ಆ ಯಮ್ಮಾ ಏನು ಕೆಲ್ಸಾ ಮಾಡಲ್ಲ‌.. ಸುಮಲತಾರ ಬಗ್ಗೆ ಹಗುರವಾಗಿ ಮಾತನಾಡಿದ ಪ್ರತಾಪ್ ಸಿಂಹ.. ವೈರಲ್ ಆಯ್ತು ವೀಡಿಯೋ.. ಇಲ್ಲಿದೆ ನೋಡಿ..

0 views

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ನಿಖಿಲ್ ಅವರ ವಿರುದ್ಧ ಚುನಾವಣೆಗೆ ನಿಂತು ವಿಜಯ ಸಾಧಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಇದೀಗ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಟೀಕಿಸಿದ್ದು ಅವರು ಮಾತನಾಡಿರುವ ವೀಡಿಯೋ ವೈರಲ್ ಆಗಿದೆ..

ಹೌದು ಸಭೆಯೊಂದರಲ್ಲಿ ಕೂತು ಫೋನಿನಲ್ಲಿ ಅಧಿಕಾರಿಯೊಬ್ಬರ ಜೊತೆ ಮಾತನಾಡುವ ಸಂದರ್ಭದಲ್ಲಿ ಸುಮಲತಾ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.. ಹೌದು ಮಂಡ್ಯ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪಕ್ಷ ಅಭ್ಯರ್ಥಿಯನ್ನು ಹಾಕದೇ ಪಕ್ಷೇತರವಾಗಿ ನಿಂತ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿದ್ದರು.. ಅಷ್ಟೇ ಅಲ್ಲದೇ ರಾಜ್ಯದ ರ್ಯಾಲಿ ಸಮಯದಲ್ಲಿ ಪ್ರಧಾನಿ ಮೋದಿ ಅವರೂ ಸಹ ಸುಮಲತಾ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು..

ಆದರೆ ಇದೀಗ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸುಮಲತಾ ಅವರ ಕುರಿತು ಫೋನಿನಲ್ಲಿ ಅಸಮಾಧಾನ ವ್ಯಕ್ತ ಪಡಿಸಿರುವ ವೀಡಿಯೋ ವೈರಲ್ ಆಗಿದೆ.. ಮಂಡ್ಯದ ಯಲಿಯೂರು ಗ್ರಾಮದಲ್ಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಜನರು ಬೆಂಗಳೂರು ಮೈಸೂರು ರಸ್ತೆ ಅಗಲೀಕರಣದ ಕುರಿತು ಗ್ರಾಮಸ್ಥರು ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಮಾಡ್ತಾರೆ.. ಆ ಸಮಯದಲ್ಲಿ ಪ್ರತಾಪ್ ಸಿಂಹ ಅವರು ಅಧಿಕಾರಿಯೊಬ್ಬರ ಜೊತೆ ಮಾತನಾಡುವ ಸಂದರ್ಭದಲ್ಲಿ ಸುಮಲತಾ ಅವರ ವಿಚಾರವಾಗಿ ಮಾತನಾಡಿದ್ದಾರೆ.. ಇಲ್ಲಿದೆ ನೋಡಿ ಪ್ರತಾಪ್ ಸಿಂಹ ಅವರು ಆಡಿದ ಮಾತುಗಳು..

“ದೇವೇ ಗೌಡರ ಫ್ಯಾಮಿಲಿ ನ ಸೋಲಿಸ್ಬೇಕಿ ಅಂತ ಇವರನ್ನ ಗೆಲ್ಸಿಬಿಟ್ಟು ಸುಮ್ನೆ ಒಂದ್ ಕೆಲ್ಸಾನೂ ಮಾಡೋಕೆ ಬರಲ್ಲ.. ನಾನ್ ಮಾತಾಡ್ತೀನಿ ಬಿಡಿ.. ನೀವು ತಲೆ ಕೆಡ್ಸ್ಕೋಬೇಡಿ ಆಯ್ತಾ.. ಇದೊಂದು ಪ್ರಪೋಸಲ್.. ಮಂಡ್ಯದು ಯಾವುದೇ ಇದ್ರೂ ಕೊಟ್ಬಿಡಿ.. ಆ ಯಮ್ಮಾ ಏನ್ ಕೆಲ್ಸಾ ಮಾಡಲ್ಲಾ.. ನಾನ್ ಮಾಡ್ತೀನಿ..” ಎಂದು ಅಧಿಕಾರಿಯೊಬ್ಬರ ಜೊತೆ ಫೋನಿನಲ್ಲಿ ಪ್ರತಾಪ್ ಸಿಂಹ ಅವರು ಮಾತನಾಡಿದ್ದಾರೆ..

ಇದೀಗ ಪ್ರತಾಪ್ ಸಿಂಹ ಅವರ ಮಾತಿಗೆ ವಿರೋಧ ವ್ಯಕ್ತ ಪಡಿಸಿ ಸುಮಲತಾ ಅವರ ಬೆಂಬಲಿಗರು ಮಾತನಾಡಿದ್ದಾರೆ.. ಹೌದು ಬೇಲೂರು ಸೋಮಶೇಖರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು “ಸಂಸದ ಪ್ರತಾಪ್ ಸಿಂಹ ಅವರು ಸಾಂಸ್ಕೃತಿಕ ನಗರಿ ಮೈಸೂರಿನಿಂದ ಆಯ್ಕೆ ಆಗಿರುವಂತವರು.. ಅವರ ಭಾಷೆ ಮತ್ತೆ ಅವರ ವರ್ತನೆ ಮೈಸೂರು ಜನತೆಯ ಗೌರವ ಘನತೆಯನ್ನು ಹೆಚ್ಚಿಸುವಂತೆ ಇರಬೇಕು..

ನಿನ್ನೆ ಮಂಡ್ಯದ ಯಲಿಯೂರು ಗ್ರಾಮದಲ್ಲಿ ಒಬ್ಬ ಭ್ರಷ್ಟ ಅಧಿಕಾರಿಯನ್ನ ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ಮಂಡ್ಯ ಸಂಸದರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಇಡೀ ಮೈಸೂರು ಜನರು ತಲೆ ತಗ್ಗಿಸುವಂತಹ ಕೆಲಸವನ್ನ ಪ್ರತಾಪ್ ಸಿಂಹ ಅವರು ಮಾಡಿದ್ದಾರೆ..” ಎಂದಿದ್ದಾರೆ.. ಮೈಸೂರು ಸಂಸದರೇಕೆ ಮಂಡ್ಯ ಸಂಸದರ ಬಗ್ಗೆ ಮಾತನಾಡಬೇಕು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ..

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು ಪ್ರತಾಪ್ ಸಿಂಹ ಅವರಾಗಲಿ ಸುಮಲತಾ ಅವರಾಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ..