ಬರ್ತಾ ಇದೆ ಬಿಗ್ ಬಾಸ್ ಅಧಿಕೃತವಾಗಿ ತಿಳಿಸಿದ ವಾಹಿನಿ.. ಸ್ಪರ್ಧಿಗಳು ಯಾರ್ಯಾರು ಗೊತ್ತಾ?

0 views

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಮತ್ತೆ ಬರುತ್ತಿದೆ.. ಹೌದು ಯಶಸ್ವಿಯಾಗಿ ಏಳು ಸೀಸನ್ ಗಳನ್ನು ಪೂರೈಸಿರುವ ಬಿಗ್ ಬಾಸ್ ಇದೀಗ ಎಂಟನೇ ಸೀಸನ್ ಅನ್ನು ಶುರು ಮಾಡುತ್ತಿದೆ.‌ ಹೌದು ಇಷ್ಟು ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಶೋ ಆರಂಭವಾಗುತಿತ್ತು.. ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ತಡವಾಗಿ ಶುರು ಮಾಡಲಾಗುತ್ತಿದೆ.. ಹೌದು ಬಿಗ್ ಬಾಸ್ ಕನ್ನಡ ಸೀಸನ್ ಎಂಟು ಈ ಬಾರಿ ಎರಡು ತಿಂಗಳು ತಡವಾಗಿ ಆರಂಭವಾಗುತ್ತಿದ್ದು ಈ ಬಗ್ಗೆ ವಾಹಿನಿಯಿಂದ ಅಧಿಕೃತ ಮಾಹಿತಿ ಹೊರಬಂದಿದೆ..

ಹೌದು ಇತರ ಭಾಷೆಗಳ ಬಿಗ್ ಬಾಸ್ ಸೀಸನ್ ಅದಾಗಲೇ ಶುರುವಾಗಿದ್ದು.. ಯಾವುದೇ ತೊಂದರೆ ಇಲ್ಲದೇ ಸಾಗುತ್ತಿದೆ.. ಮೊನ್ನೆ ಮೊನ್ನೆಯಷ್ಟೇ ತೆಲುಗಿನ ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿತ್ತು.. ಈ ಮೊದಲು ಕನ್ನಡದಲ್ಲಿಯೂ ಅಕ್ಟೋಬರ್ ತಿಂಗಳಿನಲ್ಲಿಯೇ ಬಿಗ್ ಬಾಸ್ ಶೋ ಶುರುವಾಗಲಿದೆ ಎನ್ನುವ ಮಾತು ಕೇಳಿ ಬರುತಿತ್ತು‌.. ಆದರೆ ಕಾರ್ಯಕ್ರಮ ನಿರೂಪಣೆ ಮಾಡುವ ಸುದೀಪ್ ಅವರು ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಕಾರಣ ಹಾಗೂ ಸ್ಪರ್ಧಿಗಳ ಆಯ್ಕೆ ಸಂಪೂರ್ಣವಾಗದ ಕಾರಣ ಮುಂದೂಡಲಾಗಿತ್ತು.. ಆದರೆ ಇದೀಗ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಆದಂತಹ ಪರಮೇಶ್ವರ್ ಗುಂಡ್ಕಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ ಕುರಿತು ಮಾಹಿತಿ ಹಂಚಿಕೊಂಡಿದ್ದು.. ಬಿಗ್ ಬಾಸ್ ತಯಾರಿ ನಡೆಯುತ್ತಿದೆ.ಮ್ ಬಿಗ್ ಬಾಸ್ ಅಂಡರ್ ಕನ್ಸ್ಟ್ರಕ್ಷನ್ ಎಂದು ಬರೆದು ಸುದೀಪ್ ಅವರೊಟ್ಟಿಗಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ..

ಇನ್ನಿ ಕೊರೊನಾ ಇರುವ ಕಾರಣ ಈ ಬಾರಿ ಮೊದಲಿಗಿಂತ ಹೆಚ್ಚು ಆರೋಗ್ಯ ಕಾಳಜಿ ವಹಿಸಬೇಕಿದ್ದು.. ಬಿಗ್ ಬಾಸ್ ಶುರುವಾದರೆ ಕಿಚ್ಚ ಸುದೀಪ್ ಅವರು ಸಹ ಆರೋಗ್ಯದ ದೃಷ್ಟಿಯಿಂದ ಹೊರಗೆಲ್ಲೂ ಪ್ರಯಾಣ ಮಾಡದೇ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳಬೇಕಿರುವುದರಿಂದ 2021 ರ ಜನವರಿಯಲ್ಲಿ ಬಿಗ್ ಬಾಸ್ ಶೋ ಪ್ರಾರಂಭವಾಗುವುದು ಬಹುತೇಕ ಖಚಿತವಾಗಿದೆ..

ಅದಾಗಲೇ ಬಿಗ್ ಬಾಸ್ ಶೋ ನ ಒಂದು ತಂಡ ಬಿಡದಿಯಲ್ಲಿನ ಬಿಗ್ ಬಾಸ್ ಮನೆಯನ್ನು ನವೀಕರಣ ಮಾಡಲಾಗುತ್ತಿದ್ದು ಈ ಬಾರಿ ಕಳೆದೆಲ್ಲಾ ಸೀಸನ್ ಗಳಿಗಿಂತ ಈ ಬಾರಿ ಮನೆ ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳಲಿದೆಯಂತೆ.. ಹೌದು ಶೋ ಗೆ ಸಂಬಂಧಪಟ್ಟ ಒಂದು ತಂಡ ಬಿಡದಿಯಲ್ಲಿಯೇ ಉಳಿದುಕೊಂಡಿದ್ದು ಮನೆ ನವೀಕರಣದ ಕೆಲಸದಲ್ಲಿ ತೊಡಗಿಕೊಂಡಿದೆ.. ಪ್ರತಿ ಬಾರಿಯಂತೆ ಈ ಬಾರಿಯೂ ಸಂಪೂರ್ಣ ಮನೆಯ ಒಳಾಂಗಣ ಲುಕ್ ಅನ್ನು ಬದಲಾಯಿಸುತ್ತಿದ್ದು ಹೊಸ ರೀತಿಯಲ್ಲಿ ಮನೆ ಕಾಣಿಸಿಕೊಳ್ಳಲಿದೆ..

ಜೊತೆಗೆ ಅದಾಗಲೇ ಸ್ಪರ್ಧಿಗಳಬಾಯ್ಕೆ ಅಂತಿಮ ಹಂತದಲ್ಲಿದ್ದು ಎಲ್ಲಾ ಸ್ಪರ್ಧಿಗಳನ್ನು ವಾಹಿನಿ ಸಂಪರ್ಕ ಮಾಡಿದ್ದು ಫೈನಲೈಸ್ ಮಾಡಬೇಕಿದೆಯಷ್ಟೇ.. ಹೌದು ಇತ್ತ ಸ್ಪರ್ಧಿಗಳು ಯಾರು ಯಾರು ಎಂಬ ವಿಚಾರಕ್ಕೆ ಬಂದರೆ.. ಈ ಬಾರಿಯೂ ಎಲ್ಲಾ ಸ್ಪರ್ಧಿಗಳೂ ಸೆಲಿಬ್ರೆಟಿಗಳೇ ಆಗಿರಲಿದ್ದಾರೆ ಎನ್ನಲಾಗಿದೆ.. ಕಿರುತೆರೆ ಧಾರಾವಾಹಿ ಇಂದ ಬಂದ 6 ಕಲಾವಿದರು.. ಪ್ರಖ್ಯಾತ ಟಿವಿ ನಿರೂಪಕರು ಹಾಗೂ ಒಬ್ಬರು ಸ್ಪೋರ್ಟ್ಸ್ ಪರ್ಸನ್ ಕೂಡ ಇರಲಿದ್ದು ಎಂದಿನಂತೆ ಈ ವರ್ಷ ಕಾಂಟ್ರೋವರ್ಸಿಯಲ್ಲಿ ಕೇಳಿಬಂದ ವ್ಯಕ್ತಿಗಳು ಸಹ ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಾಗಲಿದ್ದಾರೆ ಎನ್ನಲಾಗಿದೆ.. ಅದಾಗಲೇ ಕೆಲ ಹಿರಿಯ ಕಲಾವಿದರಿಗೆ ಬಿಗ್ ಬಾಸ್ ತಂಡ ಅಪ್ರೋಚ್ ಮಾಡಲಾಗಿದ್ದು ಕಲಾವಿದರು ಸಹ ಬಿಗ್ ಬಾಸ್ ಗೆ ಬರಲು ಒಪ್ಪಿದ್ದಾರೆ ಎನ್ನಲಾಗಿದೆ.. ಆದರೆ ವಾಹಿನಿಯಿಂದ ಸ್ಪರ್ಧಿಗಳ ಬಗ್ಗೆ ಅಧಿಕೃತ ಮಾಹಿತಿ ಬಿಗ್ ಬಾಸ್ ಶೋನ ಮೊದಲ ದಿನವಷ್ಟೇ ಹೊರಬೀಳಲಿದೆ..

ಕಿರುತೆರೆಯ ಅತಿ ದೊಡ್ಡ ಮನರಂಜನಾ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಈ ಬಾರಿಯೂ ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಪ್ರಸಾರವಾಗಲಿದ್ದು 8.30 ರಿಂದ 10 ಗಂಟೆ ಸ್ಲಾಟ್ ನೀಡಬಹುದಾಗಿದೆ.. ಇನ್ನು ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಗಳು ತನ್ನ ಫಾರ್ಮ್ ಗೆ ಮರಳಿದ್ದು ಒಳ್ಳೆಯ ರೇಟಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.. ಈ ನಡುವೆ ಬಿಗ್ ಬಾಸ್ ಅನ್ನು ಹಿಟ್ ಮಾಡುವುದರ ಮೂಲಕ‌ ಮತ್ತೊಮ್ಮೆ ಕಲರ್ಸ್ ಕನ್ನಡ ವಾಹಿನಿ‌ ನಂಬರ್ ಒನ್ ಪಟ್ಟಕ್ಕೆ ಬರುವ ಪ್ರಯತ್ನದಲ್ಲಿದೆ ಎನ್ನಬಹುದು‌‌..