ಕನ್ನಡದ ಖ್ಯಾತ ನಟಿ ಹಿರಿಯ ನಟಿ ತಾರಾ ಅವರು ಸಧ್ಯ ಸ್ಯಾಂಡಲ್ವುಡ್ ಮಾತ್ರವಲ್ಲದೇ ಕನ್ನಡ ಕಿರುತೆರೆಗೂ ಕಾಲಿಟ್ಟಿದ್ದು ರಾಜಾ ರಾಣಿ ಶೋ ಮೂಲಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.. ಇನ್ನು ಸಧ್ಯ ನನ್ನಮ್ಮ ಸೂಪರ್ ಸ್ಟಾರ್ ನಲ್ಲಿಯೂ ಜಡ್ಜ್ ಆಗಿದ್ದ ತಾರಾ ಅವರು ತಾರಮ್ಮ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮಗು ಮನಸ್ಸಿನ ವ್ಯಕ್ತಿ ಎಂದರೂ ತಪ್ಪಾಗಲಾರದು.. ಇನ್ನು ಸಧ್ಯ ಅದಾಗಲೇ ಕೃಷ್ಣ ಎಂಬ ಪುಟಾಣಿಗೆ ತಾಯಿಯಾಗಿರುವ ತಾರಾ ಅವರು ಈಗ ಮತ್ತೆ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರಾ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

ಹೌದು ಸಧ್ಯ ತಾರಾ ಅವರು ಗರ್ಭಿಣಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ಶುಭ ಕೋರಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ತಾರಮ್ಮ ಅವರು ಗರ್ಭಿಣಿಯಂತಿರುವ ಸಾಕಷ್ಟು ಫೋಟೋಗಳು ಹರಿದಾಡುತ್ತಿದ್ದು ತಾರಾ ಅವರು ಇದೀಗ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರಾ ಎನ್ನುತ್ತಿದ್ದಾರೆ.. ಆದರೆ

ಆದರೆ ಅಸಲಿ ವಿಚಾರ ಬೇರೆಯೇ ಇದೆ.. ಹೌದು ತಾರಮ್ಮ ಅವರು ಗರ್ಭಿಣಿಯಂತಿರುವ ಫೋಟೋಗಳೇನೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಸತ್ಯ.. ಆದರೆ ಅದು ನಿಜ ಜೀವನದಲ್ಲಿಯಲ್ಲ.. ಬದಲಿಗೆ ಸಿನಿಮಾವೊಂದರ ಫೋಟೋಗಳವು.. ಹೌದು ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಸ್ಟಾರ್ ನಟರಿಗೆ ತಾಯಿ ಪಾತ್ರನಿರ್ವಹಿಸಿರುವ ತಾರಮ್ಮ ಅವರು ಇದೀಗ ಕನ್ನಡದ ಮತ್ತೊಬ್ಬ ನಟನ ತಾಯಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಆ ಸಿನಿಮಾದ ಫೋಟೋಗಳು ಇದಾಗಿದೆ..

ಹೌದು ಸ್ಯಾಂಡಲ್ವುಡ್ ನಲ್ಲಿ ರಾಕಿ ಭಾಯ್ ಯಶ್, ಚೇತನ್, ರಿಷಭ್ ಶೆಟ್ಟಿ ಸೇರಿದಂತೆ ಸಾಕಷ್ಟು ಸ್ಟಾರ್ ನಟರಿಗೆ ತಾಯಿಯಾಗಿ ಅಭಿನಯಿಸಿರುವ ತಾರಮ್ಮ ಜನರ ಮನಸ್ಸಿಗೆ ತಾಯಿಯಾಗಿ ಬಹಳ ಹತ್ತಿರವಾಗಿರೋದು ಸತ್ಯ.. ಆ ಸಿನಿಮಾಗಳು ಸೂಪರ್ ಹಿಟ್ ಆಗಿರುವುದೂ ಉಂಟು.. ಇನ್ನು ಇದೀಗಬಿಗ್ ಬಾಸ್ ಹಾಗೂ ಸಿಸಿಎಲ್ ಖ್ಯಾತಿಯ ನಟ, ಕಿಚ್ಚ ಸುದೀಪ್ ಅವರ ಆಪ್ತರೂ ಆಗಿರುವ ನಟ ರಾಜೀವ್ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ..

ಅದೇ ಸಿನಿಮಾದಲ್ಲಿ ನಟಿ ತಾರಾ ಅವರು ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಿನಿಮಾಗೆ ಉಸಿರೇ ಉಸಿರೇ ಎಂದು ಹೆಸರಿಡಲಾಗಿದೆ ಅದೇ ಸಿನಿಮಾದಲ್ಲಿನ ತಾರಾ ಅವರ ಗರ್ಭಿಣಿ ಫೋಟೋಗಳು ಇದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಕೆಲವರಿಗೆ ಈ ಫೋಟೋಗಳು ನಿಜ ಜೀವನದ್ದು ಎಂದು ತಿಳಿದು ಶುಭಾಶಯ ತಿಳಿಸಿದರೆ ಮತ್ತೆ ಕೆಲವರು ಚಿತ್ರೀಕರಣ ಫೋಟೋಗಳೆಂದು ತಿಳಿಸಿ ಮತ್ತೆ ತೆರೆ ಮೇಲೆ ತಾಯಿಯಾಗಿ ಕಾಣಿಸಿಕೊಳ್ಳುತ್ತಿರುವ ತಾರಾ ಅವರಿಗೆ ಶುಭಾಶಯ ತಿಳಿಸಿದ್ದು ಸಿನಿಮಾ ಸಕ್ಸಸ್ ಕಾಣಲಿ ಎಂದಿದ್ದಾರೆ..