ಏನಮ್ಮಾ ಮಂಡ್ಯ ಗಲಾಟೆ ಎಂದು ಕೇಳಿದ ಸಿದ್ದರಾಮಯ್ಯನವರಿಗೆ ಸುಮಲತಾ ಕೊಟ್ಟ ಉತ್ತರ ನೋಡಿ..

0 views

ಕಳೆದ ಕೆಲ ದಿನಗಳಿಂದ ಮಂಡ್ಯ ರಾಜಕೀಯದಲ್ಲಿ ಒಂದು ರೀತಿ ಸಂಚಲನವೇ ಮೂಡಿದ್ದು ಮಂಡ್ಯ ಸಂಸದರಾದ ಸುಮಲತಾ ಅಂಬರೀಶ್ ಅವರು ಕೆ ಆರ್ ಎಸ್ ಡ್ಯಾಂ ವಿಚಾರವಾಗಿ‌ ಟೊಂಕ ಕಟ್ಟಿ ನಿಂತಿದ್ದಾರೆನ್ನಬಹುದು.. ಗಣಿಗಾರಿಕೆಯಿಂದಾಗಿ ಕೆ ಆರ್ ಎಸ್ ಡ್ಯಾಂಗೆ ತೊಂದರೆಯಾಗುತ್ತಿದೆ ಎಂದು ಈ ಹಿಂದೆಯೂ ಸುದ್ದಿಯಾಗಿತ್ತು.. ಆದರೆ ಅದರ ಬಗ್ಗೆ ಯಾರೂ ಸಹ ತುಟಿ ಬಿಚ್ಚುವ ಸಾಹಸಕ್ಕೆ ಕೈ ಹಾಕಿರಲಿಲ್ಲ.. ಆದರೆ ಸುಮಲತಾ ಅವರ ಧೈರ್ಯ ನಿಜಕ್ಕೂ ಮೆಚ್ಚಲೇಬೇಕು ಎನ್ನುತ್ತಿದ್ದಾರೆ ಕೆಲ ತಿಳಿದವರು. ಹೌದು ಏಕಾಏಕಿ ಡ್ಯಾಂ ವಿಚಾರ ಮಾತನಾಡಿ ಗಣಿಗಾರಿಕೆಯಿಂದಾಗಿ ಡ್ಯಾಂ ಬಿರುಕುಬಿಟ್ಟಿದೆ ಎಂದಿದ್ದ ಸುಮಲತಾ ಅವರಿಗೆ ಇತ್ತ ಕುಮಾರಸ್ವಾಮಿ ಅವರು ಬಿರುಕು ಬಿಟ್ಟಿದ್ದರೆ ಸುಮಲತಾ ಅವರನ್ನೇ ಅಡ್ಡ ಮಲಗಿಸಿಬಿಡಿ ನೀರು ಹೋಗದಂತೆ ಎಂಬ ಮಾತನಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು..

ಈ ಮಾತಿನಿಂದಾಗಿ ಇತ್ತ ಸುಮಲತಾ ಬೆಂಬಲಿಗರು ಹಾಗೂ ಜೆಡಿ ಎಸ್ ಕಾರ್ಯಕರ್ತರ ನಡುವೆ ಮಾತಿನ ವಾಕ್ಸಮರವೇ ನಡೆದಿತ್ತು.. ಇದು ರಾಜಕೀಯವಾಗಿ ಮಾತ್ರವಿರದೇ ವ್ಯಯಕ್ತಿಕ ವಿಚಾರಗಳನ್ನು ಸಹ ಎಳೆ ತಂದು ಅಂಬರೀಶ್ ಅವರ ವಿಚಾರಗಳು ಅವರು ಇಲ್ಲವಾದ ಸಮಯದಲ್ಲಿನ ವಿಚಾರಗಳೆಲ್ಲವೂ ಹೊರ ಬಂದವು.. ನಾನು ಮುಖ್ಯಮಂತ್ರಿ ಆಗಿರದಿದ್ದರೇ ಅಂಬರೀಶ್‌ ಅವರ ಅಂತಿಮ ಸಂಸ್ಕಾರ ಹೇಗೆ ನಡಿತಿತ್ತು ಎಂದರು.. ಜೊತೆಗೆ ವಿಷ್ಣುವರ್ಧನ್‌ ಹಾಆಗೂ ರಾಜ್‌ ಕುಮಾರ್‌ ಅವರು ಇಲ್ಲವಾದ ವಿಚಾರಗಳನ್ನೆಲ್ಲಾ ಮಾತನಾಡಿ ನಾನು ಮುಖ್ಯಮಂತ್ರಿ ಆಗಿರದಿದ್ದರೆ ಏನಾಗಿರುತ್ತಿತ್ತು ಎಂದು ಅವರು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಾಆತುಗಳು ಕೇಳಿ ಬಂದಿದ್ದವು.

ಇನ್ನು ಇದೆಲ್ಲದರ ನಡುವೆ ಇತ್ತ ಸುಮಲತಾ ಅವರ ಪರವಾಗಿ ರಾಕ್ಲೈನ್ ವೆಂಕಟೇಶ್ ಅವರೂ ಸಹ ಧ್ವನಿ ಎತ್ತಿದ್ದು ಕುಮಾರಸ್ವಾಮಿ ಅವರ ಮಾತುಗಳು ಸಮಂಜಸವಲ್ಲವೆಂದಿದ್ದರು.. ಅಂಬರೀಶ್ ಅವರ ವಿಚಾರದಲ್ಲಿ ಬೀದಿಲಿ ಹೋಗೋ ಯಾರೇ ಮುಖ್ಯಮಂತ್ರಿ ಆಗಿದ್ದರೂ ಸಹ ಅದೇ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿದ್ದರು.. ಇದು ಇತ್ತ ಜೆಡಿಎಸ್ ಪಕ್ಷದ ಕಾರ್ಯಕರ್ತರ ಕೋಪಕ್ಕೆ ಕಾರಣವಾಗಿ ರಾಕ್ಲೈನ್ ವೆಂಕಟೇಶ್ ಅವರ ಮನೆಮುಂದೆ ಪ್ರತಿಭಟನೆಯನ್ನೂ ಸಹ‌ ಮಾಡಲಾಯಿತು.. ಅತ್ತ ಮನೆಗೆ ಯಾವುದೋ ಕೆಟ್ಟ ಕಣ್ಣು ಬಿದ್ದಿರಬಹುದೆಂದು ರಾಕ್ಲೈನ್ ವೆಂಕಟೇಶ್ ಅವರು ಮನೆಗೆ ದೃಷ್ಟಿ ತೆಗೆಸಿ ಬೂದುಕುಂಬಳಕಾಯಿಯನ್ನು ಹೊಡೆಸಿ ದೃಷ್ಟಿ ಪರಿಹಾರ ಸಹ ಮಾಡಿಸಿದ್ದರು.. ಆದರೆ ಈ ವಿಚಾರವಾಆಗಿ ನಾನು ಕ್ಷಮೆ ಕೇಳೋದಿಲ್ಲ. ನಾನು ಏನು ತಪ್ಪು ಮಾಆಡಿದ್ದೇನೆ ಎಂದು ತೋರಿಸಿ ಅದು ತಪ್ಪಾಗಿದ್ದರೆ ಕ್ಷಮೆ ಕೇಳುವೆನೆಂದು ರಾಕ್ಲೈನ್‌ ವೆಂಕಟೇಶ್‌ ಅವರು ನೇರವಾಗಿ ತಿಳಿಸಿದ್ದರು..

ಜೊತೆಗೆ ಚುನಾವನಾ ಸಮಯದಲ್ಲಿ ನನ್ನ ಹಾಗೂ ಸುಮಲತಾ ಅವರ ಬಗ್ಗೆ ಬೇರೆ ರೀತಿಯೇ ಬಿಂಬಿಸಲು ಹೊರಟಿದ್ದರು.. ಅದನ್ನು ಖುದ್ದು ಅವರ ವಾಆಹಿನಿಯಲ್ಲಿ ಕೆಲಸ ಮಾಡುವ ಅಂಬರೀಶ್‌ ಅವರ ಅಭಿಮಾನಿಯೇ ನನಗೆ ತಿಳಿಸಿದ್ದರು. ನಂತರಸಧ್ಯಕ್ಕೆ ಬೇಡ ಎಂದು ಸುಮ್ಮನಾಗಿದ್ದರು ಎಂದರು.. ಇತ್ತ ಕುಮಾರಸ್ವಾಮಿ ಅವರ ಪರವಾಗಿ ಮಂಡ್ಯ ಶಾಸಕರು ಮಾತನಾಡಿ ರಾಕ್ಲೈನ್‌ ಯಾರು ಮಂಡ್ಯ ರಾಜಕಾರಣಕ್ಕೆ ತಲೆ ಹಾಕಲು ಎಂದು ಪ್ರಶ್ನೆ ಮಾಡಿದ್ದರು.. ಇದೇ ರೀತಿ ಪ್ರತಿದಿನವೂ ಜಟಾಪಟಿ ಮುಂದುವರೆಯುತ್ತಲೇ ಬಂದಿದೆ. ಇನ್ನು ಇದೀಗ ಈ ವಿಚಾರವಾಗಿ ಸಿದ್ದರಾಮಯ್ಯನವರು ಸುಮಲತಾ ಅವರ ಬಳಿ ಪ್ರಶ್ನೆ ಮಾಡಿದ್ದಾರೆ..‌ ಹೌದು ಇಂದು ರಾಜ್ಯದ ನೂತನ ರಾಜ್ಯಪಾಲರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ನವರು ಹಾಗೂ ಸುಮಲತಾ ಅವರು ಪರಸ್ಪರ ಭೇಟಿಯಾಗಿದ್ದಾರೆ..

ಹೌದು ಇಬ್ಬರೂ ಮುಖಾಮುಖಿಯಾದ ಸಂದರ್ಭದಲ್ಲಿ ಅನೌಪಚಾರಿಕವಾಗಿ ಮಾತನಾಡಿದ ಸುಮಲತಾ ಹಾಗೂ ಸಿದ್ದರಾಮಯ್ಯ ಅವರು ಕೆ ಆರ್ ಎಸ್ ಡ್ಯಾಂ ಬಗ್ಗೆ ಮಾತನಾಡಿದ್ದಾರೆ.. ಹೌದು ಸುಮಲತಾರನ್ನು ಈ ಬಗ್ಗೆ ಪ್ರಶ್ನೆ ಮಾಡಿದ ಸಿದ್ದರಾಮಯ್ಯನವರು ಏನಮ್ಮಾ ಮಂಡ್ಯ ಗಲಾಟೆ ಎಂದಿದ್ದಾರೆ.. ಆ ಸಮಯದಲ್ಲಿ ಉತ್ತರ ನೀಡಿದ ಸುಮಲತಾ ಅವರು ಏನಿಲ್ಲಾ ಸರ್.. ಹೀಗೆ ನಡೀತಾ ಇದೆ ಅಷ್ಟೇ ಎಂದಿದ್ದಾರೆ.. ಜೊತೆಗೆ ಸಿದ್ದರಾಮಯ್ಯ ಅವರನ್ನು ಮಂಡ್ಯಗೂ ಆಹ್ವಾನಿಸಿದ್ದಾರೆ.. ಹೌದು ನೀವು ಒಮ್ಮೆ ಮಂಡ್ಯಗೆ ಬಂದು ನೋಡಿ ಸರ್.. ನಿಮಗೆ ಎಲ್ಲಾ ವಾಸ್ತವ ಅರಿವಾಗಲಿದೆ ಎಂದಿದ್ದಾರೆ.. ಇನ್ನು ಇತ್ತ ಸುಮಲತಾ ಅವರ ಆಹ್ವಾನವನ್ನು ಸ್ವೀಕರಿಸಿದ ಸಿದ್ದರಾಮಯ್ಯನವರು ಸರಿ ಆಕಡೆ ಬಂದಾಗ ಬರ್ತೀನಮ್ಮ ಎಂದಿದ್ದಾರೆ.. ಇನ್ನು ಇದೇ ಸಮಯದಲ್ಲಿ ಅಲ್ಲಿಯೇ ಇದ್ದ ಕೆ ಎಸ್ ಈಶ್ವರಪ್ಪನವರು ಇಬ್ಬರ ನಡುವೆ ಹಾಸ್ಯ ಚಟಾಕಿ ಹಾರಿಸಿ ನಗೆಗಡಲ್ಲಿ ತೇಲಿಸಿದ್ದಾರೆ.‌ ಒಟ್ಟಿನಲ್ಲಿ ಎಲ್ಲಾ ರಾಜಕೀಯ ನಾಯಕರ ಬಾಯಲ್ಲಿಯೂ ಮಂಡ್ಯದ ಸುದ್ದಿಯೆನ್ನಬಹುದು‌‌‌‌..