ಬಿಗ್ ಬಾಸ್ ಗೆ ವಾಪಸ್ ಬಂದ ದಿನವೇ ವರ್ತೂರು ಸಂತೋಷ್ ಗೆ ಶಾಕ್.. ಮತ್ತೆ ಬಿಗ್‌ ಬಾಸ್‌ ಮನೆಯಿಂದ ಹೊರಕ್ಕೆ?

0 views

ಕನ್ನಡ ಕಿರುತೆರೆಯ ಅತಿದೊಡ್ಡ ಶೋ ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಬಹುಶಃ ಇನ್ನು ಹತ್ತು ವರ್ಷ ಆದರೂ ನೆನಪಿನಲ್ಲಿ ಉಳಿಯಲಿದೆ.. ಕಾರಣ ಈ ಹುಲಿ ಉಗುರಿನ ಪ್ರಕರಣ.. ಹೌದು ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ರೀತಿ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಯೊಬ್ಬರನ್ನು ಪೋಲೀಸರು ತಮ್ಮ ವಶಕ್ಕೆ ಪಡೆದಿದ್ದು.. ಅದರಲ್ಲೂ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನದಲ್ಲಿದ್ದ ಸಂತೋಷ್ ಇದೀಗ ಜಾಮೀನು ಪಡೆದು ಮತ್ತೆ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.. ಹೌದು ತಾವು ಧರಿಸಿದ್ದ ಹುಲಿ ಉಗುರು ನಿಜವಾದ ಹುಲಿ ಉಗುರೇ ಎಂದು ಒಪ್ಪಿಕೊಂಡಿರುವ ವರ್ತೂರ್ ಸಂತೋಷ್ ಅದನ್ನು ಮೂವತ್ತು ಸಾವಿರ ರೂಪಾಯಿಗಳಿಗೆ ಖರೀಧಿಸಿರುವುದಾಗಿಯೂ ಹೇಳಿಕೆ ನೀಡಿದ್ದಾರೆ.. ಇನ್ನು ಈ ವಿಚಾರದಲ್ಲಿ ಅದಾಗಲೇ ಕೋರ್ಟ್ ಇವರಿಗೆ ಜಾಮೀನು ನೀಡಿದ್ದು ಮತ್ತೆ ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಅಂದುಕೊಂಡಿದ್ದ ಜನರಿಗೆ ಸರ್ಪ್ರೈಸ್ ಎನ್ನುವಂತೆ ಬಿಗ್ ಬಾಸ್ ಮನೆಗೆ ಮರಳಿ ಬಂದಿದ್ದು ಒಂದಷ್ಟು ದಿನ ಅಂದರೆ ವಾರದ ಹಿಂದೆ ಮಾದ್ಯಮಗಳಿಗೆ ಟಿ ಆರ್ ಪಿ ಸರಕಾಗಿದ್ದ ಸಂತೋಷ್ ಅವರಿಂದ ಬಿಗ್ ಬಾಸ್ ಗೂ ಒಂದಷ್ಟು ಟಿ ಆರ್ ಪಿ ಬರಬಹುದು ಎಂಬ ಅಂದಾಜಿರಬಹಿದಾಗಿದೆ..

ಇನ್ನು ನಿನ್ನೆಯಷ್ಟೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ವರ್ತೂರು ಸಂತೋಷ್ ಅವರಿಗೆ ಮನೆಯೊಳಗೆ ಶಾಕ್ ಕಾದಿತ್ತು ಎಂದರೂ ತಪ್ಪಾಗಲಾರದು.. ಹೌದು ಬಿಗ್ ಬಾಸ್ ಮನೆಯೊಳಗೆ ಬಂದಾಗ ಎಲ್ಲರೂ ತಬ್ಬಿ ಸ್ವಾಗತ ಕೋರಿದ್ದು ವರ್ತೂರ್ ಸಂತೋಷ್ ಅವರ ಬಗ್ಗೆ ವಿಚಾರಿಸಿದ್ದನ್ನು ನೋಡಿದರೆ ಮನೆಗೆ ಬಂದಾಗ ರಾಜ ಮರ್ಯಾದೆ ನೀಡಿದಂತಿತ್ತು.. ವಿನಯ್ ಆಗಲಿ ಸಂಗೀತಾ ಆಗಲಿ ನಮ್ರತಾ ಆಗಲಿ ಸ್ನೇಹಿತ್ ಆಗಲಿ ತುಕಾಲಿ ಸಂತೋಷ್ ಆಗಲಿ ತನಿಷಾ ಆಗಲಿ ಎಲ್ಲರೂ ಸಹ ವರ್ತೂರ್ ಸಂತೋಷ್ ಅವರಿಗೆ ಆತ್ಮೀಯ ಆಮಂತ್ರಣವೇನೋ ನೀಡಿದರು.. ಇನ್ನು ವಿನಯ್ ಸೇರಿದಂತೆ ಕೆಲ ಸದಸ್ಯರು ಹೊರಗಿನ ವಿಚಾರಗಳನ್ನು ಕೆದಕಿ ಕೆದಕಿ ಕೇಳಿದರೂ ಕೂಡ ವರ್ತೂರು ಸಂತೋಷ್ ಅವರಿಂದ ಯಾವುದೇ ಉತ್ತರ ದೊರೆಯಲಿಲ್ಲ.. ಇನ್ನು ವರ್ತೂರ್ ಸಂತೋಷ್ ಅವರ ಬಳಿ ಇದ್ದ ಚಿನ್ನದ ಬಗ್ಗೆಯೂ ವಿಚಾರಿಸಿದ್ದ ನಮ್ರತಾ ನಿಮ್ಮ ಚಿನ್ನವನ್ನೆಲ್ಲಾ ಆಗಲೇ ತೆಗೆದುಕೊಂಡು ಹೋಗಿದ್ದೀರಾ ಎಂದು ಕೇಳಿದರು.. ಇದಕ್ಕೆ ಉತ್ತರಿಸಿದ ಸಂತೋಷ್ ಹಾ ಎಂದು ಸುಮ್ಮನಾದರು.. ಅದೇ ಚಿನ್ನದಿಂದ ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದರು ಎಂಬ ಸಣ್ಣ ಅಂದಾಜು ಕೂಡ ಬಿಗ್ ಬಾಸ್ ಮನೆಯವರಿಗೆ ಇರಲು ಬಹುಶಃ ಸಾಧ್ಯವಿಲ್ಲ‌.. ಇನ್ನು ಸಂತೋಷ್ ಬಿಗ್ ಬಾಸ್ ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ವರ್ತೂರ್ ಸಂತೋಷ್ ಅವರಿಗಾಗಿ ಸ್ಪೆಷಲ್ ನಾಮಿನೇಷನ್ ಪ್ರಕ್ರಿಯೆಯೊಂದು ನಡೆಯಿತು..

ಹೌದು ವರ್ತೂರ್ ಸಂತೋಷ್ ನಿನ್ನೆ ಬಿಗ್ ಬಾಸ್ ಮನೆಗೆ ಬರುವ ಕೆಲ ಸಮಯದ ಮುನ್ನವೇ ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು ವಿನಯ್ ತನಿಷಾ ತುಕಾಲಿ ಸಂತೋಷ್ ಸ್ನೇಹಿತ್ ಕಾರ್ತಿಕ್ ಸಿರಿ ರಕ್ಷಕ್ ಮೈಕಲ್ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು.. ಇನ್ನು ವರ್ತೂರ್ ಸಂತೋಷ್ ಅವರ ಬಂದ ಬಳಿಕ ಇವರು ಮುಂದೆ ಈ ಮನೆಯಲ್ಲೇ ಇರಬೇಕ ಎಂಬ ಪ್ರಶ್ನೆಗೆ ಸಾಲು ಸಾಲಾಗಿ ಉತ್ತರಿಸಿದ ಮನೆಯ ಮಂದಿ.. ಇಲ್ಲ ವರ್ತೂರ್ ಸಂತೋಷ್ ಕೂಡ ನಾಮಿನೇಟ್ ಆಗಲೇ ಬೇಕೆಂದರು.. ವಿನಯ್ ಗೌಡ.. ಕಾರ್ತಿಕ್.. ಸಂಗೀತಾ.. ನೀತು.. ಇಶಾನಿ.. ಮೈಕಲ್.. ನಮ್ರತಾ.. ಸಿರಿ ಸೇರಿದಂತೆ ಬಹಳಷ್ಟು ಜನರು ವರ್ತೂರ್ ಸಂತೋಷ್ ವಾಪಸ್ ಮನೆಗೆ ಹೋಗಲಿ ಎಂದೇ ಉತ್ತರ ಕೊಟ್ಟರು.. ಇತ್ತ ತುಕಾಲಿ ಸಂತೋಷ್.. ರಕ್ಷಕ್ ಡ್ರೋನ್ ಪ್ರತಾಪ್.. ಭಾಗ್ಯಶ್ರೀ ಅವರು ಸಂತೋಷ್ ಬಿಗ್ ಬಾಸ್ ಮನೆಯಲ್ಲೇ ಇರಲಿ ಎಂದರು.. ಆದರೆ ಬಹುಪಾಲು ವೋಟ್ ಸಂತೋಷ್ ಅವರ ವಿರುದ್ಧವೇ ಬಂದ ಕಾರಣ ಸಂತೋಷ್ ಅವರು ಕೂಡ ಬಿಗ್ ಬಾಸ್ ಗೆ ವಾಒಅಸ್ ಬಂದ ಕೂಡಲೇ ಮತ್ತೆ ಹೊರ ಹೋಗಲು ನಾಮಿನೇಟ್ ಆಗಲೇ ಬೇಕಾಯಿತು.. ಕೆಳಗಿನ ವೀಡಿಯೋ ನೋಡಿ..

ಇನ್ನು ಮನೆಗೆ ಬಂದಾಗ ನಿಮ್ಮನ್ನ ತುಂಬಾ ಮಿಸ್ ಮಾಡಿಕೊಂಡ್ವಿ.. ನಿಮ್ಮನ್ನ ನೆನಪಿಸಿಕೊಳ್ಳದ ದಿನವೇ ಇಲ್ಲ.. ನೀವು ಕನಸಿನಲ್ಲೇಲ್ಲಾ ಬಂದಿದ್ರಿ.. ನಿಮ್ಮ ಆರೋಗ್ಯ ಓಕೆ ನ.. ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರಾ ಎಂದು ಅತಿಯಾದ ಕಾಳಜಿ ತೋರಿದವರೆಲ್ಲಾ ಇದೀಗ ವರ್ತೂರ್ ಸಂತೋಷ್ ಮರಳಿ ಮನೆಗೆ ಹೋಗಲಿ ಎಂದು ಕಡ್ಡಿ ತುಂಡಾಗುವಂತೆ ಕೊಟ್ಟ ಹೇಳಿಕೆ ನೋಡಿ ಒಂದು ಕ್ಷಣ ವರ್ತೂರ್ ಸಂತೋಷ್ ಅವರೇ ಶಾಕ್ ಆಗಿದ್ದಂತೂ ಸತ್ಯ.. ಇನ್ನು ಈ ವಾರ ಎಲಿಮಿನೇಷನ್ ಇದ್ದೇ ಇರುತ್ತದೆ.. ವಾರಾಂತ್ಯದಲ್ಲಿ ವರ್ತೂರ್ ಸಂತೋಷ್ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುವರೋ ಅಥವಾ ಪ್ರೇಕ್ಷಕ ಮಹಾಪ್ರಭುಗಳು ಮತ್ತೊಂದು ಅವಕಾಶ ಕೊಟ್ಟು ಕೈ ಹಿಡಿಯುವರೋ ಕಾದು ನೋಡಬೇಕಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.