ಕೋಲಾರದಲ್ಲಿ ಇಬ್ಬರನ್ನು ಮದುವೆಯಾದ ಘಟನೆಗೆ ರೋಚಕ ತಿರುವು.. ಇಬ್ಬರನ್ನು ಮದುವೆಯಾಗಲು ನಿಜವಾದ ಕಾರಣ ಬೇರೆಯೇ ಇದೆ.. ನಿಜಕ್ಕೂ ಗ್ರೇಟ್..

0 views

ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಕೋಲಾರದ ಯುವಕನೊರ್ವ ಇಬ್ಬರು ಹೆಣ್ಣು ಮಕ್ಕಳನ್ನು ಅದರಲ್ಲಿಯೂ ಅಕ್ಕತಂಗಿಯರನ್ನು ಒಂದೇ ಮುಹೂರ್ತದಲ್ಲಿ ತಾಳಿ ಕಟ್ಟಿ ಮದುವೆಯಾದ ಘಟನೆ ನಡೆದಿತ್ತು.. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಈ ಫೋಟೋವನ್ನು ಹೇಳಲಸಾಧ್ಯವಾಗದಷ್ಟು ಟ್ರೋಲ್ ಮಾಡಲಾಗಿತ್ತು.. ಆದರೆ ಆತ ಇಬ್ಬರನ್ನು ಮದುವೆಯಾಗಲು ನಿಜವಾದ ಕಾರಣ ಬೇರೆಯೇ ಇದೆ..

ಹೌದು ಈ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ ನಮ್ಮ ರಾಜ್ಯದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ.. ಹೌದು ಇದೇ ಗ್ರಾಮದಲ್ಲಿ ಮದುಮಗ ಇಬ್ಬರನ್ನು ಮದುವೆಯಾಗಿರುವ ಘಟನೆ ನಡೆದಿದೆ.. ಆತನ ಹೆಸರು ಉಮಾಪತಿ.. ಮುಳುಬಾಗಿಲು ತಾಲೂಕಿನ ಚಿನ್ನಬಾಲೇಪಲ್ಲಿ ಗ್ರಾಮದ ನಿವಾಸಿ.. ಇವರು ವೇಗಮಡುಗು ಗ್ರಾಮದ ಸುಪ್ರಿಯಾ ಹಾಗೂ ಲಲಿತಾ ಎಂಬ ಅಕ್ಕ ತಂಗಿಯರನ್ನು ಮೇ ಏಳನೇ ತಾರೀಕಿನಂದು ಮದುವೆಯಾದರು.. ಆದರೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿತ್ತು.. ಆದರೆ ಈ ರೀತಿಯ ಮದುವೆಗೆ ನಿಜವಾದ ಕಾರಣ ಕೇಳಿದರೆ ಬಹುಶಃ ಯಾರೂ ಸಹ ಟ್ರೋಲ್ ಮಾಡುವುದಿಲ್ಲವೆನಿಸುತ್ತದೆ..

ಹೌದು ಉಮಾಪತಿ ಅವರು ಮದುವೆಯಾಗಿರುವ ಅಕ್ಕ ತಂಗಿ ಸುಪ್ರಿಯಾ ಹಾಗೂ ಲಲಿತಾ ಅವರಲ್ಲಿ ಅಕ್ಕನಾದ ಸುಪ್ರಿಯಾಗೆ ಮಾತು ಬರುವುದಿಲ್ಲ.. ಅಕ್ಕನನು ಯಾರೂ ಸಹ ಮದುವೆಯಾಗುತ್ತಿರಲಿಲ್ಲ.. ಅಕ್ಕನ ಮದುವೆಯಾಗದೆ ತಂಗಿಯ ಮದುವೆಯಾಗುವುದಿಲ್ಲ.. ಇಂತಹ ಸಮಯದಲ್ಲಿ ತಂಗಿ ಲಲಿತಾರನ್ನು ಮದುವೆಯಾಗುವ ಸಲುವಾಗಿ ಉಮಾಪತಿ ಅವರು ಹೆಣ್ಣು ನೋಡಲು ಬಂದಿರುತ್ತಾರೆ.. ಆದರೆ ಆ ಸಮಯದಲ್ಲಿ ಲಲಿತಾ ತನ್ನ ಜೊತೆಗೆ ತನ್ನ ಅಕ್ಕನನ್ನೂ ಸಹ ಮದುವೆಯಾಗುವಂತೆ ಕೇಳಿಕೊಳ್ಳುತ್ತಾಳೆ.. ಆ ಹೆಣ್ಣು ಮಕ್ಕಳ ಅಪ್ಪನೂ ಸಹ ಈ ನಿರ್ಧಾರಕ್ಕೆ ಒಪ್ಪಿ ಉಮಾಪತಿಗೆ ಷರತ್ತು ಹಾಕುತ್ತಾರೆ.. ಮೊದಲ ಮಗಳನ್ನು‌ ಮದುವೆಯಾದರೆ ಮಾತ್ರ ಎರಡನೇ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ತಿಳಿಸುತ್ತಾರೆ..

ಈ ಷರತ್ತಿಗೆ ಒಪ್ಪಿದ ಉಮಾಪತಿ ಅಕ್ಕ ಸುಪ್ರಿಯಾ ಹಾಗೂ ತಂಗಿ ಲಲಿತಾ.. ಇಬ್ಬರನ್ನೂ ಸಹ ಮದುವೆಯಾಗಲು ಒಪ್ಪುತ್ತಾರೆ.. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿಯೂ ಸಹ ಇಬ್ಬರ ಹೆಸರಿನ ಜೊತೆಗೆ ಉಮಾಪತಿ ಅವರ ಹೆಸರನ್ನು ಹಾಕಿ ಸಂಬಂಧಿಕರನ್ನು ಆಮಂತ್ರಿಸಲಾಗಿತ್ತು.. ಆದರೆ ಇದರ ಹಿಂದೆ ಇನ್ನೊಂದು ವಿಚಾರವೂ ಇದೆ.. ಹೌದು ಈ ರೀತಿಯ ಮದುವೆ ಈ ಕುಟುಂಬದಲ್ಲಿ ಹೊಸದೇನೂ ಅಲ್ಲ.. ಲಲಿತಾ ಹಾಗೂ ಸುಪ್ರಿಯಾ ಅವರ ತಂದೆಯೂ ಸಹ ಇದೇ ರೀತಿ ಅಕ್ಕ ತಂಗಿ ಇಬ್ಬರನ್ನೂ‌ ಒಂದೇ ದಿನ ಮದುವೆಯಾಗಿದ್ದರು.. ಅದರಲ್ಲಿಯೂ ಅಕ್ಕನಿಗೆ ಮಾತು ಬರುತ್ತಿರಲಿಲ್ಲ..

ಅವರ ಮಗಳೇ ಇದೀಗ ಉಮಾಪತಿಯವರನ್ನು ಮದುವೆಯಾದ ಮಾತು ಬಾರದ ಸುಪ್ರಿಯಾ ಎನ್ನಲಾಗಿದೆ.. ಬಹುಶಃ ಅನುವಂಶೀಯವಾಗಿ ಮಾತು ಬಾರದೇ ಇರುವ ತೊಂದರೆ ಕಾಣಿಸಿಕೊಳ್ಳುತ್ತಿರಬಹುದು.. ಅದೇನಾದರೂ ಆಗಲಿ ಅಕ್ಕನಿಗಾಗಿ ಈ ತ್ಯಾಗಕ್ಕೆ ಸಿದ್ಧಳಾದ ಲಲಿತಾಳ ಮನಸ್ದು ನಿಜಕ್ಕೂ ದೊಡ್ಡದು.. ಆದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಚಾರ ತಿಳಿಯದೇ ಈಗಾಗಕೇ ಸಿಕ್ಕಾಪಟ್ಟೆ ಟ್ರೋಲ್ ಆಗಿ ಹೋಗಿದೆ.. ಆದರೀಗ ವಿಚಾರ ತಿಳಿದಿದೆ.. ದಯವಿಟ್ಟು ಆ ಫೋಟೋಗಳನ್ನು ಇಟ್ಟುಕೊಂಡು ಕಾಲೆಳೆಯುವುದನ್ನು ನಿಲ್ಲಿಸೋಣ.. ಇದರಿಂದ ಅವರ ಸಂಸಾರದಲ್ಲಿ ಯಾವುದೇ ತೊಂದರೆ ಆಗುವುದು ಬೇಡ ಎನ್ನುವುದಷ್ಟೇ ನಮ್ಮ ಕಾಳಜಿ‌..