ಮದುವೆ ಇನ್ನೆರೆಡು ದಿನ ಇದೆ.. ಆದರೆ ನಡೆದದ್ದೇ ಬೇರೆ.. ರಸ್ತೆಯಲ್ಲಿ ನಿಂತು ಅಂಗಲಾಚುತ್ತಿರುವ ಯುವತಿ.. ಕಾರಣವೇನು ಗೊತ್ತಾ? ನಿಜಕ್ಕೂ ಮನಕಲಕುವಂತಿದೆ..

0 views

ಜೀವನವೇ ಇಷ್ಟು.. ಎಲ್ಲವೂ ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಅನಿರೀಕ್ಷಿತ ಘಟನೆಗಳಿಂದ ಜೀವನದ ದಿಕ್ಕೇ ಬದಲಾಗಿ ಹೋಗುತ್ತಿದೆ.. ಹೌದು ಎಲ್ಲವೂ ಸರಿ ಇದ್ದಿದ್ದರೆ ಈ ಯುವತಿಯ ಮನೆಯಲ್ಲಿಂದು ಮದುವೆ ಸಂಭ್ರಮ ಮನೆ ಮಾಡಬೇಕಿತ್ತು.. ಈಕೆಯ ತಾಯಿ ಸಂತೋಷದಿಂದ ಮಗಳನ್ನು ಸಿಂಗರಿಸಿ ಗಂಡನ ಮನೆಗೆ ಕಳುಹಿಸಬೇಕಿತ್ತು.. ಹರಿಶಿಣದ ಮೈನಲ್ಲಿ ಹೊರಗೆಲ್ಲೂ ಹೋಗಬಾರದೆನ್ನುತ್ತಾರೆ.. ಆ ರೀತಿ‌ ಇರಬೇಕಾದ ಹೆಣ್ಣು ಮಗಳು ಇಂದು ರಸ್ತೆಯಲ್ಲಿ ನಿಂತು ಅಂಗಲಾಚುವ ಪರಿಸ್ಥಿತಿ ಬಂದು ನಿಂತಿದೆ.. ಹೌದು ಈಕೆಯ ಹೆಸರು ಸುಶ್ಮಿತಾ.. ಬೆಂಗಳೂರಿನ ನಿವಾಸಿ.. ತಾಯಿಯೇ ಜೀವ ಎನ್ನುತ್ತಿದ್ದ ಹುಡುಗಿ.‌ ಆದರೀಗ ತಾಯಿಯಾಗಿಯೇ ಅಂಗಲಾಚುವ ಪರಿಸ್ಥಿತಿ ಬಂದಿದೆ.. ಹೌದು ಮಗಳ ಮದುವೆ ಮಾಡಬೇಕೆಂದು ತಾಯಿ ನೂರಾರು ಕನಸು ಕಂಡಿದ್ದರು..

ಅಂದುಕೊಂಡಂತೆ ಹುಡುಗನನ್ನು ನೋಡಿ ಮದುವೆಯನ್ನೂ ಸಹ ನಿಶ್ಚಯ ಮಾಡಿದರು.. ಆದರೆ ಮಗಳ ಮದುವೆ ನೋಡಬೇಕು ಎಂದು ಆಸೆ ಪಟ್ಟು ಕನಸು ಕಾಣುತ್ತಿದ್ದ ಸುಷ್ಮಿತಾ ತಾಯಿ ಶಶಿಕಲಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.. ಹೌದು ಕಳೆದ ಮೇ ಆರರಂದು ಶಶಿಕಲಾ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಬಿಬಿಎಂಪಿ ಇಂದ ಬಿಯು ನಂಬರ್ ಪಡೆದು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.. ಐದೇ ದಿನಕ್ಕೆ ಶಶಿಕಲಾ ಅವರು ಗುಣಮುಖರಾದರೆಂದು ಡಿಸ್ಚಾರ್ಜ್ ಮಾಡಲಾಯಿತು.. ಕುಟುಂಬದವರಿಗೆ ಒಂದು ರೀತಿ ನೆಮ್ಮದಿಯಾಯಿತು.. ಮಗಳು ಸುಷ್ಮಿತ ನಿಟ್ಟುಸಿರು ಬಿಟ್ಟಳು.ಮ್ ಆದರೆ ಅವರ ಸಂತೋಷ ಎರಡೇ ದಿನಕ್ಕೆ ಅಂತ್ಯವಾಗಿ ಹೋಯ್ತು.. ಶಶಿಕಲಾ ಅವರಿಗೆ ಎರಡೇ ದಿನಕ್ಕೆ ಮತ್ತೆ ಆರೋಗ್ಯ ಸಮಸ್ಯೆ ಎದುರಾಗಿ ಎರಡನೇ ಬಾರಿ ಕೊರೊನಾ ಸೋಂಕು ಧೃಡಪಟ್ಟಿತು..

ಮಗಳು ಕುಗ್ಗಿ ಹೋದಳು.‌ ಅಮ್ಮ ಗುಣಮುಖರಾದರೆಂದು ಸಂತೋಷವಾಗಿದ್ದ ಸುಷ್ಮಿತಾಳಿಗೆ ಮತ್ತೊಂದು ಸಂಕಷ್ಟ ಎದುರಾಯಿತು.. ಬಿಬಿಎಂಪಿ ಇಂದ ಬಿಯು ನಂಬರ್ ಸಿಗಲಿಲ್ಲ.. ತಾಯಿಯನ್ನು ಹೇಗೋ ಮತ್ತೆ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಆದರೆ ಬಿಯು ನಂಬರ್ ಇಲ್ಲ.. ಕಳೆದ ಇಪ್ಪತ್ತು ದಿನಗಳಿಂದ ಐಸಿಯುನಲ್ಲಿ ಶಶಿಕಲಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.. ಒಟ್ಟು ನಾಲ್ಕು ಲಕ್ಷದ ಹತ್ತು ಸಾವಿರ ರೂಪಾಯಿ ಹಣ ಕಟ್ಟಿದ್ದಾರೆ.. ದಯವಿಟ್ಟು ಬಿಯು ನಂಬರ್ ಕೊಡಿ.. ನಮಗೆ ಹಣ ಕಟ್ಟಲು ಆಗುತ್ತಿಲ್ಲ ಎಂದು ಬಿಬಿಎಂಪಿ ಅವರ ಬಳಿ ಅಂಗಲಾಚಿದರೂ ಸಹ ಯಾರೊಬ್ಬರೂ ಸ್ಪಂದಿಸುತ್ತಿಲ್ಲವಂತೆ..

ಅತ್ತ ಬಿಯು ನಂಬರ್ ಇಲ್ಲದೇ.. ಇತ್ತ ಅಮ್ಮನನ್ನು ಉಳಿಸಿಕೊಳ್ಳಲು ಹಣವೂ ಇಲ್ಲದೇ ಸುಷ್ಮಿತಾ ಪರದಾಡುತ್ತಿದ್ದಾಳೆ.. ಅತ್ತ ತನ್ನ ತಾಯಿ ಮಗಳ ಮದುವೆಗೆಂದು ಹತ್ತು ಲಕ್ಷ ಹಣ ಸಾಲ ಮಾಡಿದರೂ ಸಹ ಮಗಳ ಮದುವೆಯೂ ಆಗಲಿಲ್ಲ.. ಇತ್ತ ತಾಯಿಯೂ ಜೊತೆಯಲ್ಲಿಲ್ಲ.. ನಿಜಕ್ಕೂ ಆ ಮಗಳ ಪರಿಸ್ಥಿತಿ ಯಾರಿಗೂ ಬಾರದಿರಲಿ.. ಇಷ್ಟು ಸಾಲದೆಂಬಂತೆ ಶಶಿಕಲಾ ಅವರಿಗೆ ಕೊರೊನಾ ಸೋಂಕು ಧೃಡ ಪಡುತ್ತಿದ್ದಂತೆ ಇತ್ತ ಕುಟುಂಬದ ಎಲ್ಲಾ ಸದಸ್ಯರಿಗೂ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿತು.. ಆದರೆ ಸಮಾಧನಾಕರ ವಿಚಾರ ಎಂದರೆ ಎಲ್ಲರಿಗೂ ಬಿಯು ನಂಬರ್ ಸಿಕ್ಕಿ ಚಿಕಿತ್ಸೆ ಪಡೆದು ಒಂದು ವಾರದಲ್ಲಿ ಗುಣಮುಖರಾಗಿ ಡಿಸ್ಚಾರ್ಜ್ ಕೂಡ ಆದರು.. ಆದರೆ ಮದುವೆಯಾಗಿ ಸಂತೋಷವಾಗಿರಬೇಕಾದ ಮಗಳು ಸುಷ್ಮಿತಾ ಮಾತ್ರ ತನ್ನ ತಾಯಿಯನ್ನು ಉಳಿಸಿಕೊಳ್ಳುವ ಸಲುವಾಗಿ ಪರದಾಡುತ್ತಿದ್ದಾಳೆ..

ರಸ್ತೆಯಲ್ಲಿಯೇ ದಯವಿಟ್ಟು ಬಿಯು ನಂಬರ್ ಕೊಡಿ ಎಂದು ಅಂಗಲಾಚುತ್ತಿದ್ದಾಳೆ.. ಇನ್ನಾದರೂ ಬಿಬಿಎಂಪಿ ಅವರು ಎಚ್ಚೆತ್ತುಕೊಂಡು ಶಶಿಕಲಾ ಅವರಿಗೆ ಬಿಯು ನಂಬರ್ ನೀಡಲಿ.‌. ಈ ರೀತಿ‌ ಇನ್ನು ಅದೆಷ್ಟೋ ಜನರು ಬಿಯು ನಂಬರ್ ಗಾಗಿ ಪರದಾಡುತ್ತಿರಬಹುದು ಆ ರೀತಿ ಆಗದಂತೆ ಎಚ್ಚರಿಕೆ ವಹಿಸಲಿ.. ಅಸಡ್ಡೆ ಮಾಡಿ ದಯವಿಟ್ಟು ಸುಮ್ಮನಾಗಬೇಡಿ.. ಒಂದೊಂದು ಜೀವ ಹೋದರೂ ಆ ಕುಟೂಂಬ ಜೀವನ ಪೂರ್ತಿ ಕಣ್ಣೀರಿಡಬೇಕಾಗುತ್ತದೆ.. ನಿಮಗೆಲ್ಲಾ ಸೋಂಕಿತರು ಒಂದು ಸಂಖ್ಯೆ ಇರಬಹುದು.. ಆದರೆ ಆ ಕುಟುಂಬದವರಿಗೆ ಅವರೇ ಸರ್ವಸ್ವ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ.. ಆಕೆಗೆ ಬಿಯು ನಂಬರ್ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ..