ಇಂದು ನಡೆಯಬೇಕಿದ್ದ ಕನ್ನಡ ಕಿರುತೆರೆಯ ಖ್ಯಾತ ನಟಿ ಕಾವ್ಯಾ ಶಾ ಮದುವೆ ಕ್ಯಾನ್ಸಲ್.. ಕಾರಣವೇನು ಗೊತ್ತಾ..

0 views

ಕನ್ನಡ ಕಿರುತೆರೆಯಲ್ಲಿ‌ ಕಳೆದ ಎರಡು ವರ್ಷಗಳಿಂದ ಸಾಲು ಸಾಲು‌ ಮದುವೆಗಳು ನೆರವೇರುತ್ತಿದ್ದು ಅದೇ ಸಾಲಿಗೆ ಕನ್ನಡ ಕಿರುತೆರೆಯ ಖ್ಯಾತ ನಟಿ ಕಾವ್ಯಾ ಶಾ ಅವರು ಸೇರ್ಪಡೆಯಾಗುತ್ತಿದ್ದರು.. ಆದರೆ ಇಂದು ನಡೆಯಬೇಕಿದ್ದ ಕಾವ್ಯಾ ಶಾ ಅವರ ಮದುವೆ ಕ್ಯಾನ್ಸಲ್ ಆಗಿದ್ದು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಅಷ್ಟಕ್ಕೂ ನಿನ್ನೆಯಷ್ಟೇ ಸಂಭ್ರಮದಿಂದ ಇದ್ದ ಮನೆ ಇಂದು ಏನಾಯಿತು ತಿಳಿದರೆ ಬೇಸರವಾಗುತ್ತದೆ..

ಹೌದು ಕಾವ್ಯಾ ಶಾ ಕನ್ನಡದ ನಟಿ ಮಾತ್ರವಲ್ಲಿ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದವರು.. ಕನ್ನಡದ ಧಾರಾವಾಹಿಗಳಾದ ಚಿ ಸೌ ಸಾವಿತ್ರಿ.. ಬಂಗಾರ ಹೀಗೆ ಇನ್ನು ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೇ ಕಸ್ತೂರಿ ವಾಹಿನಿಯ ನಿರೂಪಕಿಯಾಗಿಯೂ ಗುರುತಿಸಿಕೊಂಡು ಹೆಸರು ಮಾಡಿದ್ದರು.. ನಂತರ ಸ್ಯಾಂಡಲ್ವುಡ್ ಗೆ ಕಾಲಿಟ್ಟಿದ್ದ ಕಾವ್ಯಾ ಶಾ ಯಶ್ ಅವರ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮುಗಿಲ್ ಪೇಟೆ ಹಾಗೂ ಇನ್ನು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು.. ಅಷ್ಟೇ ಅಲ್ಲದೇ ತಮಿಳು ಚಿತ್ರರಂಗಕ್ಕೆ ಕಾಲಿಟ್ಟು ಅಲ್ಲಿ ಕಿರುತೆರೆ ಹಾಗೂ ಬೆಳ್ಳಿತೆರೆಯ ಮೇಲೂ ಕಾಣಿಸಿಕೊಂಡು ಶೋಗಳು ಸಿನಿಮಾಗಳು ಅಂತ ಬ್ಯುಸಿ ಆಗಿದ್ದರು..

ಇನ್ನು ಇತ್ತ ಕಾವ್ಯಾ ಶಾ ಕನ್ನಡ ಸಿನಿಮಾ ಇಂಡಸ್ಟ್ರಿಯ ಹಿರಿಯ ಕಲಾವಿದರಾದ ನಾಗೇಂದ್ರ ಶಾ ಅವರ ಮಗಳೂ ಹೌದು.. ಕಾವ್ಯಾ ಶಾ ಕಳೆದ ಕೆಲ ವರ್ಷಗಳಿಂದ ನಿರ್ಮಾಪಕರೊಬ್ಬರನ್ನು ಪ್ರೀತಿಸುತ್ತಿದ್ದು ಕೆಲ ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವೂ ಆಗಿತ್ತು.. ಹೌದು ವರುಣ್ ಗೌಡ ಎಂಬುವವರನ್ನು ಕಾವ್ಯಾ ಶಾ ಪ್ರೀತಿಸುತ್ತಿದ್ದರು. ವರುಣ್ ಗೌಡ ಜೀ ಕನ್ನಡ ವಾಹಿನಿಯ ಸಾಕಷ್ಟು ಶೋಗಳ ನಿರ್ಮಾಪಕರಾಗಿದ್ದು ಹಗೆಯೇ ತಮ್ಮದೇ ಆದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದನ್ನು ಸಹ ನಡೆಸುತ್ತಿದ್ದರು.. ಜೀ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರ ಜೊತೆ ಗುರುತಿಸಿಕೊಂಡಿದ್ದ ವರುಣ್ ಕಿರುತೆರೆಯಲ್ಲಿ ಹೆಸರು ಮಾಡಿದ್ದು ಜೊತೆಗೆ ಅಪ್ಪು ಅವರಿಗೆ ಬಹಳ ಆತ್ಮೀಯರಾಗಿದ್ದರು..

ಹಾಸ್ಟೆಲ್ ಹುಡುಗರು ಸಿನಿಮಾ ನಿರ್ಮಾಣ ಮಾಡುತ್ತಿದ್ದು ಪುನೀತ್ ಅವರೇ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು.. ಇನ್ನು ಇದೇ ಏಪ್ರಿಲ್ ಹದಿನೆಂಟರಂದು ಅಂದರೆ ಇಂದು ವರುಣ್ ಹಾಗೂ ಕಾವ್ಯಾ ಶಾ ಅವರ ಮದುವೆ ನೆರವೇರಬೇಕಿತ್ತು.. ಕಳೆದ ಹತ್ತು ವರ್ಷಗಳಿಂದ ಪ್ರೀತಿಸಿ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತಿತ್ತು.. ನಿನ್ನೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಕಾವ್ಯಾ ಶಾ ನಮ್ಮ ಜೀವನದ ವಿಶೇಷ ದಿನಕ್ಕೆ ಇನ್ನೊಂದು ದಿನ ಬಾಕಿ ಎಂದಿದ್ದರು.. ಆದರೆ ಇಂದು ನಡೆಯಬೇಕಿದ್ದ ಮದುವೆ ಸಧ್ಯಕ್ಕೆ ರದ್ದಾಗಿದೆ..

ಹೌದು ಸಂಭ್ರಮದಲ್ಲಿದ್ದ ವರುಣ್ ಗೌಡ ಅವರ ಮನೆಯಲ್ಲಿ ಸೂತಕ ಆವರಿಸಿದೆ.. ಮಗನ ಮದುವೆಯ ಸಂಭ್ರಮದಲ್ಲಿದ್ದ ವರುಣ್ ಅವರ ತಂದೆ ಇಹಲೋಕ ತ್ಯಜಿಸಿದ್ದಾರೆ.. ಹೌದು ವರುಣ್ ಅವರ ತಂದೆ ಮಂಜುನಾಥ್ ಅವರು ನಿನ್ನೆ ತಡರಾತ್ರಿ ಒಂದು ಮೂವತ್ತರ ಸಮಯದಲ್ಲಿ ಮನೆ ಎದುರಿನ ಪಾರ್ಕ್ ಬಳಿ ನಿಂತು ಮನೆಯಿಂದ ಮದುವೆ ಸಮಾರಂಭಕ್ಕೆ ಹೊರಡಬೇಕಾದ ಕಾರ್ ಗಳನ್ನು ಸಿದ್ಧಗೊಳಿಸುತ್ತಿದ್ದರು.. ಆ ಸಮಯದಲ್ಲಿ ಇದ್ದಕಿದ್ದ ಹಾಗೆ ಕುಸಿದು ಬಿದ್ದಿದ್ದಾರೆ.. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಕಾಲ‌ ಮಿಂಚಿ ಹೋಗಿತ್ತು..

ಮಂಜುನಾಥ್ ಅವರು ಕೊನೆಯುಸಿರೆಳೆದು ಬಿಟ್ಟಿದ್ದರು.. ಮಂಜುನಾಥ್ ಅವರ ನಿಧನದಿಂದ ಎರಡೂ ಕುಟುಂಬದಲ್ಲಿ ನೋವು ಮನೆ ಮಾಡಿದ್ದು‌ ಇಂದು ನಡೆಯಬೇಕಿದ್ದ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.. ಇತ್ತ ಇದೇ ವಿಚಾರವನ್ನು ಕಾವ್ಯಾ ಶಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸ್ನೇಹಿತರಿಗೆ ವಿಚಾರ ತಿಳಿಸಿದ್ದಾರೆ.. ನಿಜಕ್ಕೂ ಒಮ್ಮೊಮ್ಮೆ ಸಮಯ ಅನ್ನೋದು ಯಾವಾಗ ಯಾವ ರೀತಿ ನಮ್ಮ ಮುಂದೆ ಬಂದು ನಿಲ್ಲುವುದೋ ಹೇಳಲಾಗದು.. ಸಂಭ್ರಮದಲ್ಲಿರಬೇಕಾದ ಮನೆ ಸಾವಿನ ಮಮೆಯಾಗಿದ್ದು ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ..