ಪತಿಗೆ ವಿಶೇಷ ಉಡುಗೊರೆ ಕೊಟ್ಟ ಪ್ರಿಯಾ ಸುದೀಪ್.. ಭಾವುಕರಾದ ಕಿಚ್ಚ..

0 views

ಬಹುಶಃ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕಿಂತ ಈ ವರ್ಷ ಸುದೀಪ್ ಅವರ 25 ವರ್ಷದ ಸಿನಿಮಾ ಜರ್ನಿ ಸಂಪೂರ್ಣಗೊಂಡ ಸಂಭ್ರಮ ಬಹಳ ವಿಶೇಷವಾಗಿದೆ.. ಹೌದು ತನ್ನ ಸಿನಿ ಕೆರಿಯರ್ ನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು ಇದೀಗ ಸ್ಯಾಂಡಲ್ವುಡ್ ನ ಬಾದ್ ಷಾ ಆಗಿ ನಿಂತಿರುವ.. ಪರಭಾಷೆಗಳಲ್ಲಿಯೂ ತಮ್ಮದೇ ಆದ ಹೆಸರು ಮಾಡಿರುವ ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರ್ಣಗೊಂಡಿದೆ..

ಇದೇ ಸಮಯದಲ್ಲಿ ಪತ್ನಿ ಪ್ರಿಯಾ ಸುದೀಪ್ ಈ ದಿನವನ್ನು ಮತ್ತಷ್ಟು ವಿಶೇಷವನ್ನಾಗಿಸಿದ್ದಾರೆ.. ಹೌದು ಕಿಚ್ಚ ಸುದೀಪ್ ಅವರ ಸಿನಿಮಾರಂಗದ ಬೆಳ್ಳಿ ಹಬ್ಬದ ಪ್ರಯುಕ್ತ ಕಿಚ್ಚನ ಮುಂದಿನ ಸಿನಿಮಾ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋವನ್ನು ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ ಬಿತ್ತರಿಸಲಾಯಿತು.. ಎರಡು ಸಾವಿರ ಅಡಿ ಎತ್ತರದಲ್ಲಿ ಕನ್ನಡದ ಭಾವುಟದ ಜೊತೆಗೆ ವಿಕ್ರಾಂತ್ ರೋಣ ಟೈಟಲ್ ಹಾಗೂ ಕಿಚ್ಚ ಸುದೀಪ್ ಅವರ ಸಿನಿ ಜರ್ನಿಯ ಸಣ್ಣ ವೀಡಿಯೋ ಬೈಟ್ ಮೂರು ನಿಮಿಷಗಳ ಕಾಲ ಪ್ರಸಾರಗೊಂಡಿತು.. ಅಭಿಮಾನಿಗಳು ಸಂಭ್ರಮಿಸಿದರು.. ಅದರಲ್ಲೂ ಕನ್ನಡದ ಭಾವುಟ ಎರಡು ಸಾವಿರ ಅಡಿಯ ಪರದೆಯಲ್ಲಿ ಬಿತ್ತರವಾಗುತ್ತಿದ್ದಂತೆ ಸುದೀಪ್ ಅವರು ಸೇರಿದಂತೆ ಎಲ್ಲರೂ ಸಹ ಸಂತೋಷ ವ್ಯಕ್ತಪಡಿಸಿದರು..

ಇನ್ನು ಪತಿಯ 25 ವರ್ಷದ ಸಿನಿ ಜರ್ನಿಯ ದಿನವನ್ನು ಪ್ರಿಯಾ ಸುದೀಪ್ ಅವರು ಮತ್ತಷ್ಟು ವಿಶೇಷವನ್ನಾಗಿಸಿದ್ದಾರೆ.. ಹೌದು ಸುದೀಪ್ ಅವರ ತಂದೆ ಬಹಳ ದೊಡ್ಡ ಶ್ರೀಮಂತರಾಗಿದ್ದರೂ ಸಹ ಎಲ್ಲಾ ಮಕ್ಕಳಂತೆ ಸುದೀಪ್ ಅವರು ಸಹ ವಯಸ್ಸಿನಲ್ಲಿ ನಾನೇ ಸಂಪಾದನೆ ಮಾಡಬೇಕು.. ಅಪ್ಪನ ದುಡ್ಡು ಮುಟ್ಟೋದಿಲ್ಲ ಎಂದು ಸಿನಿ ಕೆರಿಯರ್ ಅನ್ನು ರೂಪಿಸಿಕೊಳ್ಳುತ್ತಿದ್ದ ಸಮಯದಿಂದಲೂ ಪ್ರಿಯಾ ಹಾಗೂ ಸುದೀಪ್ ಅವರು ಸ್ನೇಹಿತರಾಗಿದ್ದರು..

ಆ ಸಮಯದಲ್ಲಿ ಪ್ರಿಯಾ ಸುದೀಪ್ ಅವರು ಕೆಲಸಕ್ಕೆ ಹೋಗುತ್ತಿದ್ದರು.. ಇತ್ತ ಅವಕಾಶ ಹುಡುಕಿ ಹೋಗುತ್ತಿದ್ದ ಸುದೀಪ್ ಅವರಿಗೆ ಪ್ರಿಯಾ ಅವರು ತಮ್ಮ ಸ್ಕೂಟರ್ ಕೊಟ್ಟು ಪೆಟ್ರೋಲ್ ಹಾಕಿಸಿ ಕಳುಹಿಸುತ್ತಿದ್ದರು.. ಈ ಹಿಂದೆ ಸುದೀಪ್ ಅವರು ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡು ಪ್ರಿಯಾ ಅವರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು.. ಈಗಲೂ ನಮ್ಮಿಬ್ಬರ ನಡುವೆ ಅದೇ ಸ್ನೇಹ ಇದೆ.. ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದಿದ್ದರು..

ಇನ್ನು ಪತಿಯ ಈ ಸಂಭ್ರಮದ ದಿನಕ್ಕೆ ಸಾಕ್ಷಿಯಾಗಲು ಸುದೀಪ್ ಅವರ ಜೊತೆ ದುಬೈ ತೆರಳಿದ್ದ ಪತ್ನಿ ಪ್ರಿಯಾ ಸುದೀಪ್ ಅವರು ದುಬೈ ನಲ್ಲಿಯೇ ನಿನ್ನೆ ಸುದೀಪ್ ಅವರಿಗಾಗಿ ವಿಶೇಷ ಪಾರ್ಟಿಯೊಂದನ್ನು ಆಯೋಜಿಸಿದ್ದರು.. ವಿಕ್ರಾಂತ್ ರೋಣ ಚಿತ್ರತಂಡ ಹಾಗೂ ಸುದೀಪ್ ಅವರ ಆಪ್ತ ಸ್ನೇಹಿತರು.. ಆತ್ಮೀಯರು ಎಲ್ಲರೂ ದುಬೈ ಗೆ ತೆರಳಿ ಪಾರ್ಟಿಯಲ್ಲಿ ಭಾಗವಹಿಸುವಂತೆ ಮಾಡಿದ್ದರು.. ಕೇಕ್ ಕಟ್ ಮಾಡಿ ಸಂಭ್ರಮಿಸಿದರು.. 25 ವರ್ಷದ ಸಂಭ್ರಮಕ್ಕೆ ಮಾಡಿದ ಪಾರ್ಟಿಯಲ್ಲಿ ಸುದೀಪ್ ಅವರು ತಮ್ಮ ಹಳೆಯ ಕಷ್ಟದ ದಿನಗಳನ್ನು.. ಪ್ರಿಯಾ ಅವರು ಸುದೀಪ್ ಅವರನ್ನು ಬೆಂಬಲಿಸಿದ ರೀತಿಯನ್ನು ನೆನೆದು ಭಾವುಕರಾದರು.. ಸುದೀಪ್ ಬೇರೆಲ್ಲದಕ್ಕಿಂತಲೂ ನನ್ನ ಒಳ್ಳೆಯ ಸ್ನೇಹಿತ ಎಂದು ಪ್ರಿಯಾ ಅವರು ಹೆಮ್ಮೆಯಿಂದ ಹೇಳಿಕೊಂಡರು..