ವಾಸುಕಿ ವೈಭವ್ ರಿಂದ ವಿಶೇಷ ಸುದ್ದಿ..

0 views

ಬಿಗ್ ಬಾಸ್ ಕನ್ನಡ ಸೀಸನ್ ಗಳು ಒಂದರ ಹಿಂದೆ ಒಂದು ಬರುತ್ತವೆ ಹೋಗುತ್ತವೆ.. ಆದರೆ ಕೆಲ ಸ್ಪರ್ಧಿಗಳು ಮಾತ್ರ ನೆನಪಿನಲ್ಲಿ‌ ಉಳಿಯುತ್ತಾರೆ.. ಅಂತವರಲ್ಲಿ‌ ಒಬ್ಬರು ವಾಸುಕಿ ವೈಭವ್.. ತಮ್ಮ ಹಾಡುಗಳ ಮೂಲಕ ಜನ ಮನ ಗೆದ್ದು ಮನ್ಸಿಂದ ಯಾರೂನೂ ಕೆಟ್ಟೋರಲ್ಲ ಎಂದು ಬಿಗ್ ಬಾಸ್ ಮನೆಯೊಳಗೆ ಹಾಡಿ ಅಪಾರ ಜನರ ಪ್ರೀತಿ ಪಡೆದ ವಾಸುಕಿ ವೈಭವ್ ರಿಂದ ವಿಶೇಷ ಸುದ್ದಿಯೊಂದು ಬರುವಂತೆ ಕಾಣುತ್ತಿದೆ.. ಹೌದು ಇದಕ್ಕೆ ಕಾರಣ ಈ ಫೋಟೋದಲ್ಲಿರುವವರು..

ಹೌದು ಅವಕಾಶಗಳೇ ಹಾಗೆ.. ಬಂದಾಗ ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡುಬಿಡಬೇಕು.. ಅದರಲ್ಲೂ ಬಿಗ್ ಬಾಸ್ ಅನ್ನೋದು ಒಂದು ರೀತಿ ಮಾಯಾಜಾಲವೆನ್ನಬಹುದು.. ಶೋ ನಡೆಯುತ್ತಿದ್ದಾಗ ಇನ್ನಿಲ್ಲದ ಹಾಗೆ ಹೆಸರು ನೀಡುತ್ತದೆ.. ಆದರೆ ಶೋ ಮುಗಿಯುತ್ತಿದ್ದಂತೆ ಕೆಲವರ ಹೆಸರೂ ಕೂಡ ಪ್ರೇಕ್ಷಕರ ನೆನಪಿನಲ್ಲಿ ಉಳಿಯೋದಿಲ್ಲ.. ಹೋ ಅವರಾ.. ಹೋ ಇವರಾ ಎನ್ನುವಂತಾಗುತ್ತದೆ.. ಆದರೆ ಕೆಲ ಸ್ಪರ್ಧಿಗಳು ಮಾತ್ರ ಎಷ್ಟೇ ಸೀಸನ್ ಕಳೆದರು ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತಾರೆ..

ಇನ್ನು ಸಿಕ್ಕ ಅವಕಾಶವನ್ನು.. ಬಿಗ್ ಬಾಸ್ ನಿಂದ ಬಂದ ಪ್ರಖ್ಯಾತಿಯನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಸದ್ಯ ಸ್ಯಾಂಡಲ್ವುಡ್ ನಲ್ಲಿ ಬ್ಯುಸಿ ಆಗಿರುವ ಸಂಗೀತ ನಿರ್ದೇಶಕ.. ಗಾಯಕ.. ವಾಸುಕಿ ವೈಭವ್ ಅವರು ಸದ್ಯ ಹೊಸದೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.. ಹೌದು ವಾಸುಕಿ ವೈಭವ್ ಅವರ ಜೊತೆ ಗಾಯಕಿಯೊಬ್ಬರ ಫೋಟೋ ವೈರಲ್ ಆಗಿದ್ದು ಏನಾದರೂ ವಿಶೇಷವೇ ಎನ್ನುವ ಪ್ರಶ್ನೆ ಮೂಡುತ್ತದೆ..

ಹೌದು ವಾಸುಕಿ ವೈಭವ್ ಜೊತೆ ಇರುವವರು ಮತ್ಯಾರೂ ಅಲ್ಲ ಗಾಯಕಿ ಸಂಗೀತಾ ರಾಜೀವ್.. ಹೌದು ಈ ಹಿಂದೆ ಶೈನ್ ಶೆಟ್ಟಿ ಅವರ ಜೊತೆ ನೀನೆ ನೀನೆ ಆಲ್ಬಂ ಹಾಡಿನಲ್ಲಿ‌ ಒಟ್ಟಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು.‌. ಮೊದಮೊದಲು ಶೈನ್ ಮತ್ತು ಸಂಗೀತಾ ರಾಜೀವ್ ಇಬ್ಬರು ಕೈ ಬೆರಳ ಹಿಡಿದು ನಿಶ್ಚಿತಾರ್ಥ ಆದವರಂತೆ ಫೋಟೋ ಹಾಕಿಕೊಂಡು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯೂ ಆಗಿತ್ತು.. ಶೈನ್ ಹಾಗೂ ಸಂಗೀತಾ ರಾಜೀವ್ ಇಬ್ಬರೂ ಮದುವೆಯಾಗಲಿದ್ದಾರೆ ಎಂದೆಲ್ಕಾ ಸುದ್ದಿ ಹಬ್ಬಿತ್ತು.. ಆದರೆ ಕೊನೆಗೆ ಇಬ್ಬರು ಆಲ್ಬಂ ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆಯಾಕಿದ್ದಾರೆ ಎಂದಷ್ಟೇ ವಿಚಾರ ಖಾತ್ರಿಯಾಯಿತು.. ಹಾಡು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕೂಡ ಆಯಿತು‌.‌

ಇನ್ನು ಇಂದೂ ಸಹ ಸಂಗೀತಾ ರಾಜೀವ್ ಅವರು ವಾಸುಕಿ ವೈಭವ್ ಜೊತೆಗೆ ಫೋಟೋ ಹಂಚಿಕೊಂಡಿದ್ದು.. ವಾಸುಕಿ ವೈಭವ್ ಜೊತೆ ಮಾತುಕತೆ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಹೌದು “ಜಬ್ ವಿ ಮೆಟ್.. ಮಾತು ಕತೆ ಜೊತೆ ಪಿಜ್ಜಾ‌.. ವಾಸುಕಿ ವೈಭವ್.. ಎಂದು ಬರೆದು ಹೃದಯದ ಎಮೋಜಿ ಹಾಕಿಕೊಂಡಿದ್ದಾರೆ.. ಬಹುಶಃ ಸಂಗೀತಾ ರಾಜೀವ್ ಹಾಗೂ ವಾಸುಕಿ ವೈಭವ್ ಅವರು ಒಟ್ಟಿಗೆ ಮುಂದಿನ ಪ್ರಾಜೆಕ್ಟ್ ನಲ್ಲಿ‌ ಕೆಲಸ ಮಾಡಬಹುದಾಗಿದ್ದು.. ಈ ಇಬ್ಬರ ಕಾಂಬಿನೇಷನ್ ನಲ್ಲಿ ಹೊಸದೊಂದು ಆಲ್ಬಂ ಸಾಂಗ್ ನಿರೀಕ್ಷಿಸಬಹುದಾಗಿದೆ..

ವಾಸುಕಿ ವೈಭವ್ ಜೊತೆಗೆ ಸಂಗೀತಾ ರಾಜೀವ್ ಹಂಚಿಕೊಂಡಿರುವ ಫೋಟೋಗೆ ಸ್ನೇಹಿತರು ಕಮೆಂಟ್ ಮಾಡಿದ್ದು ಮುಂದಿನ ಹಾಡಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.. ಮತ್ತೆ ಕೆಲವರು ಏನಾದರು ಗುಡ್ ನ್ಯೂಸ್ ಇರಬಹುದಾ ಎಂದೂ ಸಹ ಪ್ರಶ್ನಿಸಿದ್ದು ಅಡ್ವಾನ್ಸ್ ಆಗಿ ಶುಭ ಹಾರೈಸಿದ್ದಾರೆ… ಆದರೆ ಸಂಗೀತಾ ರಾಜೀವ್ ಹಾಗೂ ವಾಸುಕಿ ವೈಭವ್ ಅವರಿಬ್ಬರ ಕಾಂಬಿನೇಷನ್ ನಲ್ಲಿ ಹೊಸದೊಂದು ಆಲ್ಬಂ ಹಾಡು ಬರುವುದು ಬಹುತೇಖ ಖಚಿತ ಎನ್ನಲಾಗುತ್ತಿದ್ದು ವೀಡಿಯೋದಲ್ಲಿಯೂ ಈ ಇಬ್ಬರೇ ಕಾಣಿಸಿಕೊಳ್ಳಬಹುದಾಗಿದೆ..