ಧಾರಾವಾಹಿಯಲ್ಲಿ ಅಮೂಲ್ಯಳನ್ನು ಮದುವೆಯಾಗುತ್ತಿದ್ದಂತೆ ಇತ್ತ ನಟ ವೇದಾಂತ್ ನಿಜ ಜೀವನದಲ್ಲಿ ಏನಾಗಿದೆ ನೋಡಿ..

0 views

ಗಟ್ಟಿಮೇಳ ಸಧ್ಯ ಕನ್ನಡ ಕಿರುತೆರೆಯಲ್ಲಿ ಕಳೆದ ಎರಡು ವರೆ ವರ್ಷದಿಂದ ಪ್ರಸಾರವಾಗುತ್ತಿದ್ದು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಸಧ್ಯ ಇದೀಗ ಧಾರಾವಾಹಿ ಶುರುವಾದ ಬಳಿಕ ಎರಡೂ ವರೆ ವರ್ಷದ ನಂತರ ನಾಯಕ ನಾಯಕಿ ವೇದಾಂತ್ ಹಾಗೂ ಅಮೂಲ್ಯ ಇಬ್ಬರ ಕಲ್ಯಾಣ ನಡೆದು ಗಟ್ಟಿಮೇಳ ಮೊಳಗಿತು.. ಆದರೆ ಇತ್ತ ಗಟ್ಟಿಮೇಳ ನಟ ವೇದಾಂತ್ ಅಂದರೆ ನಟ ರಕ್ಷ್ ನಿಜ ಜೀವನದಲ್ಲಿ ಬಹುದೊಡ್ಡ ಬದಲಾವಣೆಯಾಗಿದೆ.. ಹೌದು ಕೆಲ ವರ್ಷಗಳ ಹಿಂದೆ ಕಲರ್ಸ್ ಕನ್ನಡವಾಹಿನಿಯಲ್ಲಿ ಸೂಪರ್ ಹಿಟ್ ಆಗಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿ ಅರ್ಧಕ್ಕೆ ಬಂದು ನಿಂತಾಗ ಮಹೇಶ್ ಪಾತ್ರಕ್ಕೆ ಬಂದ ನಟ ರಕ್ಷ್.. ಆ ಧಾರಾವಾಹಿಯಿಂದ ಬಹಳಷ್ಟು ಹೆಸರು ಖ್ಯಾತಿ ಹಣ ಎಲ್ಲವನ್ನೂ ಸಹ ಗಳಿಸಿದರು..

ಸಾಕಷ್ಟು ವರ್ಷಗಳ ಕಾಲ ಅದೇ ಧಾರಾವಾಹಿಯಲ್ಲಿ ಅಭಿನಯಿಸಿದರು.. ನಂತರ ಸಿನಿಮಾಗಳಲ್ಲಿ ಅಭಿನಯಿಸಿದರೂ ಸಹ ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ಸು ದೊರೆಯಲಿಲ್ಲ.. ಆದರೆ ಸಿನಿಮಾಗಳಲ್ಲಿ ಅಭಿನಯಿಸುವ ಕನಸಿನಿಂದ ಸಾಕಷ್ಟು ಪರಿಶ್ರಮ ಪಡುತ್ತಿದ್ದರು.. ಸಿನಿಮಾ ರಂಗದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಹೀರೋಗಳ ಜೊತೆ ಒಡನಾಟವನ್ನೂ ಸಹ ಇಟ್ಟುಕೊಂಡಿದ್ದಾರೆ.. ಇನ್ನು ಈ ನಡುವೆ ಅನುಷಾ ಎಂಬುವವರ ಜೊತೆ ನಟ ರಕ್ಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇನ್ನು ಇತ್ತ ಸಿನಿಮಾವನ್ನೇ ನಂಬುಕೊಂಡರೆ ಆಗದು ಎಂದು ಮತ್ತೆ ಕಿರುತೆರೆಗೆ ಮರಳುವ ನಿರ್ಧಾರ ಮಾಡಿದರು.. ಜೀ ಕನ್ನಡ ವಾಹಿನಿಯಲ್ಲಿ ಗಟ್ಟಿಮೇಳ ಧಾರಾವಾಹಿ ಮೂಲಕ ಬಹುದೊಡ್ಡ ಎಂಟ್ರಿ ಪಡೆದ ನಟ ರಕ್ಷ್ ವೇದಾಂತ್ ಆಗಿ ಮಿಂಚಿದರು..

ಮಿಂಚಿದ್ದಷ್ಟೇ ಅಲ್ಲದೇ ಮನೆಮಾತಾದರು.. ವೇದಾಂತ್ ಎಂಬ ಹೆಸರಿನಿಂದಲೇ ಜನ ಈಗಲೂ ಅವರನ್ನು ಗುರುತಿಸೋದು ವಿಶೇಷ.. ಇನ್ನು ಕಳೆದ ಎರಡು ವರೆ ವರ್ಷದ ಹಿಂದೆ ಶುರುವಾದ ಗಟ್ಟಿಮೇಳ ಜರ್ನಿ ಸಾಕಷ್ಟು ಏರು ಪೇರುಗಳನ್ನು ಕಂಡಿತು.. ಹೌದು ಶುರುವಿನಲ್ಲಿ ಆರೇಳು ತಿಂಗಳುಗಳ ಕಾಲ ನಂಬರ್ ಒನ್ ಆಗಿದ್ದ ಧಾರಾವಾಹಿ ನಂತರ ಜೊತೆಜೊತೆಯಲಿ ಧಾರಾವಾಹಿ ಶುರುವಾದ ಬಳಿಕ ನಂಬರ್ ಎರಡನೇ ಸ್ಥಾನಕ್ಕೆ ಬಂದಿತು.. ಹೀಗೆ ರೇಟಿಂಗ್ ನಲ್ಲಿ ಏರು ಪೇರಾಗುತ್ತಾ ಸಾಗುತ್ತಿದ್ದ ಧಾರಾವಾಹಿ ಬರುಬರುತ್ತಾ ಐದನೇ ಸ್ಥಾನ ಆರನೇ ಸ್ಥಾನ ಪಡೆಯಲು ಆರಂಭವಾಯಿತು.. ಎಲ್ಲರಿಗೂ ತಿಳಿದಿರುವಂತೆ ಕಿರುತೆರೆಯಲ್ಲಿ ರೇಟಿಂಗ್ ಇದ್ದರಷ್ಟೇ ಧಾರಾವಾಹಿಗಳು ಹೆಚ್ಚು ದಿನ ಮುಂದುವರೆಯುವುದು..

ಇನ್ನು ಧಾರಾವಾಹಿಯ ಕತೆಯಲ್ಲಿ ಯಾವುದೇ ಬದಲಾವಣೆ ಕಾಣದ ಕಾರಣ ಧಾರಾವಾಹಿಯ ರೇಟಿಂಗ್ ನಲ್ಲಿಯೂ ಸಹ ಕುಸಿತಗೊಂಡಿತ್ತು.. ಆದರೀಗ ಎರಡುವರೆ ವರ್ಷದ ಬಳಿಕ ಧಾರಾವಾಹಿಯಲ್ಲಿ ಅಮೂಲ್ಯ ವೇದಾಂತ್ ಮದುವೆ ನಡೆದಿದೆ.. ಮದುವೆಯ ಸಂಚಿಕೆಗಳಿಂದ ಶುರುವಾಗಿ ಸಧ್ಯ ಈಗಲೂ ಧಾರಾವಾಹಿ ಮತ್ತೆ ನಂಬರ್ ಒನ್ ಆಗಿದೆ.. ಹೌದು ಬಹಳಷ್ಟು ತಿಂಗಳುಗಳ ಬಳಿಕ ಗಟ್ಟಿಮೇಳ ಧಾರಾವಾಹಿ ನಂಬರ್ ಒನ್ ಆಗಿ ಕಳೆದ ಕೆಲ ವಾರಗಳಿಂದ ಮುನ್ನಡೆಯುತ್ತಿದೆ.. ಇತ್ತ ಧಾರಾವಾಹಿಯಲ್ಲಿ‌ ವೇದಾಂತ್ ಗೆ ಮದುವೆ ಏನೋ ಆಯಿತು.. ಆದರೆ ಅತ್ತ ನಿಜ ಜೀವನದಲ್ಲಿಯೂ ಸಹ ರಕ್ಷ್ ಜೀವನದಲ್ಲಿ ಬದಲಾವಣೆ ಆಗಿದೆ..

ಹೌದು ಧಾರಾವಾಹಿ ಮತ್ತೆ ತನ್ನ ನಂಬರ್ ಒನ್ ಸ್ಥಾನ ಪಡೆಯಲು ನಟ ರಕ್ಷ್ ಅವರ ವ್ಯಯಕ್ತಿಕ ಜೀವನದಲ್ಲಿ ಆದ ಬದಲಾವಣೆಯೇ ಕಾರಣ.. ಹೌದು ಇಷ್ಟು ದಿನಗಳ ಕಾಲ ನಟನಾಗಿ‌ ಮಾತ್ರ ಅಭಿನಯಿಸಿ ಆ ಧಾರಾವಾಹಿಯಲ್ಲಿ ಸಂಭಾವನೆ ಪಡೆಯುತ್ತಿದ್ದ ರಕ್ಷ್‌ ಕೆಲ ತಿಂಗಳ ಹಿಂದೆ ಧಾರಾವಾಹಿಯ ನಿರ್ಮಾಪಕನ ಜವಾಬ್ದಾರಿ ವಹಿಸಿಕೊಂಡರು.. ಹೌದು ಸಧ್ಯ ನಟ ರಕ್ಷ್ ಹಾಗೂ ಅವರ ಪತ್ನಿ ಅನುಷಾ ಅವರೇ ಧಾರಾವಾಹಿಯ ನಿರ್ಮಾಪಕರಾಗಿದ್ದು ಧಾರಾವಾಹಿಯನ್ನು ಮತ್ತೆ ಒಳ್ಳೆಯ ರೇಟಿಂಗ್ ಗೆ ತರಬೇಕೆಂದು ಧಾರಾವಾಹಿಯಲ್ಲಿ ಸಾಕಷ್ಟು ಬದಲಾವಣೆ ತಂದು ಇದೀಗ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ..

ಅಷ್ಟೇ ಅಲ್ಲದೇ ಸಧ್ಯ ಕಳೆದ ವಾರ 10.6 ರೇಟಿಂಗ್ ಪಡೆದು ನಂಬರ್ ಒನ್ ಆದ ಗಟ್ಟಿಮೇಳ ತನ್ನ ಲಾಭದ ಮಟ್ಟವನ್ನೂ ಸಹ ಹೆಚ್ಚಿಸಿಕೊಂಡಿದೆ.. ಸಧ್ಯ ಇದೀಗ ತೆರೆ ಮೇಲಿನ ಶ್ರೀಮಂತ ವೇದಾಂತ್.. ನಿಜ ಜೀವನದಲ್ಲಿಯೂ ನಿರ್ಮಾಪಕನಾಗಿ ಧಾರಾವಾಹಿ ಮೂಲಕ ಒಳ್ಳೆಯ ಲಾಭವನ್ನು ಪಡೆಯುತ್ತಿದ್ದಾರೆನ್ನಬಹುದು.. ಇನ್ನು ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ವೇದಾಂತ್ ಪತ್ನೊ ಅನುಷಾ ತನ್ನ ಬೆಂಬಲವಾಗಿ‌ ನಿಂತಿದ್ದಕ್ಕೆ ಧನ್ಯವಾದಗಳನ್ನು ಸಹ ತಿಳಿಸಿದ್ದು ಸಧ್ಯ ಇದೀಗ ಅನೇಕ ಹೀರೋಗಳೇ ನಿರ್ಮಾಪಕರಾದವರ ಸಾಲಿಗೆ ಮಟ ರಕ್ಷ್ ಕೂಡ ಸೇರಿಕೊಂಡಿದ್ದಾರೆ.. ನಟನೆಯ ಜೊತೆ ನಿರ್ಮಾಪಕನ ಜರ್ನಿ ಆರಂಭಿಸಿರುವ ರಕ್ಷ್ ಗೆ ಶುಭವಾಗಲಿ..