ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಿರ್ದೇಶಕ ತರುಣ್ ಸುಧೀರ್.. ಹುಡುಗಿ ಯಾರು ಗೊತ್ತಾ? ಮದುವೆ ಜವಾಬ್ದಾರಿ ಡಿ ಬಾಸ್ ಹೆಗಲಿಗೆ..

0 views

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಸುಧೀರ್ ನಿರ್ದೇಶನದ ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಇದೇ ಮಾರ್ಚ್ ಹನ್ನೊಂದರಂದು ಶಿವರಾತ್ರಿಗೆ ರಾಜ್ಯಾದ್ಯಂತ ಅದ್ಧೂರಿ ಬಿಡುಗಡೆ ಕಾಣುತ್ತಿದೆ.. ಕಳೆದ ವರ್ಷದಿಂದ ನೆಚ್ಚಿನ ಬಾಸ್ ನ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಹಬ್ಬವಾದರೆ ಮತ್ತೊಂದು ಕಡೆ ರಾಬರ್ಟ್ ಸಿನಿಮಾ ತರುಣ್ ಸುಧೀರ್ ಅವರ ವೃತ್ತಿ ಜೀವನದಲ್ಲಿ ಬಹುದೊಡ್ಡ ಮೈಲಿಗಲ್ಲಾಗಲಿದೆ ಎನ್ನಲಾಗುತ್ತಿದೆ..

ಇನ್ನು ಸಿನಿಮಾ ಬಿಡುಗಡೆ ಬೆನ್ನಲ್ಲೇ ನಿರ್ದೇಶಕ ತರುಣ್ ಸುಧೀರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.. ಹೌದು ಅದಾಗಲೇ ಮನೆಯಲ್ಲಿ ಮದುವೆಗೆ ಒತ್ತಾಯ ಮಾಡಲಾಗುತ್ತಿದ್ದು ರಾಬರ್ಟ್ ಸಿನಿಮಾ ಬಿಡುಗಡೆಗೊಂಡ ಬಳಿಕ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಹೌದು ಕಳೆದ ಎರಡು ವರ್ಷಗಳಿಂದ ರಾಬರ್ಟ್ ಸಿನಿಮಾಗಾಗಿ ಹಗಲು ರಾತ್ರಿ ಶ್ರಮಿಸಿರುವ ನಿರ್ದೇಶಕ ತರುಣ್ ಸುಧೀರ್ ಅವರು ಚೌಕ ಸಿನಿಮಾ ಬಳಿಕ ಮತ್ತೊಂದು ದೊಡ್ಡ ಮಟ್ಟದ ಯಶಸ್ಸಿಗಾಗಿ ಕಾದಿದ್ದಾರೆ.. ಎಲ್ಲವೂ ಸರಿಯಿದ್ದರೆ ಕಳೆದ ವರ್ಷವೇ ರಾಬರ್ಟ್ ಸಿನಿಮಾ ಬಿಡುಗಡೆಯಾಗಬೇಕಿತ್ತು.. ಆದರೆ ಕೊರೊನಾ ಕಾರಣದಿಂದಾಗಿ ಒಂದು ವರ್ಷ ತಡವಾಗಿ ಈ ವರ್ಷದ ಶಿವರಾತ್ರಿಗೆ ತೆರೆ ಮೇಲೆ ಬರಲಿದೆ.. ಇನ್ನು ಸಿನಿಮಾ ಬಿಡುಗಡೆಯ ಸಂತೋಷ ಒಂದು ಕಡೆಯಾದರೆ ಇತ್ತ ತರುಣ್ ಸುಧೀರ್ ಅವರ ತಾಯಿಗೆ ಮಗನ ಮದುವೆ ಮಾಡುವ ಸಂತೋಷ ಮತ್ತೊಂದು ಕಡೆಯಾಗಿದ್ದು ಮಗನ ಮದುವೆ ಜವಾಬ್ದಾರಿಯನ್ನು ದರ್ಶನ್ ಅವರ ಹೆಗಲಿಗೆ ಹಾಕಿದ್ದಾರೆ.‌

ಹೌದು ತರುಣ್ ಸುಧೀರ್ ಅವರ ಮದುವೆ ಜವಾಬ್ದಾರಿಯನ್ನು ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ವಹಿಸಿಕೊಂಡಿದ್ದಾರೆನ್ನಲಾಗಿದೆ.. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ದರ್ಶನ್ ಅವರು ತರುಣ್ ಮನೆಯಲ್ಲಿ ಅವರ ತಾಯಿ ತರುಣ್ ನ ಮದುವೆ ಮಾಡಲು ಹೇಳಿದ್ದಾರೆ.. ಇವನು ಆಗೋದಿಲ್ಲ ಎಂದಿದ್ದಾನೆ.. ನಾನು ಕೇಳಿದ್ದಕ್ಕೆ ರಾಬರ್ಟ್ ಸಿನಿಮಾ ಬಿಡುಗಡೆ ಆದ ತಕ್ಷಣ ಮದುವೆ ಆಗ್ತೇನೆ ಎಂದಿದ್ದಾನೆ.. ನನಗೆ ಯಾರ್ ಹೆಣ್ಣು ಕೊಡ್ತಾರೆ ಅಂತಾನೆ ಇರ್ತಾನೆ.. ಅದಕ್ಕೆ ನಾವೆ ನೋಡಿ ಮದುವೆ ಮಾಡಬೇಕು ಎಂದಿದ್ದಾರೆ..

ಅಷ್ಟೇ ಅಲ್ಲದೇ ಬಹಳ ಒಳ್ಳೆಯ ಮನುಷ್ಯ.. ಯಾರಾದರು ಅಪ್ಲಿಕೇಷನ್ಹಾಕುವವರಿದ್ದರೆ ಹಾಕಬಹುದು ಎಂದು ಸ್ನೇಹಿತನ ಬಗ್ಗೆ ಕಿಚ್ಚಾಯಿಸಿದ್ದಾರೆ.. ಒಟ್ಟಿನಲ್ಲಿ ಸ್ಯಾಂಡಲ್ವುಡ್ ನಲ್ಲಿ ಕಳೆದ ವರ್ಷ ಸಾಲು ಸಾಲು ಮದುವೆ ಸಮಾರಂಭಗಳು ನೆರವೇರಿದ್ದು ಈ ವರ್ಷ ತರುಣ್ ಸುಧೀರ್ ಅವರ ಮದುವೆ ನಡೆಯುವುದು ಬಹುತೇಕ ಖಚಿತವಾಗಿದೆ..