ಆನ್ ಲೈನ್ ನಲ್ಲಿ‌ಯೇ ನೂತನ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ನಟಿ.. ಹುಡುಗಾ ಯಾರು ಗೊತ್ತಾ..

0 views

ಇತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಮದುವೆಯಾಗೋದು ನಿಶ್ಚಿತಾರ್ಥವಾಗೋದು ಎಲ್ಲವೂ ಸಾಮಾನ್ಯವಾಗಿ ಹೋಗಿದೆ.. ಆನ್ಲೈನ್ ನಲ್ಲಿಯೇ ಆಶೀರ್ವಾದವನ್ನು ಸಹ ಮಾಡೋದು ಒಂದು ರೀತಿ ತಮಾಷೆಯಾಗಿ ಕಂಡರೂ ಅವರುಗಳು ಇರೋ ಸಂದರ್ಭಗಳಿಗೆ ಇದು ಅನಿವಾರ್ಯವೂ ಆಗಿರಬಹುದು.. ಆದರೀಗ ಕನ್ನಡದ ನಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸ್ಪರ್ಧಿ ಸಹ ಆನ್ಲೈನ್ ನಲ್ಲಿಯೇ ನೂತನ ಜೀವನಕ್ಕ್ರ್ ಕಾಲಿಟ್ಟಿದ್ದು ಹುಡುಗ ವಿದೇಶದಲ್ಲಿ ಈಕೆ ಬೆಂಗಳೂರಿನಲ್ಲಿ ವೀಡಿಯೋ ಕಾಲ್ ಮೂಲಕವೇ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ.. ಇನ್ನು ಸಂಬಂಧಿಕರು ಸ್ನೇಹಿತರೂ ಸಹ ಆನ್ಲೈನ್ ನಲ್ಲಿಯೇ ಶುಭ ಹಾರೈಸಿದ್ದು ಇದೀಗ ನಟಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆನ್ಲೈನ್ ನಿಶ್ಚಿತಾರ್ಥದ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿಗಳು ಬಹಳಷ್ಟು ಮಂದಿ ಹೊರ ಬಂದ ಕೂಡಲೇ ಮದುವೆ ಎನ್ನುತ್ತಿದ್ದರು.. ಅತ್ತ ಶುಭಾ ಪೂಂಜಾ ಅವರು ಕಳೆದ ವರ್ಷವೇ ನಡೆಯಬೇಕಿದ್ದ ತಮ್ಮ ಮದುವೆಯನ್ನು ಬಿಗ್ ಬಾಸ್ ಶೋ ಗಾಗಿ ಮುಂದೂಡಿದ್ದರು.. ಇದೀಗ ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣ ಮದುವೆ ಎನ್ನಲಾಗಿತ್ತು.. ಹಾಗೆಯೇ ಅರವಿಂದ್ ದಿವ್ಯಾ ಉರುಡುಗ ಕಲ್ಯಾಣವೂ ಅತಿ ಶೀಘ್ರದಲ್ಲಿ ಎನ್ನಲಾಗಿತ್ತು. ಇನ್ನು ಬಿಗ್ ಬಾಸ್ ವಿಜೇತ ಮಂಜು ಪಾವಗಡ ಸಹ ವಯಸ್ಸು ಜಾಸ್ತಿ ಆಗಿ ಹೋಗಿದೆ ಬೇಗ ಮದುವೆಯಾಗಬೇಕು ಎನ್ನುತ್ತಿದ್ದರು.. ಆದರೆ ಇವರೆಲ್ಲರನ್ನೂ ಹಿಂದಿಕ್ಕಿ ಇದೀಗ ಮತ್ತೊಬ್ಬ ಸ್ಪರ್ಧಿ ನೂತನ ಜೀವನಕ್ಕೆ ಕಾಲಿಡಲು ಮುನ್ನುಡಿ ಬರೆದಿದ್ದಾರೆ..

ಹೌದು ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಪಡೆದರೂ ಸಹ ಮೂರೇ ದಿನಕ್ಕೆ ಮನೆಯಿಂದ ಹೊರಬಂದ ವೈಜಯಂತಿ ಅಡಿಗ ಇದೀಗ ವಿದೇಶದಲ್ಲಿರುವ ತಮ್ಮ ಪ್ರಿಯಕರನ ಜೊತೆ ಆನ್ಲೈನ್ ನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.. ಹೌದು ವೈಜಯಂತಿ ಅಡಿಗ ಸ್ಯಾಂಡಲ್ವುಡ್ ನಟಿಯಾಗಿದ್ದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕ ತಿಮ್ಮೇಶ್ ಜೊತೆಗೆ ಬಿಗ್ ಬಾಸ್ ಮನೆ ಪ್ರವೇಶ ಪಡೆಯುವ ಅವಕಾಶ ಪಡೆದಿದ್ದರು.. ಆದರೆ ಹೋದ ಎರಡೇ ದಿನಕ್ಕೆ ನಾನು ನನ್ನ ಹುಡುಗನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ.. ಇಲ್ಲಿರಲು ಸಾಧ್ಯವಿಲ್ಲ ಎಂದರು.. ಆ ವಾರ ಎಲಿಮಿನೇಟ್ ಆಗಿದ್ದ ಶಮಂತ್ ನನ್ನು ಉಳಿಸಿ ಖುದ್ದು ತಾನೇ ಬೊಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಅಷ್ಟು ದೊಡ್ಡ ಅವಕಾಶವನ್ನು ಕೈಚೆಲ್ಲಿದ್ದು ಪ್ರೇಕ್ಷಕರಲ್ಲಿ ಆಶ್ಚರ್ಯವನ್ನೂ ಸಹ ಉಂಟು ಮಾಡಿತ್ತು..

ಇದೀಗ ತಾವು ಪ್ರೀತಿಸಿದ ತಮ್ಮ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ವೈಜಯಂತಿ ಅಡಿಗ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ವೈಜಯಂತಿ ಅಡಿಗ ಅವರು ಖ್ಯಾತ ಹೊಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಮಗಳಾಗಿದ್ದು ಅಮ್ಮಚ್ವಿ ಎಂಬ ನೆನಪು ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.. ಇನ್ನು ವೈಜಯಂತಿ ಅಡಿಗ ಅವರು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಬಿಗ್ ಬಾಸ್ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.. ಇನ್ಸ್ಟಾಗ್ರಾಂ ನಲ್ಲಿ ಯಾರೇ ಬಿಗ್ ಬಾಸ್ ಬಗ್ಗೆ ಮಾತನಾಡಿ ಎಂದರೂ ಸಹ ನೋ ಎಂದಿದ್ದರು.. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಂತೆ ತಮ್ಮ ಹುಡುಗನ ಜೊತೆ ಇದೀಗ ನಿಶ್ಚಿತಾರ್ಥ ಮಾಡಿಕೊಂಡು ಸಂಭ್ರಮದಲ್ಲಿದ್ದಾರೆ..

ಹೌದು ವೈ ಜಯಂತಿ ಅವರವ್ಕೈ ಹಿಡಿಯುತ್ತಿರುವ ಹುಡುಗ ಸೂರಜ್.. ಸೂರಜ್ ಹಾಗೂ ವೈಜಯಂತಿ ಅಡಿಗ ಪರಸ್ಪರ ಪ್ರೀತಿಸುತ್ತಿದ್ದು ಕುಟುಂಬದವರು ನಿರ್ಧರಿಸಿ ಇದೀಗ ಮದುವೆ ಸಮಾರಂಭ ನೆರವೇರಿಸುತ್ತಿದ್ದಾರೆ.. ಹೌದು ಸೂರಜ್ ಇಂಜಿನಿಯರ್ ಆಗಿದ್ದು ಸಧ್ಯ ಅಮೇರಿಕದಲ್ಲಿ ನೆಲೆಸಿದ್ದಾರೆ.. ಅದೇ ಕಾರಣಕ್ಕೆ ಆನ್ಲೈನ್ ನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕೆಲ ತಿಂಗಳಲ್ಲಿ ಭಾರತಕ್ಕೆ ಬರಲಿದ್ದು ಆಬಳಿಕ ಮದುವೆ ಸಮಾರಂಭ ನೆರವೇರಲಿದೆ ಎಂದು ತಿಳಿದುಬಂದಿದೆ.. ಇನ್ನೂ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬಗಳು ಬೆಂಗಳೂರಿನ ವೈಜಯಂತಿ ಅವರ ಮನೆಯಲ್ಲಿಯೇ ಸೇರಿದ್ದು ಸೂರಜ್ ಜೊತೆ ವೀಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ ಮುಗಿಸಿ ಆನ್ಲೈನ್ ನಲ್ಲಿಯೇ ಹಾರೈಸಿದ್ದಾರೆ.ಮ್ ಸಧ್ಯ ಹೊಸ ಜೀವನಕ್ಕೆ ಕಾಲಿಡುತ್ತಿರುವ ವೈಜಯಂತಿ ಅವರಿಗೆ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿ ಹಾರೈಸಿದ್ದಾರೆ..