ಕನ್ನಡದ ಖ್ಯಾತ ಧಾರಾವಾಹಿ ಜೊತೆಜೊತೆಯಲಿ ಧಾರಾವಾಹಿ ಮೂಲಕ ಜನರ ಮನಗೆದ್ದಿರುವ ನಟಿ ಮೇಘಾ ಶೆಟ್ಟಿ ಸಧ್ಯ ಮದುವೆಯ ಸಂಭ್ರಮದಲ್ಲಿದ್ದಾರೆ.. ಹೌದು ಮೇಘಾ ಶೆಟ್ಟಿ ಮನೆಯಲ್ಲಿ ಮದುವೆಯ ಸಮಾರಂಭ ನಡೆಯುತ್ತಿದ್ದು ಶಾಸ್ತ್ರ ಸಂಪ್ರದಾಯಗಳನ್ನು ನೆರವೇರಿಸಲಾಗುತ್ತಿದ್ದು ಮಗಳ ಮದುವೆಗೆ ಸಕಲ ತಯಾರಿ ಬರದಿಂದ ಸಾಗುತ್ತಿದೆ.. ಹೌದು ಬಹುತೇಕರಿಗೆ ತಿಳಿದಿರುವಂತೆ ಮೇಘಾ ಶೆಟ್ಟಿ ಅವರ ಅಣ್ಣ ಕೆಲ ವರ್ಷಗಳ ಹಿಂದೆ ಡಾ ರಾಜ್ ಕುಮಾರ್ ಅವರು ಅಗಲಿದ ದಿನ ರಸ್ತೆಯಲ್ಲಿ ನಡೆದ ಘಟನೆಗಳಿಂದಾಗಿ ಕೊನೆಯುಸಿರೆಳೆದಿದ್ದರು.. ಈ ನೋವನ್ನು ಕೆಲವೊಂದು ಕಾರ್ಯಕ್ರಮದಲ್ಲಿಯೂ ಮೇಘಾ ಶೆಟ್ಟಿ ಹಂಚಿಕೊಂಡಿದ್ದರು..

ಮೇಘಾ ಶೆಟ್ಟಿ ಐ ಎ ಎಸ್ ಮಾಡುವ ಕನಸು ಕಂಡಿದ್ದರು.. ಆದರೆ ಕಳೆದ ಎರಡು ವರೆ ವರ್ಷದ ಹಿಂದೆ ಜೊತೆಜೊತೆಯಲಿ ಧಾರಾವಾಹಿಗೆ ಆಯ್ಕೆಯಾದ ಮೇಘಾ ಶೆಟ್ಟಿಯ ಜೀವನ ಸಂಪೂರ್ಣವಾಗಿ ಬದಲಾಗಿ ಹೋಯ್ತು.. ಬಣ್ಣದ ಬದುಕಿನಲ್ಲಿಯೇ ವೃತ್ತಿ ಬದುಕನ್ನು ಕಟ್ಟಿಕೊಳ್ಳುವ ನಿರ್ಧಾರ ಮಾಡಿದರು.. ಧಾರಾವಾಹಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ನೀಡಿತು.. ಧಾರಾವಾಹಿ ಯಶಸ್ವಿಯಾದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳ ಅವಕಾಶ ದೊರೆತು ಗೋಲ್ಡನ್ ಸ್ಟಾರ್ ಗಣೇಶ್ ಅವರು ಲವ್ ಮಾಕ್ಟೈಲ್ ಕೃಷ್ಣ ಹಾಗೂ ಇನ್ನು ಕೆಲ ಹೀರೋಗಳ ಜೊತೆ ನಟಿಸುವ್ ಅವಕಾಶ ದೊರೆಯಿತು.. ಸಧ್ಯ ಕಿರುತೆರೆ ಹಾಗೂ ಸ್ಯಾಂಡಲ್ವುಡ್ ಎರಡರಲ್ಲಿಯೂ ಭದ್ರವಾಗಿ ನೆಲೆಯೂರುತ್ತಿರುವ ಮೇಘಾ ಶೆಟ್ಟಿ ಸಿನಿಮಾ ಧಾರಾವಾಹಿ ಮಾತ್ರವಲ್ಲದೇ ಅನೇಕ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿರೋದು ವಿಶೇಷ..

ಇನ್ನೂ ಇತ್ತ ಅವರ ವ್ಯಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ ಮೇಘಾ ಶೆಟ್ಟಿ ಅವರ ಕುಟುಂಬದಲ್ಲಿ ಸಧ್ಯ ತಂದೆ ತಾಯಿಯ ಜೊತೆಗೆ ಮೂವರು ಹೆಣ್ಣು ಮಕ್ಕಳು ಇದಾರೆ.. ಮನೆ ಮಗನನ್ನು ಕಳೆದುಕೊಂಡ ಮೇಘಾ ಶೆಟ್ಟಿ ಅವರ ಕುಟುಂಬ ಸಾಕಷ್ಟು ನೋವನ್ನು ಅನುಭಬಿಸಿ ನಂತರ ಮೂವರು ಹೆಣ್ಣು ಮಕ್ಕಳನ್ನೇ ಚೆನ್ನಾಗಿ ಓದಿಸಿ ದೊಡ್ಡವರನ್ನಾಗಿಸಿದ್ದರು.. ಅಪ್ಪ ಅಮ್ಮನ ಆಸೆಯಂತೆಯೇ ಮೇಘಾ ಶೆಟ್ಟಿ ಹಾಗೂ ಇಬ್ಬರು ಸಹೋದರಿಯರು ಸಹ ಚೆನ್ನಾಗಿ ಓದಿ ಗಂಡು ಮಗನಂತೆಯೇ ಅಪ್ಪ ಅಮ್ಮನ ಜವಾಬ್ದಾರಿ ವಹಿಸಿಕೊಂಡು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.. ಇನ್ನು ಇದೀಗ ಆ ಮನೆಯಲ್ಲಿ ಇದೀಗ ಮೊದಲ ಮದುವೆ ಸಮಾರಂಭ ನೆರವೇರುತ್ತಿದೆ..

ಹೌದು ಮೇಘಾ ಶೆಟ್ಟಿ ಕುಟುಂಬದಲ್ಲೀಗ ಮದುವೆ ಸಂಭ್ರಮ ಮನೆ ಮಾಡಿದೆ.. ಮೇಘಾ ಶೆಟ್ಟಿ ಅವರ ಸುಷ್ಮಿತಾ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಮೇಘಾ ಶೆಟ್ಟಿ ಅಕ್ಕನ ಮದುವೆ ಸಡಗರದಲ್ಲಿದ್ದಾರೆ.. ಸುಶ್ಮಿತಾ ಶೆಟ್ಟಿ ಅವರು ಮೇಘಾ ಶೆಟ್ಟಿ ಅವರಿಗೂ ಮುನ್ನವೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.. ಸಧ್ಯ ಮೇಘಾ ಶೆಟ್ಟಿ ಅವರಿಗೆ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಮೇಕಪ್ ಮಾಡುತ್ತಿರುವುದು ಸಹ ಸುಷ್ಮಿತಾ ಶೆಟ್ಟಿ ಅವರೇ ಆಗಿದ್ದಾರೆ..

ಸಧ್ಯ ಇದೀಗ ಸುಷ್ಮಿತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ವಿನೋದ್ ಎಂಬುವವರನ್ನು ಮದುವೆಯಾಗುತ್ತಿದ್ದಾರೆ.. ಕಳೆದ ತಿಂಗಳು ಜನವರಿಯಲ್ಲಿಯೇ ಸುಷ್ಮಿತಾ ಹಾಗೂ ವಿನೋದ್ ಅವರ ನಿಶ್ಚಿತಾರ್ಥ ಸರಳವಾಗಿ ನೆರವೇರಿದ್ದು ಸಧ್ಯ ಹರಿಶಿಣ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರ ಅದ್ಧೂರಿಯಾಗಿ ಜರುಗುತ್ತಿದೆ.. ಇತ್ತ ಹರಿಶಿಣ ಶಾಸ್ತ್ರ ಮೆಹಂದಿ ಶಾಸ್ತ್ರಗಳಲ್ಲಿ ಸಂಭ್ರಮ ಪಡುತ್ತಿರುವ ಮೇಘಾ ಶೆಟ್ಟಿ ಎಲ್ಲಾ ಶಾಸ್ತ್ರಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು ನೂತನ ಜೀವನಕ್ಕೆ ಕಾಲಿಡುತ್ತಿರುವ ತಮ್ಮ ಪ್ರೀತಿಯ ಅಕ್ಕ ಹಾಗೂ ಭಾವನಿಗೆ ಶುಭ ಕೋರಿದ್ದಾರೆ..

ಇನ್ನು ತಮ್ಮ ಮದುವೆಯ ಪ್ರೀ ವೆಡ್ಡಿಂಗ್ ಫೋಟೋ ಚಿತ್ರೀಕರಣ ಮಾಡಿಸಿಕೊಂಡಿರುವ ಸುಷ್ಮಿತಾ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಾವು ಮದುವೆಯಾಗುತ್ತುರುವ ಹುಡುಗನ ಬಗ್ಗೆ ಹಂಚಿಕೊಂಡಿದ್ದಾರೆ.. ಹೌದು “ಪ್ರೀತಿಯಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿ ಇರಬೇಕು ಅಂತೇನೂ ಇಲ್ಲ.. ಸತ್ಯವಾಗಿರಬೇಕು ಅಷ್ಟೇ.. ನಾವು ಎಷ್ಟು ದಿನಗಳು ತಿಂಗಳುಗಳು ವರ್ಷಗಳ ಕಾಲ ಜೊತೆಯಿರುತ್ತೇವೆ ಅನ್ನೋದು ಪ್ರೀತಿಯಲ್ಲ.. ಪ್ರತಿದಿನ ಎಷ್ಟು ಪ್ರೀತಿ ಮಾಡುತ್ತೇವೆ ಎಂಬುದು ಪ್ರೀತಿ.. ನನ್ನ ಖುಷಿಯ ಮೂಲ ನೀನು.. ನನ್ನ ಜಗತ್ತಿನ ಹಾಗೂ ನನ್ನ ಹೃದಯದ ಕೇಂದ್ರ ಬಿಂದು ನೀನು” ಎಂದು ಬರೆದು ಪೋಸ್ಟ್ ಮಾಡಿದ್ದು ಸ್ನೇಹಿತರು ನೂತನ ಜೀವನಕ್ಕೆ ಶುಭಾಶಯ ತಿಳಿಸಿದ್ದಾರೆ..