ವಂಶಿಕಾಳ ಆ ಒಂದು ಡೈಲಾಗ್ ಗೆ ಶಾಕ್ ಆದ ಜಡ್ಜ್ ಗಳು.. ಮಾಡಿದ ಕೆಲಸ ನೋಡಿ..

0 views

ವಂಶಿಕಾ, ಕೆಲವೇ ತಿಂಗಳ ಹಿಂದಷ್ಟೇ ಮಾಸ್ಟರ್ ಆನಂದ್ ಮಗಳಾಗಿ ಗುರುತುಸಿಕೊಂಡು ಕಿರುತೆರೆಯ ನನ್ನಮ್ಮ ಸೂಪರ್ ಸ್ಟಾರ್ ಶೋಗೆ ಆಗಮಿಸಿದ ವಂಶಿಕಾ ಒಂದೇ ಶೋನಲ್ಲಿ ಏಕೆ ಒಂದೇ ಸಂಚಿಕೆಯಲ್ಲಿ ತನ್ನ ಮಾತಿನ ಮೂಲಕವೇ ಮೋಡಿ ಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿ ಹೋಗಿದ್ದಳು.. ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ಪಟ್ಟವನ್ನೂ ಸಹ ಮುಡಿಗೇರಿಸಿಕೊಂಡ ವಂಶಿಕಾ ಇದೀಗ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಗಿಚ್ಚೆಬ್ಬಿಸುತ್ತಿದ್ದು ಈ ವಾರದ ಸಂವಿಕೆಯಲ್ಲಿ ತನ್ನ ಡೈಲಾಗ್ ಮೂಲಕವೇ ಜಡ್ಜಸ್ ಗಳು ಎದ್ದು ಕುಣಿಯುವಂತೆ ಮಾಡಿದ್ದಾಳೆ..

ಹೌದು ನನ್ನಮ್ಮ ಸೂಪರ್ ಸ್ಟಾರ್ ಗೆ ಆಗಮಿಸಿ ತನ್ನ ಆಸೆಯಂತೆಯೇ ಆನಂದ್ ಮಗಳು ಎಂದಲ್ಲ.. ಬದಲಿಗೆ ವಂಶಿಕಾ ಅಂಜನಿ ಕಶ್ಯಪ ಎಂದೇ ಗುರುತಿಸಿಕೊಳ್ಳುವಷ್ಟು ಫೇಮಸ್ ಆಗಿದ್ದು ಸಧ್ಯ ದಶಕಗಳ ಹಿಂದೆ ಆನಂದ್ ಬಾಲ ನಟನಾಗಿ ಮಿಂಚಿದ ರೀತಿಯಲ್ಲಿಯೇ ಈಗ ಕಿರುತೆರೆಯಲ್ಲಿ ವಂಶಿಕಾ ಕಿರುತೆರೆಯ ಲಿಟಲ್ ಸೂಪರ್ ಸ್ಟಾರ್ ಆಗಿದ್ದಾಳೆಂದರೆ ಸುಳ್ಳಲ್ಲ.. ಇನ್ನು ನನ್ನಮ್ಮ ಸೂಪರ್ ಸ್ಟಾರ್ ಗೆದ್ದು ಸಂಭಾವನೆಯ ಜೊತೆಗೆ ಐದು ಲಕ್ಷ ರೂಪಾಯಿ ಬಹುಮಾನವನ್ನೂ ಸಹ ಪಡೆದು ಯಶಸ್ವಿನಿ ಹಾಗೂ ವಂಶಿಕಾ ಅಮ್ಮ ಮಗಳ ಜೋಡಿ ತಾವು ಗೆದ್ದ ಹಣದಿಂದ ಸ್ವಂತದ್ದೊಂದು ಕಾರ್ ಕೊಂಡುಕೊಂಡಿದ್ದೂ ಆಯ್ತು.. ಇನ್ನು ಅದರ ಬೆನ್ನಲ್ಲೇ ಇದೀಗ ಗಿಚ್ಚಿ ಗಿಲಿಗಿಲಿ ಶೋನಲ್ಲಿ ವಂಶಿಕಾ ಪಾಲ್ಗೊಳ್ಳುತ್ತಿದ್ದು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾಳೆ ಎನ್ನಬಹುದು..

ಹೌದು ಮಜಾಭಾರತ ಹಾಗೂ ಇನ್ನು ಅನೇಕ ಕಲಾವಿದರನ್ನೊಳಗೊಂಡ ಹೊಸ ಶೋ ಗಿಚ್ಚಿ ಗಿಲಿಗಿಲಿ ಕೆಲ ವಾರಗಳ ಹಿಂದಷ್ಟೇ ತನ್ನ ಪ್ರಸಾರವನ್ನು ಆರಂಭಿಸಿದ್ದು ಈ ಶೋನಲ್ಲಿ ಪ್ರಮುಖ ಆಕರ್ಷಣೆ ಎಂದರೆ ಅದು ವಂಶಿಕಾ ಎಂದರೆ ತಪ್ಪಲ್ಲ.. ಹೌದು ಎಂದಿನಂತೆ ತನ್ನ ಕೌಂಟರ್ ಡೈಲಾಗ್ ಗಳು ಪಂಚಿಕ್ ಮಾತುಗಳ ಮೂಲಕವೇ ಈ ಶೋನಲ್ಲಿಯೂ ವಂಶಿಕಾ ಜನರ ಮನಗೆದ್ದಿದ್ದಾಳೆ..

ಇನ್ನು ಈ ವಾರದ ಸಂಚಿಕೆಯಲ್ಲಿ ವಂಶಿಕಾ ಕೆಜಿಎಫ್ ಸಿನಿಮಾದ ಡೈಲಾಗ್ ಅನ್ನು ತನ್ನದೇ ಶೈಲಿಯಲ್ಲಿ ಹೊಡೆದಿದ್ದು ಜಡ್ಜ್ ಗಳು ಎದ್ದು ಕುಣಿಯುವಂತಾಗಿದೆ.. ಹೌದು ಈ ವಾರ ಡ್ಯಾನ್ಸಿಂಗ್ ಚಾಂಪಿಯನ್ ಹಾಗೂ ಗಿಚ್ಚಿ ಗಿಲಿಗಿಲಿ ಶೋ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಮಹಾಸಂಗಮವಾಗಿದ್ದು ಈ ವೇದಿಕೆಯಲ್ಲಿ ವಂಶಿಕಾ ಕೆಜಿಎಫ್ ಸಿನಿಮಾದ ಡೈಲಾಗ್ ಹೊಡೆದಿದ್ದಾಳೆ.. ಹೌದು ವೈಲೆನ್ಸ್ ವೈಲೆನ್ಸ್ ವೈಲೆನ್ಸ್.. ಐ ಡೋಂಟ್ ಲೈಕ್ ಇಟ್.. ಈ ಅವಾಯ್ಡ್.. ಬಟ ವೈಲೆನ್ಸ್ ಲೈಕ್ಸ್ ಮಿ.. ಈ ಕಾಂಟ್ ಅವಾಯ್ಡ್ ಎಂಬ ಕೆಜಿಎಫ್ ಸಿನಿಮಾದ ಫೇಮಸ್ ಡೈಲಾಗ್ ಅನ್ನು ವಂಶಿಕಾ ತನ್ನದೇ ರೀತಿಗೆ ಬದಲಿಸಿಕೊಂಡಿದ್ದಾಳೆ..

“ಆಕ್ಟಿಂಗ್ ಆಕ್ಟಿಂಗ್.. ಆಕ್ಟಿಂಗ್.. ಈ ಡೋಂಟ್ ಲೈಕ್ ಇಟ್.. ಐ ಅವಾಯ್ಡ್.. ಬಟ್ ಆಕ್ಟಿಂಗ್ ಲೈಕ್ಸ್ ಮೀ.. ಈ ಕಾಂಟ್ ಅವಾಯ್ಡ್.. ಎಂದಿದ್ದಾಳೆ.. ಅಷ್ಟೇ ಅಲ್ಲದೇ ಅದೇ ವೇದಿಕೆಯಲ್ಲಿದ್ದ ರೋಹಿತ್ ಹಾಗೂ ಮಹಿತ ಕೂಡ ವಂಶಿಕಾಗೆ ಸಾತ್ ಕೊಟ್ಟಿದ್ದು ಇದೊಂದು ವೇದಿಕೆಯನ್ನಾದರೂ ರೋಹಿತ್ ಗೆ ಬಿಟ್ಟುಕೊಡು ಎಂದು ವಂಶಿಕಾ ಬಳಿ‌ ಕೇಳಿದ್ದು ಆಗ ಮತ್ತೊಂದು ಡೈಲಾಗ್ ಮೂಲಕ ಮತ್ತಷ್ಟು ಗಿಚ್ಚಿ ಗಿಲಿ ಗಿಲಿ ಮಾಡಿದ್ದಾಳೆ.. ” ಆ ಸ್ಟೇಜ್ ನಂದು ಈ ಸ್ಟೇಜ್ ನಂದು ಅನ್ನೋ ಮಾತೆಲ್ಲಾ ಹೋಯ್ತು.. ಇಡೀ ಕಲರ್ಸ್ ಕನ್ನಡಾನೇ ನಂದು” ಎಂದಿದ್ದಾಳೆ..

ಅಷ್ಟು ಸಾಲದೆಂಬಂತೆ.. ಒಂದು ಸ್ಟಾರ್ ವಂಶಿಕಾನ ಹುಟ್ಟು ಹಾಕಿರೋರಿಗೆ ಮತ್ತೊಂದು ಸ್ಟಾರ್ ವಂಶಿಕಾನ ಹುಟ್ಟುಹಾಕೋಕೆ ಆಗಲ್ವಾ ಎಂದು ಮಹಿತಾ ಹೇಳಿದ್ದು.. ಆ ಮಾತಿಗೆ ಪ್ರತಿಕ್ರಿಯೆ ನೀಡಿದ ವಂಶಿಕಾ.. “ಖಂಡಿತ ಸಾಧ್ಯವಿಲ್ಲ. ಇನ್ನೊಂದು ವಂಶಿಕಾಳನ್ನು ಹುಟ್ಟುಹಾಕಲು ಸಾಧ್ಯವೇ ಇಲ್ಲ.. ಎಂದಿದ್ದಾಳೆ.. ಏಕೆ ಎನ್ನಲಾಗಿ‌.. ” ನಮ್ಮ್ ಅಪ್ಪನ ಕೈಯಲ್ಲೇ ಆಗಿಲ್ಲ.. ಇನ್ನು ನಿಮಗ್ ಆಗತ್ತಾ ಎಂದು ಕೌಂಟರ್ ಕೊಟ್ಟಿದ್ದು.. ಈ ವಾರ ಮನರಂಜನೆಯ ಮಹಾಪೂರವೇ ಹರಿದು ಬರಲಿದೆ.. ಒಟ್ಟಿನಲ್ಲಿ ಈ ವಾರ ಗಿಚ್ಚಿ ಗಿಲಿ ಶೋನಲ್ಲಿ ವಂಶಿಕಾದೇ ಹವಾ ಗ್ಯಾರಂಟಿ..