ಸುಮಲತಾ ಅಂಬರೀಶ್ ಅವರಿಗೆ ಸೀರೆ ಕೊರಿಯರ್.. ಸೀರೆ ಕಳುಹಿಸಲು ಕಾರಣವೇನು ಗೊತ್ತಾ.. ಅಷ್ಟಕ್ಕೂ ಆ ವ್ಯಕ್ತಿ ನಿಜಕ್ಕೂ ಯಾರು ಗೊತ್ತಾ..

0 views

ಸಾಮಾನ್ಯವಾಗಿ ರಾಜಕಾರಣಿಗಳಿಗೆ ಈ ರೀತಿ ಕೊರಿಯರ್ ಮೂಲಕ ಅಥವಾ ಹಣ ಕಳುಹಿಸುವುದು ಅಥವಾ ಮತ್ತಿನ್ನೇನಾದರು ವಸ್ತುಗಳನ್ನು ಕಳುಹಿಸ್ಜ್ ಅವರ ಬಗ್ಗೆ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದನ್ನು ನಾವು ಈ ಹಿಂದೆ ಸಾಕಷ್ಟು ಬಾರಿ ನೋಡಿದ್ದೇವೆ.. ಆದರೆ ಇಲ್ಲಿ ಮಾತ್ರ ಮಂಡ್ಯದ ವ್ಯಕ್ತಿಯೊಬ್ಬರು ಮಂಡ್ಯ ಸಂಸದೆ ಸುಮಲತಾ ಅವರಿಗೆ ಸೀರೆಯನ್ನು ಕೊರಿಯರ್ ಮಾಡಿದ್ದು ಇದಕ್ಕೆ ಕಾರಣ ಮಾತ್ರ ಆಶ್ಚರ್ಯವನ್ನುಂಟು ಮಾಡಿದೆ.. ಹೌದು ಮಂಡ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಹೈ ವೋಲ್ಟೇಜ್ ಕಣವಾಗಿದ್ದು ಮಂಡ್ಯ ಲೋಕಸಭಾ ಚುನಾವಣಾ ಕಣ..

ಹೌದು ಆ ಸಮಯದಲ್ಲಿ ಮುಖ್ಯಮಂತ್ರಿಗಳಾಗಿದ್ದ ಕುನಾರಸ್ವಾಮಿ ಅವರ ಮಗ ನಿಖಿಲ್ ಅವರು ಒಂದು ಕಡೆಯಾದರೆ ಇನ್ನೊಂದು ಕಡೆ ಸುಮಲತಾ ಅವರು ಪಕ್ಷೇತರವಾಗಿಯೇ ನಿಂತು ನಿಖಿಲ್ ಅವರ ವಿರುದ್ಧ ಜಯಗಳಿಸಿದ್ದು ರಾಜ್ಯ ಮಾತ್ರವಲ್ಲದೇ ದೇಶದ ರಾಜಕಾರಣದಲ್ಲಿಯೇ ದೊಡ್ಡ ಸದ್ದನ್ನೂ ಸಹ ಮಾಡಿತ್ತು.. ಒಂದು ಕಡೆ ಅಂಬರೀಶ್ ಅವರನ್ನು ಕಳೆದು ಕೊಂಡು ತಿಂಗಳುಗಳಷ್ಟೇ ಕಳೆದಿದ್ದವು.. ಇತ್ತ ರಾಜಕೀಯಕ್ಕೆ ಬರುವ ನಿರ್ಧಾರ ಮಾಡಿದ್ದ ಸುಮಲತಾ ಅವರಿಗೆ ಸಾಕಷ್ಟು ಅಡೆತಡೆಗಳು ಬಂದವು.. ಅದರಲ್ಲೂ ಚುನಾವಣಾ ಸಮಯದಲ್ಲಿ‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಸ್ವಂತ ಮಕ್ಕಳಂತೆ ನಿಂತು ಸುಮಲತಾ ಅವರ ಪರವಾಗಿ ತಿಂಗಳ ಕಾಲ ಮಂಡ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿ ಸುಮಲತಾ ಅವರ ಗೆಲುವಿಗೆ ಪ್ರಮುಖ ಕಾರಣರಾಗಿದ್ದು ಸುಳ್ಳಲ್ಲ..

ಇನ್ನು ಇತ್ತ ಗೆದ್ದ ನಂತರ ಸಾಕಷ್ಟು ವಿಚಾರಗಳಿಗೆ ಸದ್ದು ಮಾಡಿದ ಸುಮಲತಾ ಅವರು ಕೆ ಆರ್ ಎಸ್ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದು ಕೇಂದ್ರ ಸಚಿವರಲ್ಲಿಯೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದುಂಟು.. ಇನ್ನು ಚುನಾವಣೆ ಸಮಯದಲ್ಲಿ ಬೆಂಬಲ ನೀಡಿದ್ದ ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರೂ ಸಹ ಇದೀಗ ಸುಮಲತಾ ಅವರ ಬಗ್ಗೆ ಅಸಮಾಧಾನದಿಂದಿರುವುದು ಸಹ ಹೊಸ ವಿಚಾರವೇನೂ ಅಲ್ಲ.. ಆದರೆ ಅದ್ಯಾವುದಕ್ಕೂ ಲಕ್ಷ್ಯ ನೀಡದೇ ಬೆಂಗಳೂರು ಮೈಸೂರ್ಜ್ ಹೆದ್ದಾರಿಯಲ್ಲಿ ಸರಿಯಾದ ಕೆಲಸ ನಡೆಯುತ್ತಿಲ್ಲ ಎಂದೂ ಸಹ ಈ ಬಗ್ಗೆ ಮಾತನಾಡಿದ್ದು ಗಮನ ಸೆಳೆದಿದ್ದರು..

ಸದ್ಯ ಸಿ‌ನಿಮಾದಿಂದ ಕೊಂಚ ದೂರವೇ ಇರುವ ಸುಮಲತಾ ಅಂಬರೀಶ್ ಅವರು ಮ್ ರಾಜಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆನ್ನಬಹುದು‌‌.. ಇನ್ನು ಮಂಡ್ಯದಲ್ಲಿ ಮನೆ ಸಹ ನಿರ್ಮಾಣ ಮಾಡುತ್ತಿರುವ ಸುಮಲತಾ ಅಂಬರೀಶ್ ಅವರು ಮೊನ್ನೆಮೊನ್ನೆಯಷ್ಟೇ ಗುದ್ದಲಿ ಪೂಜೆ ಸಹ ನೆರವೇರಿಸಿದ್ದರು.. ಇನ್ನು ಮತ್ತೊಂದು ಕಡೆ ಮಗ ಅಭಿಷೇಕ್ ಅಂಬರೀಶ್ ಅವರೂ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದು ಮುಂಬರುವ ವಿಧಾನಸಭಾ ಚುಬಾವಣೆಯಲ್ಲಿ ಮಂಡ್ಯದಲ್ಲಿಯೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.. ಇನ್ನು ಈ ನಡುವೆ ಮಂಡ್ಯದ ಜನ ಸುಮಲತಾ ಅಂಬರೀಶ್ ಅವರು ಸೀರೆಯನ್ನು ಕೊರಿಯರ್ ಮಾಡಿದ್ದಾರೆ..

ಹೌದು ಸಾಮಾನ್ಯವಾಗಿ ರಾಜಕಾರಣಿಗಳನ್ನು ಟೀಕಿಸುವ ಸಲುವಾಗಿ ಕಳುಹಿಸಿಕೊಡುವ ಉಡುಗೊರೆಯಂತಲ್ಲ ಸುಮಲತಾ ಅವರಿಗೆ ಕೊಟ್ಟ ಉಡುಗೊರೆ.ಮ್ ಹೌದು ಸುಮಲತಾ ಅಂಬರೀಶ್ ಅಬರಿಗೆ ಗೌರಿ ಹಬ್ಬದ ಪ್ರಯುಕ್ತ ಮಂಡ್ಯದ ಜನ ಪ್ರೀತಿಯಿಂದ ಸೀರೆ ಬಳೆ ಹಾಗೂ ಇನ್ನಿತರ ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ.. ಹೌದು ಮಂಡ್ಯ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾಗಿರುವ ಶಂಕರ್ ಬಾಬು ಅವರು ಸೀರೆಯ ಜೊತೆಗೆ ಬಾಗಿನ ವಸ್ತುಗಳನ್ನು ಬೆಂಗಳೂರಿನ ಸುಮಲತಾ ಅವರ ನಿವಾಸಕ್ಕೆ ಕೊರಿಯರ್ ಮಾಡಿದ್ದಾರೆ..