ಲಾಯರ್ ಆಗಿದ್ದಾಗಲೇ ಹೆಚ್ಚು ಸಂಪಾದನೆ ಮಾಡುತ್ತಿದ್ದೆ.. ತೇಜಸ್ವಿ ಸೂರ್ಯ ಅವರಿಗೆ ಈಗ ಬರುತ್ತಿರುವ ಸಂಬಳ ಎಷ್ಟು ಲಕ್ಷ ಗೊತ್ತಾ?

0 views

ಕೆಲ ವರ್ಷಗಳ ಹಿಂದೆ ಬಹುತೇಕ ಸಾಮಾನ್ಯ ಜನರಿಗೆ ರಾಜಕೀಯ ಹಾಗೂ ಜನಪ್ರತಿನಿಧಿಗಳ ಕುರಿತು ಬಹಳಷ್ಟು ವಿಚಾರಗಳು‌ ತಿಳಿದಿರಲಿಲ್ಲ.. ಜನಪ್ರತಿನಿಧಿಗಳಿಗೆ ಪ್ರತಿ ತಿಂಗಳು ಸಂಬಳ ಬರಲಿದೆ ಎಂಬ ವಿಚಾರವೂ ಸಹ ಕೆಲವರಿಗೆ ತಿಳಿದಿರಲಿಲ್ಲ.. ಆದರೆ ಸಾಮಾಜಿಕ ಜಾಲತಾಣಗಳ‌ ಬಳಕೆ ಹೆಚ್ಚಾದಂತೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ವಿಚಾರಗಳು ಸಾಮಾನ್ಯ ಜನರಿಗೆ ತಿಳಿಯುತ್ತಿದೆ..

ಇನ್ನು ನಾವುಗಳು ಆಯ್ಕೆ ಮಾಡಿ ಕಳುಹಿಸಿರುವ ಶಾಸಕರು ಸಂಸದರಿಗೆ ಎಷ್ಟು ಸಂಬಳ ಎಂಬ ಕುತೂಹಲ ಇದ್ದೇ ಇದೆ.. ಶಾಸಕರಿಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾದ ಸಂಬಳವಿದೆ.‌. ಲಕ್ಷಗಳನ್ನು ಸಹ ದಾಟಿದೆ.. ಆದರೆ ಅದಕ್ಕೆ ತಕ್ಕ ಹಾಗೆ ಆಫೀಸು.. ಸಭೆ ಸಮಾರಂಭಗಳ ಖರ್ಚು.‌ ಸಹಾಯಕರ ಸಂಬಳ.. ಹೀಗೆ ಕೆಲ ಖರ್ಚುಗಳು ಸಹ ಜನಪ್ರತಿನಿಧಿಗಳಿಗೆ ಇರಲಿದೆ..

ಇನ್ನು ಕಳೆದ ಲೋಕ ಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸಂಸದ ತೇಜಸ್ವೀ ಸೂರ್ಯ ಅವರು ಮಾದ್ಯಮದ ಸಂದರ್ಶನವೊಂದರಲ್ಲಿ ತಮಗೆ ಬರುತ್ತಿರುವ ಸಂಬಳ ಸಾಲುತ್ತಿಲ್ಲ ಎಂದಿದ್ದು ಅದಕ್ಕೆ ಕಾರಣವನ್ನೂ ಸಹ ನೀಡಿದ್ದಾರೆ.. ಅಷ್ಟಕ್ಕೂ ಈಗ ತೇಜಸ್ವೀ ಸೂರ್ಯ ಅವರಿಗೆ ಬರುತ್ತಿರುವ ಸಂಬಳವಾದರು ಎಷ್ಟು ಇಲ್ಲಿದೆ ನೋಡಿ..

ನನಗೆ ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ ಸಂಬಳ ಬರತ್ತೆ ಪಾರ್ಲಿಮೆಂಟ್ ನಿಂದ.. ಅದರಲ್ಲಿ ಮೂರು ಸಾವಿರ ರೂಪಾಯಿಯನ್ನ ನಮ್ಮ ಪಾರ್ಟಿ ತೆಗೆದುಕೊಳ್ಳತ್ತೆ.. ಅದು ಎಲ್ಲಾ ಸಂಸದರ ಬಳಿಯೂ ತೆಗೆದುಕೊಳ್ಳುತ್ತಾರೆ.. ಇದು ನಮಗೆ ಬರೋ ಸಂಬಳ.. ಆದರೆ ನಾನು ವಾಸ್ತವ ಹೇಳಬೇಕು ಎಂದರೆ ನಾನು ಮುಂಚೆ ಲಾಯರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದ ಸಮಯದಲ್ಲಿ ಇದಕ್ಕಿಂತ ಹೆಚ್ಚು ದುಡ್ಡು ಕೈಯಲ್ಲಿ ಉಳಿಯುತಿತ್ತು..

ಇವತ್ತೇನು ಅಂದ್ರೆ ನಮಗೆ ಆಫೀಸಿನ ಖರ್ಚು ಇರತ್ತೆ.. ಆಫೀಸಿಗೆ ಬಂದು ಹೋಗೋ ಜನರಿಗೆ ಕಾಫಿ‌ ತಿಂಡಿ ಹೀಗೆ ಖರ್ಚಿರತ್ತೆ.. ಯಾರೇ ಬಂದರೂ ಒಂದು ಲೋಟ ಕಾಫಿ ಕೊಡಬೇಕು ಎಂದರೆ ಇದಾಗತ್ತೆ.. ಹೊರಗಡೆ ಕಾರ್ಯಕ್ರಮಕ್ಕೆ ಹೋಗ್ತೀವಿ.. ಅಲ್ಲಿ ನನ್ನ ಜೊತೆ ಕಾರ್ಯಕರ್ತರು ಇರ್ತಾರೆ.. ಅಲ್ಲಿ ಅವರ ಜೊತೆ ಹೊಟೆಲ್ ನಲ್ಲಿ‌ ಕುಳಿತುಕೊಳ್ಳಬೇಕು ಅಂದ್ರೆ ಊಟ ಮಾಡಬೇಕು ಅಂದಾಗ್ಲೂ ಅಲ್ಲಿಯೂ ಖರ್ಚುಗಳು ಇರುತ್ತವೆ.. ಪ್ರಾಮಾಣಿಕವಾಗಿ ನೀವು ರಾಜಕಾರಣ ಮಾಡಬೇಕು ಅಂದ್ರೆ ತುಂಬಾ ಕಷ್ಟ ಇದೆ.. ಅಷ್ಟು ಖರ್ಚುಗಳು.. ಈತರ ಸಂಬಳ ಬರೋದ್ರಲ್ಲಿ ಆಫೀಸಿನ ಖರ್ಚಿನ ಜೊತೆಗೆ ಪ್ರಾಮಾಣಿಕವಾಗಿ ರಾಜಕಾರಣ ನಡೆಸ್ತೀರಿ ಎಂದರೆ ಅದು ತುಂಬಾ ಕಷ್ಟಾ.. ನಿಜವಾಗ್ಲೂ ಸಂಬಳ ಸಾಕಾಗೋದಿಲ್ಲ.. ಈ ಮೂಲಕ‌ ಮತ್ತೊಂದು ವಿಚಾರ ಹೇಳೋದಿಕ್ಕೆ ಇಷ್ಟ ಪಡ್ತೀನಿ..

ಆಫೀಸಿಗೆ ರಾಜ್ಯೋತ್ಸವ ಮಾಡ್ತೀವಿ.. ಅಣ್ಣಮನ ಉತ್ಸವ ಮಾಡ್ತೀವಿ.. ಅಂತ ಐದು ಸಾವಿರ ಕೊಡಿ.. ಹತ್ತು ಸಾವಿರ ಕೊಡಿ ಅಂತ ಜನ ಬರ್ತಾರೆ.‌ ನಾನ್ ನಿಮ್ಮೆಲ್ಲರಲ್ಲೂ ಒಂದೇ ಕೇಳೋದು.. ಈ ಹಿಂದೆ ಒಂದ್ ಎಂಎಲ್ ಎ ಹತ್ರ.. ಎಂಪಿ ಹತ್ರ ಕಾರ್ಪೋರೇಟರ್ ಹತ್ರ ಹೋಗಿ ಕೇಳ್ತೀರಿ.. ಅವರಿಗೆ ಎಲ್ಲಿಂದ ಬರತ್ತೆ ದುಡ್ಡು.. ನಿಮ್ ತರ ಅವರ ಬಳಿ ಎಷ್ಟು ಸಂಸ್ಥೆಗಳು ಹೋಗಿ ದುಡ್ಡು ಕೇಳ್ತಾವೆ.. ಅವರಿಗೆಲ್ಲಾ ಕೊಡೋಕೆ ಜನಪ್ರತಿನಿಧಿಗಳಿಗೆ ಎಲ್ಲಿಂದ ಬರ್ಬೇಕು ದುಡ್ಡು.. ನಾನ್ ಇಲ್ಲಿಗ್ ಬರೋ ಪ್ರತಿಯೊಬ್ಬರಿಗೂ ನಾನ್ ಇಷ್ಟನ್ನೇ ಹೇಳೋದು.. ನಾನ್ ಯಾರತ್ರನೂ ದುಡ್ಡು ಇಸ್ಕೋಳೋಕು ಆಗಲ್ಲ.. ನಾನ್ ನಿಮಗೆ ಕೊಡೋಕು ಆಗಲ್ಲ ಸರ್.. ಯಾಕಂದ್ರೆ ನಾವ್ ಕೊಡ್ಬೇಕು ಅಂದ್ರೆ ಯಾರತ್ರನಾದ್ರೂ ಈಸ್ಕೋಬೇಕಲ್ಲಾ ದುಡ್ಡು.. ನಾವ್ ಪ್ರಾಮಾಣಿಕ ರಾಜಕಾರಣ ದೇಶದಲ್ಲಿ ಬರಬೇಕು ಅಂದ್ರೆ.. ಜನರು ರಾಜಕಾರಣಿಗಳ ಹತ್ತಿರ ಹೋಗಿ ದುಡ್ಡು ಕೇಳೋದನ್ನ ನಿಲ್ಲಿಸಬೇಕು..

ರಾಜಕಾರಣದಲ್ಲಿ ದುಡ್ಡು ಎಷ್ಟು ಕಡಿಮೆ ಆಗತ್ತೋ ಅಷ್ಟು ಸಾಮಾನ್ಯ ಕುಟುಂಬದ ಮಕ್ಕಳು ರಾಜಕೀಯಕ್ಕೆ ಬರ್ತಾರೆ.. ನಾನು ಚುನಾವಣೆಗೆ ನಿಂತಾಗ ನನ್ನ ಬ್ಯಾಂಕ್ ಅಕೌಂಟ್ ನಲ್ಲಿ 13 ಲಕ್ಷ ರೂಪಾಯಿ ಇತ್ತು.. ನನ್ನ ತರ ಸಾಮಾನ್ಯ ಕುಟುಂಬದ ಜನರು ರಾಜಕಾರಣಕ್ಕೆ ಬರಬೇಕು ಅಂದ್ರೆ ಎಲೆಕ್ಷನ್ ನಲ್ಲಿ ಕೋಟ್ಯಾಂತರ ಹಣ ಖರ್ಚಾಗೋದು ನಿಂತಾಗ ಮಾತ್ರ.. ಆಗ ಮಾತ್ರ ಭಾರತದಲ್ಲಿ ನಿಜವಾದ ಬದಲಾವಣೆ ಆಗೋದು.. ಎಂದಿದ್ದಾರೆ ಸಂಸದ ತೇಜಸ್ವೀ ಸೂರ್ಯ..

ಇನ್ನು ತೇಜಸ್ವಿ ಸೂರ್ಯ ಅವರ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು “ಆರು ವರ್ಷಗಳ ಹಿಂದೆ ಇದೇ ಮಾತನ್ನು ನಾನು ಹೇಳಿದಾಗ ಏನೆಲ್ಲಾ ಅಂದಿದ್ದರು, ಬಾಯಲ್ಲಿದ್ದ ಬೈಗುಳಗಳೆಲ್ಲ ಫೇಸ್ಬುಕ್ ಟೈಮ್ ಲೈನ್ ನಲ್ಲಿದ್ದವು, ಆದರೆ ಇವತ್ತು ಪರಿಸ್ಥಿತಿ ಎಷ್ಟು ಬದಲಾಗಿದೆ ಎಂದನಿಸುತ್ತದೆ.” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..