ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಗೆದ್ದ ಹಣದಲ್ಲಿ ವಂಶಿಕಾ ಹಾಗೂ ಯಶಸ್ವಿನಿ ಖರೀದಿಸಿದ ದುಬಾರಿ ಬೆಲೆಯ ಕಾರ್ ನೋಡಿ..

0 views

ಕನ್ನಡ ಕಿರಿತೆರೆಯ ಖ್ಯಾತ ಶೋ ನನ್ನಮ್ಮ ಸೂಪರ್ ಸ್ಟಾರ್ ಶೋ ಮುಕ್ತಯಾಗೊಂಡು ಎರಡು ವಾರಗಳು ಕಳೆದಿದ್ದು ಸಧ್ಯ ಆ ಸಮಯಕ್ಕೆ ಕಲರ್ಸ್ ಕನ್ಮಡದಲ್ಲಿ ಗಿಚ್ವಿ ಗಿಲಿಗಿಲಿ ಶೋ ಆರಂಭವಾಗಿದೆ.. ಇನ್ನು ನನ್ನಮ್ಮ ಸೂಪರ್ ಸ್ಟಾರ್ ಶೋ ನಲ್ಲಿ ಹದಿನೈದು ಅಮ್ಮ ಮಕ್ಕಳ ಜೋಡಿಯ ಪೈಕಿ ಎಲ್ಲರ ಮನಗೆದ್ದಿದ್ದ ವಂಶಿಕಾ ಹಾಗೂ ಯಶಸ್ವಿನಿ ಅವರು ಎಲ್ಲರು ನಿರೀಕ್ಷೆ ಮಾಡಿದಂತೆ ವಿಜೇತರ ಪಟ್ಟ ಪಡೆದಿದ್ದು ನನ್ನಮ್ಮ ಸೂಪರ್ ಸ್ಟಾರ್ ಗೆದ್ದು ನಗದು ಬಹುಮಾನ ಹಾಗೂ ಟ್ರೋಫಿ ಪಡೆದರು..

ಇನ್ನು ಶೋ ಆರಂಭವಾದ ದಿನದಿಂದಲೂ ನನ್ನಮ್ಮ ಸೂಪರ್ ಸ್ಟಾರ್ ಶೋ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗಿತ್ತು.. ಶೋ ಆರಂಭವಾಗುತ್ತಿದ್ದಂತೆ ಮೊದಲ‌ ಪ್ರೋಮೋದಲ್ಲಿಯೇ ವಂಶಿಕಾ ಪ್ರೇಕ್ಷಕರನ್ನು ಮೋಡಿ ಮಾಡಿಬಿಟ್ಟಿದ್ದಳು.. ಮಾಸ್ಟರ್ ಆನಂದ್ ಮಗಳಾಗಿ ವೇದಿಕೆಗೆ ಬಂದ ವಂಶಿಕಾ ನನ್ನನ್ನು ಮಾಸ್ಟರ್ ಆನಂದ್ ಮಗಳು ವಂಶಿಕಾ ಎನ್ನಬೇಡಿ.. ವಂಶಿಕಾ ಅಂಜನಿ ಕಶ್ಯಪ ಅಂತ ಹೇಳಿ ಎಂದು ಮೊದಲ ಆ ಚಿಟಪಟ ಮಾತುಗಳಲ್ಲಿಯೇ ಮೋಡಿ ಮಾಡಿದಳು.. ಪ್ರೋಮೋಗಳು ಲಕ್ಷಗಟ್ಟಲೇ ವೀಕ್ಷಣೆ ಪಡೆಯುತ್ತಿದು ಅದೇ ರೀತಿ ಒಳ್ಳೆಯ ರೇಟಿಂಗ್ ಸಹ ಪಡೆದುಕೊಂಡಿತ್ತು..

ಇನ್ನು ಹದಿನೈದು ಜೋಡಿಗಳ ಪೈಕಿ ಒಬ್ಬೊಬ್ಬರಾಗಿಯೇ ಎಲಿಮಿನೇಟ್ ಆಗುತ್ತಾ ಕೊನೆಗೆ ಆರು ಜೋಡಿ ಫಿನಾಲೆ ಹಂತ ತಲುಪಿತ್ತು.. ಅದರಲ್ಲಿ ವಂಶಿಕಾ ಹಾಗೂ ಯಶಸ್ವಿನಿ ವಿಜೇತರಾಗಿ ಅಮ್ಮ ಮಗುವನ್ನು ಎತ್ತಿಕೊಂಡಿರುವ ಅಧ್ಬುತ ಟ್ರೋಫಿ ಹಾಗೂ ಐದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡರು. ಇನ್ನೂ ನನ್ನಮ್ಮ ಸೂಪರ್ ಸ್ಟಾರ್ ಶೋ ಮುಗಿದ ಬಳಿಕ ಈಗ ಪ್ರಸಾರವಾಗುತ್ತಿರುವ ಗಿಚ್ವಿಗಿಲಿಗಿಲಿ ಶೋ ನಲ್ಲಿಯೂ ವಂಶಿಕಾ ಭಾಗವಹಿಸುತ್ತಿದ್ದು ಆಕೆಯ ತುಂಟಾಟಗಳು ತೆರೆ ಮೇಲೆ ನೋಡಬಹುದಾಗಿದೆ..

ಇನ್ನು ಇದೀಗ ಇದೆಲ್ಲದರ ನಡುವೆ ನನ್ನಮ್ಮ ಸೂಪರ್ ಸ್ಟಾರ್ ಶೋನಿಂದ ಬಂದ ಹಣದಲ್ಲಿ ವಂಶಿಕಾ ಹಾಗೂ ಯಶಸ್ವಿನಿ ಅವರು ಹೊಸ ಕಾರ್ ಒಂದನ್ನು ಕೊಂಡುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ನನ್ನಮ್ಮ ಸೂಪರ್ ಸ್ಟಾರ್ ಶೋ ನಲ್ಲಿ ಗೆದ್ದ ಹಣ ಹಾಗೂ ಆ ಕಾರ್ಯಕ್ರಮದ ಸಂಭಾವನೆಯಾಗಿ ಬಂದ ಹಣ ಎಲ್ಲವನ್ನೂ ಸೇರಿಸಿ ಹೊಸ ಕಾರ್ ಕೊಂಡುಕೊಂಡಿದ್ದಾರೆ.. ಹೌದು ಎಂಟು ಲಕ್ಷ ಬೆಲೆಯ ಮಾರುತಿ ಸುಜುಕಿ‌ ಇಗ್ನಿಸ್ ಕಾರ್ ಅನ್ನು ಕೊಂಡುಕೊಂಡಿರುವ ಯಶಸ್ವಿನಿ ಅವರು ಸಾಮಾಜಿಕ‌ ಜಾಲತಾಣದಲ್ಲಿ ವೀಡಿಯೋ ಹಾಗೂ ಫೋಟೋಗಳನ್ನು‌ ಹಂಚಿಕೊಂಡಿದ್ದಾರೆ..

ಅದರಲ್ಲೂ ಇದು ಸಂಪೂರ್ಣವಾಗಿ ಯಶಸ್ವಿನಿ ಹಾಗೂ ವಂಶಿಕಾ ದುಡಿದ ಹಣವಾದ್ದರಿಂದ ಅವರಿಬ್ಬರೇ ಕಾರ್ ಅನ್ನು ಉದ್ಘಾಟನೆ ಮಾಡಬೇಕು.. ಎಂದು ಮಾಸ್ಟರ್ ಆನಂದ್ ಅವರು ಕ್ಯಾಮರಾಮ್ಯಾನ್ ಆಗಿ ನಿಂತಿದ್ದರು.. ಇನ್ನು ತಮ್ಮ ದುಡಿಮೆಯ‌ ಮೊದಲ ಕಾರ್ ನ ಸಂಭ್ರಮಕ್ಕೆ ನಿವೇದಿತಾ ಗೌಡ ಕೂಡ ಆಗಮಿಸಿದ್ದು ಯಶಸ್ವಿನಿ ಅವರು ನೊವೇದಿತಾಗೆ ಧನ್ಯವಾದಗಳನ್ನು ತಿಳಿಸಿದ್ದಾರೆ..

ಇನ್ನು ಸಧ್ಯ ಮನೆಮಂದಿಯೆಲ್ಲಾ ಸಿನಿಮಾ ಕಿರುತೆರೆ ಅಂತ ಬ್ಯುಸಿ ಆಗಿದ್ದು ಅದರಲ್ಲೂ ಜೀ ಕನ್ನಡ ವಾಹಿನಿಯಲ್ಲಿ ಡ್ರಾಮಾ ಜೂನಿಯರ್ ಶೋನಲ್ಲಿ ಮಾಸ್ಟರ್ ಆನಂದ್ ನಿರೂಪಕರದರೆ ಅದೇ ಸಮಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಮಗಳು ವಂಶಿಕಾ ಸ್ಪರ್ಧಿಯಾಗಿ ಭಾಗವಹಿಸಿದ್ದು ಅಪ್ಪ ಮಗಳ ಜುಗಲ್ ಬಂದಿ ಸಖತ್ ಆಗಿಯೇ ಇದೆ.. ಇನ್ನು ಮಾಸ್ಟರ್ ಆನಂದ್ ಮಗ ಕೂಡ ಸಿನಿಮದಲ್ಲಿ ಅಭಿನಯಿಸಿದ್ದು ಇತ್ತ ವಂಶಿಕಾ‌ ಜೊತೆ ಯಶಸ್ವಿನಿ ಅವರೂ ಶೋ ಚಿತ್ರೀಕರಣದಲ್ಲಿ ಹಾಜರಾಗುತ್ತಿದ್ದಾರೆ.. ಒಟ್ಟಿನಲ್ಲಿ ನನ್ನಮ್ಮ ಸೂಪ್ರ್ ಸ್ಟಾರ್ ಗೆದ್ದು ಕಾರ್ ಕೊಂಡುಕೊಂಡ ಸಂತೋಷದಲ್ಲಿರುವ ವಂಶಿಕಾ ಹಾಗೂ ಯಶಸ್ವಿನಿ ಅವರಿಗೆ ಸ್ನೇಹಿತರು ಅಭಿಮಾನಿಗಳು ಶುಭ ಹಾರೈಸಿದ್ದಾರೆ..