ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್ ಈಗ ಒಂದು ಸಿನಿಮಾಗೆ ಸಂಗೀತ ಮಾಡಲು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.. ಶಾಕ್ ಆಗ್ತೀರಾ..

0 views

ಕನ್ನಡ ಕಿರುತೆರೆಯ ಖ್ಯಾತ ಶೋ ಬಿಗ್ ಬಾಸ್ ಗೆ ಸಾಕಷ್ಟು ಜನರು ಬರುತ್ತಾರೆ ಹೋಗುತ್ತಾರೆ.. ಶೋ ನಡೆಯುವ ಮೂರು ತಿಂಗಳು ಸಿಕ್ಕಾಪಟ್ಟೆ ಸುದ್ದಿಯೂ ಆಗುತ್ತಾರೆ.. ಆದರೆ ಆನಂತರ ಹೆಸರೂ ಸಹ ನೆನಪಿಲ್ಲದ ಹಾಗೆ ಉಳಿದು ಬಿಡುತ್ತಾರೆ.. ಕೆಲವರು ಮಾತ್ರ ಆ ಹೆಸರನ್ನು ಉಳಿಸಿಕೊಂಡು ಮುಂದಿನ ತಮ್ಮ ವೃತ್ತಿ ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳುತ್ತಾರೆ.. ಅಂತವರಲ್ಲಿ ವಾಸುಕಿ ವೈಭವ್ ಕೂಡ ಒಬ್ಬರು.. ಹೌದು ಬಿಗ್ ಬಾಸ್ ಸೀಸನ್ ಏಳರ ಸ್ಪರ್ಧಿಯಾಗಿದ್ದ ವಾಸುಕಿ ವೈಭವ್ ಅವರು ಬಿಗ್ ಬಾಸ್ ನ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿ ಕೊನೆಗೆ ಆ ಸೀಸನ್ ನ ರನ್ನರ್ ಅಪ್ ಸಹ ಆದರು.. ಬಿಗ್ ಬಾಸ್ ಮನೆಯೊಳಗೆ ಇದ್ದಷ್ಟು ದಿನ ಸದುಪಯೋಗ ಪಡಿಸಿಕೊಂಡಿದ್ದ ವಾಸುಕಿ ವೈಭವ್ ಮನೆಯೊಳಗೆ ಸಾಕಷ್ಟು ಹಾಡುಗಳನ್ನು ಬರೆದು ಅವುಗಳನ್ನು ಅದ್ಭುತವಾಗಿ ಕಂಪೂಸ್ ಸಹ ಮಾಡಿದ್ದರು.. ಇತ್ತ ಅವರ ಮನ್ಸಿಂದ ಯಾರೂನು ಕೆಟ್ಟೋರಲ್ಲ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು.. ಸ್ವತಃ ಕಿಚ್ಚ ಸುದೀಪ್ ಅವರೇ ಈ ಹಾಡನ್ನು ರೆಕಾರ್ಡ್ ಮಾಡಿ ಹಾಡಿದ್ದರು. ಅಷ್ಟೇ ಅಲ್ಲದೇ ತಮ್ಮ ಜೀವನದಲ್ಲಿ ಬಹಳ ಇಷ್ಟವಾದ ಕೆಲವೇ ಹಾಡುಗಳಲ್ಲಿ ಇದೂ ಸಹ ಒಂದು ಎಂದಿದ್ದರು..

ಒಟ್ಟಿನಲ್ಲಿ ಬಿಗ್ ಬಾಸ್ ಮನೆಯೊಳಗೆ ಇದ್ದಷ್ಟು ದಿನ ಒಳ್ಳೆಯ ಹಾಡುಗಾರ ಬರಹಗಾರ ಹಾಗೂ ಸಂಗೀತ ಸಂಯೋಜಕನಾಗಿ ಗುರುತಿಸಿಕೊಂಡಿದ್ದ ವಾಸುಕಿ ವೈಭವ್ ಹೊರಗೆ ಬಂದ ನಂತರ ಒಬ್ಬ ಒಳ್ಳೆ ಮ್ಯೂಸಿಕ್ ಡೈರೆಕ್ಟರ್ ಆಗುವ ಎಲ್ಲಾ ಭರವಸೆಯನ್ನು ಮೂಡಿಸಿದ್ದರು.. ಇನ್ನು ಅಷ್ಟು ಭರವಸೆ ಮೂಡಿಸಿದ್ದ ವಾಸುಕಿ ವೈಭವ್ ಅವರು ಇದೀಗ ಒಂದು ಸಿನಿಮಾಗೆ ಸಂಗೀತ ಮಾಡಲು ಪಡೆಯುತ್ತಿರುವ ಸಂಭಾವನೆ ಎಷ್ಟು ಎಂದು ತಿಳಿದರೆ ನಿಜಕ್ಕೂ ಆಶ್ವರ್ಯವಾಗುವುದು.. ಹೌದು ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಸಾಕಷ್ಟು ಮಂದಿ ಸಿಕ್ಕಾಪಟ್ಟೆ ಹೆಸರು ಮಾಡುತ್ತಾರೆ.. ಅಷ್ಟೇ ಯಾಕೆ ಅದೇ ಹೆಸರಿನಿಂದ ಬಿಗ್ ಬಾಸ್ ನ ವಿಜೇತರು ಸಹ ಆಗುತ್ತಾರೆ.. ಆದರೆ ಒಂದು ಬಾರಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಅವರು ತೆರೆ ಮರೆಗೆ ಸರಿದು ಬಿಡುತ್ತಾರೆ.. ಇನ್ನೂ ಹೇಳಬೇಕೆಂದರೆ ಬಿಗ್ ಬಾಸ್ ನ ಸಾಕಷ್ಟು ಸ್ಪರ್ಧಿಗಳ ಹೆಸರೂ ಸಹ ನೆನಪು‌ಮಾಡಿಕೊಳ್ಳಲು ಸಾಧ್ಯವಾಗೋದಿಲ್ಲ.. ಬಿಗ್ ಬಾಸ್ ಮನೆಗೆ ಹೋಗಿ ಬಂದರೆ ಅವರ ಜೀವನ ಬದಲಾಗುತ್ತದೆ ಎಂಬ ಮಾತಿದೆ.. ಇದೇ ಕಾರಣಕ್ಕೆ ಬಿಗ್ ಬಾಸ್ ಮನೆಗೆ ಹೋಗಲು ಸಾಕಷ್ಟು ಜನ ಸಾಕಷ್ಟು ರೀತಿ ಪ್ರಯತ್ನ ಮಾಡುತ್ತಾರೆ.. ಆದರೆ ಅದು ಸಂಪೂರ್ಣ ಸತ್ಯವಲ್ಲ..

ಬಿಗ್ ಬಾಸ್ ಮನೆಯೊಳಗೆ ಇದ್ದಷ್ಟು ದಿನ ಒಂದೊಳ್ಳೆ ಅದೂ ಸಹ ದೊಡ್ಡ ಮೊತ್ತದ ಸಂಭಾವನೆ ಬರುತ್ತದೆ.. ಹೆಸರೂ ಸಹ ಬರುತ್ತದೆ.. ಆದರೆ ಒಮ್ಮೆ ಹೊರ ಬಂದ ನಂತರ ಆ ಹೆಸರನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕಾದದ್ದು ಸ್ಪರ್ಧಿಗಳಿಗೆ ಬಿಟ್ಟದ್ದು.. ಬಿಗ್ ಬಾಸ್ ನಲ್ಲಿ ಅರ್ಧಕ್ಕೆ ಹೊರ ಬಂದ ಕೆಲವರು ಮುಂದಿನ ಜೀವನವನ್ನು ಸರಿಯಾಗಿ ರೂಪಿಸಿಕೊಂಡ ಉದಾಹರಣೆಗಳೂ ಇವೆ.. ಬಿಗ್ ಬಾಸ್ ಗೆದ್ದ ಶಶಿ ಸೇರಿದಂತೆ ಮತ್ತಷ್ಟು‌ ಮಂದಿ ತಮ್ಮ ಕೆಲಸ ಆಯ್ತು ತಾವಾಯ್ತು ಅಂತ ಇದೆಲ್ಲದರಿಂದ ದೂರ ಹೋದದ್ದೂ ಇದೆ.. ಇನ್ನು ಬಿಗ್ ಬಾಸ್ ಮನೆಯಿಂದ ಬಂದ ನಂತರ ಆ ಖ್ಯಾತಿಯನ್ನು ಸರಿಯಾಗಿ ಬಳಸಿಕೊಂಡು ಅವಕಾಶಗಳನ್ನು ಸೃಷ್ಟಿಸಿಕೊಂಡವರಲ್ಲಿ ವಾಸುಕಿ ವೈಭವ್ ಕೂಡ ಒಬ್ಬರು.. ಹೌದು ವಾಸುಕಿ ವೈಭವ್ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಸೈಲೆಂಟಾಗಿಯೇ ಸಾಲು ಸಾಲು ಸಿನಿಮಾಗಳಲ್ಲಿ ಸಂಗೀತ ನಿರ್ದೇಶನ ಮಾಡಲು ಹಾಡು ಬರೆಯಲು.. ಹಾಡುಗಳನ್ನು ಹಾಡಲು ಅವಕಾಶ ಪಡೆದರು..

ಹೌದು ಬಿಗ್ ಬಾಸ್ ಗೂ ಮುನ್ನವೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಲ್ಲಿ ಕೆಲಸ ಮಾಡಿದ್ದರೂ ಸಹ ಅಷ್ಟಾಗಿ ಹೊರಗೆ ಖ್ಯಾತಿ ದೊರೆತಿರಲಿಲ್ಲ.. ಆದರೆ ಬಿಗ್ ಬಾಸ್ ನಿಂದ ಬಂದ ನಂತರ ವಾಸುಕಿ ಸರಿಯಾಗು ಅವಕಾಶಗಳನ್ನು ಬಳಸಿಕೊಂಡರು.. ಹೌದು ಫ್ರೆಂಚ್ ಬಿರಿಯಾನಿ, ಗರುಡ ಗಮನ ವೃಷಭ ವಾಹನ, ಮುಂದಿನ ನಿಲ್ದಾಣ.. ಮುಗಿಲ್ ಪೇಟೆ ಸಿನಿಮಾಗಳಲ್ಲಿ ಕೆಲಸ ಮಾಡಿದರು.. ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಹಾಡಿದರು.. ಬರಹಗಾರರಾಗಿಯೂ ಕೆಲಸ ಮಾಡಿದರು.. ಇನ್ನು ಸಧ್ಯ ಇದೀಗ ಡಾಲಿ ಧನಂಜಯ್ ಅವರ ಬಹುನಿರೀಕ್ಷಿತ ಬಡವ ರಾಸ್ಕಲ್ ಸಿನಿಮಾದ ಸಂಗೀತ ಸಂಯೋಜನೆಯನ್ನೂ ಸಹ ವಾಸುಕಿ ವೈಭವ್ ಅವರೇ ಮಾಡಿದ್ದು ಈ ಸಿನಿಮಾ ವಾಸುಕಿ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ.. ಸಂಗೀತ ನಿರ್ದೇಶನ ಮಾತ್ರವಲ್ಲ ಹಾಡುಗಾರನಾಗಿಯೂ ದೊಡ್ಡ ಹಿಟ್ ನೀಡಿರುವ ಸಿನಿಮಾ ಇದಾಗಿದ್ದು ಬಿಡುಗಡೆಯ ನಂತರ ವಾಸುಕಿ ಅವರ ಮಾರ್ಕೆಟ್ ಸಹ ಬದಲಾಗಬಹುದು ಎನ್ನಲಾಗಿದೆ..

ಇನ್ನು ಇಷ್ಟೆಲ್ಲಾ ಪ್ರತಿಭೆ ಹೊಂದಿರುವ ವಾಸುಕಿ ವೈಭವ್ ಅವರು ಸಿನಿಮಾವೊಂದಕ್ಕೆ ಸಂಗೀತ ನೀಡಲು ತೆಗೆದುಕೊಳ್ಳುವ ಸಂಭಾವನೆ ಎಷ್ಟು ಎನ್ನುವ ಕುತೂಹಲ ಇದ್ದೇ ಇರುತ್ತದೆ.. ಹೌದು ವಾಸುಕಿ ವೈಭವ್ ಬಹಳ ದೊಡ್ಡ ಮಟ್ಟದ ಟ್ಯಾಲೆಂಟ್ ಇದ್ದರೂ ಸಹ ಇನ್ನೂ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೊಳ್ಳೆ ಅವಕಾಶಗಳು ಬೇಕಿರುವ ಕಾರಣ ಅವರ ಸಂಭಾವನೆ ಅಂತಹ ದೊಡ್ಡ ಮಟ್ಟದಲ್ಲೇನೂ ಇಲ್ಲ.. ಹೌದು ವಾಸುಕಿ ವೈಭವ್ ಅವರು ಒಂದು ಸಿನಿಮಾಗೆ ಸಂಗೀತ ನೀಡಲು ಹತ್ತು ಲಕ್ಷ ರೂಪಾಯಿ ಹಣ ಪಡೆಯುತ್ತಾರೆ ಎನ್ನುವ ಮಾತಿದೆ.. ಆದರೆ ಧನಂಜಯ್ ಅವರ ಬಡವ ರಾಸ್ಕಲ್ ಸಿನಿಮಾದಲ್ಲಿ ಮಾತ್ರ ವಾಸುಕಿ ವೈಭವ್ ಇಷ್ಟೇ ಹಣ ಬೇಕೆಂದು ಹೇಳಿಲ್ಲ.. ತಮ್ಮದೇ ಸಿನಿಮಾ ಎಂದು ಕೆಲಸ ಮಾಡಿದ್ದಾರೆ.. ಹಾಗೆಯೇ ಸಂಗೀತ ನೀಡಲು ಅದ್ರಲ್ಲೂ ಉತ್ತಮವಾಗಿ ನೀಡಲು ಬೇಕಾದ ಪ್ರತಿಯೊಂದು ಅಗತ್ಯತೆಯನ್ನೂ ಸಹ ಧನಂಜಯ್ ಅವರು ಪೂರೈಸಿದ್ದಾರೆ ಎನ್ನಲಾಗಿದೆ..

ಯಾವ ಸಮಯದಲ್ಲಿಯೂ ಮೂಸಿಕ್ ವಿಚಾರದಲ್ಲಿ ನಿರ್ಮಾಪಕನನ್ನು ಅದನ್ನು ತರಿಸಿ ಇದನ್ನು ತರಿಸಿ ಎಂದು ಮನವಿ ಮಾಡಿಕೊಳ್ಳುವ ಸಂದರ್ಭವೇ ನಿರ್ಮಾಣವಾಗಲಿಲ್ಲ.. ನಿನಗೆ ಏನೇನು ಬೇಕೋ ಎಲ್ಲವನ್ನೂ ಅರೇಂಜ್ ಮಾಡಿಕೋ ಅಂತಲೇ ಹೇಳಿ ಸಾಕಷ್ಟು ಸಪೋರ್ಟ್ ಮಾಡುತ್ತಿದ್ದರು ಎಂದಿದ್ದಾರೆ.. ಇನ್ನು ಬಡವ ರಾಸ್ಕಲ್ ಸಿನಿಮಾ ಸಂಗೀತದ ವಿಚಾರದಲ್ಲಿಯೂ ಹಿಟ್ ಆಗಿರುವ ಕಾರಣ ಮುಂದಿನ ದಿನಗಳಲ್ಲಿ ವಾಸುಕಿ ಅವರಿಗೆ ಮತ್ತಷ್ಟು ಅವಕಾಶಗಳು ಒದಗಿ ಬರುವ ಎಲ್ಲಾ ಭರವಸೆ ಇದೆ.. ಜೊತೆಗೆ ಅವರ ಸಂಭಾವನೆಯೂ ಸಹ ಹದಿನೈದು ಲಕ್ಷದ ವರೆಗೆ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಶ್ರಮವಹಿಸಿ ಶ್ರದ್ಧೆವಹಿಸಿ ಕೆಲಸ ಮಾಡಿದರೆ ಮುಂದೊಂದು ದಿನ ಆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು ಎಂಬುದಕ್ಕೆ ವಾಸುಕಿ ವೈಭವ್ ಅವರೇ ನೈಜ್ಯ ಉದಾಹರಣೆ ಎನ್ನಬಹುದು.. ವಾಸುಕಿ ಅವರ ಮುಂದಿನ ಸಿನುಮಾ ಜೀವನಕ್ಕೆ ಶುಭವಾಗಲಿ..