ಒಂದು ಪದವೂ ಇಂಗ್ಲೀಷ್‌ ಮಾತನಾಡದ ವರ್ತೂರ್‌ ಸಂತೋಷ್‌ ಓದಿರೋದೇನು ಗೊತ್ತಾ? ನಿಜಕ್ಕೂ ಶಾಕ್‌ ಆಗ್ತೀರಾ..

0 views

ವರ್ತೂರು ಸಂತೋಷ್‌.. ಬಿಗ್‌ ಬಾಸ್‌ ಕನ್ನಡ ಸೀಸನ್‌ ಹತ್ತರ ಸ್ಪರ್ಧಿಗಳಲ್ಲಿ ಒಬ್ಬರಾಗಿ ಎಂಟ್ರಿ ಕೊಟ್ಟಿರುವ ವರ್ತೂರು ಸಂತೋಷ್‌ ಬಿಗ್‌ ಬಾಸ್‌ ಮನೆಗಿಂತ ಹೆಚ್ಚಾಗಿ ಹೊರಗೆ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದೇ ಇದೆ.. ಹೌದು ಹುಲಿ ಉಗುರಿನ ಪ್ರಕರಣದಲ್ಲಿ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಿದ್ದ ವರ್ತೂರು ಸಂತೋಷ್‌ ಇದೀಗ ಮತ್ತೆ ಬಿಗ್‌ ಮನೆಗೆ ಸೇರಿಕೊಂಡಿದ್ದು ಮೊದಲಿಗಿಂತ ಈಗ ಬಿಗ್‌ ಬಾಸ್‌ ಮನೆಯಲ್ಲಿ ಹೆಚ್ಚು ಆಕ್ಟೀವ್‌ ಆಗಿದ್ದಾರೆನ್ನಬಹುದು.. ಇನ್ನು ಬಿಗ್‌ ಬಾಸ್‌ ಮನೆಯಲ್ಲಿ ಇರಲು ಒಂದಷ್ಟು ನಿಯಮಗಳು ಇದ್ದೇ ಇರುತ್ತದೆ.. ಅದರಲ್ಲೂ ಮೂಲ ನಿಯಮಗಳು ಎಂದು ಒಂದಷ್ಟು ನಿಯಮಗಳನ್ನು ಸ್ಪರ್ಧಿಗಳಿಗೆ ಮೊದಲೇ ತಿಳಿಸಿದ್ದು ಆ ನಿಯಮಗಳನ್ನು ಅವರು ಪಾಲಿಸಲೇ ಬೇಕು.. ಅಂತಹ ನಿಯಮಗಳಲ್ಲಿ ಒಂದು ಬಿಗ್‌ ಬಾಸ್‌ ಮನೆಯಲ್ಲಿ ಕನ್ನಡವನ್ನೇ ಮಾತನಾಡಬೇಕು ಎನ್ನುವುದು.. ಕಳೆದ ಅಷ್ಟೂ ಸೀಸನ್‌ ಗಳಲ್ಲಿ ಆ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತಿತ್ತು.. ಆದರೆ ಅದ್ಯಾಕೋ ಈ ಸೀಸನ್‌ ನಲ್ಲಿ ಇಂಗ್ಲೀಷ್‌ ನಲ್ಲಿ ಮಾತನಾಡಿದವರಿಗೆ ಶಿಕ್ಷೆ ಕೊಡುವ ಬದಲು ಅವರ ಮಾತುಗಳಿಗೆ ಕನ್ನಡದಲ್ಲಿ ಕ್ಯಾಪ್ಶನ್‌ ಕೊಟ್ಟು ಜನರಿಗೆ ಅರ್ಥ ಮಾಡಿಸಿದ್ದು ವಿಪರ್ಯಾಸ.. ಇನ್ನು ಕಳೆದ ವಾರ ನೀತು ಮನೆಯ ಕ್ಯಾಪ್ಟನ್‌ ಆದ ಸಮಯದಲ್ಲಿ ಮನೆಯ ಸದಸ್ಯರು ಹೆಚ್ಚಾಗಿ ಕನ್ನಡ ಬಳಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದು ಅದೂ ಕೂಡ ಕಾಟಾಚಾರಕ್ಕೆ ಹೇಳಿದಂತೆ ಕಂಡಿತು.. ‌

ಯಾರೇನೇ ಅಂದರೂ ನಾವು ಮಾಡೋದೇ ಮಾಡೋದು ಎನ್ನುವ ಈ ಸೀಸನ್‌ ನ ಬಹಳಷ್ಟು ಸದಸ್ಯರು ಅದ್ಯಾಕೋ ಇಂಗ್ಲೆಂಡ್‌ ನಿಂದಲೇ ಬಂದವರಂತೆ ಆಡುತ್ತಿದ್ದಾರೆ.. ನಾಲ್ಕು ಅಕ್ಷರ ಇಂಗ್ಲೀಷ್‌ ಗೊತ್ತು ಎನ್ನುವ ಕಾರಣಕ್ಕೆ ಸಮೃದ್ಧಿಯಾಗಿರುವ ಹೆಮ್ಮೆಯ ಕನ್ನಡ ಭಾಷೆಯನ್ನು ಬಿಟ್ಟು ಟಸ್ಸು ಪುಸ್ಸು ಎನ್ನುತ್ತಿರುವುದು ಪ್ರೇಕ್ಷಕರಿಗೆ ಕೊಂಚ ಕಿರಿಕಿರಿ ಆಗಿರೋದು ಉಂಟು.. ಈ ಹಿಂದಿನ ಸೀಸನ್‌ ನಲ್ಲಿ ಸ್ವಲ್ಪ ಇಂಗ್ಲೀಷ್‌ ಬಳಸಿದರೂ ಕೂಡ ಕನ್ನಡವೇ ನಮ್ಮಮ್ಮ ಹಾಡನ್ನು ಹಾಕುತ್ತಿದ್ದರು.. ಅಷ್ಟೇ ಏಕೆ ಎಷ್ಟೋ ಬಾರಿ ಇಂಗ್ಲೀಷ್‌ ಮಾತನಾಡಿದವರನ್ನು ಸ್ವಿಮ್ಮಿಂಗ್‌ ಪೂಲಿಗೆ ತಳ್ಳಿರೋದು ಉಂಟು.. ಆದರೆ ಈ ಸೇಸನ್‌ ನಲ್ಲಿ ಕನ್ನಡ ಭಾಷೆ ಬಳಸಬೇಕು ಎನ್ನುವ ನಿಯಮವನ್ನು ಗಾಳಿಗೆ ತೂರಿದ್ದಾರೆ.. ಇನ್ನು ಇದೆಲ್ಲವನ್ನು ಹೊರತು ಪಡಿಸಿ ವರ್ತೂರ್‌ ಸಂತೋಷ್‌ ಅವರ ಬಗ್ಗೆ ಮಾತನಾಡುವುದಾದರೆ ಕಿರುತೆರೆಯಲ್ಲಿ ಒಂದೆರೆಡು ಧಾರಾವಾಹಿಗಳಲ್ಲಿ ಅಭಿನಯಿಸದ್ದೇವೆ ಎನ್ನುವ ಅಹಂಕಾರದಿಂದಲೋ ಅಥವಾ ನನಗೂ ಇಂಗ್ಲೀಷ್‌ ಬರುತ್ತದೆ ಎನ್ನುವ ಕೊಬ್ಬಿಗೋ ಕೆಲವರು ಇಂಗ್ಲೀಷ್‌ ಭಾಷೆಯನ್ನೇ ಹೆಚ್ಚು ಬಳಸುತ್ತಿರುವ ಬಿಗ್‌ ಬಾಸ್‌ ಮನೆಯಲ್ಲಿ ಪ್ರೇಕ್ಷಕರು ಗಮನಿಸಿದಂತೆ ಬಹುತೇಕ ಯಾವ ಸಂದರ್ಭದಲ್ಲಿಯೂ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡದ ವರ್ತೂರ್‌ ಸಂತೋಷ್‌ ಜನರಿಗೆ ಈ ವಿಚಾರವಾಗಿ ಇಷ್ಟವಾಗ್ತಾರೆ.. ಇಂಗ್ಲೀಷ್‌ ಮಾತನಾಡುವುದಿಲ್ಲ ಎಂದರೆ ಅವರು ಓದಿಲ್ಲ ಅದಕ್ಕೆ ಮಾತನಾಡುವುದಿಲ್ಲ ಎಂದು ಕೆಲವರು ಅಂದುಕೊಳ್ಳುವುದುಂಟು.. ಆದರೆ ವರ್ತೂರ್‌ ಸಂತೋಷ್‌ ಅವರ ವಿಧ್ಯಾಭ್ಯಾಸ ಏನೆಂದು ತಿಳಿದರೆ ನಿಜಕ್ಕೂ ಆಶ್ಚರ್ಯವಾಘೋದು ಖಚಿತ..ಕೆಳಗಿನ ವೀಡಿಯೋ ನೋಡಿ..

ಹೌದು ವರ್ತೂರ್‌ ಸಂತೋಷ್‌ ಅವರು ಬಿಗ್‌ ಬಾಸ್‌ ಮನೆಗೆ ಬರುವ ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಹೆಸರು ಮಾಡಿದವರೆ.. ಕಳೆದ ಎರಡು ವರ್ಷದ ಹಿಂದೆ ಜಿಕೆವಿಕೆ ಯಲ್ಲಿ ನಡೆದ ಕೃಷಿ ಜಾತ್ರೆ ಸಮಯದಲ್ಲಿ ಏಕಲವ್ಯ ಎಂಬ ಹಳ್ಳಿಕಾರ್‌ ಹೋರಿಯ ಪರಿಚಯ ಮಾಡಿದ್ದ ವರ್ತೂರ್‌ ಸಂತೋಷ್‌ ಆ ವೀಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದರು.. ಕನ್ನಡ ನಾಡಿನ ಮೂಲ ತಳಿ ಹಳ್ಳಿಕಾರ್‌ ಸಂರಕ್ಷಣೆಯಾಗಬೇಕು ಎನ್ನವ ಒಳ್ಳೆಯ ಉದ್ದೇಶ ಇರುವ ವರ್ತೂರ್‌ ಸಂತೋಷ್‌ ಅವರು ಹಳ್ಳಿಕಾರ್‌ ರೇಸ್‌ ಮಾಡಿ ರೈತರನ್ನು ಮತ್ತಷ್ಟು ಪ್ರೋತ್ಸಾಹಿಸಿದವರು.. ಹೀಗೆ ಹಳ್ಳಿಕಾರ್‌ ಬಗೆಗಿನ ಯೂಟ್ಯೂಬ್‌ ವೀಡಿಯೋಗಳಿಂದಲೇ ಜನರಿಗೆ ಇವರು ಹೆಚ್ಚು ಪರಿಚಯವಾಗಿದ್ದು ಇವರ ಹಳ್ಳಿ ಸೊಗಡಿನ ಭಾಷೆ ಹಾಗೂ ನೈಜ್ಯತನ ಜನರಿಗೆ ಇಷ್ಟವಾಗಿತ್ತು.. ಇದರ ಜೊತೆಗೆ ಹೆಣ್ಣು ಮಕ್ಕಳ ಬಗ್ಗೆ ವರ್ತೂರ್‌ ಸಂತೋಷ್ ಕೂಡ ಒಮ್ಮೆ ಕಾಂಟ್ರೋವರ್ಸಿ ಹೇಳಿಕೆ ಕೊಟ್ಟು ಕ್ಷಮೆ ಕೇಳಿದ್ದೂ ಉಂಟು.. ಇನ್ನು ಇವರು ಮೂಲತಃ ವರ್ತೂರಿನವರೇ ಆಗಿದ್ದು ಕೂಡು ಕುಟುಂಬದ ಒಂದು ದೊಡ್ಡ ಮನೆತನದವರು.. ಕ್ರಮೇಣ ವರ್ತೂರು ಹಳ್ಳಿಯಿಂದ ಪಟ್ಟಣದ ರೂಪ ಪಡೆದುಕೊಳ್ಳುತ್ತಿರುವಂತೆ ಇವರ ಸ್ವಂತ ಜಾಗಗಳಲ್ಲಿ ಸಾಕಷ್ಟು ಅಪಾರ್ಟ್‌ ಮೆಂಟ್‌ ಗಳು ತಲೆ ಎತ್ತಿದವು.. ಆದರೂ ಈಗಲೂ ವರ್ತೂರಿನಲ್ಲೇ ವಿಶಾಲವಾದ ಜಾಗವನ್ನು ಹಾಗೆಯೇ ಇರಿಸಿಕೊಂಡು ಅಲ್ಲಿಯೇ ದೊಡ್ಡ ಬಂಗಲೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ.. ಜೊತೆಗೆ ಅದೇ ಜಾಗದಲ್ಲಿಯೇ ಹಳ್ಳಿಕಾರ್‌ ಎತ್ತು ಹಸು ಹೋರಿಗಳನ್ನು ಸಾಕುತ್ತಾ ತಮ್ಮ ಕುಟುಂಬದ ಹೋರಿ ಕಟ್ಟುವ ಸಂಪ್ರದಾಯವನ್ನು ಮುಂದುವರೆಸುತ್ತಾ ಬರುತ್ತಿದ್ದಾರೆ.. ಇನ್ನು ಸದಾ ಎತ್ತು ಹಸು ತೋಟ ಎಂದು ಮಾತನಾಡುವ ಸಂತೋಷ್‌ ಅವರು ಕಡಿಮೆಯೇನೂ ಓದಿಲ್ಲ..

ಅವರು ಓದಿರೋದು ಎಂಬಿಎ.. ಹೌದು ಒಂದನೇ ಕ್ಲಾಸಿನಿಂದಲೇ ಇಂಗ್ಲೀಷ್‌ ಮಾಧ್ಯಮದಲ್ಲೇ ಓದಿರುವ ವರ್ತೂರ್‌ ಸಂತೋಷ್‌ ಅವರು ನಂತರ ವರ್ತೂರಿನಲ್ಲಿಯೇ ಪಿಯುಸಿ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಡಿಗ್ರಿ ಓದುತ್ತಾರೆ.. ನಂತರ ಉನ್ನತ ಶಿಕ್ಷಣ ಮಾಡಲು ಎಂಬಿಎ ಗೆ ಸೇರಿಕೊಂಡ ವರ್ತೂರ್‌ ಸಂತೋಷ್‌ ಕಾರಣಾಂತರಗಳಿಂದ ಅದನ್ನು ಸಂಪೂರ್ಣ ಗೊಳಿಸಲು ಸಾಧ್ಯವಾಗಲಿಲ್ಲ.. ಇಷ್ಟೆಲ್ಲಾ ಓದಿದ್ದರೂ ಕಕೂಡ ವರ್ತೂರ್‌ ಸಂತೋಷ್‌ ಅವರು ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲಿಯೂ ಇಂಗ್ಲೀಷ್‌ ಬಳಸದೇ ತಮ್ಮ ಊರಿನ ಹಳ್ಳಿ ಸೊಗಡಿನ ಭಾಷೆಯಲ್ಲಿಯೇ ಮಾತನಾಡಿಕೊಂಡು ನೈಜ್ಯತೆ ಇಂದ ಇರುವುದು ನಿಜಕ್ಕೂ ಸಂತೋಷ ಪಡುವ ವಿಚಾರ.. ಇನ್ನು ವರ್ತೂರ್‌ ಸಂತೋಷ್‌ ಅವರಿಗೆ ಪೂರ್ವಜರಿಂದ ಸಾಕಷ್ಟು ಆಸ್ತಿ ಬಂದಿದ್ದು ಆ ಜಾಗದಲ್ಲಿಯೇ ಈ ಸಾಕಷ್ಟು ಅಪಾರ್ಟ್‌ ಮೆಂಟ್‌ ಗಳು ತಲೆ ಎತ್ತಿ ನಿಂತಿವೆ.. ತಿಂಗಳಿಗೆ ಲಕ್ಷಾಂತರ ರೂಪಾಯಿ ಬಾಡಿಗೆಯೇ ವರ್ತೂರ್‌ ಸಂತೋಷ್‌ ಅವರಿಗೆ ಮೂಲ ಆದಾಯವಾಗಿದ್ದು ತೋಟವನ್ನೂ ಸಹ ಮಾಡಿ ಕೃಷಿ ಕೆಲಸವನ್ನೂ ಸಹ ಮಾಡಿಸುತ್ತಿದ್ದಾರೆ.. ಇನ್ನು ಆಗಿನಿಂದಲೂ ಶ್ರೀಮಂತಿಕೆಯಿಂದಲೇ ಬೆಳೆದಿದ್ದ ವರ್ತೂರ್‌ ಸಂತೋಷ್‌ ಅವರು ಸ್ವಲ್ಪ ಹೆಚ್ಚಾಗಿಯೇ ಚಿನ್ನಾಭರಣಗಳನ್ನು ಧರಿಸುತ್ತಿದ್ದು ಕೆಲ ವರ್ಷದ ಹಿಂದೆ ಹುಲಿ ಉಗುರನ್ನು ಮೂವತ್ತು ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರಂತೆ..

ಅದೇ ಹುಲಿ ಉಗುರನ್ನು ಬಿಗ್‌ ಬಾಸ್‌ ಮನೆಯಲ್ಲಿ ಧರಿಸಿದ್ದು ವರ್ತೂರ್‌ ಸಂತೋಷ್‌ ಅವರು ಕೆಲ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಮಾಡಿತು.. ಬಹುಶ ಈ ವಿಚಾರದಲ್ಲಿ ಸೆಲಿಬ್ರಿಟಿಗಳ ಹೆಸರುಗಳು ಕೇಳಿ ಬರದಿದ್ದರೆ ಇವರ ಕೇಸ್‌ ಮತ್ತಷ್ಟು ಪ್ರಬಲವಾಗುತ್ತಿತ್ತೋ ಏನೋ.. ಆದರೆ ಸಾಕಷ್ಟು ದೊಡ್ಡ ದೊಡ್ಡ ಮುಖಂಡರುಗಳ ಹೆಸರೂ ಕೂಡು ಹುಲಿ ಉಗುರಿನಲ್ಲಿ ಸಿಕ್ಕಿ ಕೊಂಡಿದ್ದರಿಂದ ವರ್ತೂರ್‌ ಸಂತೋಷ್‌ ಅವರು ಜಾಮೀನು ಪಡೆದು ಹೊರ ಬರುವಂತಾಯಿತು.. ಸಧ್ಯ ಈಗ ಬಿಗ್‌ ಬಾಸ್‌ ಮನೆಗೆ ಮತ್ತೆ ಎಂಟ್ರಿ ನೀಡಿರುವ ವರ್ತೂರ್‌ ಸಂತೋಷ್‌ ಬೇರೆ ಕಾರಣಗಳಿಗೆ ಅಲ್ಲವಾದರೂ ಕನ್ನಡ ಭಾಷೆ ಬಳಸುವ ವಿಚಾರದಲ್ಲಿ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆನ್ನಬಹುದು..  ಇನ್ನು ಮನೆ ಒಳಗೆ ಬರುವ ಮುನ್ನ ತಮ್ಮ ಚಿನ್ನಾಭರಣ ಎಲ್ಲವನ್ನು ಮನೆಗೆ ಕೊಟ್ಟು ಕಳುಹಿಸಿದ್ದು ಬಿಗ್‌ ಬಾಸ್‌ ಮನೆಗೆ ಮರಳಿ ಬಂದಾಗ ಈ ವಿಚಾರಗಳ ಕಾರಣ ಕೊಂಚ ಮಂಕಾಗಿದ್ದ ಸಂತೋಷ್‌ ಈಗ ಮರಳಿ ಲಯಕ್ಕೆ ಬಂದಿದ್ದಾರೆನ್ನಬಹುದು..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.