ರಮೇಶ್ ಕುಮಾರ್ ಗ್ರಹಚಾರ ಬಿಡಿಸಿದ ಸುಮಲತಾ ಅಂಬರೀಶ್.. ರಮೇಶ್ ಕುಮಾರ್ ಬಗ್ಗೆ ಹೇಳಿದ್ದೇ ಬೇರೆ..

0 views

ಒಬ್ಬ ಮನುಷ್ಯನನ್ನು ಜನನಾಯಕನಾಗಿ ಆಯ್ಕೆ ಮಾಡಿ ಕಳುಹಿಸುತ್ತೇವೆ ಎಂದರೆ ಆತ ತನಗೆ ತಾನೇ ಸುಪೀರಿಯರ್ ಎಂದುಕೊಳ್ಳುವಂತಾಗಿದೆ.. ತನ್ನನ್ನ ಜನರು ಯಾಕೆ ಆಯ್ಕೆ ಮಾಡಿದ್ದಾರೆ.. ನಾನೇನು ಕೆಲಸ ಮಾಡಬೇಕು.. ಯಾವುದರ ಬಗ್ಗೆ ಮಾತನಾಡಬೇಕು ಎನ್ನುವ ಪರಿವೇ ಬಹುತೇಕರಿಗೆ ಇಲ್ಲದಾಗಿದೆ.. ಇನ್ನು ಸದನವನ್ನು ರಾಜ್ಯವನ್ನು ಅಭಿವೃದ್ಧಿ ಹೇಗೆ ಮಾಡೋದು.. ಇರೋ ಸಮಸ್ಯೆಗಳನ್ನು ಹೇಗೆ ಪರಿಹಾರ ಮಾಡೋದು ಅನ್ನೋದನ್ನು ಬಿಟ್ಟು ಮಿಕ್ಕ ಎಲ್ಲಾ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡ್ತಾರೆ.. ಅದೇ ರೀತಿ ‌ಮೊನ್ನೆ ಸದನದಲ್ಲಿ ಇಂತಹುದೇ ಘಟನೆ ನಡೆದಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.. ಹೌದು ರಮೇಶ್ ಕುಮಾರ್ ಅವರು ಮೊನ್ನೆ ಇಂಗ್ಲೀಷ್ ಗಾದೆ ಎಂದು ಹೇಳಿದ ಆ ಮಾತು.. “ಯಾರಾದರೂ ನಿಮ್ಮನ್ನು ಮಾಡಿದಾಗ ಅದನ್ನು ತಡೆಯಲು ಆಗದಿದ್ದಾಗ ಮಲಗಿ ಎಂಜಾಯ್ ಮಾಡಿ” ಎಂದರು.. ನಿಜಕ್ಕೂ ಅವರ ಕುಟುಂಬದ ಹೆಣ್ಣುಮಕ್ಕಳಿಗೂ ಇದೇ ಮಾತನ್ನು ಹೇಳುವರಾ ಎಂದು ರಮೇಶ್ ಕುಮಾರ್ ಅವರನ್ನೇ ಕೇಳಿ ನೋಡಬೇಕು..

ಹೌದು ಆ ಸಮಯದಲ್ಲಿ ಆ ಮಾತು ಬಂದದ್ದು ಸಾಂದರ್ಭಿಕ.. ಆದರೆ ಒಬ್ಬ ಮನುಷ್ಯನಿಗೆ ಅದರಲ್ಲಿಯೂ ಸದನದಲ್ಲಿ ಆಡುವ ಪ್ರತಿ ಮಾತಿನ ಮೇಲೆಯೂ ಗಮನ ವಿರಬೇಕು..ಇನ್ನು ಇತ್ತ ಮಾನ್ಯ ಗೌರವಾನ್ವಿತ ಸ್ಪೀಕರ್ ಅವರು ಮಾಡಿದ್ದು ಅಬ್ಬಾಬ್ಬ ತಾವೇ ಅಂತಹ ಸಂದರ್ಭವನ್ನು ಅನುಭವಿಸಿದಂತೆ ಇತ್ತು ಅವರ ಮುಖದಲ್ಲಿನ ನಗು.. ಹೌದು ಸದನದಲ್ಲಿ ಮಾತನಾಡಲು ಅವಕಾಶ ಸಿಗದೇ ಎಲ್ಲರೂ ಮಾತನಾಡುತ್ತಿದ್ದ ಸಮಯದಲ್ಲಿ ಮಾತನಾಡಿದ ಸ್ಪೀಕರ್ ಅವರು ರಮೇಶ್ ಕುಮಾರ್ ಅವರೇ ಏನ್ ಹೇಳ್ತೀರಿ.. ಇದನ್ನೆಲ್ಲಾ ನೋಡಿದ್ರೆ ಸುಮ್ಮನೆ ಲೆಟ್ಸ್ ಎಂಜಾಯ್ ದಿಸ್ ಸ್ಯುಚುಯೇಷನ್ ಅನ್ನಿಸ್ತಿದೆ ಎಂದರು.. ಅವರ ಮಾತಿಗೆ ಪ್ರತಿಕ್ರಿಯೆ ಕೊಟ್ಟ ರಮೇಶ್ ಕುಮಾರ್ ಅವರು ಇಂಗ್ಲೀಷಿನಲ್ಲಿ ಒಂದು ಮಾತಿದೆ.. ಯಾವಾಗ ರೇ ತಡೆಯಲು ಸಾಧ್ಯವಾಗುವುದಿಲ್ಲವೋ ಆಗ ಮಲಗಿ ಎಂಜಾಯ್ ಮಾಡಿ ಎಂದು..” ಎಂದು ಈ ಮಾತನ್ನು ಹೇಳುವಾಗ ಅರ್ಧದಲ್ಲಿಯೇ ಮಾನ್ಯ ಸ್ಪೀಕರ್ ಅವರು ಮುಖದ ತುಂಬಾ ನಗು ತುಂಬಿಕೊಂಡು ಗೊತ್ತು ಗೊತ್ತು ಬಿಡಿ ಎಂದರು..

ಇನ್ನು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೀಕೆಗೆ ಒಳಪಡುತ್ತಿದ್ದಂತೆ ನಿನ್ನೆ ರಮೇಶ್ ಕುಮಾರ್ ಅವರು ಸದನದಲ್ಲಿ ಎದ್ದು ನಿಂತು ತಿಲ್ಲೆ ತಾರಸಿದಂತೆ ಕ್ಷಮೆ ಕೇಳಿದ್ದರು.. ಯಾರಿಗಾದರೂ ನೋವಾಗಿದ್ದರೇ ಯಾರಿಗಾದರೂ ಬೇಸರವಾಗಿದ್ದರೇ ನಾನೇನಾದರೂ ತಪ್ಪು ಮಾಡಿದ್ದರೇ ಎಂದು ಮೈಲಾರ ಸುತ್ತಿ ಕೊಂಕಣಕ್ಕೆ ಬಂದಂತೆ ಕ್ಷಮೆ ಕೇಳಿದರು. ಮಾಡಿದ್ದು ತಪ್ಪು.. ಮಾಡಬಾರದಿತ್ತು ಕ್ಷಮಿಸಿ ಎನ್ನುವ ಮಾತು ಬರಲೇ ಇಲ್ಲ.. ಇನ್ನು ಇತ್ತ ಮಾನ್ಯ ಗೌರವಾನ್ವಿತ ಸ್ಪೀಕರ್ ಅವರು ಮಾತ್ರ ಕ್ಷಮೆ ಕೇಳಲೇ ಇಲ್ಲ.. ತಮ್ಮದು ತಪ್ಪೇ ಇಲ್ಲ ಎನ್ನುವಂತೆಯೇ ತೋರಿಸಿಕೊಂಡರು.. ಅದರಲ್ಲಿಯೂ ಕೆಲ ರಾಜಕಾರಣಿಗಳು ಈ ಬಗ್ಗೆ ಮಾತನಾಡಲು ಸಹ ಇಷ್ಟ ಪಡಲಿಲ್ಲ.. ಮಹಿಳಾ ಶಾಸಕರಿಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ.. ಯಾರು ಈ ವಿಚಾರದ ಬಗ್ಗೆ ಮುಖ್ಯವಾಗಿ ಮಾತನಾಡಬೇಕಿತ್ತೋ.. ಯಾರಿಗೆ ಈ ವಿಚಾರದ ಬಗ್ಗೆ ಮಾತನಾಡಲು ಮೊದಲ ಅವಕಾಶ ಸಿಗಬೇಕಿತ್ತೋ ಅಂತಹ ಮಹಿಳಾ ಸದಸ್ಯರಿಗೇ ಮಾತನಾಡಲು ಅವಕಾಶ ನೀಡಲಿಲ್ಲ.. ಇನ್ನು ಇಂತವರಿಗೆ ಏನು ಹೇಳಿ ಏನು ಪ್ರಯೋಜನ..

ಒಟ್ಟಿನಲ್ಲಿ ಇಂತವರನ್ನು ಆರಿಸಿ‌ ಕಳುಹಿಸಿದ ನಮ್ಮಂತ ಜನ ಸಾಮಾನ್ಯರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಸುಮ್ಮನಾಗಬೇಕಷ್ಟೇ.. ಇತ್ತ ಮಾದ್ಯಮಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಪ್ರಶ್ನಿಸಿ ಅದರಲ್ಲೂ ಪಬ್ಲಿಕ್ ಟಿವಿ ರಂಗನಾಥ್ ಅವರು ತಮ್ಮದೇ ಶೈಲಿಯಲ್ಲಿ ಇಬ್ಬರಿಗೂ ಗ್ರಹಚಾರ ಬಿಡಿಸಿದ್ದಷ್ಟೇ ಅಲ್ಲದೇ ಸೋಮವಾರ ಇಬ್ಬರೂ ಸಹ ನೇರವಾಗಿ ಕ್ಷಮೆ ಕೇಳಬೇಕು ಎಂದಿದ್ದಾರೆ.. ಇನ್ನು ಈ ವಿಚಾರ ಸಂಸತ್ ನಲ್ಲಿಯೂ ಸದ್ದು ಮಾಡಿದ್ದು ಸ್ಮೃತಿ ಇರಾನಿ ಅವರು ಈ ಬಗ್ಗೆ ಮಾತನಾಡಿ ರಮೇಶ್ ಕುಮಾರ್ ಅವರ ಸ್ಥಾನವನ್ನು ವಜಾ ಮಾಡುವಂತೆ ಹೇಳಿದರು.. ಇನ್ನು ಇತ್ತ ಮಂಡ್ಯ ಸಂಸದರಾದ ಸುಮಲತಾ ಅಂಬರೀಶ್ ಅವರೂ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ಹೌದು ಈ ಮುನ್ನವೂ ಸಹ ರಮೇಶ್ ಕುಮಾರ್ ಅವರು ಇಂತಹ ಮಾತುಗಳನ್ನಾಡಿದ್ದರ ಬಗ್ಗೆಯೂ ಸುಮಲತಾ ಅವರು ಮಾತನಾಡಿದ್ದಾರೆ.. ಹೌದು ಸುಮಲತಾ ಅವರ ಮಾತುಗಳು “ಕರ್ನಾಟಕದ ವಿಧಾನಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಆಡಿರುವ ಮಾತುಗಳು ಖಂಡನಾರ್ಹ..

ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ವ್ಯಕ್ತಿಯಿಂದ ಈ ರೀತಿಯ ಮಾತುಗಳು.. ಅದೂ ಸಹ ವಿಧಾನಸಭೆಯಲ್ಲೇ ಬಂದಿರುವುದು ನಮಗೆಲ್ಲ ನಾಚಿಕೆ ತರುವಂತಹುದು.. ಸಭೆಯ ಸ್ಪೀಕರ್ ಮತ್ತು ಸದಸ್ಯರು ಈ ಮಾತನ್ನು ಖಂಡಿಸದೆ ಬಿಟ್ಟಿರುವುದು ಮತ್ತೊಂದು ದುರಂತ.. ಸಾಮಾಜಿಕ ಸ್ವಾಸ್ಥ್ಯ ಹಾಗೂ ನೈತಿಕತೆಗೆ ಮೇಲ್ಪಂಕ್ತಿ ಹಾಕಬೇಕಿರುವ ಗೌರವಾನ್ವಿತ ವಿಧಾನಸಭೆಯಲ್ಲಿ ಈ ರೀತಿ ನಡೆದಿರುವುದು ಅತ್ಯಂತ ದುಃಖದ ಸಂಗತಿ.. ಈ ಹಿಂದೆಯೂ ರಮೇಶ್ ಕುಮಾರ್ ಅವರು ಸ್ಪೀಕರ್ ಸ್ಥಾನದಲ್ಲಿ ಇದ್ದ ವೇಳೆ ಇದೇ ರೀತಿಯ ಮಾತುಗಳನ್ನು ಆಡಿದ್ದರು.. ಅದೇ ರೀತಿಯ ಮಾತುಗಳನ್ನು ಮತ್ತೆ ವಿಧಾನಸಭೆಯಲ್ಲೇ ಆಡಿ.. ಅವರು ಸಭಯ ಗೌರವಕ್ಕೆ ಚ್ಯುತಿ ತಂದಿದ್ದಾರೆ..

ಒಂದೇ ತಪ್ಪನ್ನು ಮತ್ತೆ ಮತ್ತೆ ಮಾಡುವುದು ಮಾನಸಿಕ ವಿಕೃತಿಯನ್ನು ತೋರಿಸುತ್ತದೆ‌.. ಅವರ ಮಾತುಗಳನ್ನು ಮತ್ತು ಮನಸ್ಥಿತಿಯನ್ನು ಖಂಡಿಸುತ್ತ, ಈ ರೀತಿ ಮಾತುಗಳಿಂದ ಸಮಾಜದ ನೈತಿಕತೆ ಹಾಗೂ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ಜರಗಿಸಬೇಕೆಂದು ಆಗ್ರಹಿಸುತ್ತೇನೆ.. ಕೇವಲ ಕ್ಷಮಾಪಣೆಯಿಂದ ಸರಿಯಾಗುವ ಖಾಯಿಲೆ ಇದಲ್ಲ.. ಕ್ಷಮೆಗೆ ಅರ್ಹವಾದ ತಪ್ಪು ಕೂಡ ಇದಲ್ಲ. ಹೆಣ್ಣನ್ನು ಗೌರವಿಸದ ಸಮಾಜ ಪ್ರಗತಿಯನ್ನು ಕಾಣಲು ಸಾಧ್ಯವಿಲ್ಲ. ಇದನ್ನು ನಾವು ಮರೆಯಬಾರದು. ಸ್ತ್ರೀ ಪರ ಚಿಂತನೆಗಳು ಉನ್ನತ ಸಮಾಜವನ್ನು ನಿರ್ಮಾಣ ಮಾಡಬಲ್ಲವು. ಮಹಿಳೆಯರನ್ನು ಗೌರವಿಸುವ ಸಮಾನ ರೀತಿಯಲ್ಲಿ ಕಾಣುವ ಗುಣ ಎಲ್ಲರಲ್ಲೂ ಬೆಳೆಯಲಿ.. ಎಂದಿದ್ದಾರೆ..