ರಾತ್ರಿ ಚೆನ್ನಾಗಿ ಮಲಗಿದ ಒಂದೇ ಕುಟುಂಬದ ನಾಲ್ವರು ರಾತ್ರೋ ರಾತ್ರಿ ಇನ್ನಿಲ್ಲ.. ಮನೆಯೊಳಗಿಂದ ಓಡಿ ಬಂದ ಆ ಒಬ್ಬ ಹೆಂಗಸು ಯಾರು ಗೊತ್ತಾ.. ಬೆಚ್ಚಿಬಿದ್ದ ಅಕ್ಕಪಕ್ಕದವರು..

0 views

ಜೀವನ ಯಾವ ಘಟ್ಟದಲ್ಲಿ ಯಾವಾಗ ತಿರುವು ತೆಗೆದುಕೊಳ್ಳುವುದು ಯಾರು ಯಾವ ರೀತಿ ತಮ್ಮ ಜೀವನವನ್ನು ಮುಕ್ತಾಯ ಮಾಡಿಕೊಳ್ಳುವರೋ ಒಂದೂ ತಿಳಿಯದು..‌ ಈಗಿದ್ದವರು ಈಗಿಲ್ಲ ಅನ್ನೋ‌ ಮಾತಿನಂತೆ ಯಾರ ಬಾಳಿನಲ್ಲಿ ಯಾವಾಗ ಯಾವ ಘಟನೆ ನಡೆಯುವುದೋ ತಿಳಿಯದು.. ಅದೇ ರೀತಿ ವಿಜಯನಗರದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು ರಾತ್ರಿ ಚೆನ್ನಾಗಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ರಾತ್ರೋರಾತ್ರಿ ಕೊನೆಯುಸಿರೆಳೆದಿದ್ದಾರೆ.. ಆದರೆ ಅದೇ ರಾತ್ರಿ ಹೆಂಗಸೊಬ್ಬರು ಅದೇ ಮನೆಯಿಂದ ಓಡಿ ಹೊರಗೆ ಬಂದಿದ್ದು ಅಕ್ಕಪಕ್ಕದ ಮನೆಯವರು ಬೆಚ್ಚಿಬೀಳುವಂತಾಗಿದೆ..

ಹೌದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.. ಹೌದು ಇದು ರಾಘವೇಂದ್ರ ಶೆಟ್ಟಿ ಎಂಬುವವರ ಮನೆ.. ಈ ಮನೆಯಲ್ಲಿ ರಾಘವೇಂದ್ರ ಶೆಟ್ಟಿ ಅವರ ಪತ್ನಿ ರಾಜಶ್ರೀ.. ಮಗ ನವತ್ತೆರೆಡು ವರ್ಷದ ವೆಂಕಟ್ ಪ್ರಶಾಂತ್.. ವೆಂಕಟ್ ಪ್ರಸಾದ್ ಅವರ ಪತ್ನಿ ಮೂವತ್ತೆಂಟು ವರ್ಷದ ಚಂದ್ರಕಲಾ.. ಇನ್ನು ಇವರ ಮಕ್ಕಳು ಹದಿನಾರು ವರ್ಷದ ಅರ್ದ್ವಿಕ್.. ಹಾಗೂ ಎಂಟು ವರ್ಷದ ಪ್ರೇರಣಾ ವಾಸವಾಗಿದ್ದರು.. ಸುಂದರ ಸಂಸಾರ.. ಯಾವುದಕ್ಕೂ ಕೊರತೆ ಇಲ್ಲದ ಜೀವನ ಅವರದ್ದಾಗಿತ್ತು.. ಆದರೆ ಈ ರೀತಿ ಕುಟುಂಬಕ್ಕೆ ಕುಟುಂಬವೇ ರಾತ್ರೋ ರಾತ್ರಿ ಇನ್ನಿಲ್ಲವಾಗಿ ಹೋಗಿದೆ..

ಹೌದು ನಿನ್ನೆ ರಾತ್ರಿ ಎಂದಿನಂತೆ ಮರಿಯಮ್ಮನ ಹಳ್ಳಿಯ‌ ತಮ್ಮ ಮನೆಯಲ್ಲಿ ಮಲಗಿತು ಈ‌ ಕುಟುಂಬ.. ಆದರೆ ಮಧ್ಯ ರಾತ್ರಿ ನಡೆದ ಘಟನೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಇಲ್ಲವಾಗಿ ಹೋದರು.. ಹೌದು ನಿನ್ನೆ ಮಲಗಿದ ನಂತರ ವೆಂಕಟ್ ಪ್ರಸಾದ್ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಆ ಸಮಯದಲ್ಲಿ ವೆಂಕಟ್ ಪ್ರಸಾದ್ ಅವರ ರೂಮಿನಲ್ಲಿದ್ದ ಎಸಿಯಿಂದ ಸಂಪೂರ್ಣವಾಗಿ ಬೆಂಕಿ ಹಾಗೂ ದಟ್ಟವಾದ ಹೊಗೆ ಬರಲು ಆರಂಭವಾಗಿದೆ.. ಅದೇ ರೂಮಿನಲ್ಲಿ ಇದ್ದ ದಂಪತಿ ಹಾಗೂ ಇಬ್ಬರು ಮಕ್ಕಳು ಅದೇ ಸ್ಥಳದಲ್ಲಿ ಸಜೀವವಾಗಿ ಕೊನೆಯುಸಿರೆಳೆದುಬಿಟ್ಟಿದ್ದಾರೆ..

ಹೌದು ದಟ್ಟವಾದ ಹೊಗೆಯಿಂದಾಗಿ ನಾಲ್ವರು ಸಹ ರೂಮಿನಿಂದ ಹೊರ ಬರಲಾಗದೇ ಮಲಗಿದ್ದ ರೂಮಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ.. ಇತ್ತ ಕೆಳಗಿನ ಮಹಡಿಯಲ್ಲಿ ಇದ್ದ ತಾಯಿ ರಾಜಶ್ರೀ ಅವರು ಮಧ್ಯರಾತ್ರಿಯಲ್ಲಿ ಮನೆಯಿಂದ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.. ಇತ್ತ ಎಸಿ ಇಂದ ಬಂದ ಜೋರು ಶಭ್ದ ಕೇಳಿ ಅಕ್ಕ ಪಕ್ಕದ ಮನೆಯವರು ಓಡಿ ಬಂದಿದ್ದು ಅದಾಗಲೇ ಮನೆ ತುಂಬಾ ಸಂಪೂರ್ಣವಾಗಿ ಬೆಂಕಿ ಕಾಣಿಸಿಕೊಂಡಿದ್ದು ಬೆಚ್ಚಿಬಿದ್ದಿದ್ದಾರೆ.. ಆ ಹೊಗೆಯ ನಡುವೆಯೇ ರಾಜಶ್ರೀ ಅವರು ಮನೆಯಿಂದ ಓಡಿ ಬಂದಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ..

ರಾತ್ರಿಯಷ್ಟೇ ಚೆನ್ನಾಗಿದ್ದ ಕುಟುಂಬ ರಾತ್ರೋ ರಾತ್ರಿ ಸಂಪೂರ್ಣವಾಗಿ ಇನ್ನಿಲ್ಲವೆಂದರೆ ನಿಜಕ್ಕೂ ಮನಕಲಕುವಂತಿದೆ.. ಪುಟ್ಟ ಪುಟ್ಟ ಮಕ್ಕಳು ಆ ದಟ್ಟ ಹೊಗೆಯಲ್ಲಿ ನೆನೆಸಿಕೊಂಡರೆ ಸಂಕಟ ತರುತ್ತದೆ.. ಇತ್ತ ತನ್ನ ಕುಟುಂಬವನ್ನು‌ ಕಳೆದುಕೊಂಡ ರಾಜಶ್ರೀ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.. ದಯವಿಟ್ಟು ಮನೆಯಲ್ಲಿ ಗ್ಯಾಸ್ ಆಗಲಿ ಕರೆಂಟ್ ಆಗಲಿ ದಯವಿಟ್ಟು ಎಚ್ಚರಿಕೆ ಇಂದ ಇರಿ.. ಈಗ ಬೇಸಿಗೆ ಬೇರೆ‌..‌ ಈ ಬಿರು ಬಿಸಿಲಿನಲ್ಲಿ ಕರೆಂಟ್ ನಿಂದಾಗಲಿ ಅಥವಾ ಎಲಿಕ್ಟ್ರಿಕ್ ವಾಹನಗಳು ಅಥವಾ ಪೆಟ್ರೋಲ್ ಫುಲ್ ಟ್ಯಾಂಕ್ ಮಾಡುವುದರಿಂದ ಎಸಿ ಅಥವಾ ಮತ್ತಿನ್ನೇನಾದರೂ ಆಗಿರಬಹುದು ದಯವಿಟ್ಟು ಎಚ್ಚರಿಕೆಯಿಂದಿರಿ.. ವೆಂಕಟ್ ಪ್ರಸಾದ್ ಅವರ ಕುಟುಂಬಕ್ಕೆ ಆದ ಸ್ಥಿತಿ ಇನ್ಯಾರಿಗೂ ಆಗದಿರಲಿ.. ಬಾಳಿ ಬದುಕಬೇಕಾದ ಮಕ್ಕಳು ಈ ರೀತಿ ಜೀವನ ಮುಕ್ತಾಯವಾಯಿತೆಂದರೆ ನಿಜಕ್ಕೂ ಬೇಸರ ತರುತ್ತದೆ.. ದಯವಿಟ್ಟು ಎಲ್ಲರೂ ಜಾಗೃತರಾಗಿರಿ..