ತುಕಾಲಿ ಸಂತೋಷನ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್.. ನಿನಗೆ ಯಾವನ್ ಅಧಿಕಾರ ಕೊಟ್ಟಿದ್ದು?

0 views

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಮೊದಲ ವಾರಾಂತ್ಯದ ಕಾರ್ಯಕ್ರಮ ವಾರದ ಕತೆ ಶೋ ಆರಂಭವಾಗಿದ್ದು ತುಕಾಲಿ ಸಂತೋಷನ ಗ್ರಹಚಾರ ಬಿಡಿಸಿ ಕ್ಯಾಕರಿಸಿ ಮುಖಕ್ಕೆ ಉಗಿದಿದ್ದಾರೆ ಕಿಚ್ಚ ಸುದೀಪ್ ಅವರು.. ಹೌದು ಬಿಗ್ ಬಾಸ್ ಸೀಸನ್ ಹತ್ತರ ಮೊದಲ ವಾರದ ಎಲಿಮಿನೇಷನ್ ಮಾಡಲು ಬಂದಿರುವ ಕಿಚ್ಚ ಸುದೀಪ್ ಅವರು ವಾರದ ಕತೆ ಕಾರ್ಯಕ್ರಮದಲ್ಲಿ ಕಳೆದ ವಾರ ಬಿಗ್ ಬಾಸ್ ಮನೆಯ ಸದಸ್ಯರು ಮಾಡಿದ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ.. ಅದಕ್ಕೂ ಮೀರಿ ಮನುಷ್ಯತ್ವವನ್ನೇ ಮರೆತು ನಡೆದುಕೊಂಡ ಕೆಲ ಸ್ಪರ್ಧಿಗಳ ಗ್ರಹಚಾರವನ್ನೂ ಸಹ ಬಿಡಿಸಿದ್ದು ಆ ಸದಸ್ಯರಿಗೆ ಮುಖಕ್ಕೆ ಹೊಡೆದಂತಾಗಿದೆ..

ಹೌದು ಕಳೆದ ಒಂದು ವಾರದಲ್ಲಿ ಬಿಗ್ ಬಾಸ್ ಮನೆಯ ತುಕಾಲಿ ಸಂತೋಷ ದೊಡ್ಡ ಪುಡಾಂಗಿನ ರೀತಿ ತಾನೇನೋ ಆಕಾಶದಿಂದ ಇಳಿದು ಬಂದವನ‌ ರೀತಿ ಡ್ರೋನ್ ಪ್ರತಾಪನ ಬಗ್ಗೆ ಹೀಯಾಳಿಸಿ ಮಾತನಾಡಿ ನಾಲಿಗೆ ಹರಿಬಿಟ್ಟಿದ್ದನು.. ತಾನೇನೋ ದೊಡ್ಡ ಲಾರ್ಡ್ ಲಬಕ್ ದಾಸ ಎಂದು ಇದ್ದಷ್ಟು ದಿನ ಪ್ರತಾಪನ ವಿಚಾರವನ್ನೇ ಮಾತನಾಡಿ ದೊಡ್ಡ ಸಾಧನೆ ಮಾಡಿದಂತೆ ಬೀಗುತ್ತಿದ್ದನು.. ಮನುಷ್ಯ ತಪ್ಪು ಮಾಡಿದ ನಂತರ ಅದರಿಂದ ಹೊರ ಬರಲು ಒಂದು ಅವಕಾಶ ನೀಡಬೇಕು.. ಸಾಧ್ಯವಾಗದಿದ್ದರೆ ತೆಪ್ಪಗೆ ಇರಬೇಕು.. ಅದನ್ನು ಬಿಟ್ಟು ಒಬ್ಬ ಮನುಷ್ಯನನ್ನು ಹೀಯಾಳಿಸಿ ನಗ್ತೀನಿ ಎಂದರೆ ಅವನ ಕೀಳು ಮನಸ್ತಿತಿ ಏನೆಂಬುದನ್ನು ತೋರುತ್ತದೆ..

ಇದೇ ವಿಚಾರವಾಗಿ ವಾರದ ಕತೆಯಲ್ಲಿ ಮಾತನಾಡಿದ ಸುದೀಪ್ ಅವರು.. ತುಕಾಲಿ ಅವರೇ ಒಬ್ಬ ಮನುಷ್ಯನನ್ನು ಹೀಯಾಳಿಸುವ ಅಧಿಕಾರ ನಿಮಗ್ ಯಾರು ಕೊಟ್ರು ಎಂದು ಖಡಕ್ ಆಗಿ ಕೇಳಿದ್ದಾರೆ.. ಇದಕ್ಕೆ ತಬ್ಬಿಬ್ಬಾದ ತುಕಾಲಿ.. ಎಲ್ಲರೂ ನಗ್ತಿದ್ರಲ್ಲಾ ಅಂತ ಮಾತನಾಡಿದೆ ಎಂದಿದ್ದಾನೆ.. ಇದಕ್ಕೆ ಉತ್ತರಿಸಿದ ಸುದೀಪ್ ಅವರು ಮತ್ತೊಬ್ಬನ ಕಣ್ಣೀರು ನಿಮ್ಮ ಗಳ ನಗುಗೆ ಕಾರಣ ಆದ್ರೆ ನೀವೆಂತವರು ಎಂದಿದ್ದಾರೆ.. ತುಕಾಲಿಯನ್ನು ಮಾತ್ರವಲ್ಲ ಅವನ ಮಾತಿಗೆ ವಾರ ಪೂರ್ತಿ ಹಲ್ಲಿ ಕಿಸಿಯುತ್ತಿದ್ದ ಎಲ್ಲರಿಗೂ ಉಗಿದಿದ್ದಾರೆ.. ಅಷ್ಟೇ ಅಲ್ಲದೇ ಪ್ರತಾಪ್ ನನ್ನು ಕೆಲ ಸಂದರ್ಭಗಳಲ್ಲಿ ಸಿಕ್ಕಿಸಿ ತಾವು ಬಚಾವ್ ಆಗುತ್ತಿದ್ದವರನ್ನೂ ಸಹ ತರಾಟೆಗೆ ತೆಗೆದುಕೊಂಡಿದ್ದಾರೆ.. ಅದರಲ್ಲಿ‌ ಮುಖ್ಯವಾಗಿ ಭಾಗ್ಯಶ್ರೀ ಅವರು ಮೊನ್ನೆ ರಾತ್ರಿ ಹಸಿವಾಗ್ತಿದೆ ಎಂದು ಡ್ರೋನ್ ಪ್ರತಾಪ್ ನ ಬಳಿ ಹೇಳಿದಾಗ ಅವರಿಗಾಗಿ ಆ ರಾತ್ರಿಯಲ್ಲಿ ರೊಟ್ಟಿ ಮಾಡಿಕೊಟ್ಟಿದ್ದ ಪ್ರತಾಪ್ ನನ್ನೇ ಮರಾನೇ ದಿನ ಸಿಕ್ಕಿಸಿ ತಮಾಷೆ ನೋಡಿದ್ದರು.. ಮನೆಯವರೆಲ್ಲಾ ಹೀಯಾಳಿಸುವಾಗ ನಾನು ರೊಟ್ಟಿ ಮಾಡಿಕೊಡು ಎಂದು ಕೇಳಲೇ ಇಲ್ಲ ಆದರೂ ಅವನೇ ಮಾಡಿಕೊಟ್ಟ ಎಂದಿದ್ದರು..

ಈ ವಿಚಾರವನ್ನು ತೆಗೆದು ಮಾತನಾಡಿದ ಸುದೀಪ್ ಅವರು ಮಧ್ಯರಾತ್ರಿಯಲ್ಲಿ ನಿಮಗೆ ಹಸಿವು ಎಂದಾಗ ಊಟ ಕೊಟ್ಟವನ ಪರ ನಿಲ್ಲಬೇಕಾದದ್ದು ನಿಮ್ಮ ಕರ್ತವ್ಯ ಆಗಿತ್ತು.. ಆದರೆ ನೀವೇನು ಮಾಡಿದ್ರಿ ಭಾಗ್ಯಶ್ರೀ ಅವರೇ ಎಂದು ಕೇಳಿದ್ದು ಭಾಗ್ಯಶ್ರೀ ಅವರೂ ಕೂಡ ತಬ್ಬಿಬ್ಬಾಗಿ ಹೋಗಿದ್ದಾರೆ.. ಒಟ್ಟಿನಲ್ಲಿ ಸಾರಾ ಸಗಟಾಗಿ ಮನೆಯ ಸದಸ್ಯರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿರುಚ ಸುದೀಪ್ ಅವರು ಅವರುಗಳು ಕಳೆದ ವಾರ ಮಾಡಿದ ತಪ್ಪನ್ನು ತಮ್ಮದೇ ಶೈಲಿಯಲ್ಲಿ ತಿಳಿ ಹೇಳಿದ್ದಾರೆ ಎನ್ನಬಹುದು..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.