ರಾಬರ್ಟ್ ಸಿನಿಮಾದಿಂದ ನಷ್ಟ? ಪ್ರತಿಕ್ರಿಯೆ ಕೊಟ್ಟ ನಿರ್ಮಾಪಕ ಉಮಾಪತಿ ಶ್ರೀನಿವಾಸ್..

0 views

ಸ್ಯಾಂಡಲ್ವುಡ್ ನಲ್ಲಿ ಸದ್ಯ ಕೊರೊನಾ ಲಾಕ್ ಡೌನ್ ಮುಗಿದು ಚಿತ್ರಮಂದಿರಗಳು ಈಗ ತಾನೆ ಪುನರಾರಂಭಗೊಂಡಿವೆ.. ಕೆಲ ದಿನಗಳಲ್ಲಿ‌ ಮತ್ತೆ ಸ್ಯಾಂಡಲ್ವುಡ್ ಕಳೆಗಟ್ಟಲಿದೆ ಎಂಬ ವಿಶ್ವಾಸವಿದೆ.. ಸತತ ಆರು ತಿಂಗಳು ಸ್ತಭ್ದವಾಗಿದ್ದ ಚಿತ್ರರಂಗವೀಗ ಚೇತರಿಕೆಯ ಹಾದಿಯಲ್ಲಿದೆ.. ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ.. ಇನ್ನೇನಿದ್ದರು ಧೈರ್ಯದಿಂದ ಜನ ಥಿಯೇಟರ್ ನತ್ತ ಬರಬೇಕಷ್ಟೆ.. ಈಗಾಗಲೇ ಜನವರಿ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳು ರೀರಿಲೀಸ್ ಆಗಿದ್ದು ಸ್ವಲ್ಪ ಸ್ವಲ್ಪ ಜನರು ಥಿಯೇಟರ್ ಗೆ ಆಗಮಿಸುತ್ತಿದ್ದಾರೆ..‌

ಹೊಸ ಸಿನಿಮಾಗಳ ಬಿಡುಗಡೆಯಾದರೆ ಪ್ರೇಕ್ಷಕರು ಚಿತ್ರಮಂದಿರದತ್ತ ಬರುವರು.. ಚಿತ್ರಮಂದಿರಗಳು ಎಂದಿನಂತೆ ಹೌಸ್ ಫುಲ್ ಆಗುವವು ಎನ್ನುವ ವಿಶ್ವಾಸವನ್ನು ಸಿನಿಮಾ ಮಂದಿ ವ್ಯಕ್ತ ಪಡಿಸಿದ್ದಾರೆ.. ಇನ್ನು ಇದೆಲ್ಲದರ ನಡುವೆ ಸ್ಟಾರ್ ನಟರ ಸಾಕಷ್ಟು ಸಿನಿಮಾಗಳು ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದೆ.. ಹೌದು ದರ್ಶನ್ ಅವರ ರಾಬರ್ಟ್‌ ಸಿನಿಮಾ.. ಯಶ್ ಅವರ ಕೆಜಿಎಫ್ 2.. ಸುದೀಪ್ ಅವರ ಕೋಟಿಗೊಬ್ಬ 3.. ಪುನೀತ್ ಅವರ ಯುವರತ್ನ.. ಶಿವಣ್ಣನ ಭಜರಂಗಿ 2.. ಹೀಗೆ ಸಾಲು ಸಾಲು ದೊಡ್ಡ ಬಡ್ಜೆಟ್ ನ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ..

ಇಂತಹ ಸಮಯದಲ್ಲಿ ಕೆಲವರು ಇಲ್ಲ ಸಲ್ಲದ ಸುದ್ದಿಯನ್ನು ಹಬ್ಬಿಸಿದ್ದಾರೆ.. ಹೌದು ಎಲ್ಲವೂ ಸರಿ ಇದ್ದಿದ್ದರೆ ರಾಬರ್ಟ್ ಸಿನಿಮಾ ಕಳೆದ ಏಪ್ರಿಲ್ ತಿಂಗಳಿನಲ್ಲಿಯೇ ಬಿಡುಗಡೆಯಾಗಬೇಕಿತ್ತು.. ಆದರೆ ಕೊರೊನಾ ಬಂದ ಕಾರಣ ಈ ವರ್ಷಾಂತ್ಯದಲ್ಲಿ ಬಿಡುಗಡೆ ಮಾಡುವ ಪ್ಲಾನ್ ನಲ್ಲಿದ್ದಾರೆ ನಿರ್ಮಾಪಕರು.. ಇನ್ನು ಸಿನಿಮಾ ತಾಯಾರಾಗಿದ್ದರೂ ಬಿಡುಗಡೆಯಾಗಲು ತಡವಾಗಿದ್ದಕ್ಕೆ ನಿರ್ಮಾಪಕರಿಗೆ ನಷ್ಟವಾಗಿದೆ ಎಂದು ಕೆಲವರು ಸುದ್ದಿ ಹರಿಬಿಟ್ಟಿದ್ದರು.. ಆದರೆ ಸದ್ಯ ಈ ಬಗ್ಗೆ ಖುದ್ದು ರಾಬರ್ಟ್ ಸಿನಿಮಾ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಅವರೇ ಪ್ರತಿಕ್ರಿಯೆ ನೀಡಿ ಮಾತನಾಡಿದ್ದಾರೆ..

ಹೌದು ರಾಬರ್ಟ್ ಸಿನಿಮಾದ ಬಂಡವಾಳದ ಬಗ್ಗೆ ಖಡಕ್ ಆಗಿಯೇ ತಿಳಿಸಿರುವ ಉಮಾಪತಿ ಶ್ರೀನಿವಾಸ್ ಅವರು.. ನಾನು ರಾಬರ್ಟ್ ಸಿನಿಮಾ ಗೆ ಏನು ಬಂಡವಾಳ ಹಾಕಿದ್ದೆನೋ ಅದರ ರಿಟರ್ನ್ಸ್ ಲಾಭದ ಸಮೇತ ಅದಾಗಲೇ ನನಗೆ ವಾಪಸ್ ಬಂದಾಗಿದೆ.. ಹಾಗ್ ಇರ್ಬೇಕಾದ್ರೆ ಪದೇ ಪದೇ ಅದನ್ನ ಪ್ರೊವ್ ಮಾಡೋಕೆ ನಾನ್ಯಾಕ್ ಬೇರೆಯವ್ರನ್ನ ಹಾಳ್ ಮಾಡ್ಲಿ? ದರ್ಶನ್ ಸರ್ 20 ವರ್ಷದಿಂದ ಸುಮ್ಮನೆ ಇಂಡಸ್ಟ್ರಿಲಿ ಇಲ್ಲ.. ಅವರಿಗೆ ಇರೋ ಫ್ಯಾನ್ಸ್ ಕ್ರೇಜೇ ಬೇರೆ ತರ ಇದೆ.. ಅದು ಬೇರೆನೇ ಲೆವಲ್‌ ನಲ್ಲಿ ಇದೆ ಎಂದಿದ್ದಾರೆ.‌. ಒಟ್ಟಿನಲ್ಲಿ ಇಲ್ಲಸಲ್ಲದೇ ಸುಮ್ಮನೆ ಮತ್ತೊಬ್ಬರ ಹೆಸರು ಹಾಳು ಮಾಡಲು ಸಿನಿಮಾದಿಂದ ನಷ್ಟವಾಗಿದೆ ಎಂದವರಿಗೆ ಮುಟ್ಟಿ‌ ನೋಡಿಕೊಳ್ಳುವಂತೆ ಕೊಟ್ಟಿದ್ದಾರೆ ಉಮಾಪತಿ ಶ್ರೀನಿವಾಸ್ ಅವರು.‌