ಕೋಟಿ ಕೋಟಿ ಹಣ ಪಡೆದಿರುವ ಸುಮಲತಾ ಅಂಬರೀಶ್.‌. ನೇರವಾಗಿ ಟಾಂಗ್ ಕೊಟ್ಟ ಖ್ಯಾತ ನಟ..

0 views

ಸಂಸದೆ ಸುಮಲತಾ ಅಂಬರೀಶ್.. ಮೂರು ವರ್ಷಗಳ ಹಿಂದೆ ನಟಿ ಸುಮಲತಾ ಎಂದು ಅಥವಾ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಆಗಿ ಮಾತ್ರ ಗುರುತಿಸಿಕೊಂಡಿದ್ದ ಸುಮಲತಾ ಅವರು ಅಂಬರೀಶ್ ಅವರ ಅಗಲಿಕೆಯ ನಂತರ ರಾಜಕೀಯಕ್ಕೆ ಬರುವ ಮನಸ್ಸು ಮಾಡಿದರು.. ರಾಜಕೀಯಕ್ಕೆ ಬರಲೇಬೇಕೆಂದು ಬಂದ ಸುಮಲತಾ ಅವರು ಜನರ ಸೇವೆ ಮಾಡಲು ಸ್ವಾಭಿಮಾನಿ ಮಂಡ್ಯದವರು ನನಗೆ ವೋಟ್ ಹಾಕಿ ಎಂದಿದ್ದರು.. ಇನ್ನು ಇತ್ತ ಮೊದಲಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳಿದ ಸುಮಲತಾ ಅವರಿಗೆ ಟಿಕೆಟ್ ನೀಡಿರಲಿಲ್ಲ.. ಇತ್ತ ಕುಮಾರಸ್ವಾಮಿ ಅವರ ಮೈತ್ರಿ ಸರಕಾರ ಇದ್ದ ಕಾರಣ ನಿಖಿಲ್ ಅವರನ್ನು ಮಂಡ್ಯದಿಂದ ನಿಲ್ಲಿಸಿ ಗೆಲ್ಲಿಸಬೇಕೆಂದು ಪಣ ತೊಟ್ಟಿದ್ದರು..

ಇನ್ನು ಆ ಸಮಯದಲ್ಲಿ ಬಿಜೆಪಿ ಪಕ್ಷದಿಂದ ಕರೆ ಬಂದರೂ ಸಹ ಅದು ಸರಿಯಾದ ಸಮಯವಲ್ಲ ಎಂದು ಬಿಜೆಪಿ ಪಕ್ಷ ಸೇರದ ಸುಮಲತಾ ಅವರು ಪಕ್ಷೇತರರಾಗಿಯೇ ಚುನಾವಣೆಗೆ ನಿಂತರು.. ಇತ್ತ ಅಂಬರೀಶ್ ಅವರ ಬೆಂಬಲಕ್ಕೆ ದರ್ಶನ್ ಅವರು ಅಭಿಷೇಕ್ ಅವರು ರಾಕ್ಲೈನ್ ವೆಂಕಟೇಶ್ ಅವರು ರಾಕಿಂಗ್ ಸ್ಟಾರ್ ಯಶ್ ಅವರು ಸೇರಿದಂತೆ ಬಹಳಷ್ಟು ಚಿತ್ರರಂಗದವರು ಹಾಗೂ ಅಂಬರೀಶ್ ಅವರ ಬೆಂಬಲಿಗರು ಜೊತೆಯಾಗಿ ನಿಂತರು.. ಇನ್ನು ಸ್ವಾಭಿಮಾನಿ ರಥಯಾತ್ರೆಯಲ್ಲಿ ಯಶ್ ಅವರು ಹಾಗೂ ದರ್ಶನ್ ಅವರು ತಿಂಗಳುಗಳ ಕಾಲ ಹಳ್ಳಿ ಹಳ್ಳಿಗಳಿಗೂ ಹೋಗಿ ಸುಮಲತಾ ಅವರಿಗೆ ಪ್ರಚಾರವನ್ನು ನಡೆಸಿದ್ದರು.. ಹಾಗೆಯೇ ಕೊನೆಯ ದಿನ ಸ್ವಾಭಿಮಾನಿ ಯಾತ್ರೆಯ ಸಮಾರೋಪ ಸಮಾರಂಭ ಮಂಡ್ಯದಲ್ಲಿ ದೊಡ್ಡ ಮಟ್ಟದಲ್ಲಿ ನಡೆದು ದರ್ಶನ್ ಯಶ್ ರಾಕ್ಲೈನ್ ವೆಂಕಟೇಶ್ ಅಭಿಷೇಕ್ ಸುಮಲತಾ ಅವರು ಎಲ್ಲರೂ ಸಹ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸುಮಲತಾ ಅವರು ಸೆರಗೊಡ್ಡಿ ಮತ ಭಿಕ್ಷೆಯನ್ನು ಕೇಳಿದ್ದರು.. ನಿಮ್ಮ ಮನೆಯ ಸೊಸೆ ನಾನು ನನಗೆ ಮತ ಭಿಕ್ಷೆಯನ್ನು ನೀಡಿ ಎಂದು ಕಣ್ಣೀರಿಟ್ಟು ಕೇಳಿಕೊಂಡಿದ್ದರು..

ಇತ್ತ ಅಂದುಕೊಂಡಂತೆ ಸುಮಲತಾ ಅವರೇ ವಿಜಯರಾದರು.. ಅತ್ತ ನಿಖಿಲ್ ಅವರು ಈ ಚುನಾವಣಾ ಸೋಲಿನಿಂದ ತೀರಾ ಹತಾಶರಾದದ್ದೂ ಉಂಟು.. ಇನ್ನು ಸಧ್ಯ ಇದೀಗ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಲಿರುವ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಪಾಡಿಗೆ ತಾವು ದೊಡ್ಡ ಮಟ್ಟದಲ್ಲಿ ಜನರೊಂದಿಗೆ ಬೆರೆತು ಚುನಾವಣಾ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ..

ಇನ್ನು ಸುಮಲತಾ ಅಂಬರೀಶ್ ಅವರಿಗೆ ಇಷ್ಟೂ ವರ್ಷಗಳ ಕಾಲ ಮಂಡ್ಯದ ಜನತೆ ಹಾಗೂ ಬೆಂಬಲಿಗರು ಬೆಂಬಲಿಸುತ್ತಲೇ ಬಂದಿದ್ದರು.. ಅವರ ಫೋಟೋಗಳನ್ನು ಸಭಾಂಗಣಗಳಲ್ಲಿ ಇಟ್ಟುಕೊಂಡಿದ್ದರು.. ಆದರೆ ಕೆಲ ದಿನಗಳ ಹಿಂದಷ್ಟೇ ಸುಮಲತಾ ಅಂಬರೀಶ್ ಅವರು ತಮ್ಮ ಬೆಂಬಲವನ್ನು ಬಿಜೆಪಿಗೆ ಘೋಷಣೆ ಮಾಡುತ್ತಿದ್ದಂತೆ ಮಂಡ್ಯದ ಬಹಳಷ್ಟು ಜನರು ಇದರಿಂದ ಅಸಮಾಧಾನ ಗೊಂಡು ಅವರ ಫೋಟೋಗಳನ್ನು ತೆಗೆದದ್ದೂ ಉಂಟು.. ಇತ್ತ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂತೋಷ ಪಟ್ಟಿದ್ದೂ ಉಂಟು..

ಇನ್ನು ಇದೆಲ್ಲವನ್ನು ಹೊರತು ಪಡಿಸಿ ಮುಂದಿನ ಚುನಾವಣೆಯಲ್ಲಿ ಸುಮಲತಾ ಅವರು ಮತ್ತೆ ಚುನಾವಣೆಗೆ ನಿಂತರೆ ಗೆಲುವು ಕೊಂಚ ಕಷ್ಟವೇ ಎನ್ನುತ್ತಿರುವಾಗ ಅವರ ಕೆಲವೊಂದು ಮಾತುಗಳು ಕೆಲವೊಂದು ಯಡವಟ್ಟನ್ನು ಮಾಡುತ್ತಿದೆ ಎನ್ನಬಹುದು.. ಇದೀಗ ಇಂದು ಅವರು ಆಡಿದ ಮಾತಿನಿಂದಲೇ ಅವರೇ ಮಾತಿನಲ್ಲಿ ಸಿಲುಕಿದ್ದು ಹನ್ನೆರೆಡು ಕೋಟಿ ಹಣವನ್ನು ಸುಮಲತಾ ಅವರು ಕೈ ಚಾಚಿ ಪಡೆದಿದ್ದಾರೆ ಎಂದು ಕನ್ನಡದ ಖ್ಯಾತ ನಟ ನೇರಾ ನೇರವಾಗಿ ಟಕ್ಕರ್ ನೀಡಿದ್ದಾರೆ..

ಹೌದು ನಿನ್ನೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕ ಉದ್ಘಾಟನೆ ಹಾಗೂ ಬೆಂಗಳೂರಿನ ರಸ್ತೆಯೊಂದಕ್ಕೆ ಅಂಬರೀಶ್ ಅವರ ಹೆಸರು ನಾಮಕರಣದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.. ಮಾರ್ಚ್ 27 ರಂದು ಬೆಂಗಳೂರಿನಲ್ಲಿ ಅಂಬರೀಶ್ ಅವರ ಸ್ಮಾರಕ ಉದ್ಘಾಟನೆ ಹಾಗೂ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ಬಸವರಾಜ ಬೊಮ್ಮಾಯಿ ಅವರು ನಾಮಫಲಕವನ್ನು ಉದ್ಘಾಟಿಸಿದರು..

ಬೆಂಗಳೂರಿನ ಮೌರ್ಯ ಸರ್ಕಲ್ ನಿಂದ ಬಸವೇಶ್ವರ ಸರ್ಕಲ್ ವರೆಗಿನ ರೇಸ್ ಕೋರ್ಸ್ ರಸ್ತೆಯನ್ನು ಡಾ.ಎಂ ಹೆಚ್ ಅಂಬರೀಶ್ ರಸ್ತೆಯನ್ನಾಗಿ ಮಾಡಿದ್ದು ಅದ್ಧೂರಿ ಕಾರ್ಯಕ್ರಮದ ಮೂಲಕ ಉದ್ಘಾಟನೆಯಾಯಿತು.. ಇನ್ನು ನಿನ್ನೆಯ ಕಾರ್ಯಕ್ರಮದ ಸಮಯದಲ್ಲಿ ಮಾತನಾಡಿದ ಸುಮಲತಾ ಅವರು ಭಾವುಕರಾಗಿ ಕಣ್ಣೀರಿಟ್ಟರು.. ಅಭಿಮಾನಿಗಳು ಈ ದಿನ ಯಾವತ್ತು ಬರುತ್ತದೆ ಎಂದು ಕಾಯುತ್ತಿದ್ದರು.. ಇಂದು ಆ ದಿನ ಬಂದಿದೆ.. ಅಂಬರೀಶ್ ಅವರನ್ನು ಸಾಕಿ ಬೆಳೆಸಿದ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು.. ಮಾಜಿ ಸಿಎಂ ಯಡಿಯೂರಪ್ಪನವರು ನಾವು ಕೇಳಿಕೊಂಡ ತಕ್ಷಣ ಒಂದೂ ಮಾತನಾಡದೇ ಈ ಕಾರ್ಯಕ್ಕೆ ಒಪ್ಪಿಗೆ ನೀಡಿದರು.. ಹನ್ನೆರೆಡು ಕೋಟಿ ರೂಪಾಯಿ ವೆಚ್ಛದಲ್ಲಿ ಈ ಸ್ಮಾರಕ ನಿರ್ಮಾಣಗೊಂಡಿದೆ ಎಂದರು.. ಮಾತು ಮುಂದುವರೆಸಿದ ಸುಮಲತಾ ಅವರು ಅಂಬರೀಶ್ ಅವರದ್ದು ಎಂದೂ ಯಾರ ಮುಂದೆಯೂ ಕೈ ಚಾಚಿದ ಕೈ ಅಲ್ಲ.. ಅವರದ್ದು ಸದಾ ನೀಡೋ ಕೈ.. ಅವರದ್ದು ಕೊಟ್ಟ ಕೈ.. ಕೇಳೋ ಕೈ ಅಲ್ಲ.. ಎಂದು ಹೇಳಿಕೆ ಕೊಟ್ಟರು..

ಇನ್ನು ಇವರ ಮಾತಿನ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ಕನ್ನಡದ ಖ್ಯಾತ ನಟ ಚೇತನ್ ಅವರು ಸುಮಲತಾ ಅವರು ಹನ್ನೆರೆಡು ಕೋಟಿ ರೂಪಾಯಿ ಪಡೆದಿರುವ ಬಗ್ಗೆ ನೇರವಾಗಿ ಟಾಂಗ್ ನೀಡಿದ್ದಾರೆ.. ಹೌದು ಅಂಬರೀಶ್ ಅವರು ಯಾರ ಮುಂದೆಯೂ ಕೈ ಚಾಚಿಲ್ಲ ಎಂದು ಸುಮಲತಾ ಅವರೇ ಹೇಳಿದ್ದಾರೆ.. ಆದರೆ ಅವರ ಸ್ಮಾರಕಕ್ಕಾಗಿ ಸುಮಲತಾ ಅವರು ಸರ್ಕಾರದ ಮುಂದೆ ಕೈ ಚಾಚಿದ್ದಾರೆ.. ಅಂದಾಜು ಎರಡು ಎಕರೆ ಜಾಗವನ್ನು ಹಾಗೂ ಹನ್ನೆರೆಡು ಕೋಟಿ ರೂಪಾಯಿಯನ್ನು ಕೈ ಚಾಚಿ ಪಡೆದಿದ್ದಾರೆ.. ಇದು ಅನಾವಶ್ಯಕವೂ ಕೂಡ ಹೌದು..

ಅನಗತ್ಯವಾದ ಅಂಬರೀಶ್ ಅವರ ಸ್ಮಾರಕಕ್ಕೆ ಸುಮಲತಾ ಅವರು ಎರಡು ಎಕರೆ ಜಾಗ ಹಾಗೂ ಹನ್ನೆರೆಡು ಕೋಟಿ ರೂಪಾಯಿ ಹಣವನ್ನು ಕೈ ಚಾಚಿ ಪಡೆದಿರುವುದು ವಿಪರ್ಯಾಸವಾಗಿದೆ.. ತೆರಿಗೆದಾರರ ಹಣವನ್ನು ದುರುಪಯೋಗ ಪಡಿಸಿಕೊಳ್ಳುವ ಬದಲು ಸುಮಲತಾ ಅವರು ತಮ್ಮ ಸ್ವಂತ 23.5 ಕೋಟಿ ಹಣ ಖರ್ಚು ಮಾಡಿ ಸ್ಮಾರಕವನ್ನು ಮಾಡಲು ಸಾಧ್ಯವಾಗಲಿಲ್ಲವಾ ಎಂದಿದ್ದಾರೆ.. ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತನ್ನು ಒದಗಿಸುವುದು ನ್ಯಾಯವಾ ಎಂದು ಕೇಳಿದ್ದಾರೆ..

ಇನ್ನು ಚೇತನ್ ಅವರ ಮಾತಿಗೆ ಪರ ಹಾಗೂ ವಿರೋಧ ಎರಡು ರೀತಿಯಲ್ಲಿಯೂ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚೇತನ್ ಅವರು ಹೇಳಿದ್ದು ಸರಿ ಅಂಬರೀಶ್ ಅವರ ಸ್ಮಾರಕವನ್ನು ಅವರ ಹಣದಲ್ಲಿಯೇ ಕಟ್ಟಿಸಿಕೊಳ್ಳಬಹುದಿತ್ತು ಅಂಬರೀಶ್ ಅವರ ಸ್ಮಾರಕಕ್ಕೆ ಸರ್ಕಾರದ ಹಣ ಬಳಸಬಾರದಿತ್ತು ಎಂದರೆ ಮತ್ತೊಂದಷ್ಟು ಮಂದಿ ಚೇತನ್ ಅವರನ್ನು ಟೀಕಿಸಿದ್ದಾರೆ.. ಆದರೆ ಚೇತನ್ ಅವರು ಈ ಹಿಂದೆಯೂ ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರದಲ್ಲಿಯೂ ಇದೇ ಹೇಳಿಕೆಯನ್ನು ನೀಡಿದ್ದು ಜನ ಸಾಮಾನ್ಯರ ತೆರಿಗೆ ದುಡ್ಡಲ್ಲಿ ಸ್ಮಾರಕ ಕಟ್ಟುವ ಬದಲು ಕುಟುಂಬದವರು ಅವರ ಹಣದಲ್ಲಿ ಕಟ್ಟಬೇಕೆಂದಿದ್ದರು..