ಎರಡು ಮಕ್ಕಳಿದ್ದರೂ ಪ್ರಿಯಕರನ ಜೊತೆ ಮೈಸೂರಿನಲ್ಲಿ ಈಕೆ ಮಾಡಿದ ಕೆಲಸ ನೋಡಿ.. ಬೆಚ್ಚಿಬಿದ್ದ ಪುಟ್ಟ ಮಕ್ಕಳು ಏನಾದರು ಗೊತ್ತಾ.. ಮನಕಲಕುತ್ತದೆ.

0 views

ಮದುವೆ ಅನ್ನೋದು ಒಂದು ಪವಿತ್ರವಾದ ಸಂಬಂಧ.. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಬ್ಬರನೊಬ್ಬರು ನಂಬಿ ತಮ್ಮ ಮುಂದಿನ ಸಂಪೂರ್ಣ ಜೀವನವನ್ನು ಜೊತೆಯಾಗಿ ಸಾಗಿಸುವರು. ಇಬ್ಬರ ಆ ಬಾಂಧವ್ಯಕ್ಕೆ ನಂಬಿಕೆಯೇ ಸೇತುವೆಯಾಗಿರುತ್ತದೆ. ಆದರೆ ಅಲ್ಲೊಂದು ಇಲ್ಲೊಂದು ನಡೆಯುವ ಇಂತಹ ಘಟನೆಗಳು ಗಂಡ ಹೆಂಡತಿ ಎಂಬ ಸಂಬಂಧದ ಪವಿತ್ರತೆಯನ್ನು ಹಾಳು ಮಾಡುವಂತಿದೆ. ಅದರಲ್ಲೂ ಎರಡು ಮಕ್ಕಳಿದ್ದುಕೊಂಡು ಈ ಮಹಾತಾಯಿ ಮಾಡಿರೋ ಕೆಲಸಕ್ಕೆ ಇದೀಗ ಎರಡು ಪುಟ್ಟ ಕಂದಮ್ಮಗಳು ಏನಾಗಿವೆ ಎಂದು ತಿಳಿದರೆ ನಿಜಕ್ಕೂ ಮನಕಲಕುತ್ತದೆ.. ಹೌದು ಈಕೆಯ ಹೆಸರು ಉಮಾ.. ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹುಣಸಗಳ್ಳಿಯಲ್ಲಿ ಈ ಘಟನೆ ನಡೆದಿದೆ.. ಈಕೆಯ ಗಂಡನ ಹೆಸರು ವೆಂಕಟರಾಜು.. ಉಮಾ ಹಾಗೂ ವೆಂಕಟರಾಜು ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದರು.. ಸುಂದರ ಸಂಸಾರ, ಯಾವುದಕ್ಕೂ ಕೊರತೆ ಇರಲಿಲ್ಲ.. ಆದರೆ ಹೆಂಡತಿ ಮಾಡಿದ ಆ ಒಂದು ಕೆಲಸಕ್ಕೆ ಇದೀಗ ಆ ಕುಟುಂಬವೇ ಇಲ್ಲವಾಗಿ ಹೋಯ್ತು.

ಹೌದು ಮದುವೆಯಾಗಿ ಎರಡು ಮಕ್ಕಳಿದ್ದರೂ ಸಹ ಉಮಾಗೆ ಮತ್ತೊಬ್ಬನ ಮೇಲೆ ಆಕರ್ಷಣೆಯಾಗಿತ್ತು.. ಹೌದು ಮದುವೆಯಾಗಿ‌ ಮಕ್ಕಳಿದ್ದರೂ ಸಹ ಉಮಾ ಅವಿನಾಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತನ ಜೊತೆ ಸಂಬಂಧಹೊಂದಿ ದ್ದಳು. ಇಷ್ಟಕ್ಕೆ ಸುಮ್ಮನಾಗದ ಉಮಾ ದೊಡ್ಡದೊಂದು ದುಡುಕಿನ ನಿರ್ಧಾರವನ್ನು‌ ಮಾಡಿಬಿಟ್ಟಳು. ಹೌದು ತನ್ನ ಪ್ರೀತಿಗೆ ಅಡ್ಡವಾಗಿದ್ದ ತನ್ನ ಗಂಡನನ್ನು ಇನ್ನಿಲ್ಲವಾಗಿಸುವ ಧೈರ್ಯ ತೋರಿಯೇ ಬಿಟ್ಟಳು. ಹೌದು ಇಷ್ಟು ವರ್ಷ ಜೊತೆಯಾಗಿ ಸಂಸಾರ ಮಾಡಿದ ಪತ್ನಿಯಿಂದಲೇ ತಾನು ಜೀವ ಕಳೆದುಕೊಳ್ಳುವೆನೆಂದು ಬಹುಶಃ ಆಕೆಯ ಗಂಡ ಕನಸಿನಲ್ಲಿಯೂ ಊಹಿಸಿರಲಿಲ್ಲ..

ಹೌದು ಪತಿ ವೆಂಕಟರಾಜುಗೆ ಉಮಾ ಕಾಫಿಯಲ್ಲಿ ನಿದ್ರೆಮಾತ್ರೆ ಸೇರಿಸಿ ನೀಡಿದ್ದು ನಂತರ ಆತನನ್ನು ಉಮಾ ಹಾಗೂ ಅವಿನಾಶ್ ಸೇರಿಕೊಂಡು ಇನ್ನಿಲ್ಲವಾಗಿಸಿಬಿಟ್ಟರು. ಹೌದು ಬದುಕೋ ಮೂರು ದಿನದ ಜೀವನಕ್ಕೆ ಐದು ನಿಮಿಷದ ಸುಖಕ್ಕೆ ತನ್ನ ಜೊತೆ ಅಷ್ಟು ವರ್ಷ ಸಂಸಾರ ಮಾಡಿ ಎರಡು ಮಕ್ಕಳ ಕೊಟ್ಟವನನ್ನೇ ಇಲ್ಲವಾಗಿಸಿದಳು.. ವೆಂಕಟರಾಜು ಮಂಡ್ಯ ಜಿಲ್ಲೆಯ ಹೊನಗನಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಕಳೆದ ಹತ್ತು ವರ್ಷಗಳ ಹಿಂದೆ ಉಮಾಳನ್ನು ಮದುವೆಯಾಗಿದ್ದ.. ಉಮಾ ಮೂಲತಃ ಶ್ರೀರಂಗಪಟ್ಟಣ ತಾಲೂಕಿನ ಬಳ್ಳೆಕೆರೆ ಗ್ರಾಮದ ನಿವಾಸಿ. ಈ ದಂಪತಿಗೆ ಎಂಟು ವರ್ಷದ ಒಂದು ಹೆಣ್ಣು ಮಗು ಹಾಗೂ ಆರು ವರ್ಷದ ಗಂಡು ಮಗುವಿದೆ. ಆದರೆ ಇದೀಗ ಆ ಎರಡೂ ಮಕ್ಕಳು ಬೀದಿಯಲ್ಲಿ ನಿಲ್ಲುವಂತಾಗಿದೆ. ಹೌದು ಉಮಾ ಈ ಕೆಲಸ ಮಾಡಿದ್ದು ಕಳೆದ ವರ್ಷ ಅಕ್ಟೋಬರ್ ನಲ್ಲಿ..

ಹೌದು ಉಮಾ ಹಾಗೂ ವೆಂಕಟರಾಜು ನಡುವೆ ವಯಸ್ಸಿನ ಅಂತರ ಹೆಚ್ಚಿದ್ದ ಕಾರಣ ಆಗಾಗ ಮನಸ್ತಾಪ ಉಂಟಾಗುತ್ತಲೇ ಇತ್ತು. ಮನಸ್ತಾಪದ ನಡುವೆ ಎರಡು ಮಕ್ಕಳು ಸಹ ಆಗಿದ್ದವು. ಆದರೆ ಉಮಾಗೆ ತನ್ನ ಪಕ್ಕದ ಮನೆಯ ನಿವಾಸಿ ಅವಿನಾಶ್ ಜೊತೆ ಪ್ರೇಮಾಂಕುರವಾಗಿ ಕೊನೆಗೆ ಕಳೆದ ಅಕ್ಟೋಬರ್ ನಲ್ಲಿ ಇಂತಹ ಕೆಲಸ ಮಾಡಿದ್ದು ಅದನ್ನು ಸ್ವಾಭಾವಿಕ ಎಂದು ಬಿಂಬಿಸಿದ್ದರು.. ಆದರೆ ಇದೀಗ ಇವರ ಆಟ ಬಯಲಾಗಿದ್ದು ಉಮಾ ಹಾಗೂ ಅವಿನಾಶ್ ಇಬ್ಬರನ್ನೂ ಸಹ ಪೊಲೀಸರು ಬಂಧಿಸಿದ್ದು ಇಬ್ಬರು ಕಂಬಿ ಎಣಿಸುವಂತಾಗಿದೆ. ಆದರೆ ಇವರ ಆಟಕ್ಕೆ ಬಲಿಯಾಗಿದ್ದು ಮಾತ್ರ ಆ ಎರಡು ಪುಟ್ಟ ಕಂದಮ್ಮಗಳು. ಅತ್ತ ಅಪ್ಪನೂ ಇಲ್ಲ.. ಇತ್ತ ಮತ್ತೊಬ್ಬನ ಸಹವಾಸದಿಂದ ಗಂಡನನ್ನೇ ಇಲ್ಲವಾಗಿಸಿದ ಅಮ್ಮನೂ ಇಲ್ಲ. ಬೀದಿಗೆ ಬಿದ್ದ ಎರಡು ಪುಟ್ಟ ಕಂದಮ್ಮಗಳು ಮಾಡಿದ ತಪ್ಪಾದರೂ ಏನು..

ದಯವಿಟ್ಟು ಮದುವೆಯಾದ ನಂತರ ಅದೇನೆ ಆದರೂ ಮಕ್ಕಳನ್ನು ಅನಾಥರನ್ನಾಗಿಸಬೇಡಿ.. ಅವರೇನು ನಿಮ್ಮ ಹೊಟ್ಟೇಲಿ ಹುಟ್ಟಬೇಕು ಎಂದು ಬೇಡಿಕೊಂಡಿರೋದಿಲ್ಲ. ನಿಮ್ಮ ತೀ ಗಳನ್ನು ತೀರಿಸಿಕೊಳ್ಳಲು ಮಕ್ಕಳನ್ನಿ ಹೆತ್ತು ಕೊನೆಗೆ ಈ ರೀತಿ ಬೀದಿ ಪಾಲು ಮಾಡುವುದೆಷ್ಟು ಸರಿ.. ಆ ಮಕ್ಕಳು ಈಗ ತಿನ್ನುವ ಅನ್ನದಿಂದ ಹಿಡಿದು ಪ್ರತಿಯೊಂದಕ್ಕೂ ಮತ್ತೊಬ್ಬರ ಮುಂದೆ ಕೈ ಚಾಚಬೇಕು.. ಆ ಮಕ್ಕಳ ಯಾವ ತಪ್ಪಿಗೆ ಈ ಶಿಕ್ಷೆ.. ನಿಮ್ಮ ಜನ್ಮಗಳಿಗಿಷ್ಟು.ಮ್ ಇನ್ನಾದರೂ ಇಂತಹ ಕೀಳು ಮನಸ್ಥಿತಿಗಳು ಬದಲಾಗಲಿ.. ಮತ್ತಷ್ಟು ಮಕ್ಕಳು ಅನಾಥರಾಗದಿರಲಿ.. ಗಂಡಾಗಲಿ ಹೆಣ್ಣಾಗಲಿ ಮದುವೆಯಾದ ನಂತರ ಕುಟುಂಬಕ್ಕಾಗಿ ಬದುಕಿ.. ಬದಲಾಗಿ ಐದು ನಿಮಿಷದ ಸುಖಕ್ಕಾಗಿ ಸಂಸಾರವನ್ನೇ ಹಾಳು ಮಾಡಿಕೊಳ್ಳದಂತಾಗಲಿ..