ತರಬೇತಿ ಸಮಯದಲ್ಲಿ ಪ್ರೀತಿಸಿ ಮದುವೆಯಾದರು.. ಈಗ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಐ ಎ ಎಸ್ ಟಾಪರ್ ಗಳು.. ಕಾರಣವೇನು ಗೊತ್ತಾ? ಇಷ್ಟೇ ಜೀವನ..

0 views

2015 ರ ಐ ಎ ಎಸ್ ಪರೀಕ್ಷೆಯಲ್ಲಿ ನಂಬರ್ ಒನ್ ಹಾಗೂ ನಂಬರ್ 2 ರ್ಯಾಂಕ್ ಪಡೆದ ಈ ಇಬ್ಬರು 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಸಾವಿರಾರು ಜನರು ಶುಭಾಶಯ ಕೋರಿದ್ದರು.. ದೇಶದಲ್ಲಿ ದೊಡ್ಡ ಸುದ್ದಿಯೂ ಆಗಿತ್ತು.. ಆದರೀಗೆ ಈ ಇಬ್ಬರು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.. ಹೌದು ತಮ್ಮ ದಾಂಪತ್ಯ ಜೀವನ ಮುಗಿಸಲು ಮುಂದಾಗಿದ್ದಾರೆ..

2015 ರ ಐ ಎ ಎಸ್ ಪರೀಕ್ಷೆಯಲ್ಲಿ ಕಾಶ್ಮೀರ ಮೂಲದವರಾದ ಅಥರ್‌ ಖಾನ್‌ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಟೀನಾ ಡಬಿ ಮೊದಲ ರ್ಯಾಂಕ್ ಪಡೆದಿದ್ದರು.. ಇಬ್ಬರು ತರಬೇತಿ ಸಮಯದಲ್ಲಿ ಸ್ನೇಹವಾಗಿ ನಂತರ ಪರಸ್ಪರ ಪ್ರೀತಿಸಲಾರಂಭಿಸಿದ್ದರು.. 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಸದ್ಯ ಇಬ್ಬರೂ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. ಆದರೆ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ಕೋರ್ಟ್ ಮೆಟ್ಟಿಲೇರಿದ್ದಾರೆ..

ಹೌದು ಕೆಲ ದಿನಗಳ ಹಿಂದೆಯೇ ಟೀನಾ ಡಾಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಾನ್‌ ಎಂಬ ಸರ್‌ ನೇಮ್‌ ಅನ್ಂಜ್ ತೆಗೆದು ಹಾಕಿದ್ದರು.. ಅತ್ತ ಅಥರ್‌ ಖಾನ್‌ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಟಿನಾ ಅವರನ್ನು ಅನ್‌ಫಾಲೋ ಮಾಡಿದ್ದರು..‌ ಆಗಲೇ ಇಬ್ಬರ ನಡುವಿನ ಭಿನ್ನಾಭಿಪ್ರಾಯದ ವಿಚಾರ ಹೊರ ಬಂದಿತ್ತು.. ಆದರೀಗ ಅಧಿಕೃತವಾಗಿ ನ್ಯಾಯಾಲಯದಲ್ಲಿ ಬೇರೆಯಾಗಲು ನಿರ್ಧರಿಸಿ ಅರ್ಜಿ ಸಲ್ಲಿಸಿದ್ದಾರೆ..

ಇಬ್ಬರ ಧರ್ಮಗಳು ಬೇರೆ ಬೇರೆಯಾದ್ದರಿಂದ ಮದುವೆಯ ಸಮಯದಲ್ಲಿಯೇ ಹಲವಾರು ಮಂದಿ ಇದನ್ನು ವಿರೀಧಿಸಿ ಟೀಕಿಸಿದ್ದರು.. ಆದರೀಗ ಅವರಿಬ್ಬರ ನಡುವೆಯೇ ಹೊಂದಾಣಿಕೆ ಯಾಗದ ಕಾರಣ ದೂರಾಗುವುದೇ ಸರಿ ಎಂದು ನಿರ್ಧರಿಸಿ ದೂರಾಗಲು ಇಬ್ಬರೂ ಪರಸ್ಪರ ಒಪ್ಪಿಗೆ ಸೂಚಿಸಿ ಅರ್ಜಿ ಸಲ್ಲಿಸಿದ್ದಾರೆ..

ಇಷ್ಟೇ ಜೀವನ.. ಇಬ್ಬರೂ ಓದಿನಲ್ಲಿ ಟಾಪರ್ ಗಳು.. ಆದರೆ ಜೀವನದಲ್ಕಿ ಎಡವಿದರು.. ಕೆಲವೊಮ್ಮೆ ಆಕರ್ಷಣೆಯೇ ಪ್ರೀತಿ ಎಂದುಕೊಳ್ಳುವ ಅದೆಷ್ಟೋ ಯುವ ಮನಸ್ಸುಗಳು ಕೊಂಚ ತಾಳ್ಮೆಯಿಂದ ಕಾದು.. ಜೀವನದಲ್ಲಿ ಸೆಟಲ್ ಆದ ಬಳಿಕ ಪ್ರಬುದ್ಧತೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಂಡಾಗ ಇಂತಹ ಘಟನೆ ನಡೆಯುವುದು ಕಡಿಮೆಯಾಗಬಹುದು..

ಆದರೆ ಓದಿನಲ್ಲೋ ಅಥವಾ ನೋಡಲೋ ಸುಂದರ ಎಂದು ಆತುರದ ನಿರ್ಧಾರ ಕೈಗೊಂಡರೆ ಮುಂದೆ ಜೀವನದ ಅನುಭವಗಳೇ ಪಾಠವಾಗಿಬಿಡುತ್ತವೇ.. ಗಂಡಾಗಲಿ‌ ಹೆಣ್ಣಾಗಲಿ ಕೊಂಚ ತಾಳ್ಮೆ ಇರಲಿ.. ಆಕರ್ಷಣೆ ಎಂದರೆ ಅದು ಆಕರ್ಷಣೆಯಷ್ಟೇ.. ಎಲ್ಲವೂ ಪ್ರೀತಿಯಲ್ಲ.. ನೂರು ಆಕರ್ಷಣೆ ಆಗಬಹುದು.. ಆದರೆ ಇರುವುದೊಂದೇ ಜೀವನ.. ತಾಳ್ಮೆಯಿಂದ ಯೋಚಿಸಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು..