ಅಂದು ವೇದಿಕೆ ಮೇಲೆ ಸುದೀಪ್ ಸರ್ ಕೊಟ್ಟ ಹಣ ಎಷ್ಟು ಗೊತ್ತಾ? ನೋವು ಹಂಚಿಕೊಂಡ ಮಜಾಭಾರತದ ಕಾರ್ತಿಕ್..

0 views

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಹೇಳಿಕೊಳ್ಳಲಾಗದ ಬಹಳಷ್ಟು ನೋವಿರತ್ತೆ.. ಕೆಲವರು ಆ ನೋವುಗಳನ್ನು ದಾಟಿ ಮುಂದೆ ಸಾಗ್ತಾರೆ.. ಮತ್ತಷ್ಟು ಜನ ಅಲ್ಲಿಯೇ ಒದ್ದಾಡುತ್ತಾರೆ.. ಇನ್ನು ಕೆಲವರು ಆ ನೋವುಗಳನ್ನು ಮೆಟ್ಟಿ ನಿಂತು ಭಗವಂತ ಕೈ ಹಿಡಿದು ಖ್ಯಾತಿ ಗಳಿಸ್ತಾರೆ.. ಅದೇ ರೀತಿ ಜೀವನದಲ್ಲಿ ಕಷ್ಟ ಪಟ್ಟು ಮೇಲೆ ಬಂದ ಮಜಾಭಾರತದ ಕಲಾವಿದರಿಗೆ ಮೊನ್ನೆ ಮೊನ್ನೆಮೊನ್ನೆಯಷ್ಟೇ ಕಿಚ್ಚ ಸುದೀಪ್ ಅವರು ಸಹಾಯ ಮಾಡಿದ್ದರು..

ಹೌದು ಅನುಬಂಧ ಕಾರ್ಯಕ್ರಮದ ವೇದಿಕೆಯಲ್ಲಿ ಸುದೀಪ್ ಅವರು ಮಜಾಭಾರತದ ಮೂವರು ಸ್ಪರ್ಧಿಗಳಿಗೆ ಸಹಾಯ ಹಸ್ತ ಚಾಚಿದ್ದರು.. ಅದರಲ್ಲಿಯೂ ಹಣದ ಸಹಾಯ ಮಾಡಿದ್ದರು.. ಅದರಲ್ಲೊಬ್ಬರು ಕಾರ್ತಿಕ್..

ಹೌದು ಕಳೆದ ವಾರವಷ್ಟೇ ಕಲರ್ಸ್ ಕನ್ನಡ ವಾಹಿನಿಗಲ್ಲಿ ಅನುಬಣ್ಧ ಅವಾರ್ಡ್ಸ್ ಕಾರ್ಯಕ್ರಮ ನೆರವೇರಿತ್ತು.. ಕಿರುತೆರೆ ಕಲಾವಿದರಿಗೆ ಪ್ರಶಸ್ತಿಗಳನ್ನು‌ ಕೊಟ್ಟು ಗೌರವಿಸುವುದರ ಜೊತೆಗೆ ಮನರಂಜನೆಯ ಕಾರ್ಯಕ್ರಮಗಳು ನಡೆದಿತ್ತು.. ಅದೇ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರ ಜೀವನ ಕತೆಯನ್ನು ಡ್ಯಾನ್ಸ್ ಮೂಲಕ ಅನಾವರಣಗೊಳಿಸಿದ್ದರು.. ಸುದೀಒ ಅವರು ಕಷ್ಟ ಪಟ್ಟು ಇಂಡಸ್ಟ್ರಿಯಲ್ಲಿ‌ ನೆಲೆಯೂರಿದ್ದರ ಬಗ್ಗೆ ಅದ್ಭುತವಾಗಿ ಪ್ರಸ್ತುತ ಪಡಿಸಿದ್ದರು..

ಆ ಸಮಯದಲ್ಲಿ ಭಾವುಕರಾದ ಸುದೀಪ್ ಅವರು ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳನ್ನು ತಿಳಿಸಿದ್ದರು.. ಜೊತೆಗೆ ತಮ್ಮಂತೆಯೇ ಜೀವನದಲ್ಲಿ ಬಹಳ ಕಷ್ಟ ಪಟ್ಟು ಮಜಾ ಭಾರತ ಶೋನಲ್ಲಿ ಗುರುತಿಸಿಕೊಂಡಿರುವ ಮೂವರು ಸದಸ್ಯರುಗಳಿಗೆ ಸುದೀಪ್ ಅವರು ಹಣದ ಸಹಾಯ ಮಾಡಿದ್ದರು..

ಹೌದು ಮಜಾಭಾರತದ ಕಲಾವಿದರಾದ ಕಾರ್ತಿಕ್.. ಜಗ್ಗಪ್ಪ.. ಹಾಗೂ ವರಲಕ್ಷ್ಮಿ ಅವರು ಜೀವನದಲ್ಲಿ ಬಹಳಷ್ಟು ಕಷ್ಟ ಪಟ್ಟು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿ ಇದೀಗ ಜೀವನದಲ್ಲಿ‌ ಒಂದು ನೆಲೆ ಕಂಡವರು.. ಇವರ ಹಾದಿಯನ್ನು ಗಮನಿಸಿ ಸುದೀಪ್ ಅವರು ಮೂವರಿಗೂ ಚೆಕ್ ಗಳನ್ನು ನೀಡಿದ್ದರು..

ಈ ಬಗ್ಗೆ ಮಾದ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿರುವ ಕಾರ್ತಿಕ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.. ಹೌದು ನನಗೆ ಇವಾಗ ಅನ್ನಿಸ್ತಾ ಇದೆ.. ನಾನು ಅವತ್ತು ಸುದೀಪ್ ಸರ್ ಬಳಿ ಹಣ ಪಡೆಯುವ ಬದಲು ಸಿನಿಮಾದಲ್ಲಿ ಒಂದು ಅವಕಾಶ ಕೇಳಿದಿದ್ದರೆ ನನ್ನ ಜೀವನ ಪೂರ್ತಿ ಉಳಿಯಿತಿತ್ತು.. ಜೊತೆಗೆ ನನ್ನ ಜೀವನವೂ ಸೆಟಲ್ ಆಗುತಿತ್ತು ಎಂದಿದ್ದರು..

ಅಷ್ಟೇ ಅಲ್ಲದೇ ಆ ಹಣವನ್ನು ತಾನು ಒಂದು ರೂಪಾಯಿಯು ಬಳಸದೆ ತನ್ನ ಸಾಕಲು ಕಷ್ಟ ಪಟ್ಟ ತಾಯಿಗೆ ತಾನು ವಾಸ ಇರುವ ಮನೆಯ ಸುತ್ತ ಕಾಂಪೌಂಡ್ ಕಟ್ಟಿಸಿ ಅವರಿಗೆ ಅವಶ್ಯಕತೆ ಇರುವ ಕೆಲ ವಸ್ತುಗಳನ್ನು ಕೊಡಿಸಿ ಆ ಹಣವನ್ನು ಸಂಪೂರ್ಣವಾಗಿ ತನ್ನ ತಾಯಿಗೆ ಖರ್ಚು ಮಾಡಿದ್ದಾರೆ..

ಜೊತೆಗೆ ಹಣ ಬಂದ ದಿನದಿಂದಲೂ ಕಾರ್ತಿಕ್ ಅವರಿಗೆ ಬಹಳಷ್ಟು ಫೋನ್ ಕರೆಗಳು ಬರುತ್ತಿವೆಯಂತೆ.. ಹೌದು ಪ್ರತಿಯೊಬ್ಬರೂ ಸಹ ಎಷ್ಟ್ ಬಂತು.. ಎಷ್ಟ್ ಬಂತು.. ನನಿಗ್ ಸ್ವಲ್ಪ ಕಷ್ಟ ಇದೆ ಕೊಡು ಎಂದು ಕೇಳೋರೆ ಹೆಚ್ಚಾಗಿದ್ದಾರೆ.. ನನ್ನ ತಾಯಿ ಕಷ್ಟ ಪಡುವಾಗ ಯಾರು ಕೇಳೋರಿರಲಿಲ್ಲ.. ಈಗ ಎಲ್ಲರೂ ಹಣದ ಬಗ್ಗೆಯೇ ಕೇಳ್ತಾರೆ ಎಂದು ನೋವು ಹಂಚಿಕೊಂಡರು..

ಅಷ್ಟೇ ಅಲ್ಲದೇ ಮತ್ತೆ ಕೆಲವೊಂದಿಷ್ಟು ಜನ.. ಮೊನ್ನೆ ವೇದಿಕೆ ಮೇಲೆ ನನ್ನ ಜೀವನದ ಹಾಗೂ ನನ್ನ ತಾಯಿಯ ಕತೆ ಹೇಳಿದ ಬಳಿಕ.. ಫೋನ್ ಮಾಡಿ ಮಗಾ ಇನ್ಮೇಲೆ ನಾವ್ ಇದೀವಿ ಯಾವ್ದಕ್ಕೂ ಯೋಚನೆ ಮಾಡ್ಬೇಡ.. ನೀನ್ ಇಷ್ಟೊಂದ್ ಕಷ್ಟ ಪಟ್ಟಿದ್ದೀಯಾ ಅಂತ ಗೊತ್ತಿರ್ಲಿಲ್ಲಾ ಎಂದು ಸಹ ಹೇಳಿದ್ದಾರೆ.. ಅವರು ನಿಜವಾದ ಸ್ನೇಹಿತರು..ಆದರೆ ಇನ್ನು ಕೆಲವೊಂದಿಷ್ಟು ಜನ ಬರಿ ದುಡ್ಡ್ ಎಷ್ಟ್ ಬಂತು.. ದುಡ್ಡ್ ಎಷ್ಟ್ ಬಂತು ಅಂತ ಅನ್ನೋರೆ ಹೆಚ್ಚು.. ಎಂದಿದ್ದಾರೆ..