ಹೊಸ ಉದ್ಯಮ ಆರಂಭಿಸಿದ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ.. ಕೆಲವೇ ದಿನಕ್ಕೆ ಏನಾಗಿದೆ ನೋಡಿ..

0 views

ಕನ್ನಡ ಕಿರುತೆರೆಯ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸ್ಪರ್ಧಿ ವೈಷ್ಣವಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.. ಸಧ್ಯ ಬಿಗ್ ಬಾಸ್ ಮುಗಿದ ಬಳಿಕ ಬೇರೆ ಯಾವುದೇ ಧಾರಾವಾಹಿಯಾಗಲಿ ಅಥವಾ ಶೋಗಳಲ್ಲಾಗಲಿ ಕಾಣಿಸಿಕೊಳ್ಳದ ವೈಷ್ಣವಿ ಇದೀಗ ತಮ್ಮದೇ ಆದ ಹೊಸ ಉದ್ಯಮ ಆರಂಭಿಸಿದ್ದು ಭರ್ಜರಿಯಾಗಿ ಯಶಸ್ವಿಯೂ ಆಗಿದ್ದಾರೆ.. ಹೌದು ವೈಷ್ಣವಿ ಗೌಡ ಕಳೆದ ಹನ್ನೆರೆಡು ವರ್ಷದ ಹಿಂದೆ ದೇವಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಬಂದ ನಟಿ.. ಆನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ಹೌದು ದೇವಿ ಧಾರಾವಾಹಿಯ ಬಳಿಕ ಕೊಂಚ ಬ್ರೇಕ್ ಪಡೆದ ವೈಷ್ಣವಿ ಗೌಡ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದರು.. ಯಾರೋ ಯಾಕೆ ಖುದ್ದು ವೈಷ್ಣವಿ ಅವರೇ ಕನಸಿನಲ್ಲಿಯೂ ಊಹೆ ಮಾಡಿರದ ಮಟ್ಟಕ್ಕೆ ಯಶಸ್ಸು ಪಡೆದರು..

ಒಂದು ಧಾರಾವಾಹಿ ಸಂಪೂರ್ಣ ಧಾರಾವಾಹಿ ತಂಡದವರ ಜೀವನವನ್ನೇ ಬದಲಿಸಿ ಬಿಟ್ಟಿತು.. ಒಳ್ಳೆಯ ಸಂಭಾವನೆ ಒಳ್ಳೆಯ ಹೆಸರು ಕೀರ್ತಿ ಹೀಗೆ ಸತತ ಎಂಟು ವರ್ಷಗಳ ಕಾಲ ಧಾರಾವಾಹಿ ಪ್ರಸಾರ ಗೊಂಡು ದಾಖಲೆಯ ರೇಟಿಂಗ್ ಪಡೆದುಕೊಂಡಿತ್ತು.. ಆ ಸಮಯದಲ್ಲಿಯೇ ಅಗ್ನಿಸಾಕ್ಷಿ ಹತ್ತೊಂಭತ್ತು ಟಿವಿಆರ್ ಪಡೆದುಕೊಳ್ಳುತ್ತಿತ್ತು ಎನ್ನಲಾಗಿದೆ.. ಪ್ರತಿ ರಾತ್ರಿ ಎಂಟು ಗಂಟೆಯಾಯಿತೆಂದರೆ ಸಾಕು ಧಾರಾವಾಹಿ ನೋಡುವವರ ಬಹುತೇಕ ಎಲ್ಲಾ ಮನೆಗಳಲ್ಲಿಯೂ ಅಗ್ನಿಸಾಸಾಸಾಕ್ಷಿ ಎನ್ನುವ ಹಾಡು ಕೇಳಿ ಬರುತಿತ್ತು.. ಇನ್ನು ಈ ಯಶಸ್ಸಿನ ಜರ್ನಿಯಲ್ಲಿ ವೈಷ್ಣವಿ ಹಾಗೂ ವಿಜಯ್ ಸೂರ್ಯ ದೊಡ್ಡ ಮಟ್ಟದ ಯಶಸ್ಸು ಪಡೆದರು..

ನಂತರ ಕೆಲ ವರ್ಷಗಳ ಬಳಿಕ ವಿಜಯ್ ಸೂರ್ಯ ಧಾರಾವಾಹಿ ಬಿಟ್ಟು ಬೇರೆ ವಾಹಿನಿ ಕಡೆಗೆ ಮುಖ ಮಾಡಿದರು.. ಆದರೆ ವೈಷ್ಣವಿ ಮಾತ್ರ ಕೊನೆಯ ಸಂಚಿಕೆಯ ವರೆಗೂ ತಮಗೆ ಹೆಸರು ಹಣ ಕೊಟ್ಟ ಧಾರಾವಾಹಿಯನ್ನು ಬಿಡಲಿಲ್ಲ.. ಇನ್ನು ಧಾರಾವಾಹಿ ಮುಕ್ತಾಯಗೊಂಡ ನಂತರ ಬಿಗ್ ಬಾಸ್ ನಲ್ಲಿ ಅವಕಾಶವೂ ದೊರೆಯಿತು.. ವೈಷ್ಣವಿ ಬಿಗ್ ಬಾಸ್ ಸೀಸನ್ ಎಂಟರ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದು ಟಾಪ್ ಐದು ಸ್ಪರ್ಧಿಗಳ ಪಟ್ಟಿಯಲ್ಲಿದ್ದರು.. ತಮ್ಮ ನೇರ ಹಾಗೂ ಸರಳ ವ್ಯಕ್ತಿತ್ವದಿಂದಲೇ ಜನರ ಮನಗೆದ್ದಿದ್ದ ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ ಯಾವೊಬ್ಬ ಸ್ಪರ್ಧಿಯ ಜೊತೆಯೂ ಚೆಲ್ಲು ಚೆಲ್ಲಾಗಿ ಆಡದೇ ಘನತೆಯನ್ನು ಕಾಪಾಡಿಕೊಂಡಿದ್ದು ಜನರಿಗೆ ಮತ್ತಷ್ಟು ಇಷ್ಟವಾಗಿತ್ತು..

ಇನ್ನು ಬಿಗ್ ಬಾಸ್ ನಿಂದ ಹೊರ ಬಂದ ವೈಷ್ಣವಿ ಗೌಡ ಮತ್ತೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತು ಕೇಳಿ ಬಂದರೂ ಸಹ ಯಾವ ಧಾರಾವಾಹಿಯಲ್ಲಿಯೂ ಯಾವ ಶೋನಲ್ಲಿಯೂ ವೈಷ್ಣವಿ ಕಾಣಿಸಿಕೊಳ್ಳಲಿಲ್ಲ.. ಇತ್ತ ಒಂದು ಧಾರಾವಾಹಿಯಲ್ಲಿ ಬ್ರ್ಯಾಂಡ್ ಆದ ನಂತರ ಮತ್ತೊಂದು ಧಾರಾವಾಹಿಯ ಪಾತ್ರದಲ್ಲಿ ಕಲಾವಿದರುಗಳನ್ನು ಜನರು ಸ್ವೀಕರಿಸುವುದು ಸಹ ಕಷ್ಟವಿದ್ದು ಅದೇ ಕಾರಣಕ್ಕೆ ವೈಷ್ಣವಿ ಅವರಿಗೆ ಕಿರುತೆರೆಯಲ್ಲಿ ಅವಕಾಶಗಳು ದೊರೆಯಲಿಲ್ಲ ಎನ್ನುವ ಮಾತಿದೆ.‌ ಇನ್ನು ಇದರ ನಡುವೆ ಸಿನಿಮಾದಲ್ಲಿ ಅವಕಾಶ ಪಡೆದು ಅಲ್ಲಿ ನಟಿಸಿದ್ದು ಇದೀಗ ವೈಷ್ಣವಿ ಗೌಡ ಅವರು ತಮ್ಮದೇ ಆದ ಸ್ವಂತ ಉದ್ಯಮವನ್ನು ಆರಂಭಿಸಿದ್ದಾರೆ..

ಹೌದು ವೈಷ್ಣವಿ ಗೌಡ ಅವರು ಅನೇಕ ಆನ್ಲೈನ್ ಜಾಹೀರಾತುಗಳಲ್ಲಿ‌ ಕಾಣಿಸಿಕೊಳ್ಳುತ್ತಿದ್ದರು.. ಆದರೆ ಇದೀಗ ತಮ್ಮದೇ ಆದ ಯೂಟ್ಯೂಬ್ ವಾಹಿನಿಯನ್ನು ಆರಂಭ ಮಾಡಿದ್ದು ರಾಜ್ಯದ ವಿವಿಧ ಜಾಗಗಳಿಗೆ ತೆರಳಿ ಅಲ್ಲಿನ ಸ್ಥಳಗಳು ಅಲ್ಲಿನ ಮಾರುಕಟ್ಟೆಗಳು.. ಹೀಗೆ ಇನ್ನು ಅನೇಕ ರೀತಿಯ ಮಾಹಿತಿಗಳನ್ನು ವೀಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದು ಯಶಸ್ವಿಯೂ ಸಹ ಆಗಿದ್ದಾರೆ.. ಹೌದು ತಮ್ಮ ವಾಹಿನಿ ಆರಂಭಿಸಿದ ಕೆಲವೇ ದಿನಗಳಲ್ಲಿ ಸಾವಿರಾರು ಸಬ್ಸ್ಕ್ರೈಬರ್ ಗಳನ್ನು ಹೊಂದಿದ್ದು ವೀಡಿಯೀಗಳು ಲಕ್ಷಗಟ್ಟಲೇ ವೀಕ್ಷಣೆಯನ್ನು ಪಡೆಯುತ್ತಿದೆ..

ಇನ್ನು ಈ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವೈಷ್ಣವಿ ಅವರು ತಮ್ಮ ಹೊಸ ಹೊಸ ವೀಡಿಯೀಗಳ ಬಗ್ಗೆ ಮಾಹಿತಿ ಕೊಟ್ಟು ವೀಡಿಯೋ ನೋಡಿ ಎನ್ನುತ್ತಿದ್ದಾರೆ.. ಇನ್ನು ಸಾಕಷ್ಟು ಹುಡುಗರ ನೆಚ್ಚಿನ ನಟಿಯಾಗಿದ್ದ ವೈಷ್ಣವಿ ಅವರ ಈ ಹೊಸ ಕೆಲಸಕ್ಕೆ ಸ್ನೇಹಿತರು ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳಿದ್ದಾರೆ.. ಇನ್ನು ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಡಾಕ್ಟರ್ ಕರ್ಣ ಎಂಬ ಹೊಸ ಧಾರಾವಾಹಿಯಲ್ಲಿಯೂ ಸಹ‌ ವೈಷ್ಣವಿ ಅವರು ಅಭಿನಯಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಆ ಧಾರಾವಾಹಿಯಲ್ಲಿ ನಟ ವಿಜಯ್ ಸೂರ್ಯ ಅವರ ಜೊತೆಯೇ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ..