ನವಗ್ರಹ ಸಿನಿಮಾದ ನಟಿ ವರ್ಷ ಇದ್ದಕ್ಕಿದ್ದಹಾಗೆ ಚಿತ್ರರಂಗದಿಂದ ದೂರವಾಗಿದ್ದೇಕೆ? ಅವರು ಏನಾದರು ಗೊತ್ತಾ?

0 views

ಒಂದು ದಶಕದ ಹಿಂದೆ, ಕನ್ನಡ ಚಿತ್ರರಂಗದಲ್ಲಿ ಹೊಸತನದ ಅಲೆ ತಂದ ಸಿನಿಮಾ ನೆನಪಿರಲಿ. ಈ ಸಿನಿಮಾ ಆಗಿನ ಕಾಲದಲ್ಲಿ ಎಲ್ಲಾ ಯೂತ್ ಗಳ ಫೇವರೆಟ್ ಆಗಿತ್ತು. ಹೊಸ ನಿರ್ದೇಶಕ, ಹೊಸ ಯುವ ಕಲಾವಿದರು, ಜೊತೆಗೆ ಕೆಲವು ಹಿರಿಯ ಕಲಾವಿದರು. ಮನಸ್ಸಿಗೆ ಮುದ ನೀಡುವಂತಹ ಹಂಸಲೇಖ ಅವರ ಸಂಗೀತ, ಸೂಕ್ಷ್ಮವಾದ ಪ್ರೇಮಕಥೆ, ಈ ಸಿನಿಮಾವನ್ನು ಕನ್ನಡ ಸಿನಿಪ್ರಿಯರು ಮರೆಯಲು ಸಾಧ್ಯವೇ? ನೆನಪಿರಲಿ ಸಿನಿಮಾ ಮೂಲಕ ಚಂದನವನಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟರು ನಟ ಲವ್ಲಿ ಸ್ಟಾರ್ ಪ್ರೇಮ್.

ಇದೇ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟವರು ನಟಿ ವರ್ಷ. ನೆನಪಿರಲಿ ಸಿನಿಮಾದಲ್ಲಿ ದ್ವಿತೀಯಾರ್ಧದಲ್ಲಿ ಬಂದರು ಸಹ ನಟಿ ವರ್ಷ ಅವರು ತಮ್ಮ ನ್ಯಾಚುರಲ್ ಆಕ್ಟಿಂಗ್ ಇಂದ ಎಲ್ಲರ ಮನಗೆದ್ದರು. ಬಿಂದು ಎನ್ನುವ ಆ ಪಾತ್ರವನ್ನು ಕನ್ನಡ ಸಿನಿಪ್ರಿಯರು ಇಂದಿಗೂ ಮರೆತಿಲ್ಲ. ನಟಿ ವರ್ಷ ನೋಡಲು ಸಹ ಸುಂದರವಾಗಿದ್ದರು. ನೆನಪಿರಲಿ ಸಿನಿಮಾ ಸೂಪರ್ ಹಿಟ್ ಆದ ನಂತರ ಇವರಿಗೆ ಸಾಕಷ್ಟು ಸಿನಿಮಾ ಅವಕಾಶಗಳು ಬಂದರು ಸಹ, ಇವರು ಚಿತ್ರರಂಗದಿಂದ ನಟನೆಯಿಂದ ದೂರ ಸರಿದುಬಿಟ್ಟರು. ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..

ನಟಿ ವರ್ಷ ಮೂಲತಃ ಮೈಸೂರಿನವರು, ಇವರ ನಿಜವಾದ ಹೆಸರು ಸಿಂಧು. ಮೊದಲಿಗೆ ಕನ್ನಡ ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿದ್ದರು ಸಿಂಧು, ಬಳಿಕ ನೆನಪಿರಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು, ಸಿನಿಮಾ ಇಂದ ಇವರ ಹೆಸರು ವರ್ಷ ಎಂದು ಬದಲಾಯಿತು. ನೆನಪಿರಲಿ ಸಿನಿಮಾ ಇವರಿಗೆ ದೊಡ್ಡ ಮಟ್ಟದ ಯಶಸ್ಸು ನೀಡಿತು, ಆ ಸಿನಿಮಾ ನಂತರ ವರ್ಷ ಅವರು ದರ್ಶನ್ ಅವರೊಡನೆ ನವಗ್ರಹ ಸಿನಿಮಾದಲ್ಲಿ, ಅವರ ತಂಗಿ ಪಾತ್ರದಲ್ಲಿ ಅಭಿನಯಿಸಿದರು. ಆದರೆ ನವಗ್ರಹ ಬಳಿಕ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿಲ್ಲ..

ಚಿತ್ರರಂಗದಿಂದ ದೂರ ಉಳಿದಿದ್ದಕ್ಕೆ ಒಂದು ಪ್ರಮುಖವಾದ ಕಾರಣ ಸಹ ಇದೆ. ಆ ಸಮಯಕ್ಕೆ ವರ್ಷ ಅವರಿಗೆ ಕಾಮೇಶ್ ಅವರೊಡನೆ ಮದುವೆಯಾಯಿತು. ಸುಂದರವಾದ ಸಾಂಸಾರಿಕ ಜೀವನ ನಡೆಸುತ್ತಿದ್ದರು. ಆದರೆ ದಾಂಪತ್ಯ ಜೀವನ ಎಂಜಾಯ್ ಮಾಡುವ ಸಮಯದಲ್ಲೇ ಇವರ ಆರೋಗ್ಯ ಕೈಕೊಟ್ಟಿತು. ದೇಹದಲ್ಲಿ ಸಮಸ್ಯೆಗಳು ಕಾಡಲು ಶುರುವಾದ ಕಾರಣ, ನಟನೆಗೆ ಗುಡ್ ಬೈ ಹೇಳಿ, ಆರೋಗ್ಯದ ಕಡೆಗೆ ಗಮನ ಹರಿಸಿದರು, ಒಂದಷ್ಟು ದಿನಗಳು ಚಿಕಿತ್ಸೆ ಪಡೆದ ನಂತರ, ಗುಣಮುಖರಾದರು ನಟಿ ವರ್ಷ. ಆರೋಗ್ಯ ಸುಧಾರಿಸುವಷ್ಟರಲ್ಲಿ ಅವರ ಮುಖದ ವರ್ಚಸ್ಸು ಬದಲಾಗಿತ್ತು.

ಹಾಗಾಗಿ ತೆರೆ ಮರೆಯ ಕೆಲಸಗಳನ್ನು ಮಾಡಲು ಶುರು ಮಾಡಿದರು. ಪ್ರೊಡಕ್ಷನ್ ಗಳಲ್ಲಿ ಕೆಲಸ ಮಾಡುತ್ತಿದ್ದರು, ಹಲವು ಶೋಗಳ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದರು. ಆದರೆ ನಟನೆ ಮೇಲಿನ ಒಲವು ಇನ್ನು ಕಡಿಮೆ ಆಗಿರಲಿಲ್ಲ. ಹಾಗಾಗಿ ಖ್ಯಾತ ಕಿರುತೆರೆ ನಟಿ ಶಾಲಿನಿ ಅವರೊಡನೆ ಸೇರಿ, ಯೂಟ್ಯೂಬ್ ನಲ್ಲಿ ಬರುವ ಕೆಲವು ವೆಬಿಸೋಡ್ ಗಳನ್ನು ಸಹ ಮಾಡಿದರು. ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವರ್ಷ ಅವರು, ಆಗಾಗ ಅವರ ಜೀವನದ ವಿಶೇಷ ಕ್ಷಣಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಳ್ಳುತ್ತಾರೆ.