ಹುಟ್ಟುವಾಗಲೇ ಬಾಯಲ್ಲಿ ಚಿನ್ನದ ಸ್ಪೂನ್ ಇಟ್ಟುಕಂಡು ಹುಟ್ಟಿದ್ದ ತುಕಾಲಿ.. ‌ ಐಶಾರಾಮಿ ಬಂಗಲೆಯಲ್ಲಿ ಇವನ ವಾಸ..

0 views

ಬಿಗ್‌ ಬಾಸ್‌ ಸೀಸನ್‌ ಹತ್ತು ಶುರುವಾಗಿ ಅದಾಗಲೇ ಒಂದು ವಾರ ಕಳೆದೇ ಹೋಯಿತು.. ಇತ್ತ ಮನೆಯ ಸದಸ್ಯರು ಇನ್ನು ಬಿಗ್‌ ಬಾಸ್‌ ಮನೆಗೆ ಹೊಂದಿಕೊಳ್ಳೋ ಸಮಯದಲ್ಲಿಯೇ ಅದಾಗಲೇ ಮೊದಲ ವಾರದ ಎಲಿಮಿನೇಷನ್‌ ಕೂಡ ಬಂದಾಯಿತು.. ಇಂದು ವಾರದ ಕತೆಯಲ್ಲಿ ಒಂದಷ್ಟು ಜನರ ಗ್ರಹಚಾರ ಬಿಡಿಸೋ ಕಿಚ್ಚ ಸುದೀಪ್‌ ಅವರ ಕೆಲಸ ಕೂಡ ಹಾಗೆ ಬಾಕಿ ಇದೆ.. ಇನ್ನು ಕಳೆದ ಒಂದು ವಾರದಲ್ಲಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ಹದಿನೇಳು ಜನ ಸ್ಪರ್ಧಿಗಳಲ್ಲಿ ಒಂದಿಷ್ಟು ಜನರ ನಿಜ ಬಣ್ಣಗಳೂ ಕೂಡ ಬಯಲಾಗಿದೆ.. ಅದರಲ್ಲೊಬ್ಬ ಮಹಾಶಯ ಈ ತುಕಾಲಿ.. ಹೌದು ಇದೇ ತುಕಾಲಿ ಸಂತೋಷನ ತುಕಾಲಿತನ ಒಂದು ವಾರದಲ್ಲಿಯೇ ಪ್ರೇಕ್ಷಕರಿಗೆ ವಾಕರಿಕೆ ಬರುವಷ್ಟು ಕಿರಿಕಿರಿಯನ್ನುಂಟು ಮಾಡಿದೆ ಎನ್ನುವುದು ಅಷ್ಟೇ ಸತ್ಯ.. ಈ ತುಕಾಲಿ ಕಂಡವರ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳುವ ಸ್ವಭಾವದವನಿರಬೇಕು.. ಬಂದ ದಿನದಿಂದಲೂ ಡ್ರೋನ್‌ ಪ್ರತಾಪನ ಬಾಲ ಹಿಡಿದುಕೊಂಡು ಆತನ ವಿಚಾರಗಳನ್ನೇ ಕೆಣಕಿ ಕೆಣಕಿ ಮಾತನಾಡೋದಲ್ಲ ಬದಲಿಗೆ ಅವನ ವಿಚಾರಗಳನ್ನು ತೆಗೆದು ಹೀಯಾಳಿಸೋದೆ ಇವನ ಜೀವನ ಆಗೋಗಿದೆ.. ಮಾತು ಎತ್ತಿದ್ರೆ ಎಂಟ್ರ್ಟೈನಮೆಂಟ್‌ ಕೊಡಬೇಕು ಎಂಟ್ರ್ಟೈನ್ಮೆಂಟ್‌ ಕೊಡಬೇಕು ಅನ್ನೋನು ತನ್ನ ತುಕಾಲಿತನ ಮಾತ್ರವೇ ಪ್ರದರಶನಕ್ಕಿಂಟಂತೆ ಕಾಣುತ್ತಿದೆ.. ದೊಡ್ಡ ಪುಡಾಂಗ್‌ ರೀತಿ ಆಡುತ್ತಿರುವ ಈ ತುಕಾಲಿ ಡ್ರೋನ್‌ ಪ್ರತಾಪನ ಹಳೇ ವಿಚಾರಗಳನ್ನು ಕೆಣಕಿ ಕೆಣಕಿ ಹೀಯಾಳಿಸುತ್ತಲೇ ಇದ್ದನು.. ಕೊನೆಗೆ ಪ್ರತಾಪ್‌ ಇದೆಲ್ಲವನ್ನು ತಡೆಯಲಾಗದೇ ಬಾತ್‌ ರೂಮಿನಲ್ಲಿ ಕಣ್ಣೀರಿಟ್ಟಿದ್ದು ನಿಜಕ್ಕೂ ಬೇಸರವನ್ನುಂಟು ಮಾಡಿತು..

ಇಲ್ಲಿ ಪ್ರತಾಪ್‌ ಈ ಹಿಂದೆ ಮಾಡಿರುವ ತಪ್ಪುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ.. ಆದರೆ ಒಬ್ಬ ಮನುಷ್ಯ ಒಮ್ಮೆ ತಪ್ಪು ಮಾಡಿದ ಅಂತ ಜೀವನ ಪೂರ್ತಿ ಆತನನ್ನು ಹೀಯಾಳಿಸೇ ಜೀವನ ಮುಗಿಸೋದು ಎಷ್ಟು ಸರಿ.. ಅಕಸ್ಮಾತ್‌ ಆತ ಇದೆಲ್ಲವನ್ನು ತಡೆಯಲಾಗದೇ ಜೀವ ಕಳೆದುಕೊಂಡರೆ ಆಗ ಅಯ್ಯೋ ಪಾಪ.. ಅವನಿಗೆ ಇನ್ನೊಂದು ಅವಕಾಶ ಕೊಡಬೇಕಿತ್ತು ಅನ್ನೋ ಈ ತುಕಾಲಿಗಳು ಇದ್ದಾಗ ಇನ್ನೊಂದು ಅವಕಾಶ ಕೊಡೋದು ಬಿಟ್ಟು ಈ ರೀತಿ ಹೀಯಾಳಿಸೋದೆಷ್ಟು ಸರಿ.. ಈ ತುಕಾಲಿಗಳು ಅವಕಾಶ ಕೊಡೋದು ಬೇಡ.. ಆತನೇ ಹೊಸ ಜೀವನ ಆರಂಭಹಿಸಲು ಏನೋ ಉದ್ಯಮ ಮಾಡಿಕೊಂಡು ಈಗ ಬಿಗ್‌ ಬಾಸ್‌ ಮನೆಗೂ ಕೂಡ ಕಾಲಿಟ್ಟಿದ್ದಾನೆ, ಆದರೆ ಈ ತುಕಾಲಿಗಳು ಹೆಚ್ಚು ದಿನ ಬಿಗ್‌ ಬಾಸ್‌ ಮನೆಯಲ್ಲಿ ಉಳಿಯೋ ಸಲುವಾಗಿ ಪ್ರತಾಪನ ವಿಚಾರಗಳನ್ನೇ ಬಿಟ್ಟು ಬಿಡದೇ ನೆಕ್ಕುತ್ತಿರುವುದೇಕೆ ಅನ್ನೋದಕ್ಕೆ ಆ ತುಕಾಲಿಗಳೇ ಉತ್ತರ ನೀಡಬೇಕು.. ನಿನ್ನೆಯ ಸಂಚಿಕೆಯಲ್ಲಿ ಡ್ರೋನ್‌ ಪ್ರತಾಪ್‌ ಈ ಹಿಂದೆ ವರ್ಷಗಳ ಹಿಂದೆ ಮಾಡಿರುವ ಭಾಷಣದ ಬಗ್ಗೆ ಮಾತನಾಡುತ್ತಾ ಅವನು ಅಷ್ಟು ಕೆಜಿ ಸೂಟ್‌ ಕೇಸ್‌ ಹೊತ್ತುಕೊಂಡು ಹೋಗಿದ್ದನಂತೆ.. ಅವನಿಗೆ ಡ್ರೋನ್‌ ಅಸೆಂಬಲ್‌ ಮಾಡೋದಕ್ಕೆ ಬರೋದಿಲ್ಲ.. ಟಿವಿಯಲ್ಲಿ ಕೂತು ಬೇರೆಯವರು ಕೇಳೋ ಪ್ರಶ್ನೆಗೆ ತಬ್ಬಿಬ್ಬಾಗಿ ಹೋದ.. ಜಗತ್ತಿನ ಎಲ್ಲಾ ಮೀಡಿಯಾ ಕಣ್ಣಿಗೂ ಮಣ್ಣು ಹಾಕಿದ್ದ ಹೀಗೆ ತನ್ನ ತುಕಾಲಿ ಮಾತುಗಳಿಂದ ಆ ಹುಡುಗನನ್ನು ಹೀಯಾಳಿಸುತ್ತಲೇ ಇದ್ದ..

ಅಲ್ಲಯ್ಯ ಮಹಾಶಯ ತುಕಾಲಿ ಜೀವನದಲ್ಲಿ ಕಷ್ಟ ಅನ್ನೋದು ಎಲ್ಲರಿಗೂ ಇದ್ದೇ ಇರುತ್ತದೆ.. ಹಾಗೆ ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ತಪ್ಪು ಮಾಡೇ ಮಾಡಿರುತ್ತಾರೆ.. ಅವನದ್ದು ಬೆಳಕಿಗೆ ಬಂದಿದೆ.. ನಿನ್ನದು ನಿನ್ನೊಳಗೇ ಇರಬಹುದು ಅಥವಾ ನಿನ್ನ ಸ್ನೇಹಿತರಿಗೆ ಹೆಂಡತಿಗೆ ಗೊತ್ತಿರಬಹುದು.. ತಪ್ಪು ಮಾಡಿದವರು ಮತ್ತೆ ಹೊಸ ಜೀವನ ಮಾಡಲೇ ಬಾರದಾ? ನಿನ್ನ ಜನ್ಮವೆಲ್ಲಾ ಮತ್ತೊಬ್ಬರನ್ನು ಹೀಯಾಳಿಸೋದೇ ಆಯ್ತಲ್ಲಯ್ಯಾ.. ಅವನನ್ನು ಇಷ್ಟು ಹೀಯಾಳಿಸೋ ಈ ತುಕಾಲಿ ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ್ದನೋ ಏನೋ.. ಅಥವಾ ಐಶಾರಾಮಿ ಬಂಗಲೆಯಲ್ಲಿ ಇವನ ವಸವಿತ್ತೇನೋ.. ಅಷ್ಟೇ ಏಕೆ ಇವನು ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಇವನ ಕಟೌಟ್‌ ಮೆಜಸ್ಟಿಕ್‌ ನಲ್ಲಿ ರಾರಾಜಿಸಿತ್ತೋ ಏನೋ.. ಕಾಮಿಡಿ ಶೋ ಗೆ ಬರೋಕೆ ಮುಂಚೆ ಇವನ ಜೀವನ ಹೇಗಿತ್ತು ಎಂಬುದನ್ನು ಒಮ್ಮೆ ನೆನೆಸಿಕೊಂಡಿದ್ದರೂ ಸಾಕು ಈ ರೀತಿ ಮತ್ತೊಬ್ಬರನ್ನು ಹೀಯಾಳಿಸುವ ಮನಸ್ಸು ಕೂಡ ಬಹುಶಃ ಇವನಿಗೆ ಆಗುತ್ತಿರಲಿಲ್ಲ..

ಮತ್ತೊಬ್ಬರನ್ನು ಹೀಯಾಳಿಸಿಕೊಂಡು ದುಡ್ಡು ಸಂಪಾದನೆ ಮಾಡೋ ನಿನಗಿಂತ.. ಡ್ರೋನ್‌ ನ ತಯಾರು ಮಾಡಿಲ್ಲ ಅಂದರೂ ಕೂಡ.. ಕನಿಷ್ಟ ಅಸೆಂಬಲ್‌ ಮಾಡಿಕೊಂಡು ರೈತರಿಗೆ ಉಪಯೋಗ ಆಗಬೇಕು ಅನ್ನೋ ಒಳ್ಳೇ ಉದ್ದೇಶ ಇಟ್ಟುಕೊಂಡಿರೋ ಅವನೇ ಎಷ್ಟೋ ವಾಸಿ.. ನಿನ್ನ ರೀತಿ ಅವನು ಯಾರನ್ನು ಹೀಯಾಳಿಸಿ ಮಾತನಾಡಿಲ್ಲ ಬಿಡು.. ಸುಳ್ಳು ಹೇಳಿದ್ದರೂ ಕೂಡ ಜನರು ಅವನನ್ನು ಕ್ಷಮಿಸಿ ಹೊಸ ಜೀವನ ಮಾಡಲಿ ಎನ್ನುತ್ತಿದ್ದಾರೆ.. ಆದರೆ ಜೊತೆಯಲ್ಲೇ ಇದ್ದುಕೊಂಡು ಅವನ ವಿಚಾರವನ್ನೇ ಮಾತನಾಡಿಕೊಂಡು ಬಿಗ್‌ ಬಾಸ್‌ ನಿಂದ ಹಣಕ್ಕಾಗಿ ದಿನಗಳನ್ನು ಮುಂದೂಡುತ್ತಿರುವ ನೀನು ನಿಜಕ್ಕೂ ತುಕಾಲಿಯೇ.. ಬಹುಶಃ ಇವನ ಕಾಮಿಡಿ ನೋಡಿ ಕಾಮಿಡಿಗೋಸ್ಕರ ಜನ ಇವನನ್ನು ತುಕಾಲಿ ಎಂದು ಕರೆಯುತ್ತಾರೆ ಎಂದು ಭಾವಿಸಿದ್ದೆವು.. ಆದರೆ ಇವನ ಗುಣ ನೋಡಿ ಯಾರೋ ಸರಿಯಾಗಿಯೇ ಹೆಸರಿಟ್ಟಿದ್ದಾರೆ.. ತುಕಾಲಿ.. ಪ್ರತಾಪ್‌ ವಿಚಾರ ಇಲ್ಲದಿದ್ದರೆ ಈ ವಾರ ನೀನು ಸಂಪೂರ್ಣ ಖಾಲಿ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.