‌ರೀಲ್ಸ್‌ ಜೋಡಿಯ ಬ್ರೇಕಪ್‌ ಗೆ ಕಾರಣ ಮತ್ತೊಬ್ಬ ಹುಡುಗಿ.. ವರ್ಷಾ ಜೊತೆ ಪ್ರೀತಿಯಲ್ಲಿದ್ದರೂ ಸಹ ಮತ್ತೊಬ್ಬಳ ಜೊತೆ ವರುಣ್‌ ನ ಪ್ರೇಮದಾಟ..

0 views

ವರುಣ್ ವರ್ಷಾ.. ಸಾಮಾಜಿಕ ಜಾಲತಾಣ ಅದರಲ್ಲೂ ಇನ್ಸ್ಟಾಗ್ರಾಮ್‌ ಬಳಸೋರಿಗೆ ಈ ಜೋಡಿಯ ಪರಿಚಯ ಇದ್ದೇ ಇರುತ್ತದೆ.. ಸದಾ ರೀಲ್ಸ್‌ ಮಾಡಿಕೊಂಡು ಫೇಮಸ್‌ ಆಗಿದ್ದ ಜೋಡಿ ಇದು.. ವರುನ ಹಾಗೂ ವರ್ಷಾ ಕಳೆದ ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದು.. ಇಬ್ಬರ ಮನೆಯಲ್ಲೂ ಸಾಕಷ್ಟು ಏರು ಪೇರುಗಳಾಗಿ ಕೊನೆಗೆ ಈ ಇಬ್ಬರ ಪ್ರೀತಿಯನ್ನು ಒಪ್ಪಿ ಕೊಂಡಿದ್ದರು.. ಈ ಇಬ್ಬರೂ ಒಟ್ಟಿಗೆ ಸೇರಿ ಸಾಕ ಷ್ಟು ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಲ್ಲಿ ಲಕ್ಷಟ್ಟಲೇ ಫಾಲೋವರ್ಸ್‌ ಗಳನ್ನು ಗಳಿಸಿಕೊಂಡಿದ್ದರು.. ಇನ್ನು ಈ ಜೋಡಿ ಫೇಮಸ್‌ ಆಗುತ್ತಿಒದ್ದಂತೆ ಸಾಕಷ್ಟು ಪ್ರಮೋಷನ್‌ ಗಳನ್ನು ಮಾಡಿಕೊಂಡು ಕೈ ತುಂಬಾ ಹಣ ಸಂಪಾದಿಸುತ್ತಿದ್ದರು.. ಇತ್ತ ಯೂಟ್ಯೂಬ್‌ ನಲ್ಲಿಯೂ ವರುಣ ವರ್ಷ ತಮ್ಮ ದಿನ ಚರಿ ವೀಡಿಯೋಗಳನ್ನು ತಾವು ತಿಂದಿದ್ದು ಹೊರ ಹೋಗಿದ್ದು ಅಡುಗೆ ಮಾಡಿದ್ದು ಹೀಗೆ ಎಲ್ಲಾ ವೀಡಿಯೋಗಳನ್ನು ಆಗಾಗ ಹಾಕುತ್ತಿದ್ದರು..

ಈ ಜೋಡಿಗೆ ಒಂದಷ್ಟು ಫ್ಯಾನ್ಸ್‌ ಕೂಡ ಇದ್ದರು ಎಂಬುದನ್ನು ನಬಲೇ ಬೇಕು.. ಆದರೆ ಈ ಜೋಡಿ ಇದೀಗ ಬ್ರೇಕಪ ಮಾಡಿಕೊಂಡಿದ್ದು ಸ್ವತಃ ವರ್ಷಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.. ಹೌದು ವರುಣ್‌ ವರ್ಷಾಳನ್ನು ಪ್ರೀತಿ ಮಾಡುತ್ತಿದ್ದರೂ ಸಹ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದು ಈ ಬಗ್ಗೆ ನೇರವಾಗಿ ಸಾಮಾಜಿಕ ಜಾಲತಾಣದಲ್ಲಿಯೇ ವರ್ಷಾ ಹೇಳಿಕೊಂಡಿದ್ದಾಳೆ.. ಎಷ್ಟು ಬಾರಿ ಹೇಳಿದರೂ ಅವನು ಅವಳನ್ನು ಬಿಡಲು ಸಿದ್ಧವಿಲ್ಲ.. ಆಕೆಯ ಜೊತೆಯೇ ಸಂಬಂಧ ಮುಂದುವರೆಸುವುದಾಗಿ ಹೇಳಿದ್ದಾನೆ.. ಅದಕ್ಕಾಗಿಯೇ ನಾನು ಅವನಿಂದ ದೂರ ಆಗುತ್ತಿದ್ದೇನೆ.. ಇದು ಯಾವುದೇ ಪ್ರಾಂಕ್‌ ಅಲ್..‌ ಅವನ ಜೊತೆ ಇದ್ದ ವೀಡಿಯೋಗಳನ್ನೂ ಸಹ ಡಿಲೀಟ್‌ ಮಾಡಿದ್ದೇನೆ.. ಅವನಿಗೂ ನನಗೂ ಇನ್ನು ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.. ಇತ್ತ ವರುಣ ಕೂಡ ವರ್ಷಾ ಜೊತೆಗೆ ಮಾಡಿದ್ದ ವೀಡಿಯೋಗಳನ್ನು ಡಿಲೀಟ್‌ ಮಾಡಿದ್ದಾನೆ..

ವರ್ಷಾ ಮಾಡಿರುವ ಪೋಸ್ಟ್‌ ಇದು..ಎಲ್ಲರಿಗೂ ನಮಸ್ಕಾರ ಹಲವು ದಿನಗಳಿಂದ ನೀವೆಲ್ಲ ಕೇಳುತ್ತಿದ್ದ ಒಂದೇ ಒಂದು ಸಾಮಾನ್ಯ ಪ್ರಶ್ನೆ ಏನೆಂದರೆ ನನ್ನ ಮತ್ತು ವರುಣ್​ ನಡುವೆ ಏನಾಯಿತು ಎಂದು. ನಾನಿಂದು ಅದರ ಬಗ್ಗೆ ಮಾತನಾಡುತ್ತೇನೆ. ನಾನು ಮತ್ತು ವರುಣ್​ ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ, ನಿಮಗೆ ಗೊತ್ತಿಲ್ಲದ ಸಂಗತಿ ಏನೆಂದರೆ ವರುಣ್​ ನನ್ನನ್ನು ಬಿಟ್ಟು ಮತ್ತೊಂದು ಹುಡುಗಿಯನ್ನು ಲವ್​ ಮಾಡುತ್ತಿದ್ದಾರೆ. ನಾನಿಲ್ಲಿ ಆ ಹುಡುಗಿಯ ಹೆಸರನ್ನು ಹೇಳಿ ಆಕೆಯ ಜೀವನವನ್ನು ಹಾಳು ಮಾಡಲು ಬಯಸುವುದಿಲ್ಲ. ಇದೇ ವಿಚಾರವಾಗಿ ನಮ್ಮಿಬ್ಬರ ನಡುವೆ ಸಾಕಷ್ಟು ಬಾರಿ ವಾಗ್ವಾದ ನಡೆದಿದೆ. ಅವನಿಗೆ ಎಷ್ಟು ಬಾರಿ ಹೇಳಿದರೂ ಆ ಹುಡುಗಿಯನ್ನು ಬಿಡಲು ತಯಾರಿಲ್ಲ. ನಾನು ನಿನ್ನನ್ನು ಪ್ರೀತಿಸಲು ಬಯಸುವುದಿಲ್ಲ, ನಾನು ಆ ಹುಡುಗಿಯೊಂದಿಗೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಆತ ಹೇಳಿದಾಗ ಅದು ನನಗೆ ತುಂಬಾ ನೋವುಂಟು ಮಾಡಿದೆ. ಅದಕ್ಕಾಗಿಯೇ ನಾನು ಕಳೆದ ಕೆಲವು ತಿಂಗಳುಗಳಿಂದ ನನ್ನ ಮತ್ತು ವರುಣ್‌ನ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿಲ್ಲ. ನಮ್ಮನ್ನು ಪ್ರೀತಿಸುವವರಿಗೆ ಈ ವಿಚಾರವನ್ನು ಹೇಳದಿದ್ದರೆ ನಾನೇ ಮೋಸ ಮಾಡಿಕೊಂಡಂತೆ ಅನಿಸುತ್ತದೆ.

ಹೀಗಾಗಿ ನಾನಿಂದು ನಿಮಗೆ ತಿಳಿಸುತ್ತಿದ್ದೇನೆ. ಇನ್ನು ಮುಂದೆ ನನ್ನ ಮತ್ತು ವರುಣ್​ ನಡುವೆ ಯಾವುದೇ ಪ್ರೇಮ ಸಂಬಂಧ ಇರುವುದಿಲ್ಲ. ಅವನು ಆ ಹುಡುಗಿಯೊಂದಿಗೆ ಸಂತೋಷವಾಗಿರಲಿ. ನನ್ನ ಕುಟುಂಬ ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದೆ. ನಾನು ಅವರಿಗಾಗಿ ನನ್ನ ಜೀವನವನ್ನು ನಡೆಸಬೇಕಿದೆ. ಹೀಗಾಗಿ ನನಗೆ ಅನಿಸಿದ್ದನ್ನು ನಿಮಗೆ ಹೇಳಿದ್ದೇನೆ. ಇನ್ನು ಮುಂದೆ ನನ್ನ ಜೀವನವೇ ನನ್ನ ಮಾರ್ಗವಾಗಿದ್ದು, ನೀವು ಇದನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ ಮತ್ತು ಇನ್ನು ಮುಂದೆಯೂ ನನ್ನನ್ನು ಬೆಂಬಲಿಸಿ, ಧನ್ಯವಾದಗಳು ಎಂದು ವರ್ಷಾ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.̤ ಇನ್ನು ವರುಣ್​ ಮತ್ತು ವರ್ಷಾ ಸಾಮಾಜಿಕ ಜಾಲತಾಣದಲ್ಲಿ ಪಡೆದಿದ್ದ ಖ್ಯಾತಿ ಅವರನ್ನು ಧಾರಾವಾಹಿಯೊಂದರ ಅತಿಥಿ ಪಾತ್ರದವರೆಗೂ ಕರೆದೊಯ್ದಿತ್ತು. ಇಬ್ಬರ ಮನೆಯವರೂ ಕೂಡ ಅವರ ಪ್ರೀತಿಯನ್ನು ಒಪ್ಪಿಕೊಂಡಿತ್ತು. ಆಗಾಗ ಕುಟುಂಬದ ಜತೆಗೂ ವಿಡಿಯೋಗಳನ್ನು ಮಾಡಿ ಪೋಸ್ಟ್​ ಮಾಡುತ್ತಿದ್ದರು.

ಇದ್ದರೆ ಇವರ ರೀತಿ ಇರಬೇಕು ಅಂತಾ ಎಷ್ಟೋ ಮಂದಿ ಮಾತನಾಡಿಕೊಳ್ಳುವಂತೆ ಈ ಜೋಡಿ ಜಾಲತಾಣದಲ್ಲಿ ಮೋಡಿ ಮಾಡಿತ್ತು. ಆದರೆ, ಇದೀಗ ಇಬ್ಬರ ನಡುವೆ ಬ್ರೇಕಪ್​ ಆಗಿರುವುದು ಅವರ ಫಾಲೋವರ್ಸ್​ಗೆ ಶಾಕಿಂಗ್​ ಸಂಗತಿಯಾಗಿದೆ. ವರುಣ್​ ವಂಚನೆ ಮಾಡಿರುವುದಾಗಿ ವರ್ಷಾ ತಿಳಿಸಿದ್ದು, ಆಕೆಯ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್​ ಧೈರ್ಯ ತುಂಬುತ್ತಿದ್ದಾರೆ.. ಇದೆಲ್ಲದರ ಜೊತೆಗೆ ಇತ್ತ ಈಗಾಗಲೇ ಕಲರ್ಸ್​ ಕನ್ನಡದಲ್ಲಿ ಬಿಗ್​ಬಾಸ್​ ಸೀಸನ್​ 10ರ ತಯಾರಿ ಆರಂಭವಾಗಿದೆ. ವರುಣ್​ ಮತ್ತು ವರ್ಷಾ ಬಿಗ್​ಬಾಸ್​ಗೆ ಕಾರ್ಯಕ್ರಮಕ್ಕೆ ಒಟ್ಟಿಗೆ ಎಂಟ್ರಿ ಕೊಡಲಿದ್ದಾರೆ ಎಂದು ಸುದ್ದಿಯಾಗಿತ್ತು.

ಆದರೆ, ಇದೀಗ ಇಬ್ಬರು ಬ್ರೇಕಪ್​ ಮಾಡಿಕೊಂಡಿದ್ದಾರೆ. ಆದರೂ ಇಬ್ಬರು ಬರಬಹುದು ಎಂಬ ಕುತೂಹಲವೂ ಇದೆ. ಇದಕ್ಕೆ ಉತ್ತರ ಬಿಗ್​ಬಾಸ್​ ಆರಂಭವಾದಾಗ ಮಾತ್ರ ಸಿಗುತ್ತದೆ.. ಇನ್ನು ವರುಣ್​ ಆರಾಧ್ಯ ವಿಚಾರಕ್ಕೆ ಬಂದರೆ, ಆತನಿಗೆ ಇನ್​ಸ್ಟಾಗ್ರಾಂನಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್​ ಇದ್ದಾರೆ. ಆತನ ಪ್ರೊಫೈಲ್​ ಪ್ರಕಾರ ತಾನೊಬ್ಬ ವಿಡಿಯೋ ಕ್ರಿಯೆಟರ್ ಹಾಗೂ ಕಲಾವಿದ ಎಂದು ಬರೆದುಕೊಂಡಿದ್ದಾನೆ. ಈತನು ಕೂಡ ವರ್ಷಾ ಜತೆಗೆ ಮಾಡಿದ್ದ ರೀಲ್ಸ್​ ವಿಡಿಯೋಗಳನ್ನು ಡಿಲೀಟ್​ ಮಾಡಿದ್ದಾನೆ. ಕಳೆದೊಂದು ತಿಂಗಳಿಂದ ಇಬ್ಬರು ಅಂತರ ಕಾಯ್ದುಕೊಂಡಿದ್ದು, ಫಾಲೋವರ್ಸ್​ಗಳ ಅನುಮಾನಕ್ಕೆ ವರ್ಷಾ ಕೊನೆಗೂ ತೆರೆ ಎಳೆದಿದ್ದಾರೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.