ತಾಯಿಗಾಗಿ ಪರಿತಪಿಸಿದ ರಘುಗೆ ತಾಯಿಯಾದ ವೈಷ್ಣವಿ ಮನಸ್ಪೂರ್ತಿಯಾಗಿ ರಘುಗೆ ಹೇಳಿದ ಮಾತು ನೋಡಿ.. ಮನಕಲಕುತ್ತದೆ..

0 views

ಬಿಗ್ ಬಾಸ್ ಕೇವಲ ಮನರಂಜನೆ ಮಾತ್ರವಲ್ಲ.. ಆದರೆ ಅದ್ಯಾಕೋ ಒಮ್ಮೊಮ್ಮೆ ನಮ್ಮೊಳಗೆ ನಮಗೇ ಅರಿವಿಲ್ಲದಂತೆ ಭಾವನೆಗಳ ಜೊತೆ ತೊಳಲಾಟವಾಡಿಬಿಡುತ್ತದೆ.. ಹೌದು ನಮಗೇ ಅರಿವಿಲ್ಲದಂತೆ ಕೆಲ ಸದಸ್ಯರ ಜೀವನದ ಕತೆಗಳು ಕಣ್ಣಂಚಲ್ಲಿ ನೀರು ತರಿಸಿ ಬಿಡುತ್ತವೆ.. ಅಂತಹುದೇ ಕತೆ ರಘು ಅವರದ್ದು.. ರಘು ಅವರಿಗೆ ತಂದೆ ತಾಯಿ ಇಬ್ಬರೂ ಇಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ.. ಆದರೆ ತಾಯಿಗಾಗಿ ಪರಿತಪಿಸಿದ ರಘುಗೆ ವೈಷ್ಣವಿ ನಿಜಕ್ಕೂ ತಾಯಿಯಾಗಿದ್ದಾರೆ..

ಹೌದು ಇಂತಹ ಮನಕಲಕುವ ಸನ್ನಿವೇಶಕ್ಕೆ ಕಾರಣರಾಗಿದ್ದು ಮಾತ್ರ ನಿನ್ನೆಯಷ್ಟೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಗಮಿಸಿದ ಚಂದ್ರಚೂಡ ಅವರು.. ಹೌದು ಅದೇ ಚಂದ್ರಚೂಡ ಅವರು ರಘು ಬಳಿ ಮೊದಲೇ ತಿಳಿದು ಕೊಂಡಿದ್ದರು.. ರಘುವಿನ ಅಪ್ಪ ಅಮ್ಮ ಇಬ್ಬರೂ ಸಹ ಒಂದೇ ರೀತಿಯಲ್ಲಿ ಜೀವ ಕಳೆದುಕೊಂಡು ರಘುವನ್ನು ಬಿಟ್ಟು ಹೋಗಿದ್ದರು.. ಚಿಕ್ಕ ವಯಸ್ಸಿನಲ್ಲಿಯೇ ರಘು ತನ್ನನ್ನು ನೋಡಿಕೊಳ್ಳುವವರಿಲ್ಲದೇ ಮದುವೆಯಾಗಬೇಕಾಯಿತು.. ಜೀವನದಲ್ಲಿ ಸಾಕಷ್ಟು ನೋವು ಇರುವ ರಘು ಸದಾ ಇನ್ನೊಬ್ಬರನ್ನು ನಗಿಸುತ್ತಾ ಜೀವನ ಕಳೆಯುತ್ತಿರುವುದು ಮಾತ್ರ ಸೂಜಿಗ..

ಇದನ್ನು ತಿಳಿದಿದ್ದ ಚಕ್ರವರ್ತಿ ಚಂದ್ರಚೂಡ ರಘು ಬಂದು ನಿನ್ನ ತಾಯಿ ನಿನ್ನ ಎದುರಿಗೆ ಬಂದರೆ ಏನ್ ಮಾಡ್ತೀಯಾ? ಎಂದು ಕೇಳಿದ್ದಾರೆ.. ಆಗ ಹೇಳೋಕೆ ಬಹಳಷ್ಟಿದೆ.. ಆದರೆ ಹೇಳೋಕೆ ನನ್ನ ತಾಯಿಯೇ ಇಲ್ಲ ಎಂದಿದ್ದಾರೆ.. ಆ ತಕ್ಷಣ ವೈಷ್ಣವಿಯನ್ನು ಕರೆತಂದ ಚಂದ್ರಚೂಡ ರಘು ಮುಂದೆ ನಿಲ್ಲಿಸಿದ್ದಾರೆ.. ಈ ಹುಡುಗಿಯ ಕಣ್ಣು ನೋಡು.. ನಿನಗೆ ತಾಯಿಯ ಭಾವನೆ ಕಂಡರೆ ನಿಮ್ಮ ತಾಯಿಗೆ ಏನೇನು ಹೇಳಬೇಕೋ ಎಲ್ಲವನ್ನೂ ಇವಳಿಗೆ ಹೇಳಿಕೋ ಎಂದು ದೂರ ಸರಿದಿದ್ದಾರೆ..

ವೈಷ್ಣವಿ ಸಹ ರಘುಗೆ ತಾಯಿಯ ಭಾವ ತುಂಬಿದ್ದು.. ವೈಷ್ಣವಿಯಲ್ಲಿ ತಾಯಿಯನ್ನು ಕಂಡ ರಘು ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.. “ನಾನು ನಿನಗೆ ಕೆಟ್ಟ ಮಗ ಆಗಿದ್ನಾ? ಒಂದು ಸಮಯದಲ್ಲಿ ನನ್ನನ್ನು ಬೇಡ ಅಂದೆ ನಾನು ಅರ್ಥ ಮಾಡಿಕೊಂಡೆ.. ನನ್ನನ್ನು ದರಿದ್ರ ಎಂದೆ ನಾನು ಅದನ್ನೂ ಸಹ ಅರ್ಥ ಮಾಡಿಕೊಂಡೆ.. ನನಗೆ ಕೆಲವೊಂದು ಸಲ ಹುಟ್ಟಲೇ ಬಾರದಿತ್ತು ಅನಿಸುತ್ತೆ ಎಂದು ತನ್ನ ಮನದಲ್ಲಿದ್ದ ಅಷ್ಟೂ ದುಃಖವನ್ನು ಕಣ್ಣೀರಿನ ಮೂಲಕ ಹೊರ ಹಾಕಿದ್ದಾರೆ.. ರಘುವಿನ ಮಾತಿಗೆ ಮರುಗಿದ ವೈಷ್ಣವಿ ಕೂಡ ಕಣ್ಣೀರಿಟ್ಟು ತಾಯಿಯಂತೆಯೇ ರಘುವ ತಲೆ ನೇವರಿಸಿ ಸಮಾಧಾನ ಮಾಡಿದ್ದಾರೆ..

ಹೆಣ್ಣು ಎಷ್ಟೇ ಆಧುನಿಕ ಶೈಲಿಯಲ್ಲಿ ಜೀವನ ನಡೆಸಿದರೂ ಸಹ ತನ್ನೊಳಗೆ ಒಂದು ತಾಯಿ ಹೃದಯ ಇರುವುದನ್ನು ವೈಷ್ಣವಿ ತೋರಿದರು.. ನಿಜಕ್ಕೂ ರಘು ಮತ್ತು ವೈಷ್ಣವಿ ನಡುವಿನ ಆ ತಾಯಿ ಮಗನ ಸಂಭಾಷಣೆ ಮನಕಲಕುವಂತಿದ್ದು.. ಮೂಕಳಾದ ವೈಷ್ಣವಿ ರಘುಗೆ ತಾಯಿ ಆಗಲು ಸಾಧ್ಯವಾಗದಿದ್ದರೂ.. ಆ ಪ್ರೀತಿಯನ್ನು ಮುಂದೂ ಸಹ ನೀಡುವುದಾಗಿ ಮಾತು ಕೊಟ್ಟರು‌‌..