ಶೋಭಾ ಕರಂದ್ಲಾಜೆ ಅವರಿಗೆ ಗಂಡನ ವಿಚಾರ ತೆಗೆದು ತರಾಟೆಗೆ ತೆಗೆದುಕೊಂಡ ಉಮಾಶ್ರೀ ಅವರು ಹೇಳಿದ್ದೇನು ಗೊತ್ತಾ?

0 views

ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವಿನ ಜೊತೆಗೆ ಮಹಿಳಾ ರಾಜಕಾರಣಿಗಳ ಮಾತಿನ ವಾಗ್ವಾದಗಳು ಹೆಚ್ಚಾಗಿವೆ.. ಇದಕ್ಕೆ ಕಾರಣ ರಾಜರಾಜೇಶ್ವರಿ ನಗರದಿಂದ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ ಕೆ.ರವಿ ಅವರ ಪತ್ನಿ ಕುಸುಮಾ ಅವರು.. ಹೌದು ಕುಸುಮಾ ಅವರ ವಿಚಾರ ಮಾತನಾಡುವ ವೇಳೆ ಇದೀಗ ಶೋಭಾ ಕರಂದ್ಲಾಜೆ ಅವರ ಗಂಡನ ಕುರಿತಾಗಿ ಉಮಾಶ್ರೀ ಅವರು ಮಾತನಾಡಿದ್ದಾರೆ.‌.

ಹೌದು ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರ ವಿರುದ್ಧವಾಗಿ ಪ್ರಬಲ ಸ್ಪರ್ಧಿಯನ್ನೇ ನಿಲ್ಲಿಸಬೇಕಿದ್ದ ಕಾರಣ ಕಾಂಗ್ರೆಸ್ ಪಕ್ಷ ಡಿಕೆ ರವಿ ಅವರ ಪತ್ನಿ ಕುಸುಮಾ ಅವರನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಘೋಷಿಸಿತು.. ಆದರೆ ಅಲ್ಲಿಂದಲೇ ಶುರುವಾಯಿತು ಸಾಲು ಸಾಲು ಪರ ವಿರೋಧದ ಮಾತುಗಳು‌‌. ಹೌದು ಕೆಲವರು ಕುಸುಮಾ ಅವರ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದರೆ.. ಇನ್ನೂ ಕೆಲವರು ಕುಸುಮಾ ಅವರು ಡಿ ಕೆ ರವಿ ಅವರ ಹೆಸರನ್ನು ಬಳಸಕೂಡದು ಎಂದರು.. ಅತ್ತ ಡಿ ಕೆ ರವಿ ಅವರ ತಾಯಿಯೂ ಸಹ ಕುಸುಮಾ ಅವರು ಡಿ ಕೆ ರವಿ ಹೆಸರು ತೆಗೆದರೆ ನಾನು ಅವಳ ವಿರೋಧವಾಗಿ ಬಂದು ಪ್ರಚಾರ ಮಾಡುತ್ತೇನೆ ಎಂದು ಕಿಡಿಕಾರಿದ್ದರು..

ಇತ್ತ ಕುಸುಮಾ ಅವರು ಇದೆಲ್ಲವನ್ನು ಸಮಾಧಾನದಿಂದಲೇ ತೆಗೆದುಕೊಂಡು ನಾನು ಡಿ ಕೆ ರವಿ ಅವರ ಹೆಸರನ್ನು ಬಳಸಿ ಜನರ ಮುಂದೆ ಹೋಗುವುದಿಲ್ಲ.. ನನ್ನ ಅತ್ತೆ ದೊಡ್ಡವರು ಅವರ ಮಾತುಗಳನ್ನು ಆಶೀರ್ವಾದ ಎಂದುಕೊಳ್ಳುವೆ ಎಂದಿದ್ದರು.. ಇನ್ನು ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ “ಡಿ ಕೆ ರವಿ ಅವರು ದಕ್ಷ ಅಧಿಕಾರಿ.. ಇಂದು ಅವರು ನಮ್ಮ ಜೊತೆ ಇಲ್ಲ.. ಅವರ ಹೆಸರನ್ನು ಬಳಸಿಕೊಂಡರೆ ಒಳ್ಳೆಯದಾಗೊಲ್ಲ ಎಂದಿದ್ದರು.. ಈ ಮಾತು ಬಹಳ ಚರ್ಚೆಗೆ ಕಾರಣವಾಯಿತು.. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕುಸುಮಾ ಅವರು ನಾನು ಅಗ್ನಿಸಾಕ್ಷಿಯಾಗಿ ರವಿ ಅವರನ್ನ ಮದುವೆಯಾಗಿದ್ದೆ.. ಈಗಲೂ ಅವರ ಹೆಂಡತಿಯಾಗಿಯೇ ಉಳಿದಿದ್ದೇನೆ ಎಂದಿದ್ದರು.

ಆದರೆ ಇದೀಗ ಶೋಭಾ ಕರಂದ್ಲಾಜೆ ಅವರ ಮಾತಿಗೆ ಕಾಂಗ್ರೆಸ್ ಪಕ್ಷದ ನಾಯಕಿ ಉಮಾಶ್ರೀ ಅವರು ಮಾತನಾಡಿ ಶೋಭಾ ಕರಂದ್ಲಾಜೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.. ಹೌದು ಅದರಲ್ಲೂ ಶೋಭಾ ಕರಂದ್ಲಾಜೆ ಅವರ ಬಗ್ಗೆ ಮಾತನಾಡುತ್ತಾ ಗಂಡನ ವಿಚಾರ ತೆಗೆದಿದ್ದಾರೆ.‌ ಹೌದು ಇಲ್ಲಿದೆ ನೋಡಿ ಉಮಾಶ್ರೀ ಅವರು ಹೇಳಿದ ಮಾತುಗಳು.. “ಡಿಕೆ ರವಿ ಪತ್ನಿ ಕುಸುಮಾ ಸಂಪ್ರದಾಯ ಬದ್ಧವಾಗಿ ಮದುವೆಯಾಗಿದ್ದಾರೆ.. ಅವರ ಹೆಸರನ್ನು‌ ಕುಸುಮಾ ಹಾಕಿಕೊಳ್ಳಬಾರದು ಅಂದರೆ ಹೇಗೆ? ಅದನ್ನು ಪ್ರಶ್ನೆ ಮಾಡುವ ಆ ಅಧಿಕಾರ ಯಾರಿಗೂ ಇಲ್ಲ.. ಅಷ್ಟೇ ಅಲ್ಲದೇ ಶೋಭಾ ಕರಂದ್ಲಾಜೆ ಅವರಿಗೆ ತಂದೆ ಕಳೆದುಕೊಂಡ ನೋವು ಹೇಗಿರುತ್ತದೆ ಎಂಬ ಅರಿವು ಇರಬಹುದು..

ಆದರೆ ಒಬ್ಬ ಹೆಣ್ಣು ತನ್ನ ಗಂಡನನ್ನು ಕಳೆದುಕೊಂಡಾಗ ಆಗುವ ನೋವು ಹೇಗಿರುತ್ತದೆ ಎಂದು ಅವರಿಗೆ ಅರ್ಥವಾಗುವುದಿಲ್ಲ‌.. ಆ ಹೆಣ್ಣಿನ ಏಕಾಂಗಿತನ.. ಆ ಹೆಣ್ಣಿನ ನೋವಿನ ಅರಿವು ಶೋಭಾ ಅವರಿಗಿಲ್ಲ.. ಶೊಭಾ ಕರಂದ್ಲಾಜೆ ಅವರು ಸಂಸದೆ ಅನ್ನೋದು ನೆನಪಿನಲ್ಲಿರಲಿ.. ಅವರೇನು ಜ್ಯೋತಿಷಿ ಅಲ್ಲ.. ಗಣ್ಡ ಸತ್ತವರು ಗಂಡ ಬಿಟ್ಟವರು ಚುನಾವಣೆಗೆ ನಿಲ್ಲಬಾರದು ಅಂತ ಸಂವಿಧಾನದಲ್ಲಿ ಎಲ್ಲಿಯೂ ಬರೆದಿಲ್ಲ.. ಬಹುಶಃ ಅವರಿಗೆ ಆರ್ ಆರ್ ನಗರದಲ್ಲಿ ತಮ್ಮ ಅಭ್ಯರ್ಥಿ ಸೋಲುವ ಭಯ ಇರಬಹುದೇನೋ.. ಅದಕ್ಕಾಗಿ‌ ಒಂದು ಹೆಣ್ಣಿನ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಗುಡುಗಿದರು.. ಒಟ್ಟಿನಲ್ಲಿ ರಾಜರಾಜೇಶ್ವರಿ ನಗರದ ಚುನಾವಣೆ ಮಾತ್ರ ಬಹಳ ಜೋರಾಗಿಯೇ ಸದ್ದು ಮಾಡುತ್ತಿದ್ದು ಯಾರು ಅಳಿದುಬ್ಯಾರು ಉಳಿಯುವರೋ ಕಾದು ನೋಡಬೇಕಿದೆ..