್ ಚಾಂಪಿಯನ್ ಶೋನ ನಿರ್ಮಾಪಕರೂ ಹೌದು..

ಮಜಾ ಟಾಕೀಸ್ ಶೋ ನಿರ್ಮಾಣ ಮಾಡುತ್ತಿದ್ದ ಲೋಕೇಶ್ ಪ್ರೊಡಕ್ಷನ್ಸ್ ಮೂಲಕ ಮೊದಲ ಬಾರಿಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋವನ್ನು ನಿರ್ಮಾಣ ಮಾಡುತ್ತಿದ್ದು ಇದೇ ಕಾರಣಕ್ಕೆ ಸ್ನೇಹಿತರಾದ ವಿಜಯ್ ರಾಘವೇಂದ್ರ ಅವರನ್ನು ಹಾಗೂ ಅಕುಲ್ ಬಾಲಾಜಿ ಅವರನ್ನು ಕರೆತಂದು ದೊಡ್ಡ ಮಟ್ಟದಲ್ಲಿಯೇ ಶೋ ಶುರು ಮಾಡಿದರು.. ಇತ್ತ ಮೇಘನಾ ರಾಜ್ ಅವರನ್ನು ತೀರ್ಪುಗಾರರಾಗಿ ಕರೆತರಲು ನಿರ್ಧಾರ ಮಾಡಿದರೂ ಕೂಡ ಮೇಘನಾ ರಾಜ್ ಅವರು ಜನರು ಯಾವ ರೀತಿ ತೆಗೆದುಕೊಳ್ಳುವರೆಂದು ಹಿಂಜರಿದರು.. ಈ ಕಾರಣಕ್ಕೇ ಮೊದಲು ಒಂದು ವಾರದ ಅತಿಥಿ ತೀರ್ಪುಗಾರರಾಗಿ ಆಗಮಿಸಿ.. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬಂದರೆ ಮುಂದುವರೆಸೋಣ ಎಂದು ಸೃಜನ್ ಲೋಕೇಶ್ ಅವರು ಹೇಳಲಾಗಿ ಅವರ ಮಾತಿಗೆ ಒಪ್ಪಿ ಕಿರುತೆರೆಗೆ ಮೊದಲ ಬಾರಿಗೆ ಮೇಘನಾ ರಾಜ್ ಅವರು ತೀರ್ಪುಗಾರರಾಗಿ ಬಂದರು.. ಇಂತಹ ಸಮಯದಲ್ಲಿ ದೊಡ್ಡದೊಂದು ಕಂಬ್ಯಾಕ್ ನ ಅವಶ್ಯಕತೆ ಮೇಘನಾ ರಾಜ್ ಅವರಿಗೂ ಸಹ ಇತ್ತು..

ಇತ್ತ ಡ್ಯಾನ್ಸಿಂಗ್ ಚಾಂಪಿಯನ್ ಗೆ ಬಂದ ಮೇಘನಾ ರಾಜ್ ಅವರನ್ನು ಅಭಿಮಾನಿಗಳು ಒಳ್ಳೆಯ ರೀತಿ ಬರಮಾಡಿಕೊಂಡರು.. ಜೊತೆಗೆ ದೊಡ್ಡ ಮಟ್ಟದಲ್ಲಿ ಬೆಂಬಲವನ್ನೂ ಸಹ ನೀಡಿದರು.. ಮೇಘನಾ ರಾಜ್ ಅವರ ಹೊಸ ಜರ್ನಿಗೆ ಶುಭ ಹಾರೈಸಿದರು.. ಒಂದು ವಾರಕ್ಕೆ ಜರ್ನಿ ಮುಗಿಸದೇ ಮುಂದುವರೆಸಿ ಎಂದು ಸಾಕಷ್ಟು ಮಂದಿ ಕೇಳಿಕೊಂಡರು.. ಇತ್ತ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬಂದ ಕಾರಣ‌ ಅತಿಥಿಯಾಗಿ ಬಂದ ಮೇಘನಾ ರಾಜ್ ಪೂರ್ಣ ಪ್ರಮಾಣದ ತೀರ್ಪುಗಾರರಾಗಿ ಮುಂದುವರೆದರು.. ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಾಗ ಈ ಬಗ್ಗೆ ಮಾತನಾಡಿದ ಮೇಘನಾ ರಾಜ್ ಅವರು “ನಾನು ಮೊದಲ ಬಾರಿಗೆ ಕಿರುತೆರೆಯಲ್ಲಿ ಶೋವೊಂದರ ತೀರ್ಪುಗಾರರಾಗಿದ್ದೇನೆ.. ಇದು ನನಗೆ ಅನಿರೀಕ್ಷಿತವಾಗಿತ್ತು.. ಡ್ಯಾನ್ಸಿಂಗ್ ಚಾಂಪಿಯನ್ ಓಪನಿಂಗ್ ಸಂಚಿಕೆಗೆ ಅತಿಥಿಯಾಗಿ ಆಗಮಿಸಿದೆ.. ನಂತರ ಶೋನಲ್ಲಿ ಪೂರ್ಣ ಪ್ರಮಾಣದ ಜಡ್ಜ್ ಆಗುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ..

ನೀವೆಲ್ಲರೂ ಕಂಬ್ಯಾಕ್ ಮಾಡಿ ಎಂದು ಕೇಳಿಕೊಂಡಿರಿ.. ಈಗ ಅದು ನೆರವೇರಿದೆ.. ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್ ಶೋ ಸೆಟ್ ಜಾಗದಲ್ಲಿ ನನಗೊಂದು ರೀತಿ ಪಾಸಿಟಿವ್ ವೈಬ್ಸ್ ಅನುಭವವಾಗುತ್ತದೆ.. ಎಲ್ಲರ ಜೊತೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ.. ಶೋನ ಜಡ್ಜ್ ಆಗಿರುವುದು ನನಗೆ ಹೆಮ್ಮೆ ಇದೆ.. ನಾನು ಮೊದಲಿನಿಂದಲೂ ಡ್ಯಾನ್ಸ್ ಇಷ್ಟ ಪಡುತ್ತಿದ್ದೆ.. ಒಂದು ಶೋಗೆ ಹೋಗಿ ಡ್ಯಾನ್ಸ್ ಅನ್ನು ಎಂಜಾಯ್ ಮಾಡಿ ಬಹಳ ವರ್ಷಗಳೇ ಆಗಿತ್ತು.‌ ಈಗ ಅದು ನೆರವೇರಿದೆ.. ಡ್ಯಾನ್ಸ್ ಮಾಡಬೇಕು ಎನ್ನುವ ಆಸೆ ಇದೆ.. ಆದರೆ ಅದನ್ನು ಹಿಡಿದಿಟ್ಟುಕೊಂಡಿದ್ದೇನೆ ಎಂದಿದ್ದಾರೆ.. ಅಷ್ಟೇ ಅಲ್ಲದೇ ಶೋ ಜೊತೆಗೆ ಎರಡು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಪನ್ನಘಭರಣ ಅವರ ನಿರ್ದೇಶನದ ಒಂದು ಸಿನಿಮಾ ಹಾಗೂ ಶಬ್ಧ ಎಂಬ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿರುವುದರ ಬಗ್ಗೆಯೂ ಸಂತೋಷ ಹಂಚಿಕೊಂಡರು.. ಒಟ್ಟಿನಲ್ಲಿ ಮೇಘನಾ ರಾಜ್ ಅವರ ಈ ಕಂಬ್ಯಾಕ್ ಗೆ ಎಲ್ಲರೂ ಶುಭ ಹಾರೈಸಿ ಮುಂದಿನ ಸಿನಿಮಾ ಜರ್ನಿಗೆ ಶುಭ ಕೋರಿದರು.. ಮನುಷ್ಯನ ಜೀವನವೇ ಇಷ್ಟು ಯಾರೂ ಶಾಶ್ವತವಲ್ಲ ಇದ್ದಷ್ಟು ದಿನ ವಾಸ್ತವ ಅರಿತು ಮುಂದೆ ಸಾಗಬೇಕಷ್ಟೇ..