ಹಾರ ಹಾಕುತ್ತಿದ್ದಂತೆ ಜೀವ ಕಳೆದುಕೊಂಡು ವೇದಿಕೆ ಮೇಲೆ ಬಿದ್ದ ಮದುವೆ ಹೆಣ್ಣು.. ಜೀವ ಇಲ್ಲವಾದರೂ ಸಹ ಅದೇ ವೇದಿಕೆಯಲ್ಲಿ ಮದುವೆ ಗಂಡು ಮಾಡಿರುವ ನೀಚ ಕೆಲಸ ನೋಡಿ..

0 views

ಮದುವೆ ಅನ್ನೋದು ಹೆಣ್ಣಾಗಲಿ ಗಂಡಾಗಲಿ ಮುಂದಿನ ತನ್ನ ಸಂಪೂರ್ಣ ಜೀವನವನ್ನು ಪರಸ್ಪರರಿಗಾಗಿ ಮೀಸಲಿಟ್ಟು ಅವರಿಗಾಗಿ ಬದುಕುವ ನಿರ್ಣಯ ಮಾಡುತ್ತಾರೆ.. ಮುಂದೆ ತಮ್ಮಿಬ್ಬರ ಸಂತಾನದ ಮೂಲಕ ಭವಿಷ್ಯ ರೂಪಿಸಿಕೊಂಡು ಜೀವನಕ್ಕೊಂದು ಅರ್ಥ ನೀಡುತ್ತಾರೆ.. ಆದರೆ ಕೆಲವೊಬ್ಬ ಕೀಳು ಮನಸ್ಸಿನ ವ್ಯಕ್ತಿಗಳು ಮಾತ್ರ ತಮ್ಮತೀ ಟೆಗಾಗಿ ಮಾತ್ರವೇ ಹೆಣ್ಣನ್ನು ಮದುವೆಯಾಗಿ ಸಂಸಾರ ನಡೆಸುತ್ತಾರೆ.. ಆದರೆ ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದ ಹೆಣ್ಣಿನ ಜೀವನ ಆ ಭಗವಂತನಿಗೇ ಪ್ರೀತಿ ಎನ್ನಬೇಕಷ್ಟೇ.. ಆದರೆ ಇಲ್ಲೊಂದು ಮದುವೆ ಮನೆಯಲ್ಲಿಯೇ ಮನಕಲಕುವ ಘಟನೆ ನಡೆದಿದ್ದು ಮದುವೆ ಹುಡುಗ ಹಾರ ಹಾಕುತ್ತಿದ್ದಂತೆ ಮದುವೆ ಹೆಣ್ಣು ಜೀವ ಕಳೆದುಕೊಂಡಿದ್ದಾಳೆ.. ಆದರೆ ತಾನು ಮದುವೆಯಾಗಬೇಕಿದ್ದ ಹುಡುಗಿ ಕೊನೆಯುಸಿರೆಳೆದಿದ್ದರೂ ಸಹ ಒಂದು ಸ್ವಲ್ಪವೂ ದುಃಖವಿಲ್ಲದ ಆ ಹುಡುಗ ಮಾಡಿದ ಕೆಲಸ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ..

ಅದರಲ್ಲೂ ಹೆಣ್ಣಿನ ಮನೆಯವರಾದರೂ ಹೇಗೆ ಇಂತಹ ಕೆಲಸ ಮಾಡಿದರೋ ಆ ಭಗವಂತನೇ ಬಲ್ಲ.. ಹೌದು ಆತನ ಹೆಸರು ಮಂಜೇಶ.. ಉತ್ತರ ಪ್ರದೇಶದ ಸಮಸ್ಪುರ ಗ್ರಾಮದವನು.. ಆಕೆಯ ಹೆಸರು ಸುರಭಿ.. ಇವರಿಬ್ಬರಿಗೂ ಮನೆಯವರು ನೋಡಿ ಮದುವೆ ನಿಶ್ಚಯ ಮಾಡಿದ್ದರು.. ಇದೇ ಮೇ 25 ರಂದು ಮದುವೆ ದಿನಾಂಕ ನಿಗಧಿಯಾಗಿತ್ತು.. ಅಂದುಕೊಂಡಂತೆ ಮದುವೆ ಸಮಾರಂಭ ನೆರವೇರಿತ್ತು.. ಮದುವೆ ಹುಡುಗಿಯ ಮನೆಯಲ್ಲಿಯೇ ಜರುಗುತಿತ್ತು.. ಮದುವೆ ಮನೆಗೆ ವರನ ದಿಬ್ಬಣವೂ ಆಗಮಿಸಿತ್ತು.. ಮಂಜೇಶ ಹಾಗೂ ಸುರಭಿ ಇಬ್ಬರೂ ಸಹ ವೇದಿಕೆ ಮೇಲೆ ಆಗಮಿಸಿ ಇಬ್ಬರೂ ಸಹ ಹಾರ ಬದಲಿಸಿಕೊಂಡರು.. ಇನ್ನು ಕೆಲವೇ ಕ್ಷಣದಲ್ಲಿ ಸಪ್ತಪದಿ ತುಳಿದು ಹುಡುಗಿಯನ್ನು ಮನೆಗೆ ಕರೆದುಕೊಂಡು ಹೋಗಬೇಕಾಗಿತ್ತು..

ಆದರೆ ವಿಧಿಯ ನಿರ್ಣಯವೇ ಬೇರೆ ಇತ್ತು.. ಹಾರ ಹಾಕುತ್ತಿದ್ದಂತೆ ಸುರಭಿಹೃದ ಯಾಘಾತದಿಂದ ಕೊನೆಯುಸಿರೆಳೆದು ಬಿಟ್ಟಳು.. ಮದುವೆಯಾಗಿ ಸುಖ ಸಂಸಾರ ನಡೆಸಿಕೊಂಡು ಇರಬೇಕಾದ ಹೆಣ್ಣು ಜೀವ ಕಳೆದುಕೊಂಡು ಅದೇ ವೇದಿಕೆಯಲ್ಲಿ ಬಿದ್ದಳು.. ಆದರೆ ತಾನು ಮದುವೆಯಾಗಬೇಕಿದ್ದ ಹುಡುಗಿ ಕೊನೆಯುಸಿರೆಳೆದಿದ್ದಾಳೆ ಎಂಬ ಒಂದು ಸ್ವಲ್ಪವೂ ನೋವಿಲ್ಲದ ಮಂಜೇಶ ಅದೇ ವೇದಿಕೆಯಲ್ಲಿ ಮಾಡಿದ ಕೆಲಸ ನಿಜಕ್ಕೂ ಮನಕಲಕುವಂತಿದೆ.. ಹೌದು ಸುರಭಿ ಕುಸಿದು ಬಿದ್ದ ನಂತರ ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.. ಆದರೆ ಅದಾಗಲೇ ಕಾಲ ಮೀರಿ ಹೋಗಿತ್ತು.. ಸುರಭಿ ಕೊನೆಯುಸಿರೆಳೆದಾಗಿತ್ತು.. ನಂತರ ಆಕೆಯನ್ನು ಮತ್ತೆ ಅದೇ ಮದುವೆ ನಡೆಯುತ್ತಿದ್ದ ಮನೆಗೆ ಕರೆದುಕೊಂಡು ಹೋಗಲಾಗಿದೆ..

ನಂತರ ನಡೆದ ಘಟನೆ ನಿಜಕ್ಕೂ ಇವರಿಗೆಲ್ಲಾ ಮಾನವೀಯತೆ ಅನ್ನೋದು ಇದೆಯಾ ಎಂಬ ಪ್ರಶ್ನೆಯನ್ನು ಕಾಡುವಂತೆ ಮಾಡಿದೆ.. ಹೌದು ಆ ನೀಚ ಕೆಲಸದಲ್ಲಿ ವಧುವಿನ ಮನೆಯವರೂ ಸಹ ಭಾಗಿಯಾಗಿರುವುದು ದುರ್ಧೈವವೇ ಸರಿ.. ಹೌದು ಅಕ್ಕ ಜೀವ ಕಳೆದುಕೊಂಡು ಬಿದ್ದ ಅದೇ ವೇದಿಕೆಯಲ್ಲಿ ಸುರಭಿಯ ತಂಗಿಯ ಜೊತೆ ಮಂಜೇಶ ಮದುವೆಯಾಗಿದ್ದಾನೆ.. ಹೌದು ಅಕ್ಕ ಜೀವ ಕಳೆದುಕೊಂಡ ನಂತರ ಆಸ್ಪತ್ರೆಯಿಂದ ಕರೆತಂದು ಆಕೆಯನ್ನು ಅದೇ ಮನೆಯ ಒಂದು ಕೋಣೆಯಲ್ಲಿ ಮಲಗಿಸಿ ಇತ್ತ ಮಂಜೇಶನ ಜೊತೆ ಸುರಭಿಯ ತಂಗಿಯ ಮದುವೆಯನ್ನು ಮಾಡಲಾಗಿದೆ.. ಮದುವೆ ಮಾಡಿದ ಬಳಿಕ ಮಂಜೇಶ ಸುರಭಿಯ ತಂಗಿಯ ಜೊತೆ ತನ್ನ ಮನೆಗೆ ತೆರಳಿದ್ದು ತನ್ನ ಸಂಸಾರ ನಡೆಸಿದ್ದಾನೆ.. ಅತ್ತ ಚಿಕ್ಕ ಮಗಳನ್ನು ಮಂಜೇಶನ ಜೊತೆ ಕಳುಹಿಸಿದ ನಂತರ ಇತ್ತ ನತದೃಷ್ಟೆ ಸುರಭಿಯ ಅಂತ್ಯ ಸಂಸ್ಕಾರವನ್ನು ಮಾಡಲಾಗಿದೆ..

ಇವರುಗಳನ್ನು ಹೊಗಳಲು ನಿಜಕ್ಕೂ ಬಾಯಿಗೆ ಪದಗಳೇ ಸಿಗ್ತಿಲ್ಲ.. ಈ ರೀತಿ ಮಾನವೀಯತೆ ಇಲ್ಲದೆ ಜೀವಕಳೆದುಕೊಂಡ ಮಗಳನ್ನು ಮನೆಯಲ್ಲಿ ಮಲಗಿಸಿಕೊಂಡು ಮತ್ತೊಬ್ಬ ಮಗಳನ್ನು ಅದೇ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದಾರೆ.. ಅತ್ತ ಅದ್ಯಾವ ಮನಸ್ಸಿನಿಂದ ಅದೇ ದಿನ ತಂಗಿಯ ಜೊತೆ ಆ ಹುಡುಗ ಮದುವೆ ಆದ್ನೋ ಗೊತ್ತಿಲ್ಲ.. ಈ ರೀತಿ ಮಾನವೀಯತೆ ಇಲ್ಲದ ಕೆಲಸಗಳನ್ನು ಮನುಷ್ಯ ಪದೇ ಪದೇ ಮಾಡುತ್ತಿರುವುದರಿಂದಲೇ ಬಹುಶಃ ಕೊರೊನಾದಂತಹ ಕಾಯಿಲೆಗಳು ಮನುಕುಲವನ್ನು ಕಾಡುತ್ತಿರೋದು.. ಇವರುಗಳ ಜನ್ಮಕ್ಕಿಷ್ಟು.. ಪಾಪ ಸಂಸಾರದ ಬಗ್ಗೆ ನೂರಾರು ಕನಸು ಕಂಡು ಕೊನೆ ಕ್ಷಣದಲ್ಲಿ ಇಲ್ಲವಾಗಿ.. ಆಕಾಶದಲ್ಲೆಲ್ಲೋ ನಿಂತು ತನ್ನ ಮನೆಯವರು ಹಾಗೂ ತಾನು ಮದುವೆಯಾಗಬೇಕಿದ್ದ ಹುಡುಗನ ನೀಚತನದ ಕೆಲಸ ಕಂಡು ಕಣ್ಣೀರಿಟ್ಟ ಆ ಹೆಣ್ಣು ಮಗಳಿಗೆ ಶಾಂತಿ ಸಿಗಲಿ..