ಅಂತೂ ತಮ್ಮ ಮದುವೆಯ ವಿಚಾರ ತಿಳಿಸಿದ ನಟಿ ವೈಷ್ಣವಿ ಗೌಡ.. ಲವ್ ಮ್ಯಾರೇಜ್ ಗೆ ಒಪ್ಪಿಗೆ ಕೊಟ್ಟ ಕುಟುಂಬ..

0 views

ನಟಿ ವೈಷ್ಣವಿ ಗೌಡ.. ಕನ್ನಡ ಕಿರುತೆರೆಯ ಖ್ಯಾತ ನಟಿಯರಲ್ಲಿ ಒಬ್ಬರು..‌ ಒಂದೇ ಧಾರಾವಾಹಿಯಲ್ಲಿ ಸತತ ಎಂಟು ವರ್ಷಗಳ ಕಾಲ ಕಾಣಿಸಿಕೊಂಡು ಜನರ ಮನಗೆದ್ದ ಸನ್ನಿಧಿ ಸಧ್ಯ ಮದುವೆಗೆ ಸಜ್ಜಾಗಿ ನಿಂತಿದ್ದಾರೆ.. ಹೌದು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸನ್ನಿಧಿ ಪಾತ್ರಧಾರಿಯಾಗಿ ಕಾಣಿಸಿಕೊಂಡ ನಟಿ ವೈಷ್ಣವಿ ಸತತ ಎಂಟು ವರ್ಷಗಳ ಕಾಲ ಒಂದೇ ಧಾರಾವಾಹಿಯಲ್ಲಿ ಅಭಿನಯಿಸಿ ಹೆಸರು ಖ್ಯಾತಿ ಹಣ ಎಲ್ಲವನ್ನೂ ಸಂಪಾದಿಸಿದರು.. ಇತ್ತ ಕಿರುತೆರೆಯ ಸಾಕಷ್ಟು ನಟಿಯರು ಸಿನಿಮಾ ಅಂತ ಹೋದರೆ ವೈಷ್ಣವಿ ಮಾತ್ರ ಕಿರುತೆರೆಯಲ್ಲಿಯೇ ಉಳಿದರು.. ದೇವಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ವೈಷ್ಣವಿ ಅವರನ್ನು ನಿರ್ಮಾಪಕಿ ಶೃತಿ ನಾಯ್ಡು ಅವರು ಪರಿಚಯಿಸಿದರು.. ದೇವಿ ಧಾರಾವಾಹಿ ದೊಡ್ಡ ಹೆಸರು ತಂದುಕೊಟ್ಟಿತು.. ಆದರೆ ಆ ಧಾರಾವಾಹಿ‌ ಮುಗಿದ ಬಳಿಕ ಬೇರೆ ಧಾರಾವಾಹಿಯಲ್ಲಿ ಸಹನಟಿಯಾಗಿ ಕಾಣಿಸಿಕೊಳ್ಳುವಂತಾಯಿತು..

ದೊಡ್ಡದೊಂದ ಬ್ರೇಕ್ ಗಾಗಿ ಕಾಯುತ್ತಿದ್ದ ವೈಷ್ಣವಿ ಅವತಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯ ಅವಕಾಶ ದೊರೆಯಿತು.. ನಂತರ ವೈಷ್ಣವಿ ಹಿಂತಿರುಗಿ ನೋಡಿದ್ದೇ ಇಲ್ಲ.. ಅಗ್ನಿಸಾಕ್ಷೊ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು.. ಆಗಿನ ಕಾಲಕ್ಕೆ ಅಗ್ನಿಸಾಕ್ಷಿ ಹತ್ತೊಂಭತ್ತು ಟಿ ಆರ್ ಪಿ ಪಡೆದಿತ್ತು ಎನ್ನುವ ಮಾತಿದೆ.. ಆದರೆ ಆಗೆಲ್ಲಾ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಚರ್ಚೆಯೂ ಆಗುತ್ತಿರಲಿಲ್ಲ.. ಇನ್ನು ಕನ್ನಡ ಕಿರುತೆರೆಯ ನಾಯಕ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯೂ ವೈಷ್ಣವಿ ಅವರೇ ಆಗಿದ್ದರು.. ಸನ್ನಿಧಿ ಸಿದ್ಧಾರ್ಥ್ ಜೋಡಿ ಕಿರುತೆರೆ ಲೋಕದ ದೊಡ್ಡ ಹಿಟ್ ಜೋಡಿಯಾಗಿದ್ದು ಇವರದ್ದೇ ಆದ ಅಭಿಮಾನಿ ಬಳಗಗಳೂ ಸಹ ಇದ್ದವು..

ಇನ್ನು ವ್ಯಯಕ್ತಿಕ ವಿಚಾರಕ್ಕೆ ಬರುವುದಾದರೆ.. ಧಾರಾವಾಹಿ ಪ್ರಸಾರವಾಗುತ್ತಿರುವಾಗಲೇ ವೈಷ್ಣವಿ ಹಾಗೂ ಸಿದ್ದಾರ್ಥ್ ಪಾತ್ರಧಾರಿ ನಟ ವಿಜಯ್ ಸೂರ್ಯ ಇಬ್ಬರೂ ಸಹ ಪ್ರೀತಿಸುತ್ತಿದ್ದಾರೆ ಇಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು.. ಆದರೆ ನಾವಿಬ್ಬರು ಸ್ನೇಹಿತರು ಮಾತ್ರ.. ನಮ್ಮ ನಡುವೆ ಅಂತಹುದೇನೂ ಇಲ್ಲ ಎಂದು ಆಗಲೇ ಸ್ಪಷ್ಟನೆ ಕೊಟ್ಟು ಆ ವಿಚಾರ ಅಲ್ಲಿಗೆ ಮುಗಿಸಿದ್ದರು.. ಇತ್ತ ನಿಜ ಜೀವನದಲ್ಲಿಯೂ ನೀವಿಬ್ಬರು ಮದುವೆಯಾಗಿ ಎಂದು ಸಾಕಷ್ಟು ಮಂದಿ ಮನವಿ ಮಾಡಿಕೊಂಡದ್ದೂ ಉಂಟು.. ಆದರೆ ಅತ್ತ ಅದಾಗಲೇ ನಟ ವಿಜಯ್ ಸೂರ್ಯ ತಮ್ಮ ತಾಯಿ ನೋಡಿದ ತಮ್ಮ ಕುಟುಂಬದ ದೂರದ ಸಂಬಂಧಿ ಚೈತ್ರಾ ಎಂಬುವವರನ್ನು ಮದುವೆಯಾಗಿ ಅದಾಗಲೇ ಅವರ ಕುಟುಂಬಕ್ಕೆ ಮುದ್ದು ಕಂದನ ಆಗಮನವೂ ಆಯಿತು..

ಇನ್ನು ಇತ್ತ ನಟಿ ವೈಷ್ಣವಿ ಗೌಡ ಅಗ್ನಿಸಾಕ್ಷಿ ಧಾರಾವಾಹಿ‌ ಮುಗಿದ ಬಳಿಕ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟು ಟಾಪ್ ಐದು ಸ್ಪರ್ಧಿಗಳಲ್ಲಿ ಒಬ್ಬರಾದರು.. ಇನ್ನು ಧಾರಾವಾಹಿ ಜೊತೆಗೆ ನಿರೂಪಕಿಯಾಗಿಯೂ ಸಹ ಕಾಣಿಸಿಕೊಂಡ ವೈಷ್ಣವಿಗೆ ಅದ್ಯಾಕೋ ನಿರೂಪಣೆ ಕೈ ಹಿಡಿಯಲಿಲ್ಲ.. ಸಧ್ಯ ಬಿಗ್ ಬಾಸ್ ಮುಗಿದ ಬಳಿಕ ಕೆಲವೊಂದು ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದು ಸಧ್ಯ ಮದುವೆಯ ಬಗ್ಗೆ ಮಾತನಾಡಿದ್ದಾರೆ.. ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿನ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೈಷ್ಣವಿ ಹಾಗೂ ಅವರ ತಾಯಿ ಮದುವೆ ವಿಚಾರವನ್ನು ಹಂಚಿಕೊಂಡಿದ್ದಾರೆ.. ಹೌದ್ಯ್ ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಂತೆ ವೈಷ್ಣವಿ ಆಗ ಸಿಂಗಲ್ ಆಗಿದ್ದರು..

ಇನ್ನು ಈಗ ಕಾರ್ಯಕ್ರಮದಲ್ಲಿ ಮದುವೆ ಯಾವಾಗ ಎಂದು ಕೇಳಿದಾಗ ನಾಚಿ ನೀರಾದ ವೈಷ್ಣವಿ ಈ ಬಗ್ಗೆ ಹೇಳಿಕೊಂಡಿದ್ದಾರೆ.. ಸಧ್ಯ ಮದುವೆ ಆಗಬೇಕು.. ಆದರೆ ಮನೆಯಲ್ಲಿ ಯಾರೂ ಸಹ ಒತ್ತಾಯ ಮಾಡುತ್ತಿಲ್ಲ.. ಸಧ್ಯಕ್ಕೆ ಆರಾಮಾಗಿದ್ದೀನಿ.. ನಮಗೆ ಅಂತ ಒಬ್ಬ ಹುಡುಗ ಬೇಡ್ವಾ.. ಯಾರೂ ಬೀಳ್ತಾ ಇಲ್ಲ.. ಅವರಿಗಾಗಿಯೇ ಕಾಯುತ್ತಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಪ್ರಪೋಸಲ್ ಗಳಿಗೆ ಆಹ್ವಾನ ನೀಡಿದ್ದಾರೆನ್ನಬಹುದು.. ಇತ್ತ ವೈಷ್ಣವಿ ಅವರ ತಾಯಿ‌ ಮಾತನಾಡಿ ಅವಳ ವಯಸ್ಸು ಇಪ್ಪತ್ತಾರು ಆಯಿತು.. ನಾವು ಸಹ ಅದ್ಯಾವಾಗ ಮದುವೆ ಆಗ್ತಾಳೆ ಅಂತ ಕಾಯ್ತಾ ಇದ್ದೇವೆ.. ಹುಡುಗನ‌ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಅವಳಿಗೇ ನೀಡಿದ್ದೇವೆ..

ಅವಳು ಯಾರನ್ನು ಒಪ್ಪಿದರೂ ಸಹ ಮದುವೆಗೆ ನಮ್ಮ ಒಪ್ಪಿಗೆ ಇದೆ.. ಅವಳು ಸಧ್ಯ ಮನಸ್ಸು ಮಾಡಬೇಕಷ್ಟೇ.. ನಮ್ಮ ಕಡೆಯಿಂದ ಅವಳ ಲವ್ ಮ್ಯಾರೇಜ್ ಗೆ ಸಂಪೂರ್ಣ ಒಪ್ಪಿಗೆ ಇದೆ ಎಂದಿದ್ದಾರೆ.. ಇನ್ನು ಕುಟುಂಬದಲ್ಲಿಯೂ ಗ್ರೀನ್ ಸಿಗ್ನಲ್ ಇದ್ದರೂ ಸಹ ಅದ್ಯಾಕೋ ವೈಷ್ಣವಿ ಅವರೇ ಮದುವೆಯ ಬಗ್ಗೆ ಮನಸ್ಸು ಮಾಡಬೇಕಷ್ಟೇ.. ನಾನು ಒಂದು ರೀತಿ ತುಂಬಾನೇ ಟಿಪಿಕಲ್ ಹುಡುಗಿ.. ನನಗೂ ಮದುವೆಯಾಗಬೇಕು ಮಕ್ಕಳು ಆಗಬೇಕು ಹೀಗೆಲ್ಲಾ ಬಹಳ ಆಸೆಯಿದೆ.. ಆದರೆ ಅಗೆ ಅಂತ ಒಬ್ಬ ಹುಡುಗ ಬರಬೇಕು ಅಲ್ವಾ.. ಅವರಿಗಾಗಿಯೇ ಕಾಯುತ್ತಿದ್ದೇನೆ.. ಸಧ್ಯಕ್ಕೆ ಸಿಂಗಲ್ ಆಗಿದ್ದೇನೆ ಎಂದಿದ್ದರೆ.. ಒಟ್ಟಿನಲ್ಲಿ‌ ಈ ಟಿಪಿಕಲ್ ಹುಡುಗಿಗೆ ಸರಿಯಾದ ಜೋಡಿ ಯಾರಾದರೂ ಇದ್ದರೆ ಒಮ್ಮೆ ನೋಡಬಹುದು ಎನ್ನುವುದು ವೈಷ್ಣವಿ ಅವರ ಮಾತಿನ ಅರ್ಥವಿದ್ದರೂ ಇರಬಹುದು.. ನಮ್ ಹುಡುಗರು ಒಮ್ಮೆ ಟ್ರೈ ಮಾಡಬಹುದು..