ಗಂಡನಿಂದ ದೂರವಾದಳು.. ಲಾಡ್ಜ್ ಗಳಲ್ಲಿ ಇಬ್ಬರ ಜೊತೆ ಸಂಬಂಧ.. ಲಾಡ್ಜ್ ಬಾಗಿಲು ತೆಗೆದಾಗ ಈಕೆ ಸಿಕ್ಕ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..

0 views

ಕೆಲವೊಮ್ಮೆ ಕೆಲವೊಂದು ಸಂಬಂಧಗಳು ಹೇಗಿರುತ್ತವೆಯೋ ಆ ಸಂಬಂಧಗಳಿಂದ ಯಾವ ರೀತಿ ತಿರುವು ಪಡೆದು ಜೀವನ ಇನ್ಯಾವ ಮಟ್ಟಕ್ಕೆ ಹೋಗಿ ಬಿಡುತ್ತದೋ ತಿಳಿಯದು.. ಹೌದು ಆಕೆಗೆ ಅದಾಗಲೇ ಮದುವೆಯಾಗಿತ್ತು.. ಇತ್ತ ಗಂಡನಿಂದ ದೂರವೂ ಆದಳು.. ಆದರೆ ಮತ್ತಿಬ್ಬರು ಪುರುಷರ ಜೊತೆ ಸಂಬಂಧ ಇಟ್ಟುಕೊಂಡಳು.. ಕೊನೆಗೆ ಆ ಸಂಬಂಧಗಳಿಂದ ಆಕೆ ಎಂತಹ ಸ್ಥಿತಿಯಲ್ಲಿ ಸಿಕ್ಕಳು ಎಂದು ತಿಳಿದರೆ ನಿಜಕ್ಕೂ ಇದೆಲ್ಲಾ ಯಾಕೆ ಬೇಕಿತ್ತು ಎನಿಸುತ್ತದೆ.. ಹೌದು ಈಕೆಯ ಹೆಸರು ವೀಣಾ.. ವಯಸ್ಸು ಕೇವಲ ಇಪ್ಪತ್ತಾರು.. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ಈಕೆಯ ಜೀವನ ನಾನಾ ತಿರುವು ಪಡೆದುಬಿಟ್ಟಿತು.. ಹೌದು ವೀಣಾ ಕೋಲಾರ ಜಿಲ್ಲೆಯ ಮುಳುಬಾಗಿಲಿನ ನಿವಾಸಿ.. ಈಕೆಗೆ ಕಳೆದ ಎಂಟು ವರ್ಷಗಳ ಹಿಂದೆಯೇ ಮುಳುಬಾಗಿಲಿನ ಮುರುಳಿ ಎಂಬಾತನ ಜೊತೆ ಮದುವೆಯೂ ಆಗಿತ್ತು..

ಆದರೆ ಇಬ್ಬರ ನಡುವಿನ ಸಂಸಾರದ ನೌಕೆ ಸರಿಯಾದ ದಾರಿಯಲ್ಲಿ ಸಾಗಲಿಲ್ಲ.. ಇದಕ್ಕೆ ಕಾರಣ ಅದಾಗಲೇ ವೀಣಾ ತನ್ನ ಜೀವನದಲ್ಲಿ ತಪ್ಪು ದಾರಿ ತುಳಿದಾಗಿತ್ತು.. ಹೌದು ಹೆಣ್ಣಾಗಲಿ ಗಂಡಾಗಲಿ ಒಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಎಂದೂ ಸಹ ಆ ಬಾಂಧವ್ಯಕ್ಕೆ ಮೋಸ ಮಾಡಬಾರದು.. ಪರಸ್ಪರರ ನಂಬಿಕೆಗೆ ಎಂದೂ ಸಹ ಮೋಸ ಮಾಡಬಾರದು‌. ಆದರೆ ವೀಣಾ ತನ್ನ‌ ಪತಿಗೆ ಮಾಡಿದ್ದೇ ಅದು.. ಹೌದು ವೀಣಾ ತನ್ನ ಗಂಡನ ಜೊತೆ ಜೀವನ ಸಾಧ್ಯವಿಲ್ಲವೆಂದು ಕೆಲ ದಿನಗಳ ಹಿಂದಷ್ಟೇ ಮುರುಳಿ ಜೊತೆಗಿನ ದಾಂಪತ್ಯದಿಂದ ಕಾನೂನಿನ ಮೂಲಕ ದೂರವಾಗಿದ್ದಳು.. ಆದರೆ ಗಂಡನಿಂದ ದೂರವಾದ ಕೆಲವೇ ದಿನಗಳಲ್ಲಿ ಆಕೆ ಲಾಡ್ಜ್ ನಲ್ಲಿ ಇಂತಹ ಸ್ಥಿತಿಯಲ್ಲಿ ಸಿಗುವಳೆಂದು ಅವರ ತಂದೆ ತಾಯಿ ಕನಸಿನಲ್ಲಿಯೂ ಊಹಿಸಿಕೊಂಡಿರಲಿಲ್ಲ..

ಹೌದು ವೀಣಾ ಹಲವಾರು ವರ್ಷಗಳಿಂದ ಇಬ್ಬರು ಪುರುಷರ ಜೊತೆ ಸಂಬಂಧವನ್ನು ಹೊಂದಿದ್ದಳು.. ಹೌದು ಗಂಡನನ್ನು ಹೊರತು ಪಡಿಸಿ ಮುಳುಬಾಗಿಲಿನ ಪುನೀತ್ ರಾಜ್ ಕುಮಾರ್ ಹಾಗೂ ಲಕ್ಷ್ಮೀಕಾಂತ್ ಎಂಬ ಇಬ್ಬರ ಜೊತೆಗೂ ವೀಣಾ ಸಂಬಂಧ ಹೊಂದಿದ್ದಳು.. ಇದೇ ಕಾರಣಕ್ಕೆ ತನ್ನ ಗಂಡ ಮುರುಳಿ ಜೊತೆಗಿನ ದಾಂಪತ್ಯದಿಂದ ದೂರವಾದಳು ಎನ್ನಲಾಗುತ್ತಿದೆ.. ಇತ್ತ ಗಂಡನಿಂದ ದೂರವಾದ ಬಳಿಕ ತವರು ಮನೆ ಸೇರಿದಳು ವೀಣಾ.. ಮಗಳ ಜೀವನ ಹೀಗಾಯಿತು ಎಂದು ವೀಣಾಳ ಅಪ್ಪ ಅಮ್ಮ ಬಹಳ ನೊಂದುಕೊಂಡಿದ್ದರು.. ಆದರೆ ಅತ್ತ ವೀಣಾ ಮುಖದಲ್ಲಿ ಮಾತ್ರ ಯಾವುದೇ ನೋವು ಕಾಣಲಿಲ್ಲ.. ಸಂತೋಷವಾಗಿಯೇ ಇದ್ದಳು.. ಜೊತೆಗೆ ಆಗಾಗ ಹೊರಗೆ ಹೋಗಿ ಬರುತ್ತಿದ್ದಳು..

ಅದೇ ರೀತಿ ಮೊನ್ನೆ ವೀಣಾ ತನ್ನ ಮಾಜಿ ಪ್ರಿಯಕರ ಪುನೀತ್ ಎಂಬಾತನ ಜೊತೆ ಚಿಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಬಾಲಾಜಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಳು.. ಆತನ ಜೊತೆ ರಾತ್ರಿಯೂ ಕಳೆದಳು.. ಆದರೆ ನಿನ್ನೆ ವೀಣಾ ಲಾಡ್ಜ್ ನಿಂದ ಹೊರ ಬಾರಲೇ ಇಲ್ಲ.. ಹೌದು ಅತ್ತ ಪುನೀತ್ ನಿನ್ನೆ ಲಾಡ್ಜ್ ನಿಂದ ಹೊರ ಹೋದನೆಂದು ತಿಳಿದಿದೆ.. ಆನಂತರ ವೀಣಾ ಮಾತ್ರ ಎಷ್ಟೇ ಸಮಯ ಆದರೂ ಹೊರಗೆ ಬರಲೇ ಇಲ್ಲ.. ಇತ್ತ ಸಿಬ್ಬಂದಿ ಹೋಗಿ ಬಾಗಿಲು ತೆರೆದು ನೋಡಿದಾಗ ಆಕೆ ಇದ್ದ ಸ್ಥಿತಿಯೇ ಬೇರೆ.. ಹೌದು ಅದೇನಾಯ್ತೋ ಏನೋ ವೀಣಾ ಅದಾಗಲೇ ಜೀವ ಕಳೆದುಕೊಂಡ ಸ್ಥಿತಿಯಲ್ಲಿ ಇದ್ದಳು.. ತಕ್ಷಣ ಪೊಲೀಸರಿಗೆ ಫೋನ್ ಮಾಡಿ ವಿಚಾರ ತಿಳಿಸಲಾಗಿ ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ..

ಆ ಸ್ಥಳದಲ್ಲಿಯೇ ವೀಣಾ ಈ ರೀತಿ ಮಾಡಿಕೊಳ್ಳಲು ಕಾರಣ ಏನೆಂಬುದೂ ಸಹ ತಿಳಿದಿದೆ.. ಹೌದು ಜೀವ ಕಳೆದುಕೊಳ್ಳುವ ಮುನ್ನ ವೀಣಾ ಇದಕ್ಕೆಲ್ಲಾ ಕಾರಣ ಏನೆಂಬುದನ್ನು ಬರೆದಿಟ್ಟಿದ್ದಾಳೆ.. ಹೌದು ಇದಕ್ಕೆಲ್ಲಾ ಕಾರಣ ಆಕೆಯ ಮರ್ಯಾದೆ.. ಹೌದು ತನಗೆ ಇಬ್ಬರ ಜೊತೆ ಸಂಬಂಧ ಹೊಂದಿರುವ ವಿಚಾರ ತನ್ನ ಮನೆಯವರಿಗೆ ತಿಳಿದು ಹೋಗಿದೆ.. ಇದರಿಂದ ಮರ್ಯಾದೆ ಹೋಗುತ್ತದೆ ಎಂದು ಈ ರೀತಿ ಮಾಡಿಕೊಂಡಳಂತೆ.. ಇವರುಗಳ ಪ್ರಕಾರ ತಾನು ಮಾಡುವ ತಪ್ಪುಗಳು‌ ಮತ್ತೊಬ್ಬರಿಗೆ ತಿಳಿದಾಗ ಮಾತ್ರ ಮರ್ಯಾದೆ ಹೋಗುತ್ತದೆ ಎಂದುಕೊಂಡಿದ್ದಾರೆ.. ಆದರೆ ವಾಸ್ತವ ಯಾರೇ ಆಗಲಿ ತಪ್ಪು ಮಾಡಿದ ಕೂಡಲೇ ಆ ತಪ್ಪು ಯಾರಿಗೂ ಸಹ ತಿಳಿಯದಿದ್ದರೂ ಕೂಡ ಮರ್ಯಾದೆ ಹೋಗಿಯಾಗಿರುತ್ತದೆ..

ಹೌದು ಮನಸ್ಸಾಕ್ಷಿಯ ಮುಂದೆ ತಪ್ಪು ಮಾಡಿದವರು ಆ ವಿಚಾರ ಮತ್ತೊಬ್ಬರಿಗೆ ತಿಳಿದಾಗ ಮಾತ್ರ ತಪ್ಪಾಗುವುದು ಎಂದುಕೊಳ್ಳುವುದು ಮಹಾ ದಡ್ಡತನ.. ಪಾಪ ಆಕೆಯ ಹೆತ್ತವರ ಸಂಕಟ ನೋಡಲಾಗದು.. ಅತ್ತ ಮಗಳೂ ಇಲ್ಲ.. ಇತ್ತ ಆಕೆ ಲಾಡ್ಜ್ ನಲ್ಲಿ ಈ ರೀತಿ ಸಿಕ್ಕಿದ್ದರಿಂದ ಆ ತಂದೆ ತಾಯಿಯ ಗೌರವವೂ ಸಹ ಹಾಳಾಯಿತು.. ಇಂತಹ ಮಗಳು ಪಡೆದದ್ದಕ್ಕೆ ಜೀವನ ಪೂರ್ತಿ ಕೊರಗಬೇಕಿದೆ.. ಆ ತಂದೆ ತಾಯಿ ಮಾಡಿದ ತಪ್ಪಾದರೂ ಏನು.. ಅಪ್ಪ ಅಮ್ಮನಿಗೆ ಒಳ್ಳೆಯದನ್ನು ಮಾಡಲಾಗದಿದ್ದರೂ ಪರವಾಗಿಲ್ಲ.. ಈ ರೀತಿ ಮರ್ಯಾದೆ ಹೋಗುವ ಕೆಲಸವನ್ನು ಮಾತ್ರ ಮಾಡಬೇಡಿ..