ಸಿಹಿ ಸುದ್ದಿ ನೀಡಿದ ಕನ್ನಡತಿ ನಟಿ ಸುಚಿ..

0 views

ಕನ್ನಡತಿ.. ಸಧ್ಯ ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಕನ್ನಡತಿ ಧಾರಾವಾಹಿ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಮೂಡಿ ಬರುತ್ತಿದ್ದು ಕುತೂಹಲದ ಜೊತೆ ಕತೆ ಸಾಗುತ್ತಿದೆ.. ಇನ್ನು ಇದೇ ಧಾರಾವಾಹಿಯ ನಟಿ ಸುಚಿಯ ನಿಶ್ಚಿತಾರ್ಥ ಕೊನೆ ಘಳಿಗೆಯಲ್ಲಿ ಮುರಿದು ಬಿದ್ದಿದ್ದು ಖುದ್ದು ಸುಚಿಯೇ ಎಲ್ಲರೆದುರು ಹುಡುಗನ ನಿಜ ಬಣ್ಣವನ್ನು ಬಯಲು ಮಾಡಿದ್ದು ಆ ಸಮಯದಲ್ಲಿಯೂ ಪ್ರಬುದ್ಧತೆಯಿಂದ ನಡೆದುಕೊಳ್ಳುವ ಮೂಲಕ‌ ಇಂತಹ ಸಂದಿಗ್ಧ ಸಂದರ್ಭಗಳನ್ನು ತಾಳ್ಮೆಯಿಂದ ಎದುರಿಸುವುದನ್ನು ತೋರಿದ್ದಾಳೆ ಎನ್ನಬಹುದು.. ಹೌದು ಕನ್ನಡತಿ ಧಾರಾವಾಹಿ ಟಾಪ್ ಐದು ಧಾರಾವಾಹಿಗಳಲ್ಲಿ‌ ಒಂದಾಗದೇ ಇರಬಹುದು ಆದರೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗುವ ಸದ್ದು ಮಾಡುವ ಧಾರಾವಾಹಿಯಾಗಿದ್ದು ಡಿಜಿಟಲ್ ನಲ್ಲಿ ಮುಂದಿದೆ ಎನ್ನಲಾಗಿದೆ..

ಇನ್ನು ಧಾರಾವಾಹಿಯನ್ನು ಮೊದಲಿನಿಂದಲೂ ಅಚ್ಚುಕಟ್ಟಾಗಿ ನಿರೂಪಣೆ ಮಾಡಿಕೊಂಡು ಕತೆ ಹೆಣೆದಿದ್ದು ಆಗಾಗ ಬೋರ್ ಆಗಿ ಪ್ರೇಕ್ಷಕರು ಬೇಸರ ವ್ಯಕ್ತ ಪಡಿಸಿದ್ದು ಉಂಟು.. ಧಾರಾವಾಹಿಯಲ್ಲಿ ಕತೆಯ ಮೂಲಕ‌ ಮನರಂಜನೆ ನೀಡುವುದರ ಜೊತೆಗೆ ಕನ್ನಡದ ಹೊಸ ಹೊಸ ಪದಗಳ ಅರ್ಥವನ್ನು ತಿಳಿಸುತ್ತಿರುವುದು ಮೆಚ್ಚುವ ವಿಚಾರ.. ಇನ್ನು ಧಾರಾವಾಹಿಯಲ್ಲಿ ನಾಯಕ ನಾಯಕಿಯಾಗಿರುವ ಹರ್ಷ ಹಾಗೂ ಭುವಿ ಪಾತ್ರದ ಮೇಲಷ್ಟೇ ಅಲ್ಲ ಧಾರಾವಾಹಿಯ ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಕೊಟ್ಟು ಮುನ್ನಡೆಸುತ್ತಿರುವುದು ಧಾರಾವಾಹಿಯ ಬೆಳವಣಿಗೆಗೆ ಪ್ರಮುಖ ಕಾರಣವೂ ಹೌದು..

ಇನ್ನು ಸದ್ಯ ಕೆಲ ದಿನಗಳ ಹಿಂದಷ್ಟೇ ಭುವಿ ಪಾತ್ರದ ನಟಿ ರಂಜನಿ ರಾಘವನ್ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಹಲವಾರು ದಿನಗಳ ಕಾಲ ಚಿತ್ರೀಕರಣಕ್ಕೆ ಬಾರದೆ ಭುವಿ ಇಲ್ಲದ ಸಂಚಿಕೆಗಳು ರೇಟಿಂಗ್ ನಲ್ಲಿ ಕುಸಿತ ಕಂಡಿದ್ದೂ ಉಂಟು.. ನಂತರ ಹರ್ಷ ಭುವಿಯ ಡೇಟ್ ನ ಹವಿ ಸಂಚಿಕೆ ಪ್ರಸಾರ ಮಾಡಿ ಮಿಶ್ರ ಪ್ರತಿಕ್ರಿಯೆ ಪಡೆದದ್ದೂ ಹೌದು.. ಆದರೆ ಇದೀಗ ಸಧ್ಯ ಹರ್ಷ ಭುವಿಯ ವಿಚಾರ ಹೊರತು ಪಡಿಸಿ ಹರ್ಷನ ಮುದ್ದು ತಂಗಿ ಸುಚಿಯ ಮದುವೆಯ ಕತೆಯನ್ನು ತೋರುತ್ತಿದ್ದು ಜನರಿಗೆ ಇಷ್ಟವಾಗಿದೆ ಎನ್ನಬಹುದು..

ಆದರೆ ಇನ್ನೇನು ಸುಚಿಯ ಮದುವೆ ಸಮಾರಂಭ ನೆರವೇರಲಿದೆ ಎಂದು ಪ್ರೇಕ್ಷಕ ಮಹಾಪ್ರಭುಗಳು ಅಂದುಕೊಳ್ಳುತ್ತಿರುವಾಗಲೇ ಇತ್ತ ನಿಶ್ಚಿತಾರ್ಥ ಮುರಿದು ಬಿದ್ದಿದೆ.. ಅದರಲ್ಲೂ ಖುದ್ದು ಸುಚಿಯೇ ಮದುವೆಯಾಗೋ ಹುಡುಗನ ನಿಜ ಬಣ್ಣ ಬಯಲು‌ಮಾಡಿದ್ದು ಪ್ರೇಕ್ಷಕರಿಗೆ ಇಷ್ಟವಾಗಿದ್ದಂತೂ ಸುಳ್ಳಲ್ಲ.. ಹೌದು ಸಾನಿಯಾಳ ಒಳ ಸಂಚಿನಿಂದ ಅದಾಗಲೇ ಮದುವೆಯಾಗಿರುವ ಹುಡುಗ ಭವಿಶ್ ಜೊತೆ ಸುಚಿತ ಮದುವೆ ಮಾತುಕತೆ ನಡೆದು ನಿಶ್ಚಿತಾರ್ಥದ ಹಂತಕ್ಕೂ ಬಂದು ನಿಂತಿತ್ತು.. ಆದರೆ ಅಮ್ಮಮ್ಮ ಹಾಗೂ ಭುವಿಗೆ ಭವಿಶ್ ನ ಮೇಲೆ ಬಂದ ಅನುಮಾನದ ಕಾರಣ ಕೊ‌ನೆಗೆ ಭವಿಶ್ ಗೆ ಅದಾಗಲೇ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂತು..

ಇನ್ನು ಧಾರಾವಾಹಿಯ ನಿರ್ದೇಶಕರ ಬಗ್ಗೆ ಮೆಚ್ಚುವ ವಿಚಾರವೆಂದರೆ.. ಈ ವಿಚಾರವನ್ನು ಪ್ರಬುದ್ಧತೆಯಿಂದ ನಿಭಾಯಿಸಿದ್ದು.. ಹೌದು ನಿಶ್ಚಿತಾರ್ಥದ ಮನೆಯಲ್ಲಿ ಅದಾಗಲೇ ಮದುವೆಯಾಗಿರುವ ಹುಡುಗ ನಮ್ಮ ಮನೆ ಹುಡುಗಿಯನ್ನು ಮದುವೆಯಾಗೋಕೆ ಬಂದಿದ್ದಾನೆಂದರೆ ಎಂತವರಾದರೂ ತಾಳ್ಮೆ ಕಳೆದುಕೊಳ್ಳುವುದು ಸಹಜ‌.. ಆದರೆ ಧಾರಾವಾಹಿಯಲ್ಲಿ ಅಂತಹುದೇ ಸಂದರ್ಭ ಬಂದಾಗ ಹುಡುಗ ಹುಡುಗಿಗೆ ಮಾತನಾಡಲು ಅವಕಾಶ ಕೊಟ್ಟು ಅವರ ಅಭಿಪ್ರಾಯ ಕೇಳಿ.. ಅವರ ಅನುಮಾನಗಳನ್ನು ಬಗೆ ಹರಿಸಿ ಕೊನೆಗೆ ಅದಾಗಲೇ ಮದುವೆಯಾಗಿರುವ ಹುಡುಗಿಯ ಜೊತೆಗಿನ ಜೀವನ ಚೆನ್ನಾಗಿರಲಿ ಎಂದು ಹಾರೈಸಿದರು..

ಅದರಲ್ಲಿಯೂ ಸುಚಿ ನಡೆದುಕೊಂಡ ರೀತಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದು ತನಗೆ ಮೋಸ ಆಗುವುದನ್ನು ತಿಳಿದು ಪ್ರಬುದ್ಧಳಾಗಿ ಆಲೋಚಿಸಿ ನಂತರ ಎಲ್ಲರ ಮುಂದೆ ವಿನಯವಾಗಿತೇ ಸತ್ಯ ಹೊರತೆಗೆಸಿ ಭವಿಶ್ ಹಾಗೂ ಆತ ಮದುವೆಯಾಗಿದ್ದ ರೇಚಲ್ ಜೀವನವನ್ನೂ ಸಹ ಸರಿ ಮಾಡಿಬಿಟ್ಟಳು.. ಪ್ರೇಕ್ಷಕರಿಗೆ ಸುಚಿ ಕೊಟ್ಟ ಸಿಹಿ ಸುದ್ದಿಯಿಂದ ಸುಚಿಯ ಜೀವನ ಹಾಳಾಗುವುದೆಂಬ ಆತಂಕದಿಂದ ನಿರಾಳರಾದರು‌.. ಇನ್ನು ಇತ್ತ ಸುಚಿಯ ಈ ನಡವಳಿಕೆಯ ಹಿಂದೆ ನಿಂತಿದ್ದ, ಈ ಎಲ್ಲಾ ಸತ್ಯಗಳನ್ನು ಹೊರ ತೆಗೆದ ಭುವಿಗೆ ಎಂದಿನಂತೆ ಪ್ರೇಕ್ಷಕರ ಮೆಚ್ಚುಗೆಯೂ ದೊರೆಯಿತು.. ಇನ್ನೇನಿದ್ದರು ಹರ್ಷ ಭುವಿಯ ಕಲ್ಯಾಣದ ತಯಾರಿ ಶುರುವಾಗಬಹುದಾಗಿದ್ದು ಪ್ರೇಕ್ಷಕರು ಕಾತುರರಾಗಿದ್ದಾರೆನ್ನಬಹುದು..