ವಿಷ್ಣುವರ್ಧನ್ ಬಗ್ಗೆ ಮಾತನಾಡಿದವನಿಗೆ ಏಕವಚನದಲ್ಲಿಯೇ ಗ್ರಹಚಾರ ಬಿಡಿಸಿದ ಸುಮಲತಾ ಅಂಬರೀಶ್‌‌ ಕೊನೆಗೆ ಹೇಳಿದ ಮಾತೇನು ಗೊತ್ತಾ?

0 views

ವಿಷ್ಣುವರ್ಧನ್ ಹಾಗೂ ಅಂಬರೀಶ್ ಕುಟುಂಬ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದೇ ಇದೆ.. ವಿಷ್ಣುವರ್ಧನ್ ಅಂಬರೀಶ್ ಸುಮಲತಾ ಅಂಬರೀಶ್ ಭಾರತಿ ವಿಷ್ಣುವರ್ಧನ್ ಎಲ್ಲರೂ ಸದಾ ಒಂದೇ ಕುಟುಂಬದಂತೆ ಇದ್ದವರು.. ಬಹಳ ಆತ್ಮೀಯರು ಹೌದು.. ವಿಷ್ಣುವರ್ಧನ್ ಅವರು ಸಂಪೂರ್ಣವಾಗಿ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದದ್ದು ಅಂಬರೀಶ್ ಹಾಗೂ ಸುಮಲತಾ ಅವರ ಎದುರು ಮಾತ್ರ ಎಂಬ ಮಾತು ಸಹ ಅಂಬರೀಶ್ ಅವರು ಈ ಹಿಂದೆ ಹೇಳಿದ್ದರು.. ಸ್ನೇಹಕ್ಕೆ ನಿಜವಾದ ಅರ್ಥವೇ ಅಂಬರೀಶ್ ಹಾಗೂ ವಿಷ್ಣುವರ್ಧನ್ ಎನ್ನುವ ಮಾತು ಈಗಲೂ ಇದೆ.. ಇನ್ನು ಮುಂದೆಯೂ ಚಿರಕಾಲ ಉಳಿಯಲಿದೆ..

ಇನ್ನು‌ ಕೆಲ ದಿನಗಳ ಹಿಂದೆ ವಿಜಯ್ ರಂಗರಾಜನ್ ಎನ್ನುವ ಕೆಲಸಕ್ಕೆ ಬಾರದ ವ್ಯಕ್ತಿಯೊಬ್ಬ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡಿದ್ದು ಇದೀಗ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದ್ದು ವಿಷ್ಣುವರ್ಧನ್ ಅವರ ಅಭಿಮಾನಿಗಳು.. ಕುಟುಂಬದವರು.. ಕಲಾವಿದರು.. ಎಲ್ಲರೂ ಅಸಮಾಧಾನ ವ್ಯಕ್ತ ಪಡಿಸಿ ಆ ವ್ಯಕ್ತಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.. ಆದರೆ ಸುಮಲತಾ ಅಂಬರೀಶ್ ಅವರು ಮಾತ್ರ ಆತ ಕ್ಷಮೆ ಕೇಳಿದರೂ ನಾವು ಕ್ಷಮಿಸೋಕೆ ಆಗಲ್ಲ.. ಅಂತಹ ತಪ್ಪು‌ಮಾಡಿದ್ದಾನೆ ಎಂದು ಏಕವಚನದಲ್ಲಿಯೇ ಗ್ರಹಚಾರ ಬಿಡಿಸಿದ್ದಾರೆ.. ಹೌದು ಸುಮಲತಾ ಅಂಬರೀಶ್ ಅವರು ಹೇಳಿದ ಮಾತುಗಳು ಇಲ್ಲಿವೆ ನೋಡಿ..

ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ವಿವಾದ್ಮಕ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆಯುವುದೇ ಕೆಲವರಿಗೆ ಹವ್ಯಾಸವಾಗಿ ಹೋಗಿದೆ.
ಇಡೀ ದೇಶವೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನೆತೆ ಏನೆಂಬುವುದು ಚೆನ್ನಾಗಿಯೇ ಗೊತ್ತು. ವಿಷ್ಣು ನಮ್ಮನ್ನು ದೈಹಿಕವಾಗಿ ದೂರವಾಗಿ ಹತ್ತು ವರುಷಗಳೇ ಕಳೆದರೂ ಅವರ ಮೇಲಿನ ಅಭಿಮಾನ ಎಳ್ಳಷ್ಟೂ ಕಡಿಮೆಯಾಗದಿರುವುದೆ ಅದಕ್ಕೆ ಸಾಕ್ಷಿ.

ಯಾರಿಗೂ ತಿಳಿಯದ, ಯಾರೋ ಒಬ್ಬ ಅವರ ಬಗ್ಗೆ ಮನಸ್ಸೋ ಇಚ್ಛೆ ಕೆಲವು ಕೆಟ್ಟ ಪದಗಳಿಂದ ನಿಂದಿಸಿದರೆ ಅದರಿಂದ ನಮ್ಮ ವಿಷ್ಣುವಿನ ಘನತೆಗೆ ಒಂದು ಸಾಸಿವೆ ಕಾಳಷ್ಟು ಧಕ್ಕೆಯಾಗದು! ಅದು ಕೇವಲ ಅಂತಹ ಬಾಯಿಬಡುಕ ವ್ಯಕ್ತಿಯ ಕೆಟ್ಟ ಗುಣ ಹಾಗು ನೀಚ ಬುದ್ದಿಯ ಅನಾವರಣವಲ್ಲದೆ ಬೇರೇನಲ್ಲ. ಅದರಲ್ಲೂ ನಮ್ಮನ್ನು ಅಗಲಿದ ವ್ಯಕ್ತಿಯ ಬಗ್ಗೆ ಈ ರೀತಿಯ ತುಚ್ಛವಾಗಿ ಮಾತನಾಡುವುದು ಕ್ಷಮಿಸಲಾಗದ ದೊಡ್ಡ ಅಪರಾಧ.

ಸರಿಯಾದ ಮನಸ್ಥಿತಿ ಉಳ್ಳವನು, ಒಬ್ಬ ವ್ಯಕ್ತಿಯು ಬದುಕಿದ್ದಾಗಲೇ ಅವರ ಬಗ್ಗೆ ಮಾತನಾಡಿ ಅವರ ಪ್ರತಿಕ್ರಿಯೆ ನಿರೀಕ್ಷಿಸುವುದು ಸರಿಯೇ ಹೊರತು, ಅವರ ನಿಧನದ ನಂತರ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ, ಕೇವಲ ಹೇಡಿತನದ ಪರಮಾವಧಿ ಅಲ್ಲದೆ ಮತ್ತೇನೂ ಅಲ್ಲ.

ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿಗೆ ಗೊತ್ತು.
ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬುದಕ್ಕೆ ಇದೊಂದು ಸರಿಯಾದ ಉದಾಹರಣೆ. ಇಂತಹ ‘ಚೀಪ್ ಪಬ್ಲಿಸಿಟಿ’ ಗಾಗಿ ಮನಬಂದಂತೆ ಬಾಯಿ ಹರಟುವ ವ್ಯಕ್ತಿಗಳು ಕ್ಷಮೆ ಕೇಳಲು ಅರ್ಹರಲ್ಲ. ಕ್ಷಮಿಸಲು ಆಗದು, ಕ್ಷಮಿಸಲು ಬಾರದು..” ಎಂದಿದ್ದಾರೆ.. ಈ ಬಗ್ಗೆ

ಈ ಬಗ್ಗೆ ಸುದೀಪ್ ಪುನೀತ್ ಗಣೇಶ್ ಯಶ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರು ಸಹ ಪ್ರತಿಕ್ರಿಯೆ ನೀಡಿದ್ದು.. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ತೆಲುಗಿನ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಬಗ್ಗೆ ಮಾತನಾಡಿ ವಿಜಯ್ ರಂಗರಾಜು ಮೇಲೆ ಕ್ರಮ ಕೈಗೊಳ್ಳುವಂತೆ ಮಾಡುತ್ತೇವೆ ಎಂದಿದ್ದಾರೆ.. ಒಟ್ಟಿನಲ್ಲಿ‌ ಸಿಂಹ ಇಲ್ಲವೆಂದುಕೊಂಡು ಸಿಂಹದ ಬಗ್ಗೆ ಮಾತನಾಡಿದರೆ ಕನ್ನಡಿಗರು ಬುಟ್ಟೇವಾ? ನಮ್ಮ ಕನ್ನಡದ ಮೇರು ನಟನ ಬಗ್ಗೆ ಮಾತನಾಡಿದರೆ ಪ್ರತಿಯೊಬ್ಬ ಕನ್ನಡಿಗನೂ ಸಿಂಹನೇ ಎನ್ನುವುದು ಬಹುಶಃ ಇದೀಗ ಆ ನೀಚ ಮನುಷ್ಯನಿಗೆ ಅರ್ಥವಾಗಿರಬಹುದು..