ನಿಶ್ಚಿತಾರ್ಥದ ಸಂತೋಷ ಹಂಚಿಕೊಂಡ ಸುಮಲತಾ ಅಂಬರೀಶ್.. ಅಭಿಷೇಕ್ ಅವರ ಮದುವೆ ಯಾವಾಗ..

0 views

ಸುಮಲತಾ ಅಂಬರೀಶ್ ಸಧ್ಯ ಮಂಡ್ಯ ಲೋಕಸಭಾ ಸದಸ್ಯರೂ ಹಾಗಿರುವ ಸ್ಯಾಂಡಲ್ವುಡ್ ನ ಹಿರಿಯ ನಟಿ ಸುಮಲತಾ ಅವರು ಸಧ್ಯ ತಮ್ಮ ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದ್ದು ನಿಶ್ಚಿತಾರ್ಥದ ಫೋಟೋ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಅಂಬರೀಶ್ ಅವರು ಅಗಲಿದ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡದಾಗ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆದ್ದರು.. ಆ ಸಮಯದಲ್ಲಿ ಮನೆ ಮಕ್ಕಳಾಗಿ ದರ್ಶನ್ ಹಾಗೂ ಯಶ್ ಅವರು ನಿಂತ ರೀತಿ ಮಾತ್ರ ನಿಜಕ್ಕೂ ಮನುಷ್ಯ ಇದ್ದಾಗ ಮಾತ್ರವಲ್ಲ ಅವರು ಹೋದಾಗಲೂ ಆ ಕುಟುಂಬದ ಜೊತೆ ಅದೇ ರೀತಿ ಇರಬೇಕು ಎಂಬುದನ್ನು ತೋರಿಸಿದಂತಿತ್ತು..

ಇನ್ನು ರಾಜಕೀಯದ ಜೊತೆಗೆ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದ ಸುಮಲತಾ ಅವರು ಕೆಲ ಸಿನಿಮಾಗಳಲ್ಲಿ ಅಭಿನಯಿಸಿ ನಂತರ ಚಿತ್ರರಂಗದಿಂದ ಬ್ರೇಕ್ ಪಡೆದರು.. ಸಧ್ಯ ರಾಜಕೀಯವಾಗಿ ಸಂಪೂರ್ಣವಾಗಿ ಸಕ್ರಿಯರಾಗಿರುವ ಸುಮಲತಾ ಅಂಬರೀಶ್ ಅವರು ಕೆಲ ತಿಂಗಳ ಹಿಂದಷ್ಟೇ ಮಂಡ್ಯದಲ್ಲಿಯೂ ಹೊಸ ಮನೆ ನಿರ್ಮಾಣಕ್ಕ್ರ್ ಗುದ್ದಲಿ ಪೂಜೆ ನೆರವೇರಿಸಿದ್ದು ಮಂಡ್ಯದಲ್ಲಿಯೇ ರಾಜಕೀಯವಾಗಿ ಮುಂದೆ ಸಂಪೂರ್ಣವಾಗಿ ತೊಡಗಿಕೊಳ್ಳುವಂತೆ ಕಾಣುತಿತ್ತು..

ಇನ್ನು ಇತ್ತ ಅಭಿಷೇಕ್ ಅಂಬರೀಶ್ ಅವರು ಸಧ್ಯ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು ಅಂಬರೀಶ್ ಅವರು ಅಗಲಿದ ಬಳಿಕ ಅಮರ್ ಸಿನಿಮಾ ಬಿಡುಗಡೆಯಾಗಿ ಹೆಸರನ್ನೂ ತಂದುಕೊಟ್ಟಿತು.. ಆದರೆ ನನ್ನ ಮೊದಲ ಸಿನಿಮಾವನ್ನಾದರೂ ಅಪ್ಪ ನೋಡಬೇಕಿತ್ತು ಎಂದು ಅಭಿಷೇಕ್ ಅವರು ಭಾವುಕರಾಗಿದ್ದರು.. ಆನಂತರದಲ್ಲಿ ಸಧ್ಯ ಇದೀಗ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಸಿನಿಮಾ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.. ಇನ್ನು ಅಭಿಷೇಕ್ ಅವರೂ ಸಹ ಮುಂಬರುವ ವಿಧಾಮಸಭಾ ಚುನಾವಣೆಯಲ್ಲಿ ಮಳವಳ್ಳಿ ಭಾಗದಿಂದ ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಇದೇ ಕಾರಣಕ್ಕೆ ಮಂಡ್ಯದಲ್ಲಿ ಮನೆ ನಿರ್ಮಾಣ‌ ಮಾಡುತ್ತಿದ್ದಾರೆ ಎನ್ನಲಾಗಿದೆ‌.

ಇನ್ನು ಇತ್ತ ಸಾಕಷ್ಟು ಸಮಯ ಮಂಡ್ಯದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಅಭಿಷೇಕ್ ಅವರು ಮಂಡ್ಯದ ಅಂಬರೀಶ್ ಅಭಿಮಾನಿಗಳು ಯಾವುದೇ ಕಾರ್ಯಕ್ರಮ ಮಾಡಿದರೂ ಸಹ ಯಾವುದೇ ಅಹಂಕಾರವಿಲ್ಲದೇ ಪ್ರೀತಿಯಿಂದಲೇ ಆಗಮಿಸಿ ಭಾಗವಹಿಸುತ್ತಾರೆ.. ಇನ್ನು ಹೀಗೆ ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ಕಾಣಿಸಿಕೊಂಡ ಅಭಿಷೇಕ್ ಅವರನ್ನು ರಾಜಕೀಯಕ್ಕೆ ಬರೋ ಪ್ಲಾನ್ ಬಗ್ಗೆ ಮಾಧ್ಯಮದವರು ಕೇಳಿದಾಗ ಬರಲ್ಲ ಎನ್ನುವ ಮಾತನ್ನು ಆಡದೇ ಬರ್ತೀನಿ ಎಂದೂ ಸಹ ನೇರವಾಗಿ ಹೇಳದೇ ಮುಂದೆ ನೋಡೋಣ ಎಂದು ಜೋರು ಧ್ವನಿಯಲ್ಲಿಯೇ ಬಿಡ್ರಯ್ಯಾ ಸಾಕು.. ಎಂದು ಅಲ್ಲಿಗೆ ಮಾತು ಮುಗಿಸಿ ಅಂಬರೀಶ್ ಅವರಂತೆಯೇ ಮಾಧ್ಯಮದವರನ್ನೆಲ್ಲಾ ಉಪಹಾರಕ್ಕೆ ಕರೆದುಕೊಂಡು ಹೋದರು..

ಇನ್ನು ಸಧ್ಯ ಅಂಬರೀಶ್ ಅವರ ಒಬ್ಬನೇ ಮಗ ಅಭಿಷೇಕ್ ಅವರ ಮದುವೆ ಯಾವಾಗ ಎನ್ನುವ ಒರಶ್ನೆ ಸಹ ಕೇಳಲಾಗಿ ಸಧ್ಯಕಂತೂ ಇಲ್ಲ.. ನಾನಿನ್ನೂ ಚಿಕ್ಕವನು ಕಣ್ರಯ್ಯಾ ಎಂದು ನಕ್ಕರು.. ಇನ್ನು ಸಧ್ಯ ಇದೀಗ ಮಗನ ಮದುವೆ ಬಗ್ಗೆ ಸಧ್ಯಕ್ಕೆ ಆಲೋಚನೆ ಇಲ್ಲ ಎನ್ನುವ ಮನಸ್ಥಿತಿಯಲ್ಲಿಯೇ ಸುಮಲತಾ ಅವರು ಇದ್ದು ತಮ್ಮ ಕುಟುಂಬದಲ್ಲಿ ನಡೆಯುತ್ತಿರುವ ಮತ್ತೊಂದು ಮದುವೆ ಸಮಾರಂಭದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.. ಹೌಸು ಸಧ್ಯ ಸಂಸತ್ ನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಅಧಿವೇಶನದಲ್ಲಿ ಪಾಲ್ಗೊಳ್ಳಲು ಮಂಡ್ಯ ಸಂಸದೆ ಸುಮಲತಾ ಅವರು ದೆಹಲಿಗೆ ತೆರಳಿದ್ದಾರೆ.. ಈ ನಡುವೆ ಕುಟುಂಬದಲ್ಲಿ ನಡೆಯುತ್ತಿರುವ ನಿಶ್ಚಿತಾರ್ಥದ ಸಮಾರಂಭಕ್ಕೂ ಪಾಲ್ಗೊಂಡು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಸುಮಲತಾ ಅವರು ತಮ್ಮ ಸಹೋದರನ ಮಗನ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ನಾನು ಎತ್ತಿ ಆಡಿಸಿದ ಮಗುವಿಗೆ ಈಗ ಮದುವೆ ಎಂದರೆ ಬಹಳ ಆಶ್ಚರ್ಯ ಹಾಗೂ ಸಂತೋಷವಾಗುತ್ತಿದೆ ಎಂದು ನಿಶ್ಚಿತಾರ್ಥದ ಫೋಟೋಗಳ ಜೊತೆಗೆ ಸಂತೋಷ ಹಂಚಿಕೊಂಡು ಸೋದರಳಿಯ ಹಾಗೂ ವಧುವಿಗೆ ಶುಭ ಹಾರೈಸಿದ್ದಾರೆ.. ಸಧ್ಯ ಫೋಟೋಗಳಿಗೆ ಕಮೆಂಟ್ ಮಾಡಿರುವ ಅಭಿಮಾನಿಗಳು ಆದಷ್ಟು ಬೇಗ ಅಭಿಷೇಕ್ ಅವರ ಮದುವೆ ಮಾಡಿ ಎಂದು ಕಮೆಂಟ್ ಮಾಡಿದ್ದು ಸಧ್ಯ ಅಭಿಷೇಕ್ ಅಂಬರೀಶ್ ಅವರಿಗೀಗ ಇಪ್ಪತ್ತೆಂಟು ವರ್ಷ ವಯಸ್ಸಾಗಿದ್ದು ಮಂಡ್ಯ ರಾಜಕೀಯದಲ್ಲಿ ಅಭಿಷೇಕ್ ಅವರು ಸಹ ಸಂಪೂರ್ಣವಾಗಿ ಸಕ್ರಿಯರಾಗುವ ಎಲ್ಲಾ ಸೂಚನೆಗಳು ಕಾಣುತ್ತಿದ್ದು ಮದುವೆಯ ಮಾತು ಸಧ್ಯಕ್ಕಿಲ್ಲ ಎನ್ನುವಂತಿದೆ..