ಜನ ಪ್ರತಿನಿಧಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೊಳಗಾಗುವುದು ಹೊಸ ವಿಚಾರವೇನೂ ಅಲ್ಲ.. ಆದರೆ ತಮ್ಮ ನಡೆಯಿಂದ ಮಾದರಿಯಾಗಬೇಕಾದ ಸಂಸದರೇ ಇದೀಗ ದೊಡ್ಡ ಯಡವಟ್ಟು ಮಾಡಿಕೊಂಡಿದ್ದು ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.. ಹೌದು ಕಳೆದ ಕೆಲ ತಿಂಗಳ ಹಿಂದೆ ಕೊರೊನಾ ಎರಡನೇ ಅಲೆ ಬಂದು ಬೆಂಗಳೂರಿನಲ್ಲಿ ಬೆಡ್ ಸಿಗದೇ ನೂರಾರು ಜನರು ಜೀವ ಕಳೆದುಕೊಂಡ ಸಮಯದಲ್ಲಿ ಬೆಡ್ ಸಿಗದೇ ಇರಲು ಇದ್ದ ನಿಜವಾದ ವಿಚಾರವನ್ನು ಬಯಲಿಗೆಳೆದು ಸುದ್ದಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.. ಹೌದು ಬೆಡ್ ವಿಚಾರ ಕೊನೆಗೆ ಬೇರೆ ರೀತಿಯದ್ದೇ ತಿರುವು ಪಡೆದುಕೊಂಡದ್ದು ಹಳೇ ವಿಚಾರ..

ಆದರೀಗ ಸೈಕಲ್ ನಲ್ಲಿ ರೋಡಿಗಿಳಿದು ಟ್ರೋಲ್ ಗೊಳಗಾಗಿದ್ದಾರೆ. ಹೌದು ಪೆಟ್ರೋಲ್ ಬೆಲೆ ನೂರ ಎಂಟು ರೂಪಾಯಿ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಅನೇಕರು ಸೈಕಲ್ ನಲ್ಲಿ ಆಗಮಿಸಿ ಪೆಟ್ರೋಲ್ ಬೆಲೆ ಜಾಸ್ತಿ ಆಗಿರುವುದನ್ನು ವಿರೋಧಿಸಿದ್ದೂ ಉಂಟು.. ಆದರೆ ಸಂಸದ ತೇಜಸ್ವಿ ಸೂರ್ಯ ಅವರು ಸೈಕಲ್ ನಲ್ಲಿ ರೋಡಿಗೆ ಇಳಿದದ್ದು ಪೆಟ್ರೋಲ್ ಬೆಲೆ ಜಾಸ್ತಿ ಎಂಬ ಕಾರಣಕಲ್ಲ.. ಬದಲಿಗೆ ಚಿಯರ್ ಫಾರ್ ಇಂಡಿಯಾ ಎಂಬ ಅಭಿಯಾನಕ್ಕಾಗಿ ಬೆಂಗಳೂರು ಪೂರ್ತಿ ಸೈಕಲ್ನಲ್ಲಿ ಸುತ್ತಿದ್ದಾರೆ.. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಲು ಸಾಲು ಫೋಟೋಗಳನ್ನ ಹಂಚಿಕೊಂಡು ನಾನು ಈ ದಿನ ಇಷ್ಟು ಸೂರ್ಯ ನಮಸ್ಕಾರ ಮಾಡಿದೆ ಇಷ್ಟು ಕಿಲೋಮೀಟರ್ ಸೈಕಲ್ ತುಳಿದು ನನ್ನ ಕ್ಯಾಲೊರಿಯನ್ನು ಬರ್ನ್ ಮಾಡಿದೆ ನೀವೇನು ಮಾಡಿದ್ರಿ ತಿಳಿಸಿ.. ಹೀಗೆ ಬರೆದು ಪೋಟೋಗಳ ಜೊತೆಗೆ ಪೋಸ್ಟ್ ಮಾಡಿದ್ದಾರೆ.. ಆದರೆ ಇವರು ಸೈಕಲ್ ತುಳಿದು ಸುತ್ತಿದ್ದಕ್ಕೆ ಯಾರ ಆಕ್ಷೇಪಣೆಯೂ ಇಲ್ಲ.. ಆದರೆ ಈ ನಡುವೆ ದೊಡ್ಡ ಯಡವಟ್ಟೊಂದನ್ನು ಮಾಡಿಕೊಂಡಿದ್ದಾರೆ..

ಹೌದು ಇನ್ನೂ ಸಹ ರಾಜ್ಯದಲ್ಲಿ ಕೊರೊನಾ ಕೇಸ್ ಗಳು ನಿಂತಿಲ್ಲ.. ಪ್ರತಿದಿನ ಆರ್ನೂರು ಏಳನೂರು ಕೊರೊನಾ ಕೇಸ್ ಗಳು ದಾಖಲಾಗುತ್ತಿವೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಎಷ್ಟು ಎಚ್ಚರಿಕೆ ಇಂದ ಇದ್ದರೂ ಸಾಲೋದಿಲ್ಲ.. ಆದರೆ ಜನರಿಗೆ ಮಾದರಿ ಆಗಿರಬೇಕಾದ ಸಂಸದ ತೇಜಸ್ವೀ ಸೂರ್ಯ ಅವರೇ ಮಾಸ್ಕ್ ಇಲ್ಲದೇ ಸೈಕಲ್ ನಲ್ಲಿ ಬೆಂಗಳೂರು ಸುತ್ತಿದ್ದು ಇದೀಗ ಟೀಕೆಗೆ ಒಳಗಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಹೌದು ಜನರು ನೇರವಾಗಿ ಪ್ರಶ್ನೆ ಹಾಕಿದ್ದಾರೆ.. ಎಲ್ಲಿ ಸ್ವಾಮಿ ನಿಮ್ಮ ಮಾಸ್ಕ್.. ಹೌದು ಜನರು ಕಾರ್ ಗಳಲ್ಲಿ ಕಿಟಕಿ ಗಾಜು ಏರಿಸಿಕೊಂಡು ತಮ್ಮ ಕುಟುಂಬದ ಜೊತೆ ಹೋದಾಗಲೂ ಅವರನ್ನು ಅಡ್ಡಗಟ್ಟಿ ದಂಡ ಹಾಕಲಾಗುತಿತ್ತು.. ಈಗಲೂ ಆರೋಗ್ಯ ಇಲಾಖೆ ಜನರನ್ನು ಕೊರೊನಾ ಕುರಿತು ಎಚ್ಚರಿಸುತ್ತಲೇ ಇದೆ. ಆದರೆ ಜನರಿಗೆ ಇಂತಹ ವಿಚಾರಗಳಲ್ಲಿ ಜವಾಬ್ದಾರಿ ತೋರಬೇಕಾದವರೇ ಬೇಜವಾಬ್ದಾರಿ ತೋರಿ ಮಾಸ್ಕ್ ಇಲ್ಲದೇ ಓಡಾಡಿ ಅದರ ಫೋಟೋಗಳನ್ನು ಹಂಚಿಕೊಂಡದ್ದಕ್ಕೆ ಜನರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ತೇಜಸ್ವಿ ಸೂರ್ಯ ಅವರ ಫೋಟೋಗಳಿಗೆ ಖಾರವಾದ ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಜನರು ಎಲ್ಲಿ ಸ್ವಾಮಿ ನಿಮ್ಮ ಮಾಸ್ಕ್.. ಎಲ್ಲಿ.. ಜನರಿಗೆ ನೀವೆಲ್ಲಾ ಹೇಳೋದೊಂದು ಆದರೆ ಮಾಡೋದು ಇನ್ನೊಂದಾ.. ಜನರಿಗೆ ಒಂದು ನಿಮಗೆಲ್ಲಾ ಮತ್ತೊಂದು ಕಾನೂನಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರ್ ನಲ್ಲಿ ಹೋಗುವ ಒಬ್ಬೊಬ್ಬರನ್ನು ಹಿಡಿದು ದಂಡ ಕಟ್ಟಿಸುತ್ತಾರೆ ಆದರೆ ನಿಮಗೆಲ್ಲಾ ವಿನಾಯಿತಿನಾ ಎಂದು ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.