ಬಿಗ್ ಬಾಸ್ ಶುರುವಾದ ಮೊದಲ ದಿನವೇ ಶಾಕ್.. ಚಂದ್ರಚೂಡ ರಿಗೆ ಮುಖಕ್ಕೆ ಹೊಡೆದಂತೆ ಮಾತನಾಡಿ ಗ್ರಹಚಾರ ಬಿಡಿಸಿದ ವೈಷ್ಣವಿ.. ಕಾರಣವೇನು ಗೊತ್ತಾ?

0 views

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ಅದಾಗಲೇ ನಿನ್ನೆ ಶುರುವಾಗಿದೆ.. ಇಂದಿನಿಂದ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದು ಇಂದು ಸಂಜೆ ಆರು ಗಂಟೆಯಿಂದಲೇ ಮಹಾಸಂಚಿಕೆ ಪ್ರಸಾರವಾಗಲಿದ್ದು ಕಿಚ್ಚ ಸುದೀಪ್ ಅವರ ಕಾರ್ಯಕ್ರಮದ ಮೂಲಕ ಎರಡನೇ ಇನ್ನಿಂಗ್ಸಿಗೆ ಚಾಲನೆ ನೀಡಲಾಗುತ್ತಿದೆ. ಆದರೆ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನವೇ ಸ್ಪರ್ಧಿಗಳಿಗೆ ಶಾಕ್ ನೀಡಿದ್ದು ಇತ್ತ ಚಕ್ರವರ್ತಿ ಚಂದ್ರಚೂಡ ಅವರು ತಬ್ಬಿಬ್ಬಾಗಿದ್ದಾರೆ.. ಅದೂ ಸಹ ಸ್ಪರ್ಧಿಗಳು ಮುಖಕ್ಕೆ ಹೊಡೆದಂತೆ ಮಾತನಾಡಿದ್ದು ಚಂದ್ರಚೂಡ ಅವರು ಸಮರ್ಥನೆ ಮಾಡಿಕೊಳ್ಳಲಾಗದಂತೆ ಸುಮ್ಮನಾಗಿದ್ದಾರೆ..

ಹೌದು ಬಿಗ್ ಬಾಸ್ ಸೀಸನ್ ಎಂಟು ಅರ್ಧಕ್ಕೆ ನಿಂತಿದ್ದು ಎಲ್ಲರಿಗೂ ತಿಳಿದೇ ಇದೆ.. ಇತ್ತ ಕೊರೊನಾ ಲಾಕ್ ಡೌನ್ ಆದ ಕಾರಣ ಚಿತ್ರೀಕರಣಕ್ಕೆ ಅವಕಾಶ ಇಲ್ಲದೆ ಬಿಗ್ ಬಾಸ್ ನಿಲ್ಲಿಸಬೇಕಾಯಿತು.. ಇದೀಗ ಮರು ಚಾಲನೆ ನೀಡಿದ್ದಾರೆ.. ಆದರೆ ಅದಾಗಲೇ ಮನೆಯಿಂದ ಹೊರ ಬಂದ ಸ್ಪರ್ಧಿಗಳು ಅದಾಗಲೇ ಟಿವಿಗಳಲ್ಲಿ ಬಿಗ್ ಬಾಸ್ ಸಂಚಿಕೆಗಳನ್ನು ಸಂಪೂರ್ಣವಾಗಿ ನೋಡಿ ತಮ್ಮ ತಮ್ಮ ನಡವಳಿಕೆಗಳ ಬಗ್ಗೆ ಪರಾಮರ್ಶೆ ಮಾಡಿಕೊಂಡಿದ್ದಾರೆ.. ಅದಕ್ಕಿಂತ ಹೆಚ್ಚಾಗಿ ತಮ್ಮ ಬಗ್ಗೆ ಯಾರ್ಯಾರು ಏನೇನು ಮಾತನಾಡಿದ್ದಾರೆ ಎಂಬುದರ ಬಗ್ಗೆಯೆಲ್ಲಾ ಚೆನ್ನಾಗಿ ತಿಳಿದುಕೊಂಡಿದ್ದಾರೆ.. ಸಧ್ಯ ಇದೀಗ ಮತ್ತೆ ಮನೆಯೊಳಗೆ ಕಾಲಿಟ್ಟಿದ್ದು ತಮ್ಮವರು ಯಾರು ತಮ್ಮ ಜೊತೆಯೇ ಇದ್ದು ಬೆನ್ನ ಹಿಂದೆ ಮಾತನಾಡುವವರು ಯಾರು ಎಂಬ ಎಲ್ಲಾ ವಿಚಾರಗಳು ಸಹ ಎಲ್ಲರಿಗೂ ತಿಳಿದಿದೆ..

ಇನ್ನು ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಗೆ ಕಾಲಿಟ್ಟ ಮೊದಲ ದಿನವೇ ನಾಮಿಮೇಷನ್ ಪ್ರಕ್ರಿಯೆ ನಡೆದಿದೆ.. ಅದರಲ್ಲಿಯೂ ಇದು ಓಪನ್ ನಾಮಿನೇಷನ್ ಆಗಿದ್ದು ಎಲ್ಲರ ಸಮ್ಮುಖದಲ್ಲಿ ಯಾರನ್ನು ನಾಮಿನೇಟ್ ಮಾಡುವಾರೋ ಅವರ ಫೋಟೋವನ್ನುಬೆಂ ಕಿಗೆಹಾಕಬೇಕಿದೆ.. ಅದೇ ರೀತಿ ಇಷ್ಟು ದಿನ ಇದ್ದ ಕೋಪವನ್ನೆಲ್ಲಾ ಇದೀಗ ಸ್ಪರ್ಧಿಗಳು ಒಬ್ಬರ ಮೇಲೊಬ್ಬರು ತೀರಿಸಿಕೊಂಡಿದ್ದು ಅದರಲ್ಲಿಯೂ ಚಕ್ರವರ್ತಿ ಚಂದ್ರಚೂಡ ಅವರಿಗೆ ಮುಖಕ್ಕೆ ಹೊಡೆದಂತೆ ಬಹಳಷ್ಟು ಸ್ಪರ್ಧಿಗಳು ಮಾತನಾಡಿದ್ದಾರೆ.. ಹೌದು ಚಕ್ರವರ್ತಿ ಚಂದ್ರಚೂಡ ಅವರು ದಿವ್ಯಾ ಸುರೇಶ್ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದ ಕಾರಣ.. ಕಬ್ಬನ್ ಪಾರ್ಕ್ ನಲ್ಲೆಲ್ಲಾ ಇರ್ತಿದ್ಳು ಎಂಬ ಮಾತನ್ನು ಈ ಹಿಂದೆ ಬಳಸಿದ್ದ ಕಾರಣ ಆ ಮಾತುಗಳೆಲ್ಲಾ ಈಗ ಎಲ್ಲರಿಗೂ ತಿಳಿದಿದ್ದು ಎಲರ ಸಮ್ಮುಖದಲ್ಲಿ ದಿವ್ಯಾ ಸುರೇಶ್ ಮಂಜು ಪಾವಗಡ ಸೇರಿದಂತೆ ಅನೇಕರು ವಕ್ರವರ್ತಿ ಚಂದ್ರಚೂಡ ಅವರ ಫೋಟೋವನ್ನುಬೆಂ ಕಿಗೆಬಿಸಾಡಿದ್ದಾರೆ..

ಇನ್ನೂ ಕಳೆದ ಮೊದಲ ಇನ್ನಿಂಗ್ಸ್ ನಲ್ಲಿ ಯಾರ ಬಗ್ಗೆಯೂ ಹೆಚ್ಚು ಏನನ್ನೂ ಮಾತನಾಡದೇ ಇರುತ್ತಿದ್ದ ವೈಷ್ಣವಿ ಕೂಡ ಚಂದ್ರಚೂಡ ಅವರ ವಿರುದ್ಧ ತಿರುಗಿ ಬಿದ್ದದ್ದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿತು.. ಹೌದು ವೈಷ್ಣವಿ ಅವರೂ ಸಹ ಚಂದ್ರಚೂಡ ಅವರಿಗೆ ನೇರವಾಗಿ ಮುಖಕ್ಕೆ ಹೊಡೆದಂತೆ ಮಾತನಾಡಿದ್ದಾರೆ.. ನಿಮಗೆ ಮಾತ್ರವಲ್ಲ ಕುಟುಂಬ ಇರೋದು.. ನಮ್ಮಗಳಿಗೂ ಕುಟುಂಬ ಇದೆ.. ಅದನ್ನು ನೀವು ತಲೆಯಲ್ಲಿ‌ ಇಟ್ಟುಕೊಂಡರೆ ಒಳ್ಳೆಯದು.. ಅಷ್ಟೇ ಅಲ್ಲದೇ ಮಾತನಾಡುವ ಮುನ್ನ ಯಾರ ಬಗ್ಗೆ ಏನು ಮಾತನಾಡ್ತಿದ್ದೀನಿ ಎಂದು ಸರಿಯಾಗಿ ಆಲೋಚನೆ ಮಾಡಿದರೆ ಗೌರವ ಸಿಗುತ್ತದೆ ಅಷ್ಟೇ ಎಂದಿದ್ದಾರೆ.. ಅಷ್ಟೇ ಅಲ್ಲದೇ ಈ ಮನೆಯಲ್ಲಿ ಚಂದ್ರಚೂಡ ಅವರು ಇರುವ ಅರ್ಹತೆ ಇಲ್ಲ ಎಂದು ಆವರ ಫೋಟೋವನ್ನುಬೆಂ ಕಿಗೆಹಾಕಿದ್ದಾರೆ..

ಚಂದ್ರಚೂಡ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಾಗ ಅತಿ ಹೆಚ್ಚು ಮಾತನಾಡಿ ಬಹಳಷ್ಟು ಜನರಿಗೆ ಕಿರಿಕಿರಿ ಮಾಡಿದ್ದರೂ ಸಹ ವೈಷ್ಣವಿ ಅವರು ಚಂದ್ರಚೂಡ ಅವರ ಪರವಾಗಿಯೇ ಮಾತನಾಡಿದ್ದರು.. ಆದರೀಗ ಅವರೂ ಸಹ ಚಂದ್ರಚೂಡ ಅವರ ನಡೆ ಹಾಗೂ ಮಾತಿನ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದು ಮುಂದಿನ ದಿನಗಳಲ್ಲಿ ಚಂದ್ರಚೂಡ ಅವರು ಯಾವ ರೀತಿ ನಡೆದುಕೊಳ್ಳುವರೋ ಕಾದು ನೋಡಬೇಕಿದೆ.. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ‌ ಮಾತನಾಡಿದರಷ್ಟೇ ಬೆಲೆ ಎಂದು ಸಂಪೂರ್ಣವಾಗಿ ಅರಿತಿರುವ ಕಾರಣ ಎಲ್ಲರೂ ಸಹ ಮಾತನಾಡಲು ಶುರು ಮಾಡಿದ್ದಾರೆನ್ನಬಹುದು..