ಕೊರೊನಾಗೆ ತತ್ತರಿಸಿ ಹೋದ ಸರಿಗಮಪ ಸಿಂಗರ್ ಸುಬ್ರಹ್ಮಣಿ.. ಕೊನೆಗೂ ಉಳಿಯಲಿಲ್ಲ ಆ ಜೀವ..

0 views

ಕೊರೊನಾ ಎರಡನೇ ಅಲೆ ಊಹಿಸಿಕೊಳ್ಳಲಾಗದಷ್ಟು ನೋವನ್ನು ಜನರಿಗೆ ನೀಡುತ್ತಿದೆ. ನಿನ್ನೆ ಇದ್ದವರು ಇಂದಿಲ್ಲ.. ಇಂದು ಇದ್ದವರು ನಾಳೆ ಇರ್ತಾರೋ ಇಲ್ವೋ ಗೊತ್ತಿಲ್ಲ‌.. ನಮಗೆ ಪರಿಚಯದವರೇ ಗೊತ್ತಿರುವವರೇ ಅಕ್ಕಪಕ್ಕದವರೇ ಪ್ರತಿದಿನವೂ ಅವರುಗಳು ಇನ್ನಿಲ್ಲದ ಸುದ್ದಿಯನ್ನು ನೋಡಿವಂತಾಗಿ ಹೋಗಿದೆ.. ಇನ್ನು ಈ ಎರಡನೇ ಅಲೆಗೆ ಖ್ಯಾತ ನಾಮರೂ ಸಹ ತತ್ತರಿಸಿ ಹೋಗಿದ್ದಾರೆ..

ಅನೇಕ ಸಿನಿಮಾ ಮಂದಿ ಕೊರೊನಾಗೆ ಜೀವವನ್ನೇ ಕಳೆದುಕೊಂಡರು.. ನಿರ್ಮಾಪಕ ರಾಮು ಅವರು ನಟ ಶಂಖನಾದ ಅರವಿಂದ್ ಅವರು.. ನಿನ್ನೆಯಷ್ಟೇ ಕೊನೆಯುಸಿರೆಳೆದ ಹಿರಿಯ ನಟ‌ ಜೊತೆಜೊತೆಯಲಿ ಧಾರಾವಾಹಿ ನಟ ರಾಜಾರಾಮ್ ಅವರೂ ಸಹ ಕೊರೊನಾಗೆ ಇನ್ನಿಲ್ಲವಾಗಿ ಹೋದರು.. ಇನ್ನೂ ಬಹಳಷ್ಟು ಜನ ಕೊರೊನಾ ಪಾಸಿಟಿವ್ ಆಗಿ ಚೇತರಿಸಿಕೊಂಡದ್ದೂ ಇದೆ.. ಶ್ವೇತಾ ಚಂಗಪ್ಪ ಕುಟುಂಬ.. ನಟಿ ಶಾಲಿನಿ ಕುಟುಂಬ.. ಕಿರುತೆರೆ ನಟಿ ನಯನಾ ನಾಗರಾಜ್ ಕುಟುಂಬ.. ನಟಿ ಮಿಲನಾ ಹಾಗೂ ಕೃಷ್ಣ.. ನಟಿ ಶ್ವೇತಾ ಪ್ರಸಾದ್ ಹಾಗೂ ಪ್ರದೀಪ್.. ಹೀಗೆ ಸಾಕಷ್ಟು ಮಂದಿ ಕೊರೊನಾದಿಂದ ಚೇತರಿಸಿಕೊಂಡರು..

ಆದರೀಗ ಸರಿಗಮಪ ಖ್ಯಾತಿಯ ಪೊಲೀಸ್ ಸಿಂಗರ್ ಸುಬ್ರಹ್ಮಣಿ ಅಕ್ಷರಶಃ ಕೊರೊನಾದಿಂದಾಗಿ ತತ್ತರಿಸಿ ಹೋಗಿದ್ದಾರೆ.. ಹೌದು ಫ್ರಂಟ್ ಲೈನ್ ನಲ್ಲಿ ಸಾರ್ವಜನಿಕರಾಗಿ ದುಡಿಯಿತ್ತಿರುವ ವೈದ್ಯರು.. ಪೊಲಿಸ್ ಇಲಾಖೆ.. ಪೌರ ಕಾರ್ಮಿಕರು.. ಹೀಗೆ ಸಾಕಷ್ಟು ಮಂದಿ ತನ್ನ ಕುಟುಂಬದ ಕಡೆ ಕಾಳಜಿ ನೀಡಲಾಗದೆ ತಮ್ಮ ಕೆಲಸದಲ್ಲಿ‌ ನಿರತರಾಗಿದ್ದಾರೆ.. ಇವರುಗಳಲ್ಲಿ ಅದೆಷ್ಟೋ‌ ಮಂದಿ ಕೊರೊನಾದಿಂದ ಜೀವ ಕಳೆದುಕೊಂಡದ್ದೂ ಇದೆ..

ಇದೀಗ ಸರಿಗಮಪ ಸಿಂಗರ್ ಆಗಿದ್ದ ಪೊಲೀಸ್ ಸುಬ್ರಹ್ಮಣಿ ಅವರೂ ಸಹ ಕೊರೊನಾದಿಂದಾಗಿ ತಮ್ಮ ಹೆಂಡತಿಯ ಕಳೆದುಕೊಂಡಿದ್ದಾರೆ.. ಹೌದು ಬೆಂಗಳೂರಿ‌ಅಲ್ಲಿಯೇ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುಬ್ರಹ್ಮಣಿ ಅನೇಕ ಬಾರಿ ವೀಡಿಯೋ ಮಾಡಿ ಜನರಿಗೆ ಎಚ್ಚರವಾಗಿರುವಂತೆ ಮನವಿ ಮಾಡುತ್ತಿದ್ದರು.. ಆದರೆ ಕೊನೆಗೆ ತಮ್ಮ ಮನೆಯಲ್ಲಿಯೇ ಅದರಲ್ಲೂ ತಮ್ಮ ಪತ್ನಿಯೇ ಕೊರೊನಾಗೆ ಬಲಿಯಾಗಿ ಹೋದರು.. ಹೌದು ಕಳೆದ ವಾರವೇ ಸುಬ್ರಹ್ಮಣಿ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ಬಂದಿತ್ತು.. ಆದರೆ ಎರಡು ದಿನಗಳ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿತ್ತು.. ತಕ್ಷಣ ಹೆಂಡತಿಯನ್ನು ಉಳಿಸಿಕೊಳ್ಳಬೇಕೆಂದು ಆಸ್ಪತ್ರೆಗಳಿಗೆ ಬೆಡ್ ಗಾಗಿ ಅಲೆದಾಡಿದರು.. ಆದರೆ ಬೆಂಗಳೂರಿನಲ್ಲಿ ಎಲ್ಲಿಯೂ ಬೆಡ್ ಸಿಗಲಿಲ್ಲ..

ಕೊನೆಗೆ ಹೊಸಕೋಟೆಯಲ್ಲಿನ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಪತ್ನಿಯನ್ನು ದಾಖಲಿಸಿ ಉಳಿಸೊಕೊಳ್ಳುವ ಪ್ರಯತ್ನ ಮಾಡಿದರು.. ಆದರೆ ಅವರ ಅಷ್ಟೂ ಪ್ರಯತ್ನ ನಿನ್ನೆ ನೀರಿನಲ್ಲಿ ಹೋಮ ಮಾಡಿದಂತಾಗಿ ಹೋಯ್ತು.. ಚಿಕಿತ್ಸೆ ಫಲಕಾರಿಯಾಗದೆ ಸುಬ್ರಹ್ಮಣಿ ಪತ್ನಿ ಕೊನೆಯುಸಿರೆಳೆದು ಬಿಟ್ಟರು.. ಸುಬ್ರಹ್ಮಣಿ ಅವರಿಗೆ ಒಂದು ಹೆಣ್ಣು ಮಗು ಸಹ ಇದೆ ಎಂದು ತಿಳಿದು ಬಂದಿದೆ.. ನಿಜಕ್ಕೂ ಈ ರೀತಿ ತಾಯಿಯನ್ನು ಕಳೆದುಕೊಂಡ ಸಾವಿರಾರು ಮಕ್ಕಳ ನೋವು.. ಪತ್ನಿಯನ್ನು ಕಳೆದುಕೊಂಡ.. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವು.. ಕುಟುಂಬದವರನ್ನು ಕಳೆದುಕೊಂಡ ಜೀವಗಳ ಕಣ್ಣೀರು ನಿಲ್ಲುವಂತಾಗಿ ಬಿಡಲಿ.. ದಯವಿಟ್ಟು ಎಲ್ಲರೂ ಎಚ್ಚರವಾಗಿರಿ..