ಊರು ಬಿಟ್ಟು ಬಂದ ಅಣ್ಣ ತಂಗಿ.. ಆದರೆ ಈಗ ಏನಾದರು ಗೊತ್ತಾ.. ಬೆಚ್ಚಿಬಿದ್ದ ಅಪ್ಪ ಅಮ್ಮ..

0 views

ಜೀವನವೇ ಇಷ್ಟು.. ಮುಂದಿನ ಭವಿಷ್ಯದ ಬಗ್ಗೆ ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ ಊರು ಬಿಟ್ಟು ಪಟ್ಟಣ ಸೇರುತ್ತೇವೆ.. ಅಪ್ಪ ಅಮ್ಮನಿಲ್ಲದ ಪಟ್ಟಣದಲ್ಲಿ ನಮ್ಮನ್ನು ನಾವೇ ನೋಡಿಕೊಂಡು ಊರು ಬಿಟ್ಟು ಬಂದ ಗುರಿಯ ಕಡೆಗೂ ಗಮನಕೊಟ್ಟು ಜೀವನ ಸಾಗಿಸುತ್ತಿರುತ್ತೇವೆ.. ಆದರೆ ವಿಧಿ ನಮ್ಮಗಳ ವಿಚಾರದಲ್ಲಿ ಬೇರೆಯದ್ದೇ ನಿರ್ಧಾರ ಮಾಡಿಬಿಟ್ಟಿರುತ್ತಾನೆ.. ಹೌದು ಅಂತಹುದೇ ಒಬ್ಬ ಅಣ್ಣ ತಂಗಿ ಜೀವನ ಕಟ್ಟಿಕೊಳ್ಳಲು ಊರು ಬಿಟ್ಟು ಬಂದು ಈಗ ಆಗಿರುವ ಸ್ಥಿತಿ ನೋಡಿದರೆ ನಿಜಕ್ಕೂ ಸಂಕಟವೆನಿಸುತ್ತಿದೆ..

ಹೌದು ಈ ಹುಡುಗನ ಹೆಸರು ವೇಣುಗೋಪಾಲ ವಯಸ್ಸಿನ್ನು ಕೇವಲ ಇಪ್ಪತ್ತೆರೆಡು ವರ್ಷ.. ವೇಣುಗೋಪಾಲನ ತಂಗಿಯ ಹೆಸರು ಕಾವ್ಯ ವಯಸ್ಸಿನ್ನು ಕೇವಲ ಇಪ್ಪತ್ತು ವರ್ಷ.. ಈ ಇಬ್ಬರು ಅಣ್ಣ ತಂಗಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ ಎಸ್ ಪುರ ಎಂಬ ಗ್ರಾಮದ ನಿವಾಸಿಗಳು.. ಈ ಇಬ್ಬರು ಅಣ್ಣ ತಂಗಿ ಬದುಕಿನಲ್ಲಿ ಮುಂದೆ ಏನಾದರೂ ಸಾಧಿಸಬೇಕು ಎಂದು ವಿಧ್ಯಾಭ್ಯಾಸದ ಸಲುವಾಗಿ ಬೆಂಗಳೂರಿಗೆ ಬರುವ ನಿರ್ಧಾರ ಮಾಡಿದರು.. ಅದರಂತೆಯೇ ವೇಣುಗೋಪಾಲ ಹಾಗೂ ಕಾವ್ಯ ಇಬ್ಬರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಿನ್ನಮಂಗಲ ಗ್ರಾಮದಲ್ಲಿ ಒಂದು ಬಾಡಿಗೆಗೆ ಮನೆ ಪಡೆದು ಅಲ್ಲಿಯೇ ವಾಸ ಮಾಡಿಕೊಂಡು ವಿಧ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದರು..

ಆದರೆ ವಿಧಿ ಇವರ ಬಾಳಲ್ಲಿ ಬೇರೆಯದ್ದೇ ನಿರ್ಣಯ ಕೈಗೊಂಡಿತ್ತು‌. ಹೌದು ಓದಲು ಬಂದ ಅಣ್ಣ ತಂಗಿ ಇದೀಗ ಬಾರದ ಲೋಕಕ್ಕೆ ಹೊರಟು ಹೋದರು. ಬಾಡಿಗೆ ಮನೆಯ ರೂಪದಲ್ಲಿ ವಿಧಿ ಇವರ ಬಾಳನ್ನೇ ಅಂತ್ಯ ಮಾಡಿಬಿಟ್ಟಿತು. ಹೌದು ವೇಣುಗೋಪಾಲ ಹಾಗೂ ಕಾವ್ಯ ಭಿನ್ನಮಂಗಕ ಗ್ರಾಮದ ಹನುಮಂತರಾಯಪ್ಪ ಎಂಬುವವರ ಶೀಟಿನ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ವಾಸವಿದ್ದರು.. ಪ್ರತಿದಿನದಂತೆ ಜುಲೈ ಇಪ್ಪತ್ತು ಸೋಮವಾರದಂದು ಸಹ ವೇಣುಗೋಪಾಲ ಕಾವ್ಯ ಹಾಗೂ ಸಂಬಂಧಿ ಸಂಪ್ರತ್ ಎಂಬಾತ ಊಟ ಮುಗಿಸಿ ಮಲಗಿದ್ದರು..

ಆದರೆ ಆ ಅಣ್ಣ ತಂಗಿ ಬಾಳಿನಲ್ಲಿ ಮತ್ತೆ ಬೆಳಿಗ್ಗೆಯಾಗಲೇ ಇಲ್ಲ.. ಹೌದು ವೇಣುಗೋಪಾಲ ಹಾಗೂ ಕಾವ್ಯ ಇದ್ದ ಬಾಡಿಗೆ ಮನೆಯ ಪಕ್ಕದಲ್ಲಿ ಒಂದು ಖಾಲಿ ನಿವೇಶನವಿತ್ತು.. ಆ ನಿವೇಶನಕ್ಕೆ ಕಾಂಪೌಂಡ್ ಹಾಕಲಾಗಿತ್ತು. ಸೋಮವಾರ ರಾತ್ರಿ ಸುರಿದ ಮಳೆಗೆ ಕಾಂಪೌಂಡ್ ಕುಸಿದು ತಗ್ಗಿನಲ್ಲಿ ಇದ್ದ ಈ ಬಾಡಿಗೆ ಮನೆಯ ಮೇಲೆ ಬಿದ್ದಿದೆ.. ನಿದ್ರೆಯಲ್ಲಿದ್ದ ಅಣ್ಣ ತಂಗಿ ಕೊನೆಯುಸಿರೆಳೆದು ಬಿಟ್ಟಿದ್ದಾರೆ.. ಹೌದು ಬದುಕು ಕಟ್ಟಿಕೊಳ್ಳಲು ಊರು ಬಿಟ್ಟು ಬಂದ ಅಣ್ಣ ತಂಗಿಯ ಜೀವನ ಒಂದು ಮಳೆಯಿಂದಾಗಿ ಕೊನೆ ಯಾಗಿ ಹೋಯ್ತು.. ಅತ್ತ ಮಕ್ಕಳು ಚೆನ್ನಾಗಿ ಓದಿ ಮುಂದೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಕನಸು ಕಟ್ಟಿದ್ದ ಅಪ್ಪ ಅಮ್ಮ ಇದೀಗ ಮಕ್ಕಳ ಸ್ಥಿತಿ ನೋಡಿ ಬೆಚ್ಚಿಬಿದ್ದಿದ್ದಾರೆ.

ಹೌದು ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಈ ಇಬ್ಬರು ಅಣ್ಣ ತಂಗಿಯನ್ನು ಹೊರ ತೆಗೆದಿದ್ದಾರೆ.. ಅತ್ತ ಸಂಬಂಧಿ ಸಂಪ್ರತ್ ಗೆ ಗಂಭೀರ ಗಾಯಗಳಾಗಿದ್ದು ಅತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಓದಲು ಬಂದು ಜೀವನ ಕಟ್ಟಿಕೊಳ್ಳುತ್ತೇವೆ ಎನ್ನುತ್ತಿದ್ದ ಅಣ್ಣ ತಂಗಿಯ ಜೀವನ ಈ ರೀತಿ ಅಂತ್ಯವಾಗಿದ್ದನ್ನು ಕಂಡು ಇಡೀ ಗ್ರಾಮವೇ ಮರುಗಿದೆ.. ಇತ್ತ ಒಟ್ಟಿಗೆ ಎರಡೂ ಮಕ್ಕಳನ್ನು ಈ ರೀತಿ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.. ನಾವೊಂದು ನೆನೆದರೆ ದೈವವೊಂದು ನೆನೆವುದು ಎಂಬುದಕ್ಕೆ ಬಹುಶಃ ಇದೇ ಉದಾಹರಣೆ ಎನಿಸುತ್ತದೆ.. ಆ ಅಣ್ಣ ತಂಗಿಗೆ ಶಾಂತಿ ಸಿಗುವಂತಾಗಲಿ..