ಮೈಕಲ್‌ ಗೆ ಎಲ್ಲರ ಮುಂದೆಯೇ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್..‌ ತಲೆತಗ್ಗಿಸಿದ ಮೈಕಲ್..

0 views

ಬಿಗ್‌ ಬಾಸ್‌ ಸೇಸನ್‌ ಹತ್ತರಲ್ಲಿ ಸ್ಪರ್ಧಿಗಳ ಆಯ್ಕರ ಒಂದು ರೀತಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು.. ಅದರಲ್ಲೂ ಹಳ್ಳಿಕಾರ್‌ ಒಡೆಯಾ ವರ್ತೂರ್‌ ಸಂತೋಷ್..‌ ಡ್ರೋನ್‌ ಪ್ರತಾಪ್‌, ಮೈಕಲ್‌ ಹೀಗೆ ಒಂದಷ್ಟು ಸ್ಪರ್ಧಿಗಳನ್ನು ಮನರಂಜನಾ ಕ್ಷೇತ್ರದಿಂದ ಹೊರತು ಪಡಿಸಿ ಆಯ್ಕೆ ಮಾಡಿಕೊಂಡಿದ್ದರು.. ಅದರಲ್ಲೂ ಕನ್ನಡ ಬರದ ಮೈಕಲ್‌ ಬಿಗ್‌ ಬಾಸ್‌ ಮನೆಗೆ ಬಂದು ಒಲ್ಳೆಯ ಕನ್ನಡವನ್ನು ಕಲಿತು ಯಾರಿಗೇನು ಕಡಿಮೆ ಇಲ್ಲವೆನ್ನುವಂತೆ ಸರಾಗವಾಗಿ ಕನ್ನಡ ಮಾತನಾಡಿದ್ದು ಬಹಳ ಇಷ್ಟವಾಗುತ್ತಿತ್ತು.. ಇನ್ನು ಮೈಕಲ್‌ ನ ಗುಣ ಹಾಗೂ ವ್ಯಕ್ತಿತ್ವವೂ ಜನರಿಗೆ ಮೊದ ಮೊದಲು ಬಹಳ ಇಷ್ಟವಾಗುತ್ತಿತ್ತು.. ಎದರಿಗೆ ಯಾರೇ ಇದ್ದರೂ ಹಾನೆಸ್ಟ್‌ ಆಗಿ ಮೈಕಲ್‌ ಆಟ ಆಡುತ್ತಾರೆ ಎಂಬ ಅಭಿಪ್ರಾಯ ಹೊರಗಿನ ಪ್ರೇಕ್ಷಕರಿಗೆ ಮಾತ್ರವಲ್ಲ ಬಿಗ್‌ ಬಾಸ್‌ ಮನೆಯ ಸದಸ್ಯರಿಗೂ ಇತ್ತು.. ಆದರೆ ಅದ್ಯಾಕೋ ಬರುಬರುತ್ತಾ ರಾಯರ ಕುದುರೆ ಕತ್ತೆಯಾಯಿತು ಎನ್ನುವಂತೆ ಮೈಕಲ್‌ ಗುಣ ಬದಲಾಗ ತಿಡಗಿತು.. ಅದರಲ್ಲೂ ಮಿತಿ ಮೀರಿದ ಅಹಂಕಾರವನ್ನು ಮೈಕಲ್‌ ತೋರುತ್ತಿದ್ದದ್ದು ಪ್ರೇಕ್ಷಕರಿಗೆ ಮಾತ್ರವಲ್ಲ ಕಿಚ್ಚ ಸುದೀಪ್‌ ಅವರಿಗೂ ಕಿರಿಕಿರಿಯನ್ನುಂಟು ಮಾಡಿದ್ದು ಇದೀಗ ಕಿಚ್ಚ ಸುದೀಪ್‌ ಅವರು ಎಲ್ಲರ ಮುಂದೆಯೇ ಮೈಕಲ್‌ ನಸೊಕ್ಕನ್ನು ಮುರಿದಿದ್ದಾರೆನ್ನಬಹುದು..

ಹೌದು ನಿನ್ನೆಯ ವಾರದ ಕತೆಯಲ್ಲಿ ಸುದೀಪ್‌ ಅವರು ಮೈಕಲ್‌ ನ ವಿಚಾರ ಮಾತನಾಡಿ ನೇರವಾಗಿಯೇ ಆತನ ಗ್ರಹಚಾರ ಬಿಡಿಸಿದರೆನ್ನಬಹುದು.. ಕಳೆದ ಒಂದೆರೆಡು ವಾರಗಳಿಂದ ಮೈಕಲ್‌ ನ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು.. ಅದರಲ್ಲೂ ಕ್ಯಾಪ್ಟನ್‌ ಮಾತಿಗೆ ಬೆಲೆ ಕೊಡದ ಮೈಕಲ್‌ ಯಾವುದೇ ಕೆಲಸ ಹೇಳಿದರೂ ಕೂಡ ನಾನು ಮಾಡಲ್ಲ ಏನಿವಾಗ ಎಂದು ನೇರವಾಗಿಯೇ ಹೇಳುತ್ತಿದ್ದರು.. ಅಷ್ಟೇ ಅಲ್ಲದೇ ನಾನು ಇರೋದೇ ಹೀಗೆ ನಾನು ಯಾವ ಶಿಕ್ಷೆಯನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಕೂಡ ಹೇಳಿದ್ದುಂಟು.. ಇಷ್ಟು ಸಾಲದೆನ್ನುವಂತೆ ಮೈಕಲ್‌ ಸುದೀಪ್‌ ಅವರ ಮುಂದೆಯೂ ದುರಹಂಕಾರದ ವರ್ತನೆ ತೋರಿದ್ದು ಇದು ಕಿಚ್ಚು ಸುದೀಪ್‌ ಅವರನ್ನು ಕೆರೆಳಿಸಿತ್ತು.. ಹೌದು ವಾರದ ಕತೆಗೆಳಲ್ಲಿ ಕಿಚ್ಚ ಸುದೀಪ್‌ ಅವರು ಏನಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಅಹಂಕಾರದಿಂದಲೇ ಮೈಕಲ್‌ ಉತ್ತರ ನೀಡುತ್ತಿದ್ದು ನಾನಿರೋದೇ ಹೀಗೆ.. ನಾನು ಹಾಗ್‌ ಮಾಡಲ್ಲ.. ನನಗೆ ಹಾಗ್‌ ಅನಿಸಲ್ಲ ಎಂದು ಅಹಂಕಾರದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದರು.. ಇದೆಲ್ಲವನ್ನು ಸಹಿಸುವಷ್ಟು ಸಹಿಸಿದ ಕಿಚ್ಚ ಸುದೀಪ್‌ ಅವರು ನಿನ್ನೆ ತರಾಟೆಗೆ ತೆಗೆದುಕೊಂಡರು..

ಹೌದು ಬಿಗ್‌ ಬಾಸ್‌ ಮನೆಯಿಂದ ಆಚೆ ನನಗೆ ಬೇರೆಯದ್ದೇ ವ್ಯಕ್ತಿತ್ವ ಇದೆ.. ನಾನು ಬಹಳ ಕೆಟ್ಟವನು.. ನನ್ನ ಮುಂದೆ ಇದೆಲ್ಲಾ ಇಟ್ಕೋಬೇಡ ಎಂದು ನೇರವಾಗಿಯೇ ಮೈಕಲ್‌ ಗೆ ಹೇಳಿದ್ದು ಬಿಗ್‌ ಬಾಸ್‌ ಮನೆಯ ಉಳಿದ ಸದಸ್ಯರು ಕೂಡ ತಬ್ಬಿಬ್ಬಾದರು.. ಹೌದು ವಾರದ ಕತೆಯಲ್ಲಿ ಸಂಗೀತಾ ಅವರ ಕ್ಯಾಪ್ಟನ್ಸಿ ಎಷ್ಟು ಜನರಿಗೆ ಖುಷಿ ಕೊಟ್ಟಿದೆ ಎಂದು ಕಿಚ್ಚ ಸುದೀಪ್‌ ಅವರು ಕೇಳಿದಾಗ.. ತುಕಾಲಿ ಸಂತೋಷ್‌ ಹಾಗೂ ವರ್ತೂರ್‌ ಸಂತೋಷ್‌ ಖುಷಿಯಾಘಿದೆ ಎಂದರೆ ಇತ್ತ ಕಾರ್ತಿಕ್‌ ಹಾಗೂ ಡ್ರೋನ್‌ ಪ್ರತಾಪ್‌ ಅಸಮಾಧಾನ ಇದೆ ಎಂದು ಕೈ ಎತ್ತಿದರು.. ಆದರೆ ತನಿಷಾ ನಮ್ರತಾ ವಿನಯ್‌ ಹಾಗೂ ಮೈಕಲ್‌ ಯಾವುದಕ್ಕೂ ಕೈ ಎತ್ತಲಿಲ್ಲ.. ಯಾಕೆ ಎಂದು ಕೇಳಿದಾಗ ಹಾರಿಕೆಯ ಉತ್ತರ ನೀಡಿದ ಮೈಕಲ್‌ ಕೈ ಎತ್ತಿದ್ರೂ ಎತ್ತದಿದ್ದರೂ ಯಾವುದೇ ಡಿಫರೆನ್ಸ್‌ ಇಲ್ಲ ಎಂದರು.. ಇದಕ್ಕೆ ಕೋಪಗೊಂಡ ಕಿಚ್ಚ ಸುದೀಪ್‌ ಅವರು ವೋಟಿಂಗ್‌ ಬಗ್ಗೆ ರೇಟಿಂಗ್‌ ಬಗ್ಗೆ ನಾನು ಕೇಳಿದಾಗ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟರೆ ಮುಂದೆ ಮಾತನಾಡಬಹುದು.. ಈ ರೀತಿ ಆಲಸ್ಯದ ಬಾಡಿ ಲಾಂಗ್ವೇಜ್‌ ನನ್ನ ಹತ್ತಿರ ಇಟ್ಕೋಳೋದು ಬೇಡ.. ನಾನು ಸರಿ ಇಲ್ಲ.. ಪ್ರೀತಿಯಿಂದ ಮಾತನಾಡ್ಬೇಕಾ ಮಾತನಾಡ್ತೀನಿ.. ಆದರೆ ನನ್ನ ಪ್ರಶ್ನೆಗಳಿಗೆ ಗೌರವ ತೋರಿಲ್ಲ ಎಂದರೆ ನಾನು ಮಾತನಾಡೋ ರೀತಿಯೇ ಬೇರೆ ಆಗತ್ತೆ. ‌

ಬಿಗ್‌ ಬಾಸ್‌ ಬಿಟ್ಟು ಹೊರಗೆ ನನಗೆ ಬೇರೆ ಜೀವನ ಇದೆ.. ನಿಮ್ಮ ಈ ಆಲಸ್ಯದ ನಡವಳಿಕೆಯನ್ನು ಅಲ್ಲಿ ಇರೋರ ಬಳಿ ಇಟ್ಕೋಳಿ.. ನನ್ನ ಬಳಿ ಅಲ್ಲ.. ನಾನು ನಿಮ್ಮೆಲ್ಲರನ್ನು ಕೂರಿಸಿ ನಾನು ನಿಂತ್ಕೊಂಡು ಶೋ ನಡೆಸಿಕೊಡ್ತೀನಿ ಎಂದರೆ ಅದು ನಾನು ಕೊಡುವ ಗೌರವ.. ಬಿಗ್‌ ಬಾಸ್‌ ಮೇಲೆ ನನಗೆ ಬಹಳ ಗೌರವ ಇದೆ.. ಆದರೆ ವ್ಯಕ್ತಿತ್ವವನ್ನು ಟೆಸ್ಟ್‌ ಮಾಡಬಾರದು.. ನಿಮ್ಮ ಈ ಕೇರ್‌ ಲೆಸ್‌ ನಡವಳಿಕೆ ನನ್ನ ಮುಂದೆ ಬೇಡ.. ಇದನ್ನು ಕೂಡ ನಾನು ಬಹಳ ಪ್ರೀತಿ ಇಂದಲೇ ಹೇಳ್ತಾ ಇದೀನಿ.. ಆರೋಗೆಂಟ್‌ ಆಗಿ ಅಲ್ಲ ಎಂದು ಸುದೀಪ್‌ ಅವರು ಖಡಕ್‌ ಆಗಿಯೇ ಹೇಳಿದರು.. ಇನ್ನು ಸುದೀಪ್‌ ಅವರ ಮಾತಿಗೆ ತಬ್ಬಿಬ್ಬಾದ  ಮನೆಯೆ ಸದಸ್ಯರು ಸೈಲೆಂಟ್‌ ಆದರು..