ಬಿಗ್ ಸರ್ಪ್ರೈಸ್ ನೀಡಿದ ರಮ್ಯಾ.. ತನ್ನ ಜೊತೆ ಇರುವ ಹುಡುಗ ಯಾರೆಂದು ತಾನೇ ತಿಳಿಸಿ ಸಂತೋಷ ಹಂಚಿಕೊಂಡ ನಟಿ.. ಮದುವೆ ಗ್ಯಾರಂಟಿ..

0 views

ಸ್ಯಾಂಡಲ್ವುಡ್ ನ ಖ್ಯಾತ ನಟಿ ರಮ್ಯಾ ಸಧ್ಯ ರಾಜಕೀಯದಿಂದ ದೂರ ಉಳಿದಿದ್ದು ಚಿತ್ರರಂಗಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ.. ಆದರೆ ಈ ನಡುವೆಯೇ ಮೊನ್ನೆಯಷ್ಟೇ ರಮ್ಯಾ ಅವರು ಹುಡುಗನೊಬ್ಬನ‌ ಜೊತೆ ಆತ್ಮೀಯವಾಗಿ ಫೋಟೋವೊಂದನ್ನು ಹಂಚಿಕೊಂಡಿದ್ದು ಯಾವುದೇ ಕ್ಯಾಪ್ಶನ್ ನೀಡಿರಲಿಲ್ಲ.. ಆ ಫೋಟೋ ನೋಡಿ ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದು ಆ ಹುಡುಗ ಯಾರೆಂಬ ಸತ್ಯ ಹುಡುಕಲು ಕೆಲವರು ಹೊರಟಿದ್ದೂ ಉಂಟು.. ಅದರೀಗ ಆ ಎಲ್ಲಾ ವಿಚಾರ ತಿಳಿದ ರಮ್ಯಾ ಖುದ್ದು ತಾವೇ ಆ ಹುಡುಗ ಯಾರೆಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ..

ಹೌದು ನಟಿ ರಮ್ಯಾ ಅವರು ಚಿತ್ರರಂಗದಲ್ಲಿ‌ ಸಕ್ರೀಯರಾಗಿದ್ದಾಗ ವಿದೇಶಿ ಉದ್ಯಮಿ ಒಬ್ಬರ ಜೊತೆ ಮದುವೆಯೂ ನಿಶ್ಚಯವಾಗಿತ್ತು ಇನ್ನೇನು‌ ಕೆಲವೇ ತಿಂಗಳಲ್ಲಿ ಮದುವೆಯಾಗಬೇಕಿದ್ದ ಜೋಡಿ.. ಆದರೆ ರಾಜಕೀಯ ಪ್ರವೇಶದಿಂದ ಆ ಮದುವೆ ಅಲ್ಲಿಗೆ ಮುರಿದು ಬಿದ್ದಿತ್ತು.. ನಂತರ ಸಾಕಷ್ಟು ವರ್ಷಗಳ ಕಾಲ ರಮ್ಯಾ ಅವರ ವ್ಯಯಕ್ತಿಕ ಜೀವನದ ಕುರಿತು ಮದುವೆಯ ಕುರಿತು ಯಾವುದೇ ಆಸಕ್ತಿ ತೋರಿರಲಿಲ್ಲ.. ಈ ನಡುವೆ ಆದ್ಯಾತ್ಮದ ಕಡೆಯೂ‌ ಒಲವು ಮೂಡಿಸಿಕೊಂಡಿದ್ದ ರಮ್ಯಾ ಅವರು ಆದ್ಯಾತ್ಮದ ಬಗ್ಗೆ ಉನ್ನತ ವ್ಯಾಸಂಗ ಮಾಡಿ ಪದವಿ ಸಹ ಪಡೆದುಕೊಂಡಿದ್ದಾರೆ.. ಸಧ್ಯ ರಾಜಕೀಯದಿಂದ ಅಂತರ ಕಾಯ್ದುಕೊಂಡ ರಮ್ಯಾ ಅವರು ಕಳೆ‍ದ ವರ್ಷ ಮತ್ತೆ ಮರಳಿ ಬೆಂಗಳೂರಿಗೆ ಬಂದಿದ್ದು ಇಲ್ಲಿಯೇ ನೆಲೆಸಿದ್ದಾರೆ..

ಸಿನಿಮಾ ಸಂಬಂಧಪಟ್ಟ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ರಮ್ಯಾ ಅವರು ಚಿತ್ರರಂಗಕ್ಕೆ ಮರಳಲು ಒಂದೊಳ್ಳೆ ಪ್ರಾಜೆಕ್ಟ್ ಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.. ಮರಳಿ ಬಂದರೆ ಸ್ಟಾರ್ ನಟನ ಜೊತೆಯೇ ಬರಬೇಕಾಗಿರುವ ಕಾರಣ ರಮ್ಯಾ ತಮ್ಮ ಸ್ಯಾಂಡಲ್ವುಡ್ ಕಂಬ್ಯಾಕ್ ಗಾಗಿ ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.. ಇನ್ನು ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟೀವ್ ಇರುವ ರಮ್ಯಾ ಅವರು ತಮ್ಮ ಜೀವನದ ಆಗುಹೋಗುಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.. ಆದರೆ ಮೊನ್ನೆ‌ ಮಾತ್ರ ಬಹಳ ವಿಶೇಷವಾದ ಫೋಟೋವೊಂದನ್ನು ಹಂಚಿಕೊಂಡಿದ್ದರು..

ಹೌದು ರಮ್ಯಾ ಅವರು ಹುಡುಗನೊಬ್ಬನನ್ನು ಅಪ್ಪಿಕೊಂಡಿರುವ ಫೋಟೋ ಹಂಚಿಕೊಂಡು ಯಾವುದೇ ಕ್ಯಾಪ್ಶನ್ ನೀಡದೇ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದರು.. ಇನ್ನು ರಮ್ಯಾ ಅವರು ಫೋಟೋ ಹಂಚಿಕೊಂಡ ನಂತರ ಸಾಕಷ್ಟು ಸುದ್ದಿಯಾಗಿದ್ದು ಆ ಹುಡುಗ ಯಾರು ಎಂದು ಬಹಳಷ್ಟು ಅನುಮಾನ ಮೂಡಿತ್ತು.. ಇನ್ನು ಖುದ್ದು ರಮ್ಯಾ ಅವರನ್ನೇ ಸಾಕಷ್ಟು‌ ಮಂದಿ ಪ್ರಶ್ನಿಸಲು ಆರಂಭಿಸಿದರು.. ಆದರೆ ರಮ್ಯಾ ಅವರು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.. ಆದರೆ ಮಾದ್ಯಮದವರು ಕೆಲವರು ಆ ಹುಡುಗ ಯಾರೆಂದು ಪತ್ತೆ ಹಚ್ಚಲು ಹೊರಟಿದ್ದರು.. ಈ ವಿಚಾರ ತಿಳಿದ ರಮ್ಯಾ ಅವರು ಇದೀಗ ಅವರೇ ತಮ್ಮ ಜೊತೆ ಇದ್ದ ಹುಡುಗ ಯಾರೆಂಬ ವಿಚಾರವನ್ನು ಹಂಚಿಕೊಂಡಿದ್ದಾರೆ..

ಹೌದು ತಮ್ಮ ಜೊತೆಯಿರುವ ಹುಡುಗನ ವಿಚಾರ ದೊಡ್ಡದಾಗಿರುವುದ ಕಂಡು ಸೊಟ್ಟಗೆ ನಕ್ಕ ರಮ್ಯಾ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ “ಆ ಹುಡುಗನ ಹೆಸರು ವಿಹಾನ್.. ನನ್ನ ಸ್ಟೈಲಿಶ್ ಹುಡುಗ.. ಅವನ ಕುರಿತಾದ ನಿಮ್ಮ ಕುತೂಹಲವನ್ನು ಪ್ರೀತಿಸುತ್ತೇನೆ‌” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಸಧ್ಯ ತಮ್ಮ ಜೊತೆ ಆತ್ಮೀಯವಾಗಿ ಅಪ್ಪಿಕೊಂಡಿದ್ದ ಹುಡುಗ ವಿಹಾನ್ ಎಂದು ತಿಳಿಸಿದ್ದು ಆತನನ್ನು ನನ್ನ ಹುಡುಗ ಎನ್ನುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.. ಇನ್ನು ಇತ್ತ ರಮ್ಯಾ ಅವರು ಮತ್ತೆ ತಮ್ಮ ಹಳೆಯ ಬದುಕಿಗೆ ಮರಳುತ್ತಿದ್ದು ಅವರ ಹುಡುಗ ವಿಹಾನ್ ನನ್ನು ಮದುವೆಯಾದರೂ ಸಹ ಆಶ್ವರ್ಯ ಪಡಬೇಕಿಲ್ಲ..

ವಿಹಾನ್ ಜೊತೆ ಬಹಳ ಆತ್ಮೀಯವಾಗಿ ಆಲಿಂಗನ ಮಾಡಿಕೊಂಡ ಫೋಟೋ ನೋಡಿದ ಅಭಿಮಾನಿಗಳು ಆದಷ್ಟು ಬೇಗ ಮದುವೆಯಾಗಿ ಎಂದು ಶುಭ ಹಾರೈಸಿದ್ದರೆ ಮತ್ತಷ್ಟು ಮಂದಿ ನನ್ನ ಹುಡುಗ ಎಂದದ್ದ ಕಂಡು ಸಧ್ಯದಲ್ಲಿಯೇ ಮದುವೆ ಗ್ಯಾರಂಟಿ ಎಂದಿದ್ದಾರೆ.. ಮತ್ತಷ್ಟು ಅಭಿಮಾನಿಗಳು ನೀವು ಹೀಗೆ ಸದಾ ನಗುನಗುತ್ತಾ ಸಿನಿಮಾರಂಗದಲ್ಲಿ ತೊಡಗಿಸಿಕೊಂಡು ವ್ಯಯಕ್ತಿಕ ಜೀವನದ ಕಡೆ ಗಮನ ನೀಡಿ ರಾಜಕೀಯದ ಸಹವಾಸ ಬೇಡ ಎಂದೂ ಸಹ ಕಾಳಜಿ ವಹಿಸಿದ್ದಾರೆ.. ಒಟ್ಟಿ‌ನಲ್ಲಿ ಯಾರೇ ಇರಲಿ ಯಾರೇ ಬರಲಿ ಆದರೆ ರಮ್ಯಾ ಅವರ ಮೇಲಿನ ಪ್ರೀತಿ ಮಾತ್ರ ಸ್ಯಾಂಡಲ್ವುಡ್ ಅಭಿಮಾನಿಗಳಿಗೆ ಎಳ್ಳಷ್ಟು ಕಡಿಮೆಯಾಗಿಲ್ಲ.. ಒಟ್ಟಿನಲ್ಲಿ ಸ್ಯಾಂಡಲ್ವುಡ್ ನ ಮೋಹಕ ತಾರೆ ಒಂದು ಫೋಟೋದಿಂದಾಗಿ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಆದಷ್ಟು ಬೇಗ ವಿಹಾನ್ ಜೊತೆ ನೂತನ ಜೀವನ ಆರಂಭಿಸಿ ಸಂತೋಷವಾಗಿರಲಿ ಎಂದಿದ್ದಾರೆ ನೆಟ್ಟಿಗರು..